Karnataka Trains: ಬೆಂಗಳೂರಿನಿಂದ ಹೊರಡುವ 11 ವಿಶೇಷ ರೈಲುಗಳು ಸಂಚಾರ ರದ್ದು! ಇಲ್ಲಿದೆ ಮಾಹಿತಿ ?

karnataka trains

ರಾಜ್ಯದ ಪ್ರಮುಖ ಸ್ಥಳಗಳಿಗೆ ಸಂಚಾರ ನಡೆಸುತ್ತಿದ್ದ 11 ವಿಶೇಷ ರೈಲುಗಳು ರದ್ದು!

ಇಂದು ಜನಸಂಖ್ಯೆ ಜಾಸ್ತಿಯಾಗಿದೆ. ಓಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಸಾರ್ವಜನಿಕರಿಗೆ ಓಡಾಡಲು ಸಂಪರ್ಕ ವ್ಯವಸ್ಥೆ ಅತಿ ಅವಶ್ಯಕವಾಗಿದೆ. ಒಂದು ಕಡೆ ನೋಡುವುದಾದರೆ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ(shakti scheme) ಜಾರಿಯಾದ ನಂತರ ಬಸ್ ಗಳಲ್ಲಿ ಹಲವಾರು ಸ್ಥಳಗಳಲ್ಲಿ ಓಡಾಟ ನಡೆಸುವ ಜನರ ಸಂಖ್ಯೆ ಜಾಸ್ತಿಯಾಗಿದೆ. ಜನಸಂಖ್ಯೆ ಜಾಸ್ತಿ ಆದ ಕಾರಣ ಜನರು ಸಾರಿಗೆ ಸಂಪರ್ಕದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದಾರೆ ಇಂದು ಬಸ್ ಗಳನ್ನು ಹೊರತುಪಡಿಸಿ ಜನರು ರೈಲುಗಳಲ್ಲಿ ಸಂಚಾರ ನಡೆಸಲು ಪ್ರಾರಂಭಿಸಿದ್ದಾರೆ. ಹಾಗಾಗಿ ಈ ಹಿಂದೆ 11 ವಿಶೇಷ ರೈಲುಗಳನ್ನು ರಾಜ್ಯದ ಪ್ರಮುಖ ಸ್ಥಳಗಳಿಗೆ ಸಂಚಾರಕ್ಕಾಗಿ ಬಿಡಲಾಗಿತ್ತು. ಹಾಗೆಯೇ ಇದೀಗ ಆ 11 ರೈಲುಗಳನ್ನು ರದ್ದು ಮಾಡಲಾಗಿದೆ. ಬನ್ನಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

11 ವಿಶೇಷ ರೈಲುಗಳನ್ನು ರದ್ದು ಮಾಡಲು ಕಾರಣ :

ಬೇಸಿಗೆ ರಜೆ ಹಾಗೂ ಪ್ರಯಾಣಿಕರ ದಟ್ಟಣೆಯ ಹಿನ್ನೆಲೆ ಮಾರ್ಚ್‌ನಲ್ಲಿ ಹಲವು ರಾಜ್ಯಗಳಿಗೆ ವಿಶೇಷ ರೈಲುಗಳನ್ನು ಆರಂಭಿಸಲಾಗಿತ್ತು. ಸದ್ಯ ಪ್ರಯಾಣಿಕರ ಬೇಡಿಕೆ ಕಡಿಮೆಯಾದ ನಂತರ ಈ ರೈಲುಗಳನ್ನು ಮುಂದಿನ ಆದೇಶದವರೆಗೂ ರದ್ದು ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ನೈರುತ್ಯ ರೈಲ್ವೆ ಇಲಾಖೆಯಿಂದ (South Western Railway Department) ರದ್ದಾಗಿರುವ ರೈಲುಗಳ ಬಗ್ಗೆ ಮಾಹಿತಿ :

ಬೆಂಗಳೂರಿನಿಂದ ವಿವಿಧ ರಾಜ್ಯಗಳ ಪ್ರಮುಖ ಸ್ಥಳಗಳಿಗೆ ಸಂಚಾರ ನಡೆಸುತ್ತಿದ್ದ 11 ವಿಶೇಷ ರೈಲುಗಳು ರದ್ದಾಗಿದ್ದು (11 special trains cancel) ಈ ಬಗ್ಗೆ ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಯಾವೆಲ್ಲಾ ರೈಲು ರದ್ದು, ಈ ರೈಲುಗಳು ಕಾರ್ಯಾಚರಣೆಗೊಳಿಸುವ ಕೊನೆಯ ದಿನಾಂಕವನ್ನು ನೈರುತ್ಯ ರೈಲ್ವೆ ತಿಳಿಸಿದೆ. ಅದರ ಬಗ್ಗೆ ಈ ಕೆಳಗೆ ತಿಳಿದುಕೊಳ್ಳೋಣ ಬನ್ನಿ.

ಯಾವೆಲ್ಲಾ ರೈಲು ರದ್ದು ಮಾಡಲಾಗುತ್ತದೆ ಎಂಬುದರ ಪಟ್ಟಿ ಈ ಕೆಳಗೆ ನೀಡಲಾಗಿದೆ :

08543 ವಿಶಾಖಪಟ್ಟಣಂ-ಎಸ್ಎಂವಿಟಿ ಬೆಂಗಳೂರು 16.06.2024 ರಂದು ರದ್ದಾಗಲಿದೆ.

08544 ಎಸ್ಎಂವಿಟಿ ಬೆಂಗಳೂರು-ವಿಶಾಖಪಟ್ಟಣಂ 17.06.2024 ರಂದು ರದ್ದಾಗಲಿದೆ.

08845 ಸಂತ್ರಗಾಚ್- ಎಸ್ಎಂವಿಟಿ ಬೆಂಗಳೂರು 21.06.2024 ರಂದು ರದ್ದಾಗಲಿದೆ.

08846 ಎಸ್ಎಂವಿಟಿ ಬೆಂಗಳೂರು-ಸಂತ್ರಗಾಚ್ 23.06.2024 ರಂದು ರದ್ದಾಗಲಿದೆ.

06565 ಎಸ್ಎಂವಿಟಿ ಬೆಂಗಳೂರು-ಮಾಲ್ಡಾ ಟೌನ್ 19.06.2024 ರಂದು ರದ್ದಾಗಲಿದೆ.

06566 ಮಾಲ್ಡಾ ಟೌನ್-ಎಸ್ಎಂವಿಟಿ ಬೆಂಗಳೂರು 22.06.2024 ರಂದು ರದ್ದಾಗಲಿದೆ.

06521 ಎಸ್ಎಂವಿಟಿ ಬೆಂಗಳೂರು- ಗುವಾಹಟಿ 18.06.2024 ರಿಂದ ಮುಂದಿನ ಆದೇಶದವರೆಗೆ ರದ್ದಾಗಲಿದೆ.

06522 ಗುವಾಹಟಿ -ಎಸ್ಎಂವಿಟಿ ಬೆಂಗಳೂರು 22.06.2024 ರಿಂದ ಮುಂದಿನ ಆದೇಶದವರೆಗೆ ರದ್ದಾಗಲಿದೆ.

06218 ಗಯಾ-ಯಶವಂತಪುರ 17.06.2024 ರಂದು ರದ್ದಾಗಲಿದೆ.

06587 ಭಗತ್-ಕಿ-ಕೋಠಿ-ಎಸ್ಎಂವಿಟಿ ಬೆಂಗಳೂರು 20.06.2024 & 27.06.2024 ರಂದು ರದ್ದಾಗಲಿದೆ.

06588 ಎಸ್ಎಂವಿಟಿ ಬೆಂಗಳೂರು- ಭಗತ್-ಕಿ-ಕೋಠಿ 23.06.2024 & 30.06.2024 ರಂದು ರದ್ದಾಗಲಿದೆ.

ಮಾನ್ಸೂನ್‌ ವೇಳಾಪಟ್ಟಿಯಂತೆ ನಡೆಯಲಿದೆ ರೈಲುಗಳ ಸಂಚಾರ :

ಹಾಗೆಯೇ ಇದೀಗ ಮಾನ್ಸೂನ್ ಕಾಲ ವಾಗಿದ್ದರಿಂದ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಮುಂಗಾರು ತೀವ್ರಗೊಂಡಿರುವು ಕಾರಣ ಕೊಂಕಣ ಮಾರ್ಗದ ರೈಲುಗಳ ಸಮಯ ಬದಲಾಗಿದೆ. ಅ.31ರ ವರೆಗೆ ಮಾನ್ಸೂನ್‌ ವೇಳಾಪಟ್ಟಿಯಂತೆ ರೈಲುಗಳು ಸಂಚಾರ ನಡೆಸಲಿದೆ. ಹಾಗೆಯೇ ಮಂಗಳೂರು    ಗೋವಾ ವಂದೇ ಭಾರತ್‌ ಸೇರಿದಂತೆ 38 ರೈಲುಗಳ ಸಮಯವನ್ನು ಬದಲಾಯಿಸಲಾಗಿದೆ. ನೈರುತ್ಯ ಮುಂಗಾರು ಜೋರಾಗಿದ್ದರೆ ಗಾಡಿಗಳ ವೇಗ ಗಂಟೆಗೆ 40 ಕಿ.ಮೀ. ನಿಗಧಿಪಡಿಸಲಾಗುವುದು. ಮಳೆಗಾಲದಲ್ಲಿ ರೈಲುಗಳ ವೇಗದ ನಿಯಂತ್ರಣವನ್ನು ತರಲು ಸಮಯ ಬದಲಾವಣೆಯಾಗಿದೆ.

ಇನ್ನು ಹಲವು ಕಡೆಗಳಲ್ಲಿ ರೈಲು ಸಂಚಾರ ಸಮಯ ಬದಲಾವಣೆ :

ತಿರುವನಂತಪುರ – ಲೋಕಮಾನ್ಯತಿಲಕ್‌ ನೇತ್ರಾವತಿ, ಎರ್ನಾಕುಳಂ – ನಿಜಾಮುದ್ದೀನ್‌ ಮಂಗಳಾ ಎಕ್ಸ್‌ಪ್ರೆಸ್‌, ಮುಂಬಯಿ – ಗೋವಾ ವಂದೇ ಭಾರತ್‌ ಮತ್ತು ಮಂಗಳೂರು – ಗೋವಾ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗಳ ಸಮಯ ಬದಲಾಗಲಿದ್ದು, ಸಮಯದ ವಿವರ ಈ ಕೆಳಗೆ ನೀಡಲಾಗಿದೆ :

ತಿರುವನಂತಪುರ – ಲೋಕಮಾನ್ಯತಿಲಕ್‌ ನೇತ್ರಾವತಿ ಎಕ್ಸ್‌ಪ್ರೆಸ್‌ (16346) ಬೆಳಗ್ಗೆ 9.15ಕ್ಕೆ ಸಂಚಾರ ಆರಂಭಗೊಳ್ಳುತ್ತದೆ. ಕೋಝಿಕೋಡ್‌ಗೆ ಸಂಜೆ 6 ಗಂಟೆಗೆ ತಲುಪುವ ಬದಲು, ಸಂಜೆ 5.07ಕ್ಕೆ ತಲುಪಲಿದೆ. ಪ್ರಸ್ತುತ 7.32ಕ್ಕೆ ಕಣ್ಣೂರು ತಲುಪುವ ರೈಲು 6.37ಕ್ಕೆ ತಲುಪಲಿದೆ.

ಲೋಕಮಾನ್ಯ ತಿಲಕ್‌ – ತಿರುವನಂತಪುರ ನೇತ್ರಾವತಿ (16345) ಒಂದೂವರೆ ಗಂಟೆ ತಡವಾಗಿ ಬರಲಿದೆ. ಮಂಗಳೂರಿನಲ್ಲಿಸಮಯ 5.45ಕ್ಕೆ, ಕಣ್ಣೂರಿಗೆ 8.07ಕ್ಕೆ ಶೋರ್ನೂರ್‌ 12.05ಕ್ಕೆ ಮತ್ತು ತಿರುವನಂತಪುರಕ್ಕೆ 7.35ಕ್ಕೆ ತಲುಪಲಿದೆ.

ಎರ್ನಾಕುಳಂ- ನಿಜಾಮುದ್ದೀನ್‌ ಮಂಗಳಾ ಲಕ್ಷದ್ವೀಪ್‌ ಎಕ್ಸ್‌ಪ್ರೆಸ್‌ (12617) ಮೂರು ಗಂಟೆ ಮುಂಚಿತವಾಗಿ ಹೊರಡಲಿದೆ. ಮಧ್ಯಾಹ್ನ 1.25ಕ್ಕೆ ಹೊರಡುವ ರೈಲು ಬೆಳಗ್ಗೆ 10.30ಕ್ಕೆ ಎರ್ನಾಕುಳಂನಿಂದ ಸಂಚಾರ ಆರಂಭಿಸಲಿದೆ.

ನಿಜಾಮುದ್ದೀನ್‌ – ಎರ್ನಾಕುಳಂ ಮಂಗಳ ಎಕ್ಸ್‌ಪ್ರೆಸ್‌ (12618) ಒಂದು ಗಂಟೆ ತಡವಾಗಿ ತಲುಪುತ್ತದೆ. ವೇಳಾಪಟ್ಟಿಯಂತೆ ಮಂಗಳೂರು ರಾತ್ರಿ 11.35ಕ್ಕೆ, ಶೋರ್ನೂರ್‌ ಬೆಳಗ್ಗೆ 5.25ಕ್ಕೆ ಮತ್ತು ಎರ್ನಾಕುಳಂ ಬೆಳಗ್ಗೆ 8ಕ್ಕೆ ತಲುಪುವುದು.

ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲು (12620) ಮಂಗಳೂರಿನಿಂದ ಮುಂಬೈಗೆ ಮಧ್ಯಾಹ್ನ 12.45ಕ್ಕೆ ಹೊರಡಲಿದೆ. ಪ್ರಸ್ತುತ ಈ ಸೇವೆಯು 2.20ಕ್ಕೆ ಪ್ರಾರಂಭವಾಗುತ್ತಿದೆ.

ಮಂಗಳೂರು – ಗೋವಾ ವಂದೇ ಭಾರತ್‌ (20646) 8.30 ಗಂಟೆಗೆ ಹೊರಡುತ್ತದೆ. 1.15 ಕ್ಕೆ ಬದಲಾಗಿ, 2 ಗಂಟೆಗೆ ಗೋವಾ ತಲುಪಲಿದೆ. ಗೋವಾ – ಮಂಗಳೂರು ವಂದೇ ಭಾರತ್‌ (20645) ಸಂಜೆ 5.35 ಕ್ಕೆ ಹೊರಡುತ್ತದೆ. ಪ್ರಸ್ತುತ 6.10ಕ್ಕೆ ಹೊರಡುತ್ತಿದೆ .

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!