ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) (National Education policy) ಅಡಿಯಲ್ಲಿ ನಾಲ್ಕು ವರ್ಷದ ಪದವಿ (4 year’s degree) ರದ್ದು ಗೊಳಿಸಿ 2024-25 ಶೈಕ್ಷಣಿಕ ಸಾಲಿನಿಂದ ಮತ್ತೆ 3 ವರ್ಷದ ಪದವಿ (3 year’s degree) ಮರುಜಾರಿಗೊಳಿಸಿದ ರಾಜ್ಯ ಸರ್ಕಾರ.
3 ವರ್ಷದ ಪದವಿ ಮುಂದುವರೆಸಲು ಆದೇಶಿಸಿದ ರಾಜ್ಯ ಸರ್ಕಾರ :
ಈ ಹಿಂದೆ ಬಿಜೆಪಿ ಸರ್ಕಾರವು (BJP government) ರಾಷ್ಟ್ರೀಯ ಶಿಕ್ಷಣ ನೀತಿ ಅಥವಾ ಹೊಸ ಶಿಕ್ಷಣ ನೀತಿ (ಎನ್‌ಇಪಿ) (New education policy) ಪ್ರಕಾರ ರಾಜ್ಯದಲ್ಲಿ ನಾಲ್ಕು ವರ್ಷಗಳ ಪದವಿ ಜಾರಿಗೊಳಿಸಿತ್ತು. ಅದಾದ ನಂತರ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಎನ್‌ಇಪಿ ಬದಲು ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಜಾರಿಗೊಳಿಸಲು ಆಯೋಗವನ್ನು ರಚಿಸಲಾಗಿದ್ದು, 2024-25 ನೇ ಶೈಕ್ಷಣಿಕ ವರ್ಷದಿಂದ ಇದರ ಮಾರ್ಗಸೂಚಿಗಳಿಗನುಸಾರವಾಗಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಮೂರು ವರ್ಷಗಳ ಪದವಿ ಕಲಿಕೆಯನ್ನು ಮುಂದುವರೆಸಲು ರಾಜ್ಯ ಸರ್ಕಾರವು ಆದೇಶ ನೀಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮೂರು ವರ್ಷಗಳ ಪದವಿ ಜಾರಿಗೊಳಿಸಲು ಸರ್ಕಾರಕ್ಕೆ ಶಿಫಾರಸು ನೀಡಲಾಗಿತ್ತು :
ರಾಜ್ಯ ಶಿಕ್ಷಣ ನೀತಿ ಆಯೋಗದ (State Education Policy Commission )ಮುಖ್ಯಸ್ಥ ಪ್ರೊ.ಸುಖದೇವ್ ಥೋರಟ್ (professor sukhdev thorat) ಅವರು ರಾಜ್ಯದ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು, ಡೀನ್‌ಗಳು, ಕಾಲೇಜುಗಳ ಪ್ರಾಂಶುಪಾಲರು ಮತ್ತು ಶಿಕ್ಷಣ ತಜ್ಞರ ಜೊತೆ ಮೂರು ತಿಂಗಳುಗಳ ಕಾಲ ನಿರಂತರ ಸಭೆ ನಡೆಸಿ, ಸಮಾಲೋಚಿಸಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಅದರ ಆಧಾರದ ಮೇಲೆ ನಾಲ್ಕು ವರ್ಷಗಳ ಪದವಿ ರದ್ದುಗೊಳಿಸಿ ಮೂರು ವರ್ಷಗಳ ಪದವಿ ಜಾರಿಗೊಳಿಸಲು ಸರ್ಕಾರಕ್ಕೆ ಶಿಫಾರಸು (recommendation) ಮಾಡಿದ್ದರು. ಇದರಿಂದ ಇದೀಗ ರಾಜ್ಯದಲ್ಲಿ ಎನ್ ಇ ಪಿ ಯ ಪ್ರಕಾರ 4 ವರ್ಷದ ಪದವಿರದ್ದಾಗಿ 3 ವರ್ಷದ ಪದವಿ ಪಡೆಯಲಿ ಮತ್ತೆ ಅವಕಾಶ ಕಲ್ಪಿಸಿದೆ.
ರಾಜ್ಯ ಸರ್ಕಾರ ನಾಲ್ಕು ವರ್ಷಗಳ ಆನರ್ಸ್ ಪದವಿ (Honours degree) ಪಡೆಯಲು ಅವಕಾಶ ನೀಡಿದೆ :
ಹೌದು, ಈ ಹಿಂದೆ ಜಾರಿಗೊಳಿಸಿದ್ದ ಎನ್ಇಪಿ (NEP) ಯ ಪ್ರಕಾರ ಇದ್ದ 4 ವರ್ಷದ ಪದವಿ ಪಡೆಯಲು ಬಯಸಿದವರಿಗೆ ಅವಕಾಶ ಇದೆ ಎಂದು ಸರ್ಕಾರ ತಿಳಿಸಿದೆ. ಎನ್ಇಪಿ ಯಲ್ಲಿ 3 ವರ್ಷ ಪದವಿ ಪಡೆದ ನಂತರ ಮತ್ತೆ ಇನ್ನು 1 ವರ್ಷ ಪದವಿ ಅಂದರೆ ಆನರ್ಸ್ ಪದವಿಗೆ ಪ್ರವೇಶ ಪಡೆಯಬಹುದು.
ಇದು ವಿದ್ಯಾರ್ಥಿಗಳ ಸ್ವ ಇಚ್ಚೆ ಅಥವಾ ವಿದ್ಯಾರ್ಥಿಗಳ ಬೇಡಿಕೆ ಮೇರೆಗೆ ಕಾಲೇಜುಗಳ ಮೂಲಸೌಕರ್ಯಗಳನ್ನು (facilities) ಪರಿಗಣಿಸಿ ಅವರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಶಿಕ್ಷಣ ಇಲಾಖೆ ಆದೇಶದಲ್ಲಿ ಸೂಚಿಸಿದೆ. ವಿದ್ಯಾರ್ಥಿಗಳು ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಕಾಲೇಜುಗಳಲ್ಲಿ ಕೋರ್ಸ್ ಲಭ್ಯವಿಲ್ಲದಿದ್ದರೆ ಸಮೀಪದ ಕಾಲೇಜುಗಳಲ್ಲಿ ಪ್ರವೇಶ ನೀಡಬೇಕು ಎಂದು ಆದೇಶಿಸಿದೆ.
4 ವರ್ಷದ ಆನರ್ಸ್ ಪದವಿ ಪಡೆದರೆ, 1 ವರ್ಷ ಏಕೀಕೃತ ಸ್ನಾತಕೋತ್ತರ ಪದವಿ (Post graduate course) ಮಾಡಬಹುದು :
2021-22ನೇ ಸಾಲಿನಿಂದ 2023-24ರವರೆಗೆ ಪದವಿ ತರಗತಿಗಳಿಗೆ ಪ್ರವೇಶಾತಿ ಪಡೆದವರು ನಾಲ್ಕು ವರ್ಷಗಳ ಆನರ್ಸ್ ಪದವಿ ಪಡೆದರೆ, ಅವರು ಒಂದು ವರ್ಷದ ಏಕೀಕೃತ ಸ್ನಾತಕೋತ್ತರ ಪದವಿ (post graduate course) ಮಾಡಬಹುದು. ಹಾಗೆಯೇ ಮೂರು ವರ್ಷದ ಪದವಿ ಅಷ್ಟೇ ಸಾಕು ಎಂದರೆ, ಈ ಹಿಂದಿನಂತೆ ಪ್ರತ್ಯೇಕವಾಗಿ ಎರಡು ವರ್ಷಗಳ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬಹುದಾಗಿದೆ.
ಈ ಮಾಹಿತಿಗಳನ್ನು ಓದಿ