ಕೇಂದ್ರದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, ಶೆ.246 ರಷ್ಟು ತುಟ್ಟಿಭತ್ಯೆ ಹೆಚ್ಚಳ..!
ತುಟ್ಟಿಭತ್ಯೆಯು (Dearness Allowance) ಸಾರ್ವಜನಿಕ ವಲಯದ ನೌಕರರು ಮತ್ತು ಪಿಂಚಣಿದಾರರಿಗೆ ಸರ್ಕಾರವು ಪಾವತಿಸುವ ಜೀವನ ವೆಚ್ಚದ ಹೊಂದಾಣಿಕೆಯಾಗಿದೆ. ಹಣದುಬ್ಬರದ ಪರಿಣಾಮವನ್ನು ನಿಗ್ರಹಿಸಲು ಮೂಲ ವೇತನದ ಶೇಕಡಾವಾರು ಎಂದು ಲೆಕ್ಕಹಾಕಲಾಗುತ್ತದೆ. ಆದಾಯ ತೆರಿಗೆ ಕಾಯಿದೆ 1961 ರ ನಿಬಂಧನೆಗಳ ಪ್ರಕಾರ, ಐಟಿಆರ್ (ITR) ಅನ್ನು ಸಲ್ಲಿಸುವಾಗ ಡಿಎಗೆ ಸಂಬಂಧಿಸಿದ ತೆರಿಗೆ ಹೊಣೆಗಾರಿಕೆಯನ್ನು ಘೋಷಿಸುವುದು ಕಡ್ಡಾಯವಾಗಿದೆ.
ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
8ನೇ ವೇತನ ಆಯೋಗಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ ಸರ್ಕಾರಿ ನೌಕರರು :
ಹೌದು, ಇತ್ತೀಚಿಗೆ ಅಷ್ಟೇ ಹಲವು ಹೋರಾಟ ಮತ್ತು ಪರಿಶ್ರಮದಿಂದ 7ನೇ ವೇತನ ಆಯೋಗದ (7th Pay Commission) ವೇತನವನ್ನು ಜುಲೈ ತಿಂಗಳ ತುಟ್ಟಿಭತ್ಯೆ ಹೆಚ್ಚಳ ಪಡೆದಿದ್ದಾರೆ. ಹಾಗೆಯೇ ಇದೀಗ ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೋಗದ ಕುರಿತು ಕುತೂಹಲ ಹೊಂದಿದ್ದು, ಈ ವೇತನ ಜಾರಿಯಾಗಲು ಕಾಯುತ್ತಿದ್ದಾರೆ.
ಸರ್ಕಾರಿ ಉದ್ಯೋಗಿಗಳ ತುಟ್ಟಿಭತ್ಯೆ ಹೆಚ್ಚಳ :
ಇದೀಗ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ ಕಾದಿದೆ. ಹೌದು, ಈ ಮಧ್ಯೆ ಕೇಂದ್ರವು ನಿಗದಿತ ಈ ಸರ್ಕಾರಿ ಉದ್ಯೋಗಿಗಳ ತುಟ್ಟಿಭತ್ಯೆ (DA hike) ಬರೋಬ್ಬರಿ ಶೇಕಡಾ 239 ರಿಂದ ಶೇಕಡಾ 246 ಹೆಚ್ಚಳವಾಗುತ್ತದೆ ಎಂದು ತಿಳಿಸಿದೆ. ಈ ಒಂದು ವಿಚಾರ ಸರ್ಕಾರಿ ನೌಕರರ ಮುಖದಲ್ಲಿ ನಗುವನ್ನು ಮೂಡಿಸಿದೆ. ಅಷ್ಟೇ ಅಲ್ಲದೆ, ನೌಕರರ ಭತ್ಯೆಯಲ್ಲಿ ಆಗಿರುವ ಈ ಪರಿಷ್ಕರಣೆಯು ಇದೇ ವರ್ಷ 2024ರ ಕಳೆದ ತಿಂಗಳು ಜುಲೈ 1ರಿಂದಲೇ ಜಾರಿಗೆ ಬರುವಂತೆ ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚದ ಇಲಾಖೆಯು ಆದೇಶಿಸಿದೆ.
6ನೇ ವೇತನ ಆಯೋಗದಿಂದ (6th pay Commission) ಹಿಡಿದು ಇಲ್ಲಿಯರೆಗೆ ದುಡಿಯುವ ಉದ್ಯೋಗಿಗಳಿಗೆ ಈ ಸೌಲಭ್ಯ :
ಈ ಒಂದು ವಿಚಾರ ಬಹಳ ಮಹತ್ವವಾಗಿದ್ದು, ಸರ್ಕಾರಿ ನೌಕರರ ಜೀವನಕ್ಕೆ ಬಹಳ ಸಹಾಯವಾಗಲಿದೆ
ಯಾಕೆಂದರೆ, 6ನೇ ವೇತನ ಆಯೋಗದಿಂದ ಹಿಡಿದು ಇಲ್ಲಿಯರೆಗೆ ದುಡಿಯುವ ಉದ್ಯೋಗಿಗಳಿಗೆ ಈ ಸೌಲಭ್ಯ ಅನ್ವಯಿಸುತ್ತದೆ. ಹಳೆಯ ವೇತನ ಶ್ರೇಣಿಯಡಿ ವೇತನ ಪಡೆಯುತ್ತಿರುವ ಕೇಂದ್ರ ಸರ್ಕಾರಿ ನೌಕರರು ಮತ್ತು ಕೇಂದ್ರ ಸ್ವಾಯತ್ತ ಸಂಸ್ಥೆಗಳ ನೌಕರರಿಗೆ ಅವರ ಮೂಲ ವೇತನ ಆಧಾರತದಲ್ಲಿ ತುಟ್ಟಿ ಭತ್ಯೆ (Dearness Allowance) ಶೇಕಡಾ 246ರವರೆಗೆ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
6ನೇ ವೇತನ ಆಯೋಗದ ಸ್ವಾಯತ್ತ ಸಂಸ್ಥೆಗಳು ಹಾಗೂ ಸಾರ್ವಜನಿಕ ವಲಯದ ಉದ್ಯಮಗಳ ನೌಕರರಿಗೆ ವಿನೂತನ ತುಟ್ಟಿಭತ್ಯೆ :
ಮುಖ್ಯವಾಗಿ ಇದೀಗ ಜಾರಿಯಾಗಿರುವ ಹೊಸ ತುಟ್ಟಿಭತ್ಯೆಯು ಒಂದು ಸರ್ಕಾರಿ ನೌಕರರ ಪಾಲಿಗೆ ಸಿಹಿ ಸುದ್ದಿಯಾಗಿದೆ. ಆರನೇ ವೇತನ ಆಯೋಗಡಿ ಕೇಂದ್ರ ವಿವಿಧ ಸ್ವಾಯತ್ತ ಸಂಸ್ಥೆಗಳು ಹಾಗೂ ಸಾರ್ವಜನಿಕ ವಲಯದ ಉದ್ಯಮಗಳ (PSU) ನೌಕರರು ಮತ್ತು ಕೆಲವು ಕೇಂದ್ರ ಸರ್ಕಾರಿ ನಾಗರಿಕ ಉದ್ಯೋಗಿಗಳು ವೇತನ ಪಡೆಯಲು ಅರ್ಹರಾಗಿರುತ್ತಾರೆ. ಅವರಿಗೆ ಈ ವಿನೂತನ ತುಟ್ಟಿಭತ್ಯೆ ಪರಿಷ್ಕರಣೆ ಸಂಬಂಧಿಸುತ್ತದೆ.
7ನೇ ವೇತನ ಆಯೋಗದ ತುಟ್ಟಿಭತ್ಯ 53ರಷ್ಟು ಏರಿಕೆ :
ಒಂದು ತಿಂಗಳ ಹಿಂದೆ ಕೇಂದ್ರವು ಸರ್ಕಾರಿ ನೌಕರರಿಗೆ ಸರ್ಕಾರ ತುಟ್ಟಿಭತ್ಯೆ ಪರಿಷ್ಕರಿಸಿ ಘೋಷಿಸಿತ್ತು. ಬರೋಬ್ಬರಿ 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು (Central government employees) ಹಾಗೂ ಪಿಂಚಣಿದಾರರಿಗೆ ಮೂಲ ವೇತನದ ಶೇಕಡಾ 3ರಷ್ಟು ಏರಿಕೆ ಮಾಡಿತ್ತು. ಇದರಿಂದ ಡಿಎ ಪ್ರಮಾಣ ಶೇಕಡಾ 53 ರಷ್ಟು ಹೆಚ್ಚಳಗೊಂಡಿದೆ. ಕೇಂದ್ರ ಸರ್ಕಾರವು ನೌಕರರ ಆರ್ಥಿಕ ಹಣದುಬ್ಬರ ಸರಿದೂಗಿಸಲು ಅನುಕೂಲವಾಗುವಂತೆ ವರ್ಷದಲ್ಲಿ ಎರಡು ಬಾರಿ ಅಂದರೆ ಆರು ತಿಂಗಳಿಗೆ ಒಂದು ಸಲ ಜನವರಿ ಹಾಗೂ ಜುಲೈನಲ್ಲಿ ಡಿಎ (DA) ಪರಿಷ್ಕರಣೆ ಮಾಡುತ್ತದೆ. ಸ್ವಲ್ಪ ತಡವಾಗಿ ಡಿಎ ಹೆಚ್ಚಿಸಿದರೂ ಅದನ್ನು ಜನವರಿ 1 ಮತ್ತು ಜುಲೈ 1 ರಿಂದ ಅನ್ವಯವಾಗುವಂತೆಯೇ ಅನುಷ್ಠಾನಗೊಳಿಸುತ್ತಾ ಬಂದಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.