ರಾಜ್ಯ 7ನೇ ವೇತನ ಆಯೋಗ(7th pay commission)ದ ವರದಿಯ ಶಿಫಾರಸುಗಳನ್ನು ಅಂಗೀಕರಿ, ಸರ್ಕಾರಿ ನೌಕರರ ವೇತನ ಹೆಚ್ಚಳ, ಎಷ್ಟು ಹೆಚ್ಚಾಗಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಈಗಾಗಲೇ ಸರ್ಕಾರಿ ನೌಕರರ 7ನೇ ವೇತನದ ಬಗ್ಗೆ ಹಲವಾರು ವಿಷಯಗಳು ತಿಳಿದೇ ಇವೆ. ಹೌದು ಸರ್ಕಾರಿ ನೌಕರರ ವೇತನ ಹೆಚ್ಚಳ ಬಗ್ಗೆ ಸರ್ಕಾರವು ಮಹತ್ತರದ ಕಾರ್ಯ ವಹಿಸಿಕೊಂಡಿದ್ದು, ಅದರ ಬಗ್ಗೆ ಈಗಾಗಲೇ ಆದೇಶವನ್ನು ಹೋರಡಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸರ್ಕಾರ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ (7th pay commission) ವರದಿಯ ಶಿಫಾರಸುಗಳನ್ನು ಅಂಗೀಕರಿಸಲು ಒಪ್ಪಿಗೆ ನೀಡಿದ್ದು, ಆಗಸ್ಟ್ ತಿಂಗಳಿನಿಂದಲೇ ಜಾರಿಗೆ ಬರುವಂತೆ ವೇತನ ಆಯೋಗದ ಶಿಫಾರಸಿನ ಅನ್ವಯ ಸರ್ಕಾರಿ ನೌಕರರ (Government employees) ವೇತನ, ಭತ್ಯೆ, ಪಿಂಚಣಿಯಲ್ಲಿ ಏರಿಕೆಯಾಗಲಿದೆ. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರಿ ನೌಕರರ ವೇತನ ಹಾಗೂ ವಿವಿಧ ನೌಕರರ ವೇತನ ಹೆಚ್ಚಳದ ಬಗ್ಗೆ ಮಾಹಿತಿ :
ಈಗಾಗಲೇ ಆದೇಶ ಹೊರಡಿಸಿದ ಪ್ರಕಾರ ಡಾ. ರೇಜು ಎಂ. ಟಿ. ಸರ್ಕಾರದ ಕಾರ್ಯದರ್ಶಿ (ವೆಚ್ಚ) ಆರ್ಥಿಕ ಇಲಾಖೆ ಸರ್ಕಾರದ ವಿವಿಧ ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ? ಎಂದು ಮಾಹಿತಿ ನೀಡಿದ್ದಾರೆ. ಹಾಗಯೇ 2018ರ ವೇತನ, 2024ರ ಪರಿಷ್ಕೃತ ವೇತನ ಎಷ್ಟು ಎಂದು ಪಟ್ಟಿಯ ಮೂಲಕ ತಿಳಿಸಿದ್ದಾರೆ. ಸರ್ಕಾರಿ ಪ್ರೌಢಶಾಲೆಗಳ ಸಹ ಶಿಕ್ಷಕರ ವೇತನ ಎಷ್ಟು ಹೆಚ್ಚಳವಾಗಲಿದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಪ್ರೌಢ ಶಾಲೆ ಸಹ ಶಿಕ್ಷಕರ ವೇತನ ಹೆಚ್ಚಳ :
ಸರ್ಕಾರ ತನ್ನ ಆದೇಶದಲ್ಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕರಾಗಿರುವ ಶ್ರೀ ‘P’ ಎಂಬುವವರು ಹುದ್ದೆಗೆ ಅನ್ವಯಿಸುವ 2018ರ ಪರಿಷ್ಕೃತ ವೇತನ ಶ್ರೇಣಿಯ ಪ್ರಸಕ್ತ ಹಿರಿಯ ವೇತನ ಶ್ರೇಣಿ ರೂ. 32900-70850ರಲ್ಲಿ ವೇತನವನ್ನು ಪಡೆಯುತ್ತಿರುತ್ತಾರೆ.
ಶ್ರೀ ‘P’ ಅವರಿಗೆ ಪ್ರಸಕ್ತ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ 30 ವರ್ಷಗಳ ಸೇವೆಗಾಗಿ 3ನೇ ಹೆಚ್ಚುವರಿ ವೇತನ ಬಡ್ತಿಯನ್ನು ದಿನಾಂಕ 16.08.2023ರಂದು ಮಂಜೂರು ಮಾಡಲಾಗಿರುತ್ತದೆ. ಶ್ರೀ ‘P’ ಅವರು ದಿನಾಂಕ 31.07.2024 ರಂದು ಸೇವೆಯಿಂದ ವಯೋನಿವೃತ್ತರಾಗಿರುತ್ತಾರೆ. ನೌಕರರ ವೇತನ ವಿವರಗಳು ಈ ಕೆಳಕಂಡಂತಿದೆ ಎಂದು ಹೇಳಿದೆ.
1ನೇ ಜುಲೈ 2022 ರಂದು ಧಾರಣೆ ಮಾಡಿದ ಹುದ್ದೆಯ ಪದನಾಮ. ಸಹ ಶಿಕ್ಷಕರು (ಸರ್ಕಾರಿ ಪ್ರೌಢಶಾಲೆ).
1ನೇ ಜುಲೈ 2022ರಂದು ಧಾರಣೆ ಮಾಡಿದ ಹುದ್ದೆಯ ಪ್ರಸಕ್ತ ವೇತನ ಶ್ರೇಣಿ. ರೂ. 37900-950-39800-1100-46400-1250-53900-1450-62600-1650-70850
1ನೇ ಜುಲೈ 2022 ರಂದು ಇದ್ದಂತೆ ಪ್ರಸಕ್ತ ವೇತನ ಶ್ರೇಣಿಯಲ್ಲಿ ಮೂಲ ವೇತನ (4ನೇಸ್ಥ.ವೇ.ಬ. ಪಡೆದ ನಂತರ) ರೂ.70850 + 1650 ವೈವೇ+1650 ವೈವೇ
ದಿನಾಂಕ 01.07.2023 ರಿಂದ ಜಾರಿಗೆ ಬರುವಂತೆ 5ನೇ ಸ್ಥ.ವೇ. ಬಡ್ತಿ ಮಂಜೂರು ಮಾಡಿ ನಿಗದಿಪಡಿಸಲಾದ ವೇತನ. ರೂ.70850 + 1650 ವೈವೇ+1650 ವೈವೇ +1650 ವೈವೇ
30 ವರ್ಷಗಳ ಸೇವೆಗಾಗಿ ದಿ:16.08.2023ರಿಂದ ಜಾರಿಗೆ ಬರುವಂತೆ 3ನೇ ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡಿ ನಿಗದಿಪಡಿಸಲಾದ ವೇತನ. ರೂ.70850 + 1650 ವೈವೇ+1650 ವೈವೇ+1650ವೈವೇ+1650 ವೈವೇ
ದಿನಾಂಕ 01.07.2024 ರಿಂದ ಜಾರಿಗೆ ಬರುವಂತೆ 6ನೇ ಸ್ಥ.ವೇ.ಬಡ್ತಿ ಮಂಜೂರು ಮಾಡಿ ವೇತನ ನಿಗದಿ. ರೂ.70850 +1650 ವೈವೇ +1650 ವೈವೇ+ 1650 ವೈವೇ+1650 ವೈವೇ+1650 ವೈವೇ
ವಯೋನಿವೃತ್ತಿ ದಿನಾಂಕ. 31.12.2022 (ಪ್ರಸಕ್ತ ವೇತನ ಶ್ರೇಣಿಯ ಉಪಲಬ್ದಗಳ ಆಧಾರದ ಮೇಲೆ ಪಿಂಚಣಿ ಸೌಲಭ್ಯಗಳನ್ನು ಲೆಕ್ಕಹಾಕತಕ್ಕದ್ದು).
2024ನೇ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸರ್ಕಾರಿ ನೌಕರನ ವೇತನವನ್ನು ಈ ಕೆಳಕಂಡಂತೆ ಪುನರ್ ನಿಗದಿಪಡಿಸಿದೆ.
ಹುದ್ದೆಗೆ ಅನ್ವಯವಾಗುವ ಪರಿಷ್ಕೃತ ವೇತನ ಶ್ರೇಣಿ. 61300-1500-64300-1650-74200-1900-85600-2300-99400-2700-112900
1ನೇ ಜುಲೈ 2022 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ ಕಾಲ್ಪನಿಕವಾಗಿ ನಿಗದಿಪಡಿಸಬೇಕಾದ ಮೂಲ ವೇತನ. ರೂ.1,12,900+5400 ವೈವೇ
ದಿನಾಂಕ 1.7.2023 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ 5ನೇ ಸ್ಥ.ವೇ.ಬಡ್ತಿಯನ್ನು ಮಂಜೂರು ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ.1,12,900+5400 ವೈವೇ+2700 ವೈವೇ
30 ವರ್ಷಗಳ ಸೇವೆಗಾಗಿ ದಿನಾಂಕ 16.08.2023 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ 3ನೇ ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ.1,12,900+5400ವೈವೇ+2700 ವೈವೇ+ 2700 ವೈವೇ
ದಿನಾಂಕ 1.7.2024 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ 6ನೇ ಸ್ಥ.ವೇ.ಬಡ್ತಿಯನ್ನು ಮಂಜೂರು ಕಾಲ್ಪನಿಕವಾಗಿ ವೇತನ ನಿಗದಿ. ರೂ.1,12,900+5400 ವೈವೇ+2700 ವೈವೇ+2700 ವೈವೇ+2700ವೈವೇ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಕಾಲ್ಪನಿಕವಾಗಿ ನಿಗದಿಪಡಿಸಲಾದ ಅಂತಿಮ ಮೂಲ ವೇತನವನ್ನು ಮೂಲ ಪಿಂಚಣಿ ನಿಗದಿಯ ಉದ್ದೇಶಕ್ಕೆ ಮಾತ್ರ ಪರಿಗಣಿಸತಕ್ಕದ್ದು. ಪರಿಷ್ಕೃತ ಪಿಂಚಣಿಯ ಆರ್ಥಿಕ ಲಾಭವು ದಿನಾಂಕ 01.08.2024 ರಿಂದ ಪ್ರಾಪ್ತವಾಗುತ್ತದೆ.
ವಯೋ ನಿವೃತ್ತಿ ದಿನಾಂಕ 31.07.2024.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ