7th Pay Commission: ಸರ್ಕಾರಿ ನೌಕರರಿಗೆ ಸಿಗುವ ಸಾಲ ಮತ್ತು ಮುಂಗಡ ಸೌಲಭ್ಯಗಳ ಪಟ್ಟಿ ಇಲ್ಲಿದೆ.

IMG 20240812 WA0000

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, 7ನೇ ವೇತನ ಅಯೋಗದಿಂದ ದೊರೆಯಲಿವೆ ಸಾಲ(loan) ಮತ್ತು ಮುಂಗಡ ಸೌಲಭ್ಯಗಳು.

ಈಗಾಗಲೇ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ (7th Pay Commission Pension) ಶಿಫಾರಸುಗಳನ್ನು ಜಾರಿ ಮಾಡಿದ್ದು, ರಾಜ್ಯ ಸರ್ಕಾರಿ ನೌಕರರ ಸಂಬಳ(salary), ಭತ್ಯೆ ಪಿಂಚಣಿ ಸೌಲಭ್ಯಗಳು ಪರಿಷ್ಕರಣೆಯಾಗಿದೆ. ಇದೇ ಆಗಸ್ಟ್ ತಿಂಗಳಿನಿಂದ ಸರ್ಕಾರಿ ನೌಕರರಿಗೆ ಪರಿಷ್ಕೃತ ವೇತನ ಭತ್ಯೆ ಪಿಂಚಣಿ ಸೌಲಭ್ಯಗಳು ಸಿಗಲಿವೆ.ಅಷ್ಟೇ ಅಲ್ಲದೆ ಸರ್ಕಾರಿ ನೌಕರರಿಗೆ ಸಿಗುವ ಸಾಲ ಹಾಗೂ ಮುಂಗಡ ಸೌಲಭ್ಯಗಳೂ ಪರಿಷ್ಕರಣೆಯಾಗಿದ್ದು, ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸಾರ್ಕರಿ ನೌಕರರ ಸಾಲ ಮತ್ತು ಮುಂಗಡ ಸೌಲಭ್ಯ?

ಕೇಂದ್ರ (central) ಮತ್ತು ರಾಜ್ಯ ಸರ್ಕಾರಗಳು (state government) ತಮ್ಮ ನೌಕರರಿಗಾಗಿ ವಿವಿಧ ಸಾಲಗಳು ಮತ್ತು ಮುಂಗಡಗಳನ್ನು ಮಂಜೂರು ಮಾಡುತ್ತವೆ. ನೌಕರರ ವೇತನ ಮತ್ತು ಉಳಿತಾಯಗಳು ಕಡಿಮೆಯಿದ್ದು, ಬ್ಯಾಂಕುಗಳು(Banks) ಮತ್ತು ವಾಣಿಜ್ಯ ಲೇವಾದೇವಿ ಸಂಸ್ಥೆಗಳು ಸುಲಭವಾಗಿ ಸಾಲ ನೀಡದೇ ಇದ್ದಾಗ ನೌಕರರ ದೊಡ್ಡ ಮಟ್ಟದ ವೆಚ್ಚಗಳನ್ನು ಭರಿಸಲು ಈ ಮುಂಗಡಗಳು ಸಹಾಯಕವಾಗುತ್ತವೆ.

ಪ್ರಚಲಿತದಲ್ಲಿರುವ ಮುಂಗಡಗಳು :

ಹಬ್ಬಗಳ ಮುಂಗಡ
ಮೋಟಾರು ಕಾರು ಖರೀದಿ ಮುಂಗಡ
ಮೋಟಾರು ಸೈಕಲ್, ಸ್ಕೂಟರ್ ಖರೀದಿ ಮುಂಗಡ ಬೈಸಿಕಲ್, ಇ-ಬೈಸಿಕಲ್ ಖರೀದಿ ಮುಂಗಡ
ಕಂಪ್ಯೂಟರ್ ಖರೀದಿ ಮುಂಗಡ
ಮನೆ ನಿರ್ಮಾಣ, ಮನೆ ಖರೀದಿ ಮುಂಗಡ

ಈ ಮೇಲಿನ ಎಲ್ಲಾ ಮುಂಗಡಗಳು ಸರ್ಕಾರಿ ನೌಕರರಿಗೆ ಸೇರಲಿದ್ದು, 7ನೇ ವೇತನ ಆಯೋಗದ ವತಿಯಿಂದ ಇದಿಷ್ಟು ಪರಿಸ್ಕರಣೆಯಾದ ಮುಂಗಡಗಳಾಗಿವೆ.

ಹಬ್ಬಗಳ ಮುಂಗಡ :

ಹಬ್ಬಗಳ ಮುಂಗಡದಲ್ಲಿ ಸರ್ಕಾರವು ಇತ್ತೀಚೆಗೆ 10,000 ರಿಂದ 25,000 ರೂ ಗಳ ವರೆಗೆ ಹೆಚ್ಚಿಸಿದೆ. ಈ ಮುಂಗಡವನ್ನು ಇತ್ತೀಚೆಗಷ್ಟೆ ಪರಿಷ್ಕರಿಸಿರುವುದರಿಂದ 7ನೇ ವೇತನ ಆಯೋಗವು ಹಬ್ಬದ ಮುಂಗಡಕ್ಕೆ ಸಂಬಂಧಿಸಿದ ಯಾವುದೇ ಶಿಫಾರಸುಗಳನ್ನು ಮಾಡಿರುವುದಿಲ್ಲ ಎಂದು ತಿಳಿದು ಬಂದಿದೆ.

ಗಮನಿಸಿ :

ಹಬ್ಬಗಳ ಮುಂಗಡ ಹಣಕ್ಕೆ ಯಾವುದೇ ಬಡ್ಡಿ ಇರುವುದಿಲ್ಲ. 10 ತಿಂಗಳ ಕಂತುಗಳಲ್ಲಿ ಮರುಪಾವತಿಸಲು ಅವಕಾಶವಿರುತ್ತದೆ.

ಮೋಟಾರು ಕಾರು (Motor car) ಖರೀದಿ ಮುಂಗಡ :

ಮೋಟಾರು ಕಾರು ಖರೀದಿ ಮುಂಗಡದಲ್ಲಿ ರೂ. 67,550 ಅಥವಾ ಮೇಲ್ಪಟ್ಟ ಮೂಲ ವೇತನ ಪಡೆಯುತ್ತಿರುವ ಸಿಬ್ಬಂದಿಯು ಕಾರು ಖರೀದಿಗಾಗಿ ಗರಿಷ್ಠ ರೂ.3.00 ಲಕ್ಷಗಳ ಮಿತಿಗೊಳಪಟ್ಟು 16 ತಿಂಗಳ ಮೂಲ ವೇತನದಷ್ಟು ಮುಂಗಡವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಮುಂಗಡವನ್ನು ವಾರ್ಷಿಕ ಶೇ.12.50 ರ ಬಡ್ಡಿ ದರದಲ್ಲಿ ನೀಡಲಾಗುತ್ತದೆ. ಅಸಲನ್ನು 100 ತಿಂಗಳುಗಳು ಮತ್ತು ಬಡ್ಡಿಯನ್ನು 20 ತಿಂಗಳುಗಳಲ್ಲಿ ಮರುಪಾವತಿಸಲು ಅವಕಾಶವಿರುತ್ತದೆ.

ಐಸಿ ಇಂಜಿನ್ ಗಳ ವಾಹನಗಳಿಗೆ ಗರಿಷ್ಠ ಮಿತಿ ಇರುತ್ತದೆ :

ಪ್ರಸ್ತುತ ಜಾರಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು internal combustion (IC) ಇಂಜಿನ್‌ಗಳ ವಾಹನಗಳಿಗೆ ಗರಿಷ್ಠ ಮಿತಿಯನ್ನು ರೂ.6 ಲಕ್ಷಗಳಿಗೆ ಪರಿಷ್ಕರಣೆಯೊಂದಿಗೆ ಈಗಿರುವಂತೆ 16 ತಿಂಗಳ ಪರಿಷ್ಕೃತ ಮೂಲ ವೇತನದಷ್ಟು ಮುಂಗಡವನ್ನು ಮಂಜೂರು ಮಾಡಲು ಇನೇ ವೇತನ ಆಯೋಗವು ಶಿಫಾರಸು ಮಾಡಿದೆ.

ವಿದ್ಯುತ್ ವಾಹನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಐಸಿ ಇಂಜಿನ್‌ಗಳಿಗೆ ಅನ್ವಯವಾಗುವ ಅರ್ಹತೆ ಮತ್ತು ಮರುಪಾವತಿ ಷರತ್ತುಗಳೊಂದಿಗೆ ಗರಿಷ್ಠ ರೂ.10 ಲಕ್ಷಗಳ ಮಿತಿಗೊಳಪಟ್ಟು ವಿದ್ಯುತ್ ೩ ವಾಹನ ಖರೀದಿಗಾಗಿ ಮುಂಗಡ ಹಣವನ್ನು ಹೆಚ್ಚಿಸಲು ಆಯೋಗವು ಶಿಫಾರಸ್ಸು ಮಾಡಿದೆ.

ಮೋಟಾರು ಸೈಕಲ್ (motor cycle) ಅಥವಾ ಸ್ಕೂಟರ್ (scooter) ಖರೀದಿ ಮುಂಗಡ :

ರೂ.34,300 ಅಥವಾ ಮೇಲ್ಪಟ್ಟ ಮೂಲ ವೇತನವನ್ನು ಪಡೆಯುತ್ತಿರುವ ಸಿಬ್ಬಂದಿಯು, ಮೋಟಾರು ಸೈಕಲ್ / ಸ್ಕೂಟರ್ ಖರೀದಿಸಲು ವಾರ್ಷಿಕ ಶೇ.11.50ರ ಬಡ್ಡಿ ದರದಲ್ಲಿ ಗರಿಷ್ಠ ರೂ.50,000ಗಳ ಮಿತಿಗೊಳಪಟ್ಟು ಮೂಲ ವೇತನದ 8 ತಿಂಗಳ ವರೆಗಿನ ಮುಂಗಡಕ್ಕೆ ಅರ್ಹರಾಗಿರುತ್ತಾರೆ. ಅಸಲನ್ನು 60 ತಿಂಗಳಲ್ಲಿ ಮತ್ತು ಬಡ್ಡಿಯನ್ನು 12 ತಿಂಗಳಲ್ಲಿ ಮರು ಪಾವತಿಸಬೇಕಾಗುತ್ತದೆ.

ಐಸಿ ಇಂಜಿನ್‌ಗಳಿರುವ ದ್ವಿಚಕ ವಾಹನಗಳ (Two wheel vehicles) ಮೇಲೆ ಗರಿಷ್ಠ ಮಿತಿ ಅನ್ವಯ :

ಐಸಿ ಇಂಜಿನ್‌ಗಳಿರುವ ದ್ವಿಚಕ ವಾಹನಗಳಿಗಾಗಿ ಪರಿಷ್ಕೃತ ಗರಿಷ್ಠ ಮೊತ್ತ ರೂ.80,000ಗಳ ಮಿತಿಗೊಳಪಟ್ಟು ಜಾರಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳೊಂದಿಗೆ 8 ತಿಂಗಳ ಪರಿಷ್ಕೃತ ಮೂಲ ವೇತನದ ಮುಂಗಡವನ್ನು ಮಂಜೂರು ಮಾಡಲು ಆಯೋಗವು ಶಿಫಾರಸ್ಸು ಮಾಡಿದೆ.

ಐಸಿ ಇಂಜನ್‌ಗಳಿರುವ (IC Engine) ದ್ವಿಚಕ್ರ ವಾಹನಗಳಿಗೆ ಅನ್ವಯವಾಗುವ ಅರ್ಹತೆ ಮತ್ತು ಮರುಪಾವತಿ ಷರತ್ತುಗಳೊಂದಿಗೆ ಗರಿಷ್ಠ ರೂ.1.25 ಲಕ್ಷಗಳ ಮಿತಿಗೊಳಪಟ್ಟು ವಿದ್ಯುತ್ ದ್ವಿಚಕ್ರ ವಾಹನಗಳನ್ನು ಖರೀದಿಸುವುದಕ್ಕಾಗಿ ಮುಂಗಡ ಹಣದ ಪ್ರಮಾಣವನ್ನು ಹೆಚ್ಚಿಸಲು ಸಹ ಆಯೋಗವು ಶಿಫಾರಸ್ಸು ಮಾಡಲಾಗಿದೆ.

ಬೈಸಿಕಲ್‌ ಇ-ಬೈಸಿಕಲ್ ಖರೀದಿ ಮುಂಗಡ :

ರೂ.28,950 ಅಥವಾ ಮೇಲ್ಪಟ್ಟ ಮೂಲ ವೇತನ ಪಡೆಯುವ ಸಿಬ್ಬಂದಿಯು ಬೈಸಿಕಲ್ ಖರೀದಿಗಾಗಿ ವಾರ್ಷಿಕ ಶೇ.9ರ ಬಡ್ಡಿ ದರದಲ್ಲಿ 20 ತಿಂಗಳ ಮೂಲ ವೇತನದ ವರೆಗೆ, ಗರಿಷ್ಠ ರೂ.3000ಗಳ ಮಿತಿಗೊಳಪಟ್ಟು ಮುಂಗಡ ಹಣಕ್ಕೆ ಅರ್ಹರಾಗಿರುತ್ತಾರೆ. ಅಸಲು ಹಣವನ್ನು 20 ತಿಂಗಳುಗಳಲ್ಲಿ ಮತ್ತು ಬಡ್ಡಿ ಹಣವನ್ನು 10 ತಿಂಗಳುಗಳಲ್ಲಿ ಮರು ಪಾವತಿಸಬೇಕಾಗುತ್ತದೆ.

ಚಾಲ್ತಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಬೈಸಿಕಲ್ ಖರೀದಿಗಾಗಿ ರೂ.10,000ಗಳ ಗರಿಷ್ಠ ಮಿತಿಯೊಂದಿಗೆ ಪರಿಷ್ಕೃತ ಮೂಲ ವೇತನದ 20 ತಿಂಗಳುಗಳ ಮುಂಗಡವನ್ನು ಮುಂದುವರೆಸಲು ಆಯೋಗವು ಶಿಫಾರಸ್ಸು ಮಾಡಿದೆ. ಇನ್ನು ವಿದ್ಯುತ್ ಬೈಸಿಕಲ್‌ನ್ನು (Electrical scooter) ಖರೀದಿಸಲು ಗರಿಷ್ಠ ಮಿತಿ ರೂ.30,000 ಗಳಿಗೆ ಮುಂಗಡದ ಪ್ರಮಾಣವನ್ನು ಹೆಚ್ಚಿಸಲು ಆಯೋಗ ಶಿಫಾರಸ್ಸು ಮಾಡಿದೆ.

ಕಂಪ್ಯೂಟರ್ (Computer) ಖರೀದಿ ಮುಂಗಡ :

ರೂ.39,800 ಅಥವಾ ಮೇಲ್ಮಟ್ಟ ಮೂಲ ವೇತನ ಪಡೆಯುವ ಸಿಬ್ಬಂದಿಯು ಕಂಪ್ಯೂಟರ್ ಖರೀದಿಗಾಗಿ ವಾರ್ಷಿಕ ಶೇ.8.50 ಬಡ್ಡಿ ದರದಲ್ಲಿ ಮೂಲ ವೇತನದ 72 ತಿಂಗಳ ವರೆಗಿನ ಗರಿಷ್ಠ ಮೊತ್ತ ರೂ.40,000 ಮಿತಿ ಅಥವಾ ಕಂಪ್ಯೂಟರ್ ದರ ಇವೆರಡರಲ್ಲಿ ಯಾವುದು ಕಡಿಮೆಯೋ ಆ ಮೊತ್ತದ ಮುಂಗಡವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅಸಲನ್ನು 72 ತಿಂಗಳುಗಳಲ್ಲಿ ಗರಿಷ್ಠ ಮಿತಿಯ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

72 ತಿಂಗಳುಗಳ ಪರಿಷ್ಕೃತ ಮೂಲ ವೇತನವನ್ನು ಉಳಿಸಿಕೊಂಡು, ಗರಿಷ್ಠ ರೂ.60,000 ಗಳಿಗೆ ಮುಂಗಡವನ್ನು ಪರಿಷ್ಕರಿಸಲು ಆಯೋಗವು ಶಿಫಾರಸ್ಸು ಮಾಡಿದೆ ಮತ್ತು ಅಸಲನ್ನು 36 ತಿಂಗಳಲ್ಲಿ (ಗರಿಷ್ಠ) ಮತ್ತು ಬಡ್ಡಿಯನ್ನು (ಗರಿಷ್ಠ) 12 ತಿಂಗಳಲ್ಲಿ ಮರುಪಾವತಿಸುವ ಷರತ್ತನ್ನು ವಿಧಿಸಲಾಗಿದೆ.

ಮನೆ ನಿರ್ಮಾಣ, ಮನೆ ಖರೀದಿ ಮುಂಗಡ :

ಮನೆ ನಿರ್ಮಾಣ ಅಥವಾ ಮನೆ ಖರೀದಿಗಾಗಿ 70 ತಿಂಗಳ ಮೂಲ ವೇತನವನ್ನು ಗ್ರೂಪ್ ‘ಎ’ ವರ್ಗದ ನೌಕರರು ಗರಿಷ್ಠ ರೂ.40 ಲಕ್ಷಗಳ ವರೆಗೆ ಮತ್ತು ಇತರೆ ವರ್ಗದ ನೌಕರರು ರೂ.25 ಲಕ್ಷಗಳ ವರೆಗೆ ಶೇ.8.50 ಬಡ್ಡಿ ದರದಲ್ಲಿನ ಮುಂಗಡಕ್ಕೆ ಅರ್ಹರಾಗಿರುತ್ತಾರೆ. ಅಸಲನ್ನು ಗರಿಷ್ಟ 180 ತಿಂಗಳಲ್ಲಿ ಮತ್ತು ಬಡ್ಡಿಯನ್ನು ಗರಿಷ್ಟ 60 ತಿಂಗಳಲ್ಲಿ ಮರು ಪಾವತಿಸಬೇಕಾಗುತ್ತದೆ.

ಮನೆ ನಿರ್ಮಾಣ ಅಥವಾ ಮನೆ ಖರೀದಿ 70 30%
ಉಳಿಸಿಕೊಂಡು ಗ್ರೂಪ್ ‘ಎ’ ವರ್ಗದ ನೌಕರಂಗೆ ಗರಿಷ್ಠ ರೂ.65 ಲಕ್ಷ ಮತ್ತು ಇತರೆ ವರ್ಗಗಳ ನೌಕರರಿಗೆ ರೂ.40 ಲಕ್ಷಗಳ ಮಿತಿಗೊಳಪಟ್ಟು ಜಾರಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳೊಂದಿಗೆ ಮುಂಗಡದ ಪ್ರಮಾಣವನ್ನು ಹೆಚ್ಚಿಸಲು ಆಯೋಗವು ಶಿಫಾರಸ್ಸು ಮಾಡಿದೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!