ಹಲವು ಹೋರಾಟದ ನಂತರ ರಾಜ್ಯದ ಸರ್ಕಾರಿ ನೌಕರರಿಗೆ (state government employees) ಸಿಕ್ಕಿದೆ ಶುಭ ಸುದ್ದಿ. ಸರ್ಕಾರಿ ನೌಕರರ ಮೂಲವೇತನದ ಶೇಕಡಾ 27.5 ರಷ್ಟು ಹೆಚ್ಚಳ.
7 ನೇ ವೇತನ ಆಯೋಗ ( 7th Pay Commission) ಭಾರತದಲ್ಲಿ, ಕೇಂದ್ರ ಸರ್ಕಾರದ (state government) ನೌಕರರು ಮತ್ತು ಸಿಬ್ಬಂದಿಗಳು ತಮ್ಮ ವೇತನವನ್ನು 7 ನೇ ವೇತನ ಆಯೋಗದ ಸಂಯೋಜನೆಯ ಪ್ರಕಾರ ಪಡೆಯುತ್ತಾರೆ. ಮೊದಲಿಗೆ, ಏಳನೇ ಕೇಂದ್ರ ವೇತನ ಆಯೋಗವನ್ನು (CPC) ಭಾರತ ಸರ್ಕಾರವು ಫೆಬ್ರವರಿ 28, 2014 ರಂದು ಸ್ಥಾಪಿಸಿತು.
ಲೋಕಸಭಾ ಚುನಾವಣೆಗೂ (Lokasabha election) ಮೊದಲೇ ಸರ್ಕಾರಿ ನೌಕಕರು 7 ನೇ ವೇತನ ಆಯೋಗದ ಜಾರಿ ಕುರಿತು ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದರು. ಎಷ್ಟು ಬಾರಿ ಮನವಿಯನ್ನು ಕೋರಿದರು ಸರ್ಕಾರ ಇದರ ಕುರಿತು ಯಾವುದೇ ಕ್ರಮವನ್ನು ಜಾರಿಗೊಳಿಸಲಿಲ್ಲದ ಕಾರಣ ಸರ್ಕಾರದ ವಿರುದ್ಧ ಹಲವಾರು ಭಾರಿ ಹೋರಾಟವನ್ನೂ ಕೂಡ ನಡೆಸಿದ್ದರು. ಇದೀಗ ರಾಜ್ಯದ ಸರ್ಕಾರಿ ನೌಕರರಿಗೆ ಈ ಕುರಿತಾಗಿ ಸಿಹಿ ಸುದ್ದಿ ತಿಳಿದು ಬಂದಿದೆ. ಈ ತಿಂಗಳ ಅಂತ್ಯದೊಳಗೆ 7 ನೇ ವೇತನ ಆಯೋಗದ (7th pay commission) ಶಿಫಾರಸ್ಸಿನಂತೆ ವೇತನ, ಭತ್ಯೆ ಹಾಗೂ ಸೌಲಭ್ಯಗಳನ್ನು ನೀಡುವ ಬಗ್ಗೆ ರಾಜ್ಯ ಸರ್ಕಾರ (state government) ಅಧಿಕೃತ ಘೋಷಣೆಯನ್ನು ಮಾಡುವ ಸಾಧ್ಯತೆ ಇದೆ. 7 ನೇ ವೇತನ ಆಯೋಗದ ಶಿಫಾರಸ್ಸಿನಂತೆಯೇ ಎಷ್ಟು ವೇತನ ಹೆಚ್ಚಳ ಹಾಗುವ ಸಾಧ್ಯತೆ ಇದೆ? ಇದಕ್ಕಾಗಿ ಸರ್ಕಾರ ತೆಗೆದುಕೊಂಡಿರುವ ನಿಲುವು ಏನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕೆ ಸುಧಾಕರ ರಾವ್ (k. Sudhakar rao) ಅಧ್ಯಕ್ಷತೆಯ 7ನೇ ವೇತನ ಆಯೋಗದ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM. Siddaramayya) ನೀಡಿಲಾಗಿತ್ತು :
ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ನೇತೃತ್ವದ ಏಳನೇ ವೇತನ ಆಯೋಗವು ಮಾರ್ಚ್ 16 (March 6th) ರಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದ್ದರು. ಆಯೋಗವು ಕರ್ನಾಟಕ ಸರ್ಕಾರಿ ನೌಕರರಿಗೆ 27.5% ವೇತನವನ್ನು ಹೆಚ್ಚಿಸಲು ಶಿಫಾರಸು ಮಾಡಿತ್ತು. ಇನ್ನು ವರದಿಯಲ್ಲಿ ಕನಿಷ್ಠ ಮೂಲವೇತನ 17000 ರೂ ಗಳಿಂದ 27 ಸಾವಿರ ರೂಗಳಿಗೆ ಹೆಚ್ಚಿಸುವಂತೆ ಶಿಫಾರಸ್ಸು ಮಾಡಲಾಗಿತ್ತು.ಇದೀಗ 7ನೇ ವೇತನ ಆಯೋಗದ (7th Pay Commission) ಶಿಫಾರಸು ಜಾರಿಗೆ ಸರ್ಕಾರ ಮುಂದಾಗಿದೆ. ಸರ್ಕಾರಿ ನೌಕರರ (state government employees) ಮೂಲವೇತನದ ಶೇಕಡಾ 27.5 ರಷ್ಟು ಹೆಚ್ಚಳವಾಗಬೇಕು ಎಂದು ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ ಹೀಗಿದೆ :
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರ ಅಭಿಪ್ರಾಯಗಳು ಭಿನ್ನವಾಗಿದ್ದು, ಕೆಲವು ಸಚಿವರು ಶೇ.25ರಷ್ಟು ಹೆಚ್ಚಳ ಮಾಡುವಂತೆ ಸೂಚಿಸಿದರೆ, 27% ವೇತನ ಹೆಚ್ಚಳಕ್ಕೆ ಕೆಲ ಸಚಿವರು ಸಲಹೆ ನೀಡಿದರು.ಕೊನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶೇ.27ರಷ್ಟು ಹೆಚ್ಚಳಕ್ಕೆ ಒಲವು ತೋರಿದ್ದಾರೆ ಎಂದು ಹೇಳಲಾಗಿದೆ. ಅಂತಿಮವಾಗಿ ಸರ್ಕಾರಿ ನೌಕರರ ವೇತನ ಹೆಚ್ಚಳ ಸೇರಿದಂತೆ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲು ಸಂಪುಟವು ಮುಖ್ಯಮಂತ್ರಿಗೆ ಅಧಿಕಾರ ನೀಡಿದೆ. ಇನ್ನು ಈ ಕುರಿತಾಗಿ ರಾಜ್ಯ ಸರ್ಕಾರ ಈ ತಿಂಗಳ ಅಂತ್ಯದೊಳಗಾಗಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಗಳಿವೆ.
ಅಂತಿಮ ವರದಿಯನ್ನು ಜಾರಿಗೊಳಿಸಿದರೆ ನೌಕರರ ಕನಿಷ್ಠ ವೇತನ ಎಷ್ಟಕ್ಕೆ ಹೆಚ್ಚಲಿದೆ :
ಸರ್ಕಾರಿ ನೌಕಕರು 7 ನೇ ವೇತನ ಆಯೋಗದ ಜಾರಿ ಕುರಿತ ಅಂತಿಮ ವರದಿಯನ್ನು ಜಾರಿಗೊಳಿಸಿದರೆ, ಮಾಸಿಕ 17,000 ರೂ.ನಿಂದ ಸರಕಾರಿ ನೌಕರರ ವೇತನ 27,000 ರೂ.ಗೆ ಏರಿಕೆಯಾಗಲಿದೆ. ಈ ವೇತನ ಹೆಚ್ಚಳದಿಂದ ರಾಜ್ಯದಾದ್ಯಂತ ಸುಮಾರು 1.2 ಮಿಲಿಯನ್ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡಿದಂತಾಗುತ್ತದೆ. ಒಟ್ಟಾರೆಯಾಗಿ ಈ ತಿಂಗಳ ಅಂತ್ಯದೊಳಗಾಗಿ 7ನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
ಕೇಂದ್ರ ಮಾದರಿ ವೇತನ ನೀಡಬೇಕು
ಆಂಧ್ರ ಸರ್ಕಾರ ಕೊಟ್ಟಿರುವ ಸೌಲಭ್ಯ ಗಳನ್ನು ಅನುವು
Maadi kodbekendu ಕೈ ಮುಗಿದು kelutheivei