ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, ಸೆಪ್ಟೆಂಬರ್ ನಲ್ಲಿ ಹೆಚ್ಚಳವಾಗಲಿದೆ DA.
ತುಟ್ಟಿಭತ್ಯೆ (Dearness Allowance) ಹಣದುಬ್ಬರದ ಪರಿಣಾಮವನ್ನು ಸರಿದೂಗಿಸಲು ಉದ್ಯೋಗಿಗಳಿಗೆ ನೀಡಲಾಗುವ ಮೂಲ ವೇತನದ ನಿಗದಿತ ಶೇಕಡಾವಾರು ಪ್ರಮಾಣವನ್ನು ಸೂಚಿಸುತ್ತದೆ. ಹೆಚ್ಚಿನ ಸಂಬಳ ರಚನೆಗಳಲ್ಲಿ ಇದು ಸಾಮಾನ್ಯ ಅಂಶವಾಗಿದೆ. ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳು ತಮ್ಮ ಸಂಬಳದಲ್ಲಿ ಈ ಅಂಶವನ್ನು ಹೊಂದಿದ್ದಾರೆ. ಖಾಸಗಿ ವಲಯಗಳಿಗೆ, ಕಂಪನಿಗಳು ಅದನ್ನು ಒದಗಿಸಲು ಕಾನೂನಿನಿಂದ ಬದ್ಧವಾಗಿಲ್ಲ, ಆದರೆ ಕೆಲವು ಕಂಪನಿಗಳು ಇನ್ನೂ ಮೂಲ ವೇತನದ ಶೇಕಡಾವಾರು ಮೊತ್ತವನ್ನು ತುಟ್ಟಿ ಭತ್ಯೆಯಾಗಿ ನೀಡಲು ನಿರ್ಧರಿಸುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚುತ್ತಿರುವ ಆಹಾರ ವೆಚ್ಚವನ್ನು ಸರಿಹೊಂದಿಸಲು ಎರಡನೆಯ ಮಹಾಯುದ್ಧದ ಸಮಯದಲ್ಲಿ ತುಟ್ಟಿಭತ್ಯೆಯ ಪರಿಕಲ್ಪನೆಯನ್ನು ಮೊದಲು ಪರಿಚಯಿಸಲಾಯಿತು, ಆದರೆ ಈಗ ಅದನ್ನು ಜೀವನ ವೆಚ್ಚದಲ್ಲಿನ ನಿರಂತರ ಏರಿಕೆಗೆ ಹೊಂದಿಸಲು ಬಳಸಲಾಗುತ್ತದೆ.
ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯಲ್ಲಿ ಶೇ.3 ರಷ್ಟು ಹೆಚ್ಚಳ :
ಹಾಗೆಯೇ ಇದೀಗ ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಗುಡ್ ನ್ಯೂಸ್ (good news) ದೊರೆಯಲಿದೆ. ಕೇಂದ್ರ ಸರ್ಕಾರ ಸೆಪ್ಟೆಂಬರ್‌ನಲ್ಲಿ ತುಟ್ಟಿ ಭತ್ಯೆಯಲ್ಲಿ ಶೇ.3 ರಷ್ಟು ಹೆಚ್ಚಳವನ್ನು ಘೋಷಿಸುವ ಸಾಧ್ಯತೆಯಿದೆ. ಇದು 2024ರ ಜುಲೈ 1ರಿಂದಲೇ ಅನ್ವಯವಾಗಲಿದೆ. ಹಾಗಾಗಿ ಸರ್ಕಾರಿ ನೌಕರರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು.
ಕೇಂದ್ರ ಸರ್ಕಾರವು ಸೆಪ್ಟೆಂಬರ್‌ನಲ್ಲಿ (September) ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು ಶೇ.3ರಷ್ಟು ಹೆಚ್ಚಳ ಮಾಡುವ ಸಾಧ್ಯತೆಗಳಿವೆ. ಡಿಎ ಶೇ.50ಕ್ಕಿಂತ ಹೆಚ್ಚಿದ್ದರೂ ಮೂಲ ವೇತನದೊಂದಿಗೆ ವಿಲೀನಗೊಳ್ಳುವುದಿಲ್ಲ. 8ನೇ ವೇತನ ಆಯೋಗ ರಚನೆಯಾಗುವವರೆಗೂ ಅದು ಹಾಗೆಯೇ ಮುಂದುವರಿಯಲಿದೆ. ವಿಲೀನದ ಬದಲಿಗೆ ಡಿಎ 50 ಪ್ರತಿಶತ ದಾಟಿದರೆ, ಎಚ್‌ಆರ್‌ಎ ಸೇರಿದಂತೆ ಭತ್ಯೆಗಳನ್ನು ಹೆಚ್ಚಿಸುವ ನಿಬಂಧನೆಗಳಿವೆ.
COVID ಸಮಯದಲ್ಲಿ ತಡೆಹಿಡಿಯಲಾದ 18 ತಿಂಗಳ ತುಟ್ಟಿಭತ್ಯೆ ಬಿಡುಗಡೆ ಯಾಗುವುದಿಲ್ಲ :
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಡಿಎ ಬಾಕಿ ಕುರಿತು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಲಾಯ್ತು. ‘COVID ಸಮಯದಲ್ಲಿ ತಡೆಹಿಡಿಯಲಾದ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ 18 ತಿಂಗಳ ತುಟ್ಟಿಭತ್ಯೆಯನ್ನು ಸರ್ಕಾರ ಬಿಡುಗಡೆ ಮಾಡುವುದಿಲ್ಲ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ತಿಳಿಸಿದ್ದಾರೆ.
2020ರ ಜನವರಿ 1ರಿಂದ 2021ರ ಜನವರಿ ತಿಂಗಳವರೆಗಿನ ಮೂರು ಕಂತುಗಳ ತುಟ್ಟಿಭತ್ಯೆ ಮತ್ತು ಡಿಆರ್ ಸ್ಥಗಿತಗೊಳಿಸುವ ನಿರ್ಧಾರವನ್ನು ಕೋವಿಡ್ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾಗಿತ್ತು. ಆ ಸಮಯದಲ್ಲಿ ಸರ್ಕಾರಕ್ಕೂ ಆರ್ಥಿಕ ಅಡೆತಡೆಗಳಿದ್ದವು. ಈ ಕಾರಣಗಳಿಂದ ತುಟ್ಟಿ ಭತ್ಯೆ ಸ್ಥಗಿತಗೊಳಿಸಲಾಗಿದೆ.
8ನೇ ವೇತನ ಆಯೋಗದ (8th pay commission) ಸಂವಿಧಾನಕ್ಕೆ ಸರ್ಕಾರದೊಳಗೆ ಯಾವುದೇ ಪ್ರಸ್ತಾವನೆ ಇಲ್ಲ :
2016ರಲ್ಲಿ 7ನೇ ವೇತನ ಆಯೋಗ(7th pay commission)ದಲ್ಲಿ ಶೇ.14.27ರಷ್ಟು ವೇತನವನ್ನು ಹೆಚ್ಚಿಸಲಾಗಿತ್ತು. 2006ರಲ್ಲಿ 6ನೇ ವೇತನ ಆಯೋಗದಲ್ಲಿ ಕೇಂದ್ರ ಸರಕಾರಿ ನೌಕರರಿಗೆ ಸಂಬಳ ಶೇ.54ರಷ್ಟು ಭಾರಿ ಏರಿಕೆ ಕಂಡಿತ್ತು. 7 ನೇ ವೇತನ ಆಯೋಗವನ್ನು 2014ರ ಫೆಬ್ರವರಿಯಲ್ಲಿ ರಚಿಸಲಾಗಿದೆ. ಅದರ ಶಿಫಾರಸುಗಳನ್ನು 2016ರ ಜನವರಿ 1ರಿಂದ ಜಾರಿಗೆ ತರಲಾಯಿತು. ಸರ್ಕಾರಿ ನೌಕರರ ಸಂಭಾವನೆಯನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸುತ್ತದೆ. ಆದರೆ ಇದುವರೆಗೆ 8ನೇ ವೇತನ ಆಯೋಗದ ಸಂವಿಧಾನಕ್ಕೆ ಸರ್ಕಾರದೊಳಗೆ ಯಾವುದೇ ಪ್ರಸ್ತಾವನೆ ಇಲ್ಲ.
ಸರ್ಕಾರಿ ನೌಕರರಿಗೆ ವೇತನ ಹೆಚ್ಚಾಗುವ ಸಾಧ್ಯತೆ :
2024ರ ಮಾರ್ಚ್‌ನಲ್ಲಿ ಕೇಂದ್ರ ತುಟ್ಟಿಭತ್ಯೆಯನ್ನು ಶೇ. 4 ರಿಂದ 50 ರಷ್ಟು ಹೆಚ್ಚಿಸಿತ್ತು. ಅದೇ ರೀತಿ ಡಿಆರ್ (DR) ಅನ್ನು ಶೇ.4 ರಷ್ಟು ಹೆಚ್ಚಳ ಮಾಡಿತ್ತು. ಕೇಂದ್ರ ಸರ್ಕಾರಿ ನೌಕರರಿಗೆ ಕನಿಷ್ಠ ವೇತನವು 34,560 ರೂ.ಗೆ ಹೆಚ್ಚಾಗುವ ಸಾಧ್ಯತೆಯಿದೆ. ಪ್ರಸ್ತುತ ಕನಿಷ್ಠ ವೇತನ 18,000 ರೂಪಾಯಿ ಇದೆ. ಅದೇ ರೀತಿ ಕನಿಷ್ಠ ಪಿಂಚಣಿಯನ್ನು 17,280 ರೂಪಾಯಿಗೆ ನಿಗದಿಪಡಿಸುವ ನಿರೀಕ್ಷೆಯಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.