BIG BREAKING: ಸರ್ಕಾರಿ ನೌಕರ’ರಿಗೆ ಬಂಪರ್ ಸಿಹಿಸುದ್ದಿ: ಆ.1ರಿಂದಲೇ ‘7ನೇ ವೇತನ ಆಯೋಗ’ ಜಾರಿ?

IMG 20240716 WA0001

ಆಗಸ್ಟ್ 1ರಿಂದ 7ನೇ ವೇತನ ಆಯೋಗ ಜಾರಿ. ಕರ್ನಾಟಕ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌!

7 ನೇ ವೇತನ ಆಯೋಗ ( 7th Pay Commission) ಭಾರತದಲ್ಲಿ, ಕೇಂದ್ರ ಸರ್ಕಾರದ (state government) ನೌಕರರು ಮತ್ತು ಸಿಬ್ಬಂದಿಗಳು ತಮ್ಮ ವೇತನವನ್ನು 7 ನೇ ವೇತನ ಆಯೋಗದ ಸಂಯೋಜನೆಯ ಪ್ರಕಾರ ಪಡೆಯುತ್ತಾರೆ. ಮೊದಲಿಗೆ, ಏಳನೇ ಕೇಂದ್ರ ವೇತನ ಆಯೋಗವನ್ನು (CPC) ಭಾರತ ಸರ್ಕಾರವು ಫೆಬ್ರವರಿ 28, 2014 ರಂದು ಸ್ಥಾಪಿಸಿತು.

ಸರ್ಕಾರಿ ನೌಕಕರು 7 ನೇ ವೇತನ ಆಯೋಗದ ಜಾರಿ ಕುರಿತು ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದರು. ಎಷ್ಟು ಬಾರಿ ಮನವಿಯನ್ನು ಕೋರಿದರು ಸರ್ಕಾರ ಇದರ ಕುರಿತು ಯಾವುದೇ ಕ್ರಮವನ್ನು ಜಾರಿಗೊಳಿಸಿರಲಿಲ್ಲ. ಇದೀಗ ರಾಜ್ಯದ ಸರ್ಕಾರಿ ನೌಕರರಿಗೆ ಈ ಕುರಿತಾಗಿ  ಸಿಹಿ ಸುದ್ದಿ ತಿಳಿದು ಬಂದಿದೆ. ಆಗಸ್ಟ್ 1 ರಿಂದಲೇ 7 ನೇ ವೇತನ ಆಯೋಗದ (7th pay commission) ಶಿಫಾರಸ್ಸಿನಂತೆ ವೇತನ, ಭತ್ಯೆ ಹಾಗೂ ಸೌಲಭ್ಯಗಳನ್ನು ನೀಡುವ ಬಗ್ಗೆ ರಾಜ್ಯ ಸರ್ಕಾರ (state government) ಅಧಿಕೃತ ಘೋಷಣೆ ಮಾಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸೋಮವಾರ ಸಂಜೆ ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ 7 ನೇ ವೇತನ ಆಯೋಗದ ಕುರಿತು ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.ಈ ನಿರ್ಧಾರ ಕರ್ನಾಟಕದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದಂತಾಗಿದೆ. ಆಗಸ್ಟ್‌ 1 ರಿಂದ 7 ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವುದಾಗಿ ಸರ್ಕಾರ ತೀರ್ಮಾನ ಕೈಗೊಂಡಿದೆ.ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

7ನೇ ವೇತನ ಆಯೋಗದ ಜಾರಿ ದಿನಾಂಕ ಅಧಿಕೃತವಾಗಿ ಘೋಷಣೆಯಾದರು ಕೂಡ ಸರ್ಕಾರಿ ನೌಕರರಿಗೆ (government employees) ನಿರಾಸೆಯಾಗಿದೆ :

ಕೆ. ಸುಧಾಕರ್‌ ರಾವ್ (K. Sudhakar Rao) ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವುದು ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸಿ, ಎನ್.ಪಿ.ಎಸ್.(NPS) ರದ್ದುಪಡಿಸುವುದು ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ (Arogya Sanjeevini Yojana) ಜಾರಿಗೊಳಿಸುವುದು ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿತ್ತು. ಈ ಬೇಡಿಕೆಗಳಲ್ಲಿ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವುದಕ್ಕೆ ಮಾತ್ರ ಸರ್ಕಾರ ಒಪ್ಪಿಗೆ ನೀಡಿದೆ. ಆದ್ದರಿಂದ ನೌಕರರು ನಿರಾಸೆಗೊಂಡಿದ್ದಾರೆ.

ಎನ್.ಪಿ.ಎಸ್. (NPS) ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು ಮತ್ತು ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವ ಬೇಡಿಕೆಗಳ ಬಗ್ಗೆ ಮುಂದಿನ ಹೋರಾಟದ ರೂಪು-ರೇಷೆಗಳ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ವೃಂದ ಸಂಘಗಳ ಅಧ್ಯಕ್ಷರು-ಪದಾಧಿಕಾರಿಗಳ ಸಭೆಯನ್ನು ಜುಲೈ 23ರಂದು (July 23rd) ಕರೆದಿದ್ದಾರೆ. ಈ ಮಹತ್ವದ ಸಭೆಯಲ್ಲಿ ನೌಕರರ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!