ಬರೋಬ್ಬರಿ 156 ಔಷಧಗಳನ್ನು ಬ್ಯಾನ್‌ ಮಾಡಿದ ಸರ್ಕಾರ: ಆರೋಗ್ಯಕ್ಕೆ ಅಪಾಯಕಾರಿ ಲಿಸ್ಟ್ ಇಲ್ಲಿದೆ

IMG 20240825 WA0001

ಜ್ವರ, ಶೀತ, ಅಲರ್ಜಿ ಮತ್ತು ನೋವಿಗೆ ಬಳಸುವ ಔಷಧಿಗಳು ಸೇರಿದಂತೆ ವ್ಯಾಪಕವಾಗಿ ಮಾರಾಟವಾಗುವ 156 ಔಷಧಿಗಳನ್ನು ಬ್ಯಾನ್ (156 Medicines ban) ಮಾಡಿದ ಕೇಂದ್ರ ಸರ್ಕಾರ(central government).

ಇಂದು ಮಾನವನು ಅನೇಕ ಖಾಯಿಲೆಗಳಿಗೆ, ರೋಗಗಳಿಗೆ ತುತ್ತಾಗಿದ್ದಾನೆ. ಇವೆಕ್ಕೆಲ್ಲಾ ಕಾರಣ ಅವನಲ್ಲಿಯೇ ಇದೆ. ಹಲವಾರು ರೀತಿಯ ಕಾಯಿಲೆಗಳು ಇಂದು ಮಾನವನ್ನು ಅವರಿಸಿಕೊಂಡು ಇಂಗ್ಲಿಷ್ ಮೆಡಿಸಿನ್ (English Medicine) ಗಳನ್ನು ತೆಗೆದುಕೊಳ್ಳುವ ಕಾಲ ಎದುರಾಗಿದೆ. ತನ್ನ ಕಾಯಿಲೆಗಳನ್ನು ದೂರ ಮಾಡಿಕೊಳ್ಳುವ ನಿಟ್ಟಿನಲ್ಲಿ ದಿನನಿತ್ಯ ಹಲವಾರು ಔಷದಿಗಳನ್ನು ಸೇವಿಸುತ್ತಿದ್ದಾನೆ. ಸಣ್ಣ ಪುಟ್ಟ ಕಾಯಿಲೆಗಳಾದ ಜ್ವರ, ಶೀತ, ಕೆಮ್ಮು, ಅಲರ್ಜಿ ಹಾಗು ಇನ್ನಿತರ ಮೈ ಕೈ ನೋವುಗಳಿಗೆ ಟ್ಯಾಬ್ಲೆಟ್ ಗಳನ್ನು ತೆಗೆದುಕೊಳ್ಳುತ್ತಿದ್ದಾನೆ.

ಆದರೆ ಮನುಷ್ಯನಿಗೆ ಈ ಔಷಧಿಗಳಿಂದ ತೆಗದುಕೊಳ್ಳುವುದ್ದರಿಂದ ಇನ್ನು ಹಲವಾರು ಪರಿಣಾಮ ಅಥವಾ ಅವನ ಆರೋಗ್ಯದ ಮೇಲೆ ಅಡ್ಡ ಪರಿಣಾಮ (Effects) ಬೀಳುತ್ತದೆ ಎಂದು ತಿಳಿದಿಲ್ಲ. ಹಾಗಾಗಿ ಇದೀಗ ಕೇಂದ್ರ ಸರ್ಕಾರವು ಇದರ ಬಗ್ಗೆ ಮಹತ್ವದ ಕೆಲಸ ಮಾಡುತ್ತಿದ್ದು, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ವ್ಯಾಪಕವಾಗಿ ಮಾರಾಟವಾಗುವ 156 ಔಷಧಿಗಳನ್ನು ಬ್ಯಾನ್ ಮಾಡಿದೆ. ಅವುಗಳು ಯಾವುವು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಔಷಧಿಗಳು ಹೆಚ್ಚು ವಿಷಕಾರಿಗಳಾಗಿದ್ದು, ಎಫ್ಡಿಸಿ ಔಷಧಿಗಳು (FDC Medicines) ನಿಗದಿತ ಅನುಪಾತದಲ್ಲಿ ಎರಡು ಅಥವಾ ಹೆಚ್ಚು ಸಕ್ರಿಯ ಔಷಧೀಯ ಪದಾರ್ಥಗಳ ಸಂಯೋಜನೆಯನ್ನು ಹೊಂದಿರುತ್ತವೆ ಮತ್ತು ಅವುಗಳನ್ನು ‘ಕಾಕ್ಟೈಲ್’ ಔಷಧಿಗಳು (Coctail Medicines) ಎಂದೂ ಕರೆಯಲಾಗುತ್ತದೆ.

ಈ ಔಷಧಿಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಲು ಕಾರಣವಿದೆ :

ಫಿಕ್ಸೆಡ್ ಡೋಸ್ ಕಾಂಬಿನೇಷನ್ ಔಷಧದ ಬಳಕೆಯು ಮಾನವರಿಗೆ ಅಪಾಯವನ್ನು ಉಂಟುಮಾಡುವ ಸಾಧ್ಯತೆಯಿದೆ. ಡ್ರಗ್ಸ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ (Drugs Technical Advisory Board) ಈ ಎಫ್ಡಿಸಿಗಳನ್ನು ಪರಿಶೀಲಿಸಿದೆ. ಮತ್ತು “ಈ ಎಫ್ಡಿಸಿಗಳಲ್ಲಿ ಒಳಗೊಂಡಿರುವ ಪದಾರ್ಥಗಳಿಗೆ ಯಾವುದೇ ಚಿಕಿತ್ಸಕ ಸಮರ್ಥನೆ ಇಲ್ಲ” ಎಂದು ಶಿಫಾರಸು ಮಾಡಲಾಗಿದೆ. ಎಫ್ಡಿಸಿ ಮಾನವರಿಗೆ ಅಪಾಯವನ್ನು ಒಳಗೊಂಡಿರಬಹುದು. ಆದ್ದರಿಂದ, ಸಾರ್ವಜನಿಕ ಹಿತದೃಷ್ಟಿಯಿಂದ, ಡ್ರಗ್ಸ್ (Drugs) ಮತ್ತು ಕಾಸ್ಮೆಟಿಕ್ಸ್ ಕಾಯ್ದೆ (Cosmetic Act) 1940 ರ ಸೆಕ್ಷನ್ 26 ಎ ಅಡಿಯಲ್ಲಿ ಈ ಎಫ್ಡಿಸಿಯ ಉತ್ಪಾದನೆ, ಮಾರಾಟ ಅಥವಾ ವಿತರಣೆಯನ್ನು ನಿಷೇಧಿಸುವುದು ಅಗತ್ಯವಾಗಿದೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಮೇಲಿನವುಗಳನ್ನು ಗಮನದಲ್ಲಿಟ್ಟುಕೊಂಡು, ರೋಗಿಗಳಲ್ಲಿ ಯಾವುದೇ ಬಳಕೆಗೆ ಅನುಮತಿಸುವ ಯಾವುದೇ ರೀತಿಯ ನಿಯಂತ್ರಣ ಅಥವಾ ನಿರ್ಬಂಧವು ಸಮರ್ಥನೀಯವಲ್ಲ. ಆದ್ದರಿಂದ, ಸೆಕ್ಷನ್ 26 ಎ ಅಡಿಯಲ್ಲಿ ನಿಷೇಧವನ್ನು ಮಾತ್ರ ಶಿಫಾರಸು ಮಾಡಲಾಗಿದೆ” ಎಂದು ಅದು ಹೇಳಿದೆ.

ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ  156 ಔಷಧಿಗಳು ಬ್ಯಾನ್ :

ನಾವು ಜ್ವರ ಬಂತು, ತಲೆನೋವು, ಮೈಕೈ ನೋವು ಅಂತ ನುಂಗುವ 156 ಔಷಧಗಳನ್ನು ಸರ್ಕಾರ ಬ್ಯಾನ್ ಮಾಡಿದೆ. ಆ ಔಷಧಗಳು ಮನುಷ್ಯನ ಶರೀರದ ಮೇಲೆ ಹೆಚ್ಚು ಅಡ್ಡಪರಿಣಾಮ ಬೀರುತ್ತದೆ, ಹೀಗಾಗಿ ಬ್ಯಾನ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈಗಾಗಲೇ ಉತ್ಯಾದನಾ ಕಂಪನಿ, ಮಾರ್ಕೆಟಿಂಗ್‌ನವರಿಗ ಗೆಜೆಟ್ ನೋಟೀಸ್‌ (Gejet Notice) ನೀಡಲಾಗಿದ್ದು ಯಾವುದೇ ಮೆಡಿಕಲ್‌ ಶಾಪ್‌ಗಳು ಆ ಬಗೆಯ ಔಷಧಗಳನ್ನು ಮಾರಾಟ ಮಾಡುವಂತಿಲ್ಲ.

ಪ್ಯಾರಸಿಟಮಾಲ್ (Paracetamol) ಹಾಗೂ ಇನ್ನಿತರ ಔಷಧಿಗಳನ್ನು ಬ್ಯಾನ್ ಮಾಡಲಾಗಿದೆ :

ಆಗಸ್ಟ್ 12 ರಂದು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, ಉನ್ನತ ಫಾರ್ಮಾ ಕಂಪನಿಗಳು (Farma companies) ತಯಾರಿಸಿದ ನೋವು ನಿವಾರಕ ಔಷಧಿಗಳಾಗಿ ಬಳಸುವ ಜನಪ್ರಿಯ ಸಂಯೋಜನೆಗಳಲ್ಲಿ ಒಂದಾದ ‘ಅಸೆಕ್ಲೊಫೆನಾಕ್ 50 ಮಿಗ್ರಾಂ + ಪ್ಯಾರಸಿಟಮಾಲ್ 125 ಮಿಗ್ರಾಂ ಮಾತ್ರೆ’ ಅನ್ನು ಸರ್ಕಾರ ನಿಷೇಧಿಸಿದೆ.

ಹಾಗೆಯೇ ಈ ಪಟ್ಟಿಯಲ್ಲಿ ಮೆಫೆನಾಮಿಕ್ ಆಸಿಡ್ + ಪ್ಯಾರಸಿಟಮಾಲ್ ಇಂಜೆಕ್ಷನ್, ಸೆಟಿರಿಜೈನ್ ಎಚ್ಸಿಎಲ್ + ಪ್ಯಾರಸಿಟಮಾಲ್ + ಫೆನೈಲೆಫ್ರಿನ್ ಎಚ್ಸಿಎಲ್, ಲೆವೊಸೆಟಿರಿಜೈನ್ + ಫೆನೈಲೆಫ್ರಿನ್ ಎಚ್ಸಿಎಲ್ + ಪ್ಯಾರಸಿಟಮಾಲ್, ಪ್ಯಾರಸಿಟಮಾಲ್ + ಕ್ಲೋರ್ಫೆನಿರಮೈನ್ ಮಾಲೇಟ್ + ಫಿನೈಲ್ ಪ್ರೊಪನೊಲಮೈನ್, ಮತ್ತು ಕ್ಯಾಮೈಲೋಫಿನ್ ಡೈಹೈಡ್ರೊಕ್ಲೋರೈಡ್ 25 ಮಿಗ್ರಾಂ + ಪ್ಯಾರಸಿಟಮಾಲ್ 300 ಮಿಗ್ರಾಂ ಸೇರಿವೆ. ಪ್ಯಾರಸಿಟಮಾಲ್, ಟ್ರಾಮಾಡೋಲ್, ಟೌರಿನ್ ಮತ್ತು ಕೆಫೀನ್ ಸಂಯೋಜನೆಯನ್ನು ಕೇಂದ್ರವು ನಿಷೇಧಿಸಿದೆ. ಟ್ರಾಮಾಡೋಲ್ ಓಪಿಯಾಡ್ ಆಧಾರಿತ ನೋವು ನಿವಾರಕವಾಗಿದೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!