7ನೇ ವೇತನ ಆಯೋಗ ವರದಿ ಅನುಷ್ಠಾನದ ಬದಲು ಸರ್ಕಾರಿ ನೌಕರರಿಗೆ ಮತ್ತೊಂದು ಹೊರೆ!

7th pay comission

ರಾಜ್ಯ ಸರ್ಕಾರಿ ನೌಕರರು 7ನೇ ವೇತನ ಆಯೋಗ(7th Pay Commission)ದ ವರದಿ ಜಾರಿಯಾಗದ ಕಾರಣ ನಿರಾಶೆಗೊಂಡಿದ್ದಾರೆ. ವರದಿಯನ್ನು ಜಾರಿಗೆ ತರಲು ಕಾಯುತ್ತಿರುವ ನೌಕರರಿಗೆ ಲೋಕಸಭಾ ಚುನಾವಣೆ(Lokhsabha election)ಯ ನೀತಿ ಸಂಹಿತೆ ಅಡ್ಡಿಯಾಗಿದೆ. ಇದರ ಜೊತೆಗೆ, ಸರ್ಕಾರಿ ನೌಕರರ ಮೇಲೆ ಹೊಸ ಕಠಿಣ ನಿಯಮಗಳು ಜಾರಿಗೆ ಬಂದಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

72,754 ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಜೀವ ವಿಮೆ ಪಡೆದಿಲ್ಲ ಹೌದು, ಕರ್ನಾಟಕ ಸರ್ಕಾರವು ಕಡ್ಡಾಯ ಜೀವ ವಿಮಾ ಯೋಜನೆಯಡಿ 72,754 ಸರ್ಕಾರಿ ಅಧಿಕಾರಿಗಳು ಮತ್ತು ನೌಕರರನ್ನು ಹೊಂದಿದೆ. ಈ ಉದ್ಯೋಗಿಗಳಿಗೆ, ಸರ್ಕಾರವು ತಮ್ಮ ಸರಾಸರಿ ವೇತನದ ಶೇಕಡಾ 6.25 ರಷ್ಟು ಕನಿಷ್ಠ ಮಾಸಿಕ ವಿಮಾ ಕಂತು ಕಡ್ಡಾಯವಾಗಿ ಕಡಿತಗೊಳಿಸಲು ನಿರ್ಧರಿಸಿದೆ. ಈ ಕ್ರಮದ ಕುರಿತು ಸ್ಪಷ್ಟನೆ ನೀಡಲು ಮತ್ತು ಅನುಷ್ಠಾನಕ್ಕೆ ಮಾರ್ಗಸೂಚಿಗಳನ್ನು ಒದಗಿಸಲು, ಕರ್ನಾಟಕ ಸರ್ಕಾರದ ಖಜಾನೆ ಇಲಾಖೆಯು ಸುತ್ತೋಲೆ ಹೊರಡಿಸಿದೆ.

ಹೆಚ್ಚುವರಿ ಮಾಹಿತಿಯನ್ನು ನೋಡುವುದಾದರೆ, ಈ ಕ್ರಮವು ರಾಜ್ಯ ಸರ್ಕಾರಿ ನೌಕರರಿಗೆ ಜೀವ ವಿಮೆಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಕಡ್ಡಾಯ ವಿಮಾ ಯೋಜನೆಯು ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ.
ಯೋಜನೆಯಡಿ ವಿಮಾ ಪ್ರಯೋಜನಗಳು ಉದ್ಯೋಗಿಯ ವಯಸ್ಸು, ವೇತನ ಮತ್ತು ಸೇವಾ ಅವಧಿಯನ್ನು ಹೊಂದಿರುತ್ತದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ನಿಯಮಗಳ(Life Insurance Rules) ಪ್ರಮುಖ ಅಂಶಗಳು:

ರಾಜ್ಯ ಸರ್ಕಾರದ ಎಲ್ಲಾ ನೌಕರರು ಮತ್ತು ಅಧಿಕಾರಿಗಳು ಈ ಯೋಜನೆಯನ್ನು ಕಡ್ಡಾಯವಾಗಿ ಜೀವ ವಿಮೆ ಪಡೆಯಬೇಕು. ವಿಮಾ ಮೊತ್ತವು ನೌಕರರು ಸೇರಿರುವ ವೇತನ ಶ್ರೇಣಿಯ ಸರಾಸರಿ ವೇತನದ ಕನಿಷ್ಠ 6.25% ಕ್ಕೆ ಸಮನಾಗಿರುತ್ತದೆ. ಈ ಯೋಜನೆಯಡಿ ಜೀವ ವಿಮಾ ಪಡೆಯಲು ಕನಿಷ್ಠ ವಯಸ್ಸು 18 ವರ್ಷಗಳು ಆಗಿರಬೇಕು. 50 ವರ್ಷ ವಯಸ್ಸನ್ನು ಮೀರಿದ ನೌಕರರಿಗೆ ಹೊಸ ಜೀವ ವಿಮಾ ನೀಡಲಾಗುವುದಿಲ್ಲ. ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯು ಈ ಯೋಜನೆ ಅಧಿಕೃತ ವಿಮಾ ಕಂಪನಿಯಾಗಿದೆ. ಮತ್ತು ಕಡ್ಡಾಯ ಜೀವ ವಿಮಾ ಯೋಜನೆಯು ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಸಹಾಯ ಮಾಡುತ್ತದೆ.

ಆದರೆ, ಮಾರ್ಚ್ 31ರ ಅಂತ್ಯಕ್ಕೆ 50 ವರ್ಷ ವಯಸ್ಸು ಪೂರ್ಣಗೊಂಡಿರುವ ನೌಕರರನ್ನು ಹೊರತುಪಡಿಸಿ, ರಾಜ್ಯ ಸರ್ಕಾರದ ಸುಮಾರು 72,754 ಅಧಿಕಾರಿಗಳಳು ಮತ್ತು ನೌಕರರು ಕಡ್ಡಾಯ ಜೀವ ವಿಮಾ ನಿಯಮಾವಳಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಸರಾಸರಿ ವೇತನದ ಕನಿಷ್ಠ ಶೇ 6.25 ರಷ್ಟು ಮಾಸಿಕ ವಿಮಾ ಕಂತಿಗೆ ವಿಮಾ ಇಲಾಖೆಯಲ್ಲಿ ಜೀವ ವಿಮೆ ಪಡೆಯದೇ ಇರುವುದು ಕಂಡುಬಂದಿದೆ.

ನಿಯಮ 8ರ ಪ್ರಕಾರ ಎಲ್ಲಾ ಸಂಬಂಧಿತ ವೇತನ ಬಟವಾಡೆ ಅಧಿಕಾರಿಗಳು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮತ್ತು ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ 26 (1) ಮತ್ತು ಕರ್ನಾಟಕ ಖಜಾನೆ ಸಂಹಿತೆಯ ಅನುಚ್ಛೇದ 87 (1) ರ ಪ್ರಕಾರ, ನಿಯಮಗಳಲ್ಲಿ ನಿರ್ದಿಷ್ಟಪಡಿಸಿರುವ ಶೇಕಡಾವಾರು ವಿಮಾ ಕಾಂತನ್ನು ನೌಕರರ ವೇತನದಿಂದ ಕಡಿತಗೊಳಿಸಬೇಕು ಎಂದು ಆದೇಶಿಸಲಾಗಿದೆ.

ಖಜಾನೆ ಇಲಾಖೆಯ 200 ಅಧಿಕಾರಿಗಳು/ಸಿಬ್ಬಂದಿಯ ಸರಾಸರಿ ವೇತನದ ಶೇ 6.25 ರಷ್ಟು ಕನಿಷ್ಠ ಮಾಸಿಕ ವಿಮಾ ಕಂತಿಗಿಂತ ಕಡಿಮೆ ಕಡಿತಗೊಳಿಸುತ್ತಿರುವುದು ಕಂಡುಬಂದಿರುತ್ತದೆ. ಈ ಕುರಿತು ಪರಿಶೀಲಿಸಿ ಕನಿಷ್ಠ ವಿಮಾ ಕಂತಿಗೆ ಪಾಲಿಸಿಯನ್ನು ಪಡೆದು ಕನಿಷ್ಠ ಕಂತನ್ನು ಕಡಿತಗೊಳಿಸುವ ಕುರಿತು ಕೂಡಲೇ ಕ್ರಮ ಕೈಗೊಳ್ಳುವುದು ಎಂದು ರಾಜ್ಯದ ಎಲ್ಲಾ ಖಜಾನೆಗಳ ಪ್ರಭಾರಾಧಿಕಾರಿಗಳಿಗೆ ಸೂಚಿಸಲಾಗಿದೆ.

ಇನ್ನೂ ಕೊನೆಯದಾಗಿ ವಿಮಾ ಕಂತಿಗೆ ಎಷ್ಟು ಹಣ ಕಡಿತವಾಗಲಿದೆ ಎಂದು ತಿಳಿಯಬೇಕಾದರೆ, ಹೊಸ ವೇತನ ಶ್ರೇಣಿಯಂತೆ ಕೆಜಿಐಡಿ ವಿಮಾ ಕಂತು ನಿಗದಿಪಡಿಸಿದೆ. ಇದರ ಪ್ರಕಾರ ಆರಂಭಿಕ ಮೂಲವೇತನ 17 ಸಾವಿರ ರೂ.ನಿಂದ ಕೊನೆಯ ಮೂಲವೇತನ 28,950 ರೂ. ಹೊಂದಿರುವ ಹುದ್ದೆಯ ಅಧಿಕಾರಿ ಅಥವಾ ನೌಕರರರಿಂದ ಮಾಸಿಕ 1,436 ರೂಪಾಯಿ ವಿಮಾ ಕಂತು ಕಡಿತವಾಗಲಿದೆ. ಆರಂಭಿಕ ಮೂಲವೇತನ 1,046,00 ರೂ.ನಿಂದ ಕೊನೆಯ ಮೂಲವೇತನ 1,50,600 ರೂ. ಹೊಂದಿರುವ ಹುದ್ದೆಯ ಅಧಿಕಾರಿ ಅಥವಾ ನೌಕರನ ವೇತನದಿಂದ ಮಾಸಿಕ 7,975 ರೂಪಾಯಿ ಕಡಿತವಾಗಲಿದೆ ಎಂದು ಸೂಚಿಸುತ್ತದೆ. ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದಮೇಲೆ  ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!