7th Pay Commission: ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ತುಟ್ಟಿ ಭತ್ಯೆ ಹೆಚ್ಚಳ ಆದೇಶ..! ಇಲ್ಲಿದೆ ಡೀಟೇಲ್ಸ್

IMG 20240826 WA0001

ಸರ್ಕಾರಿ ನೌಕರರ ವೇತನ ಶ್ರೇಣಿ ಪರಿಷ್ಕರಣೆ, ತುಟ್ಟಿಭತ್ಯೆ ಸೇರಿದಂತೆ ಇತರ ಭತ್ಯೆ, ವೇತನ ಶ್ರೇಣಿ ಏರಿಕೆ.

ರಾಜ್ಯದ 7ನೇ ವೇತನ ಆಯೋಗದ (7th pay commission) ವರದಿಯ ಶಿಫಾರಸುಗಳನ್ನು ಕರ್ನಾಟಕ ಸರ್ಕಾರ ಅಂಗೀಕರಿಸಿ, ಜಾರಿಗೊಳಿಸಿದೆ. ಆದ್ದರಿಂದ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿ(pension)ಯಲ್ಲಿ ಏರಿಕೆಯಾಗಿದ್ದು, ತುಟ್ಟಿಭತ್ಯೆ ಸೇರಿದಂತೆ ಇತರ ಭತ್ಯೆ ಹಾಗೂ ವೇತನ ಶ್ರೇಣಿ ಏರಿಕೆಯಾಗಲಿದೆ. ಸರ್ಕಾರದಿಂದ ಇದರ ಬಗ್ಗೆ ಆಗಸ್ಟ್ 23ರಂದು ಅಧಿಕೃತವಾದ, ವಿವರವಾದ ಆದೇಶವನ್ನು ಹೊರಡಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಕುರಿತು ಕರ್ನಾಟಕ ರಾಜ್ಯಪಾಲರ (Governer) ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಡಾ. ರೇಜು ಎಂ. ಟಿ. ಸರ್ಕಾರದ ಕಾರ್ಯದರ್ಶಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದ್ದಾರೆ. ಈ ಆದೇಶ ವೇತನ ಶ್ರೇಣಿಗಳ ಪರಿಷ್ಕರಣೆ ಮತ್ತು ಇತರ ಸಂಬಂಧಿತ ಆದೇಶಗಳು ಎಂಬ ವಿಷಯ ಒಳಗೊಂಡಿದೆ. ದಿನಾಂಕ 22/07/2024ರ ಸರ್ಕಾರಿ ಆದೇಶ ಸಂಖ್ಯೆ, ದಿನಾಂಕ 17/08/2024ರ ಅಧಿಸೂಚನೆಯನ್ನು ಉಲ್ಲೇಖ ಮಾಡಲಾಗಿದೆ.

ಸರ್ಕಾರಿ ನೌಕರರ 7 ನೇ ವೇತನ ಶ್ರೇಣಿ, ಪಿಂಚಣಿ ಶ್ರೇಣಿ ಹಾಗೂ ಇತರ ಭತ್ಯೆಗಳ ಪರಿಸ್ಕರಣೆಗೆ ಆದೇಶ :

ರಾಜ್ಯ ಸರ್ಕಾರದ ನೀತಿಯಂತೆ, 7ನೇ ರಾಜ್ಯ ವೇತನ ಆಯೋಗದ ಸಂಪುಟ-1 ರಲ್ಲಿನ ಶಿಫಾರಸ್ಸುಗಳನ್ನು ದಿನಾಂಕ 22/07/2024ರ ಸರ್ಕಾರಿ ಆದೇಶದಲ್ಲಿ ನಮೂದಿಸಿರುವಂತೆ ಅಂಗೀಕರಿಸಲಾಗಿರುತ್ತದೆ. ಅದರಂತೆ, ಸದರಿ ಆದೇಶದಲ್ಲಿ ಪರಿಷ್ಕೃತ ಮುಖ್ಯ ವೇತನ ಶ್ರೇಣಿ ಮತ್ತು 25 ಪರಿಷ್ಕೃತ ಸ್ಥಾಯಿ ವೇತನ ಶ್ರೇಣಿಗಳನ್ನು, ವೇತನ ಸಂಬಂಧಿತ ಭತ್ಯೆಗಳು ಮತ್ತು ಪರಿಷ್ಕೃತ ಪಿಂಚಣಿಯನ್ನು ಅನುಷ್ಠಾನಗೊಳಿಸಿ ಆದೇಶಗಳನ್ನು ಹೊರಡಿಸಲಾಗಿರುತ್ತದೆ.

ದಿನಾಂಕ 17/08/2024ರ ಅಧಿಸೂಚನೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024ನ್ನು ಅಧಿಸೂಚಿಸಲಾಗಿರುತ್ತದೆ. ಆದುದರಿಂದ, ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ನಿಗದಿಪಡಿಸುವ, ಪಿಂಚಣಿ ಪರಿಷ್ಕರಣೆ ಮತ್ತು ವೇತನ ಸಂಬಂಧಿತ ಭತ್ಯೆಗಳ ಪರಿಷ್ಕರಣೆ ಕುರಿತಂತೆ ವಿಸ್ತೃತವಾದ ಆದೇಶಗಳನ್ನು ಹೊರಡಿಸುವುದು ಅಗತ್ಯವೆಂದು ಪರಿಗಣಿಸಲಾಗಿರುತ್ತದೆ. ಅದರಂತೆ, ರಾಜ್ಯ ಸರ್ಕಾರವು (state government) ಈ ಆದೇಶ ಹೊರಡಿಸಿದೆ.

ಆಗಸ್ಟ್ 1 ರಂದು ಭತ್ಯೆ ಹಾಗೂ ಪಿಂಚಣಿ ಮೊತ್ತದಲ್ಲಿನ ಹೆಚ್ಚಳ :

ಆದೇಶದಲ್ಲಿ 2024ರ ಪರಿಷ್ಕೃತ ವೇತನ ಶ್ರೇಣಿಗಳು 1ನೇ ಜುಲೈ 2022ರಿಂದ ಜಾರಿಗೆ ಬರುವಂತೆ ಅನ್ವಯವಾಗುತ್ತದೆ. ಪರಿಷ್ಕೃತ ವೇತನ ಶ್ರೇಣಿಗಳ ಅನುಷ್ಠಾನದ ಕಾರಣದಿಂದ ಉಂಟಾಗುವ ವೇತನ ಮತ್ತು ಪಿಂಚಣಿಯ ಆರ್ಥಿಕ ಲಾಭವು 1ನೇ ಆಗಸ್ಟ್ 2024ರಿಂದ ಲಭ್ಯವಾಗುತ್ತದೆ. ವೇತನ ಶ್ರೇಣಿಗಳ ಮತ್ತು ಪಿಂಚಣಿಯ ಪರಿಷ್ಕರಣೆಯ ಕಾರಣದಿಂದ ಉಂಟಾಗುವ ವೇತನ ಮತ್ತು ಭತ್ಯೆಗಳು ಹಾಗೂ ಪಿಂಚಣಿಯ ಮೊತ್ತದಲ್ಲಿನ ಹೆಚ್ಚಳವನ್ನು 1ನೇ ಆಗಸ್ಟ್‌ 2024ರಿಂದ ನಗದಾಗಿ ಸಂದಾಯ ಮಾಡತಕ್ಕದ್ದು ಎಂದು ಆದೇಶದಲ್ಲಿ ವಿವರಿಸಲಾಗಿದೆ.

ತುಟ್ಟಿಭತ್ಯೆ (Dearnese allowence) ಎಷ್ಟು ಹೆಚ್ಚಳವಾಗಲಿದೆ ಎಂಬುದರ ಬಗ್ಗೆ ಮಾಹಿತಿ ಈ ಕೆಳಗೆ ನೀಡಲಾಗಿದೆ :

ಆದೇಶದಲ್ಲಿ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರವು ದಿನಾಂಕ 01/01/2023ರಿಂದ ಅನ್ವಯವಾಗುವಂತೆ ಮಂಜೂರು ಮಾಡುವ ತುಟ್ಟಿಭತ್ಯೆಯ ಪ್ರತಿ ಶೇಕಡಾ 1 ಕ್ಕೆ 0.722 ಗುಣಾಕಾರಾಂಶವನ್ನು (multiplication factor) ಅನ್ವಯಿಸಿ ಲೆಕ್ಕಹಾಕಿ ಪಾವತಿಸತಕ್ಕದ್ದು. ಅದರಂತೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ತುಟ್ಟಿಭತ್ಯೆಯನ್ನು ಕಾಲ್ಪನಿಕವಾಗಿ ಈ ಕೆಳಕಂಡಂತೆ ಕ್ರಮಬದ್ಧಗೊಳಿಸತಕ್ಕದ್ದು ಎಂದು ಆದೇಶ ತಿಳಿಸಿದೆ.

01.07.2022-ಶೂನ್ಯ
01.01.2023- ಪರಿಷ್ಕೃತ ತ ಮೂಲ ವೇತನದ 2.75%
01.07.2023 – ಪರಿಷ್ಕೃತ ಮೂಲ ವೇತನದ 5.5%
01.01.2024 – ಪರಿಷ್ಕೃತ ಮೂಲ ವೇತನದ 8.5%

ಮುಂದಿನ ತುಟ್ಟಿಭತ್ಯೆಯ ಮಂಜೂರಾತಿಯು ಈ ಸಂಬಂಧ ರಾಜ್ಯ ಸರ್ಕಾರವು ಹೊರಡಿಸುವ ಆದೇಶಗಳಲ್ಲಿ ಕ್ರಮಬದ್ಧಗೊಳಿಸಿದಂತೆ ಇರತಕ್ಕದ್ದು. ತುಟ್ಟಿಭತ್ಯೆಯನ್ನು 1ನೇ ಜನವರಿ ಮತ್ತು 1ನೇ ಜುಲೈ ರಿಂದ ಅನ್ವಯಿಸುವಂತೆ ವರ್ಷಕ್ಕೆ ಎರಡು ಬಾರಿ ಪಾವತಿಸತಕ್ಕದ್ದು. ಹಣದುಬ್ಬರದ ತಟಸ್ಥೀಕರಣವು ಎಲ್ಲಾ ಹಂತಗಳಲ್ಲಿ ಶೇ.100ರಷ್ಟು ಏಕರೂಪವಾಗಿರತಕ್ಕದ್ದು. ತುಟ್ಟಿಭತ್ಯೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸುವುದನ್ನು ಮುಂದುವರಿಸಲಾಗುವುದು ಮತ್ತು ಅದನ್ನು ಯಾವುದೇ ಉದ್ದೇಶಕ್ಕೆ ವೇತನ ಎಂದು ಪರಿಗಣಿಸಲಾಗುವುದಿಲ್ಲ ಎಂದು ಆದೇಶ ಹೇಳಿದೆ.

ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ನಿಗದಿ: ಆದೇಶದಲ್ಲಿ ಸರ್ಕಾರಿ ನೌಕರನ ಪ್ರಸಕ್ತ ವೇತನವನ್ನು ಸಂವಾದಿ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಈ ಕೆಳಕಂಡ ವಿಧಾನದಲ್ಲಿ ನಿಗದಿಪಡಿಸತಕ್ಕದ್ದು ಎಂದು ತಿಳಿಸಿದೆ.

ದಿನಾಂಕ 01.07.2022 ರಲ್ಲಿದ್ದಂತೆ ಮೂಲ ವೇತನ.
ದಿನಾಂಕ 01.07.2022 ರಲ್ಲಿದ್ದಂತಹ ಬೆಲೆ ಸೂಚ್ಯಂಕ ಹಂತ 361.704ಕ್ಕೆ ಸಂವಾದಿಯಾಗಿ ಲಭ್ಯವಿದ್ದ 31% ತುಟ್ಟಿ ಭತ್ಯೆ.
ದಿನಾಂಕ 01.07.2022 ರಲ್ಲಿ ಲಭ್ಯವಿದ್ದ ಮೂಲ ವೇತನದ ಮೇಲೆ 27.50% ರಷ್ಟು ಫಿಟ್‌ಮೆಂಟ್‌ ಸೌಲಭ್ಯ.
ಈ ಮೇಲಿನ (i), (ii), (iii) ರಲ್ಲಿ ನಮೂದಿಸಿರುವ ಉಪಲಬ್ಧಿಗಳನ್ನು ಒಟ್ಟುಗೂಡಿಸಿ ಲೆಕ್ಕ ಹಾಕಿದಾಗ ಬರುವ ಮೊತ್ತವನ್ನು ಸಂವಾದಿ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿಗದಿಪಡಿಸತಕ್ಕದ್ದು.

ಅಥವಾ ದಿನಾಂಕ 01.07.2022 ರಂದು ಲಭ್ಯವಿರುವ ಸರ್ಕಾರಿ ನೌಕರನ ಪ್ರಸಕ್ತ – ಮೂಲವೇತನವನ್ನು 1.585 ಗುಣಾಕಾರಾಂಶದಿಂದ ಗುಣಿಸಿ ಪರಿಷ್ಕೃತ ವೇತನ ಶ್ರೇಣಿಯ ಸಂವಾದಿ ಹಂತಕ್ಕೆ ನಿಗದಿಪಡಿಸಬಹುದಾಗಿರುತ್ತದೆ. ಈ ರೀತಿ ಬಂದ ಮೊತ್ತವನ್ನು ರೂಪಾಯಿಯ ಪೂರ್ಣಾಂಕಕ್ಕೆ ಸೀಮಿತಗೊಳಿಸಿ ದಶಾಂಶಗಳನ್ನು ಕಡೆಗಣಿಸತಕ್ಕದ್ದು. ಈ ರೀತಿ ಬಂದ ಮೊತ್ತವು ನೌಕರನ ಪರಿಷ್ಕೃತ ವೇತನವಾಗಿರುತ್ತದೆ ಮತ್ತು ಅದನ್ನು ಈ ಕೆಳಕಡಂತೆ ಕ್ರಮ ಬದ್ಧಗೊಳಿಸತಕ್ಕದ್ದು.

ಈ ರೀತಿ ಮೇಲಿನಂತೆ ಲೆಕ್ಕ ಹಾಕಲಾದ ಒಟ್ಟು ಮೊತ್ತವು ಪರಿಷ್ಕೃತ ವೇತನ ಶ್ರೇಣಿಯ ಕನಿಷ್ಟಕ್ಕಿಂತಲೂ ಕಡಿಮೆಯಿದ್ದಲ್ಲಿ, ಅದನ್ನು ಕನಿಷ್ಟಕ್ಕೆ ನಿಗದಿಪಡಿಸತಕ್ಕದ್ದು. ಈ ಮೇಲಿನಂತೆ ಲೆಕ್ಕ ಹಾಕಲಾದ ಮೊತ್ತವು ಪರಿಷ್ಕೃತ ವೇತನ ಶ್ರೇಣಿಯ ಕನಿಷ್ಠ ಹಂತ ಅಥವಾ ಕನಿಷ್ಠಕ್ಕಿಂತ ಮೇಲ್ಪಟ್ಟ ಯಾವುದೇ ಹಂತಕ್ಕೆ ಸರಿಸಮನಾಗಿದ್ದಲ್ಲಿ, ಅದನ್ನು ಅಂತಹ ಸರಿಸಮಾನಾದ ಹಂತಕ್ಕೆ ನಿಗದಿಪಡಿಸತಕ್ಕದ್ದು.

ಈ ಮೇಲಿನಂತೆ ಲೆಕ್ಕ ಹಾಕಲಾದ ಮೊತ್ತವು ಪರಿಷ್ಕೃತ ವೇತನ ಶ್ರೇಣಿಯ ಕನಿಷ್ಟದ ಹಂತಕ್ಕಿಂತ ಹೆಚ್ಚಾಗಿದ್ದು, ಗರಿಷ್ಟದ ಹಂತಕ್ಕಿಂತ ಕಡಿಮೆಯಿದ್ದಲ್ಲಿ ಅದನ್ನು ಪರಿಷ್ಕೃತ ವೇತನ ಶ್ರೇಣಿಯ ನಂತರದ ಮೇಲಿನ ಹಂತಕ್ಕೆ ನಿಗದಿಪಡಿಸತಕ್ಕದ್ದು. ಈ ಮೇಲಿನಂತೆ ಲೆಕ್ಕ ಹಾಕಲಾದ ಮೊತ್ತವು ಪರಿಷ್ಕೃತ ವೇತನ ಶ್ರೇಣಿಯ ಗರಿಷ್ಟ ಹಂತಕ್ಕೆ ಸಮನಾಗಿದ್ದಲ್ಲಿ, ಅದನ್ನು ಗರಿಷ್ಠ ಹಂತಕ್ಕೆ ನಿಗದಿಪಡಿಸತಕ್ಕದ್ದು ಮತ್ತು ಈ ಮೇಲಿನಂತೆ ಲೆಕ್ಕ ಹಾಕಲಾದ ಮೊತ್ತವು ಪರಿಷ್ಕೃತ ವೇತನ ಶ್ರೇಣಿಯ ಗರಿಷ್ಠ ಹಂತಕ್ಕಿಂತಲೂ ಹೆಚ್ಚಾಗಿದ್ದು, ನಂತರದ ಹಂತಕ್ಕಿಂತಲೂ ಕಡಿಮೆಯಿದ್ದಲ್ಲಿ, ಅದನ್ನು ನಂತರದ ಹಂತಕ್ಕೆ ನಿಗದಿಪಡಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!