7th pay commission : ಸರ್ಕಾರಿ ನೌಕಕರಿಗೆ ತುಟ್ಟಿಭತ್ಯೆಯಲ್ಲಿ ಶೇಕಡ 3ರಷ್ಟು ಹೆಚ್ಚಳ! ಇಲ್ಲಿದೆ ಕಂಪ್ಲೀಟ್ ಮಾಹಿತಿ

IMG 20240709 WA0001

ಏಳನೇ ವೇತನ ಆಯೋಗ(7th pay commission)ದಿಂದ ತುಟ್ಟಿ ಭತ್ಯೆಯಲ್ಲಿ ಶೇ.3ರಷ್ಟು ಏರಿಕೆ! ಜುಲೈ 1 ರಿಂದ ಜಾರಿಯಾಗಿದ್ದು, ಸೆಪ್ಟೆಂಬರ್ ನಲ್ಲಿ ಇದರ ಲಾಭ ಪಡೆಯಲಿದ್ದಾರೆ ಸರ್ಕಾರಿ ನೌಕರರು.

ಕೇಂದ್ರ ಸರ್ಕಾರವು ಸೆಪ್ಟೆಂಬರ್‌ನಲ್ಲಿ ಡಿಎ ಅನ್ನು ಶೇಕಡಾ 3 ರಿಂದ 4 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಇನ್ನು ತುಟ್ಟಿ ಭತ್ಯೆಯಲ್ಲಿ 3 ರಷ್ಟು ಹೆಚ್ಚಳ ಈಗಾಗಲೇ ದೃಢೀಕರಿಸಲ್ಪಟ್ಟಿದೆ. ಕೇಂದ್ರ ಸರ್ಕಾರದ (Central Government) ಈ ನಿರ್ಧಾರದಿಂದ ಸರ್ಕಾರಿ ನೌಕರರಿಗೆ(Government Employees) ಗುಡ್‌ನ್ಯೂಸ್ ಸಿಕ್ಕಂತಾಗಿದೆ.ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ತುಟ್ಟಿಭತ್ಯೆ ಎಂದರೇನು?

ತುಟ್ಟಿಭತ್ಯೆ (DA) ಎನ್ನುವುದು ನೇರವಾಗಿ ಜೀವನ ವೆಚ್ಚಕ್ಕೆ ಸಂಬಂಧಿಸಿದ್ದು. ಸರ್ಕಾರಿ ನೌಕರರ ಮೂಲ ವೇತನದ ಶೇಕಡಾವಾರು ಪ್ರಮಾಣವನ್ನು ಬಳಸಿಕೊಂಡು ಇದನ್ನು ನಿರ್ಧರಿಸಲಾಗುವುದು. ಸರ್ಕಾರವು ಸಾರ್ವಜನಿಕ ವಲಯದ ಪ್ರಸ್ತುತ ಮತ್ತು ನಿವೃತ್ತ ಸದಸ್ಯರಿಗೆ ಈ ತುಟ್ಟಿಭತ್ಯೆ ಒದಗಿಸುತ್ತದೆ.ಹಾಗೆಯೇ ತುಟ್ಟಿಭತ್ಯೆ ಅವರ ಸ್ಥಳದ ಆಧಾರದ ಮೇಲೆ ವಿಭಿನ್ನ ಉದ್ಯೋಗಿಗಳಿಗೆ ವಿಭಿನ್ನವಾಗಿರುತ್ತದೆ.

ಮಾರ್ಚ್ 2024 ರ ಹಿಂದಿನ ಹೆಚ್ಚಳದಲ್ಲಿ,ಮೂಲ ವೇತನದ ಶೇಕಡಾ 4 ರಿಂದ 50 ರಷ್ಟು ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರವು ಹೆಚ್ಚಿಸಿತ್ತು. ಇದೀಗ ತುಟ್ಟಿ ಭತ್ಯೆಯು ಮೂಲ ವೇತನದ ಶೇಕಡಾ 50 ರಷ್ಟಿದೆ. ಹಾಗೂ 7ನೇ ವೇತನ ಆಯೋಗದ (7th pay commission) ಪ್ರಕಾರ ಮೂಲವೇತನದೊಂದಿಗೆ ಡಿಎ ವಿಲೀನಗೊಳ್ಳಲಿದೆ ಎಂಬ ಸಂಶಯ ಕಾಡುತ್ತಿದೆ. ಅಧಿಕೃತ ಮೂಲಗಳ ಹೇಳುತ್ತಿರುವ ಪ್ರಕಾರ 8ನೇ ವೇತನ ಆಯೋಗ ರಚನೆಯಾಗುವವರೆಗೂ ಶೇ. 50 ಕ್ಕಿಂತ ಹೆಚ್ಚಿನ ತುಟ್ಟಿಭತ್ಯೆಯ ಸಂದರ್ಭದಲ್ಲಿ ಡಿಎಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಲಾಗುವುದಿಲ್ಲ ಎನ್ನಲಾಗುತ್ತಿದೆ. ವಿಲೀನ ಮಾಡುವ ಬದಲಿಗೆ DA 50% ದಾಟಿದರೆ,HRA ಸೇರಿದಂತೆ ಭತ್ಯೆಗಳನ್ನು ಹೆಚ್ಚಿಸುವ ನಿಬಂಧನೆಗಳಿವೆ.

ಜನವರಿ ಮತ್ತು ಜುಲೈನಿಂದ ಜಾರಿಗೆ ಬಂದಿರುವಂತೆ ವರ್ಷಕ್ಕೆ ಎರಡು ಬಾರಿ ಡಿಎ ಮತ್ತು ಡಿಆರ್ ಅನ್ನು ಹೆಚ್ಚಿಸಲಾಗುತ್ತದೆ. ಹಾಗೆಯೇ ಪಿಂಚಣಿದಾರರಿಗೆ ಡಿಆರ್ ನೀಡಿದರೆ ಸರ್ಕಾರಿ ನೌಕರರಿಗೆ ಡಿಎ ನೀಡಲಾಗುತ್ತದೆ. ಪಿಂಚಣಿದಾರರ ಡಿಯರ್ನೆಸ್ ರಿಲೀಫ್  (DR) ಅನ್ನು ಸರ್ಕಾರವು ಶೇ 4 ರಷ್ಟು ಹೆಚ್ಚಿಸಿದೆ.

ಸರ್ಕಾರ DA ಹೆಚ್ಚಳವನ್ನು ಹೇಗೆ ಲೆಕ್ಕಾಚಾರ ಮಾಡುತ್ತದೆ?

DA ಮತ್ತು DR ಹೆಚ್ಚಳವನ್ನು ಅಖಿಲ ಭಾರತ CPI-IW ನ 12 ಮಾಸಿಕ ಸರಾಸರಿಯಲ್ಲಿನ ಶೇಕಡಾವಾರು ಹೆಚ್ಚಳದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಕೇಂದ್ರ ಸರ್ಕಾರವು ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಂದು ಭತ್ಯೆಗಳನ್ನು ಪರಿಷ್ಕರಿಸಿದರೂ, ನಿರ್ಧಾರವನ್ನು ಸಾಮಾನ್ಯವಾಗಿ ಮಾರ್ಚ್ ಮತ್ತು ಸೆಪ್ಟೆಂಬರ್/ಅಕ್ಟೋಬರ್‌ನಲ್ಲಿ ಪ್ರಕಟಿಸಲಾಗುತ್ತದೆ.

2006 ರಲ್ಲಿ, ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆ‌ರ್ ಅನ್ನು ಲೆಕ್ಕಾಚಾರ ಮಾಡಲು ಸೂತ್ರವನ್ನು ಪರಿಷ್ಕರಿಸಿತು. ತುಟ್ಟಿಭತ್ಯೆ ಶೇಕಡಾವಾರು = ((ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 12 3-115.76)/115.76)x100.

ಕೇಂದ್ರ ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ:

ತುಟ್ಟಿಭತ್ಯೆ ಶೇಕಡಾವಾರು = ((ಅಖಿಲ-ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 3 ತಿಂಗಳು  -126.33)/126.33)x100.

ಕೆಲವು ತಿಂಗಳುಗಳ ಹಿಂದೆ  8ನೇ ವೇತನ ಆಯೋಗ(8th Pay Commission) ಜಾರಿಗೊಳಿಸಲು ಎರಡು ಪ್ರಸ್ತಾವನೆಗಳು ನೀಡಿದ್ದು, ಆ ಎರೆಡೂ ಪ್ರಸ್ತಾವನೆಗಳನ್ನು ಪರಿಗಣಿಸಿಲ್ಲ ಎಂದು ಕೇಂದ್ರ ಸರ್ಕಾರವು ಸಂಸತ್‌(Parliament Session)ನಲ್ಲಿ ಹೇಳಿದೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!