ಎರಡೂ ಸಾವಿರದ ನೋಟುಗಳ ಚಿಂತೆ ಬಿಡಿ! ಪೋಸ್ಟ್ ಆಫೀಸ್(Post office) ಮೂಲಕವೇ ಬದಲಾಯಿಸಿ(Exchange), ಆರ್‌ಬಿಐ(RBI)ನಿಂದ ಸಿಹಿ ಸುದ್ದಿ! ಹೌದು, ನಿಮ್ಮ ಬಳಿ ಇರುವ ಎರಡೂ ಸಾವಿರದ ನೋಟುಗಳ ಬಗ್ಗೆ ಚಿಂತೆ ಬಿಡಿ! ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India, RBI) ನಿಮಗೆ ಸಿಹಿ ಸುದ್ದಿ ನೀಡಿದೆ. ಈಗ ನೀವು ಪೋಸ್ಟ್ ಆಫೀಸ್ ಮೂಲಕವೇ ನಿಮ್ಮ ಎರಡೂ ಸಾವಿರದ ನೋಟುಗಳನ್ನು ಬದಲಾಯಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪೋಸ್ಟ್ ಆಫೀಸ್ ಮೂಲಕವೇ 2000 ನೋಟುಗಳ ಬದಲಾವಣೆ :
ತಮಗೆಲ್ಲ ತಿಳಿದಿರುವ ಹಾಗೆ ತಮ್ಮ 5-6 ವರ್ಷಗಳ ಕಾಲಮಿತಿಯನ್ನು ಪೂರೈಸಿದ ನಂತರ, 2000 ರೂಪಾಯಿ ನೋಟುಗಳ ಯುಗವನ್ನು 2023ರ ಮೇ 19 ರಂದು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರವನ್ನು ಆರ್‌ಬಿಐ(RBI) ಪ್ರಕಟಿಸಿತು.
ಭಾರತೀಯ ರಿಸರ್ವ್ ಬ್ಯಾಂಕ್ (Reserve bank of India, RBI) 2000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಘೋಷಿಸಿದ ನಂತರ, ಜನರು ತಮ್ಮ ಬಳಿ ಇರುವ ಈ ನೋಟುಗಳನ್ನು ಠೇವಣಿ ಮಾಡಲು ಅಥವಾ ಬದಲಾಯಿಸಲು ಒತ್ತಡ ಹಾಕುತ್ತಿದ್ದಾರೆ.
23 ಮೇ 2023 ರಿಂದ, ಜನರು ತಮ್ಮ 2000 ರೂ. ನೋಟುಗಳನ್ನು ಭಾರತದ ಯಾವುದೇ ಬ್ಯಾಂಕ್ ಶಾಖೆ ಅಥವಾ ಅಂಚೆ ಕಚೇರಿಯಲ್ಲಿ ಠೇವಣಿ ಮಾಡಬಹುದು ಅಥವಾ ಬದಲಾಯಿಸಬಹುದು. ಈ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವುದು ಅಥವಾ ಇತರ ಮುಖಬೆಲೆಯ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳುವುದು ಸಾಧ್ಯವಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) 97.26% ರಷ್ಟು 2,000 ಬ್ಯಾಂಕ್ ನೋಟುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಹಿಂತಿರುಗಿಸಲಾಗಿದೆ ಎಂದು ಘೋಷಿಸಿದೆ. ಇನ್ನು ಉಳಿದ ನೋಟ್ ಗಳನ್ನು ಹಿಂತಿರುಗಿಸಲು ಇನ್ನಿತರೇ ಪರ್ಯಾಯ ಮಾರ್ಗವಾಗಿ RBI 2,000 ರೂ. ಗಳ ನೋಟಗಳನ್ನು ಅಂಚೆ ಕಚೇರಿಯಲ್ಲಿ ವಿನಿಮಯ ಮಾಡಿಕೊಳ್ಳಲು ಘೋಷಿಸಿದೆ.
ಇದಕ್ಕಾಗಿ ನಿಮಗೆ ಬೇಕಾಗಿರುವುದು ಕೇವಲ ಎರಡು ವಿಷಯಗಳು:
ಮೊದಲಿಗೆ, RBI ವೆಬ್‌ಸೈಟ್‌ನಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಅಗತ್ಯವಿರುವ ಫಾರ್ಮ್‌ನ್ನು ಡೌನ್‌ಲೋಡ್ ಮಾಡಿ,ಅದನ್ನು ಭರ್ತಿ ಮಾಡಿರಿ. ತದನಂತರ ಈ ಫಾರ್ಮ್ ಜೊತೆ ನಿಮ್ಮ ಎರಡೂ ಸಾವಿರದ ನೋಟುಗಳನ್ನು ಯಾವುದ ಅಥವಾ ಹತ್ತಿರವಿರುವ ಪೋಸ್ಟ್ ಆಫೀಸ್‌ಗೆ ತೆಗೆದುಕೊಂಡು ಹೋಗಿ ನೋಂದಣಿ ಮಾಡಿಸಿ. ನಿಮ್ಮ ನೋಟುಗಳನ್ನು ನಿರ್ದಿಷ್ಟ ಆರ್‌ಬಿಐ ಕಚೇರಿಗೆ (Issue Office) ಪೋಸ್ಟ್ ಮಾಡಲಾಗುತ್ತದೆ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.
RBI ಪ್ರಕಾರ, ಒಂದೆ ಹೊತ್ತಿಗೆ ಗರಿಷ್ಠ 20,000 ರೂಪಾಯಿ ಮೌಲ್ಯದ ನೋಟುಗಳನ್ನು ಬದಲಾಯಿಸಬಹುದು. ಈ ಸೇವೆ ಭಾರತದಾದ್ಯಂತ ಲಭ್ಯವಿದೆ ಮತ್ತು ಹಿರಿಯ ನಾಗರಿಕರು ಮತ್ತು ಅಂಗವಿಕಲತೆ ಹೊಂದಿರುವವರಿಗೆ ಬ್ಯಾಂಕ್‌ಗಳಲ್ಲಿ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡಲಾಗಿದೆ.
ಆದ್ದರಿಂದ, ವಿಳಂಬ ಮಾಡಬೇಡಿ! ನಿಮ್ಮ ಎರಡೂ ಸಾವಿರದ ನೋಟುಗಳನ್ನು ಕೂಡಲೇ ಪೋಸ್ಟ್ ಆಫೀಸ್ ಮೂಲಕ ಬದಲಾಯಿಸಿ. ಬ್ಯಾಂಕು(Bank) ಗಳಿಗೆ ಓಡಾಡಬೇಕೆಂಬ ಗಡಿಬಿಡಿ ಇರುವುದಿಲ್ಲ. ಯಾವುದೇ ಗಾಬರಿ ಇಲ್ಲದೆ ನಿಮ್ಮ ಎರಡೂ ಸಾವಿರದ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಳ್ಳಬಹುದು. ಈಗ ಚಿಂತೆ ಮರೆತು ನೆಮ್ಮದಿಯಿಂದಿರಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಇದುವರೆಗೂ ಒಂದು ಕಂತಿನ ಹಣ ಬರದೇ ಇದ್ದವರಿಗೆ ಹೊಸ ಮಾರ್ಗಸೂಚಿ ಪ್ರಕಟ, ಹೀಗೆ ಮಾಡಿ ₹2000/- ಬರುತ್ತೆ
- ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ
- ಇನ್ನೂ ಮುಂದೆ 2000/- ರೂ. ಇವರಿಗೆ ಬರುವುದಿಲ್ಲ, ಜನವರಿ ತಿಂಗಳ ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆ, ರದ್ದಾದ ಪಟ್ಟಿ ಬಿಡುಗಡೆ.!
- ಅಕ್ರಮ ಸಕ್ರಮದ ಈ 7000 ರೈತರಿಗೆ ಸಿಗಲಿದೆ ಸರ್ಕಾರಿ ಭೂಮಿ, ಇಲ್ಲಿದೆ ಸಂಪೂರ್ಣ ಮಾಹಿತಿ.
- ಬೆಳೆಹಾನಿ ಪರಿಹಾರದ ಹಣ ಇನ್ನೂ ಬಂದಿಲ್ವಾ? ಆಧಾರ್ ಲಿಂಕ್ ಆಗದೇ ಇರುವ ಪಟ್ಟಿ ಬಿಡುಗಡೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.