7th Pay Commission: ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್! 7ನೇ ವೇತನ ಆಯೋಗ ಬಹುತೇಕ ಫಿಕ್ಸ್!

7th pay commission

ಲೋಕಸಭಾ ಚುನಾವಣೆಯ ನೀತಿ ಸಂಹಿತೆಗೆ ತೆರೆ ಬೀಳುತ್ತಿದ್ದಂತೆ 7 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ, ಭತ್ಯೆ ಹಾಗೂ ಸೌಲಭ್ಯಗಳ ಪರಿಷ್ಕರಣೆಯಾಗುವುದು ಖಚಿತ ಎಂಬ ಮಾಹಿತಿ ತಿಳಿದು ಬಂದಿದೆ. ಹಲವು ಹೋರಾಟದ ನಂತರ ರಾಜ್ಯದ ಸರ್ಕಾರಿ ನೌಕರರಿಗೆ (state government employees) ಲೋಕಸಭಾ ಚುನಾವಣೆ(lokh sabha election)ಯ ನಂತರ ಸಿಗಲಿದೆ ಏಳನೇ ವೇತನದ ಶುಭ ಸುದ್ದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

7 ನೇ ವೇತನ ಆಯೋಗ ಜಾರಿಯಿಂದ ಎಷ್ಟು ಸಂಬಳ ಹೆಚ್ಚಾಗುತ್ತೆ ?

ಆಯೋಗವು ಕರ್ನಾಟಕ ಸರ್ಕಾರಿ ನೌಕರರಿಗೆ 27.5% ವೇತನವನ್ನು ಹೆಚ್ಚಿಸಲು ಶಿಫಾರಸು ಮಾಡಿದೆ. ಇನ್ನು ವರದಿಯಲ್ಲಿ ಕನಿಷ್ಠ ಮೂಲವೇತನ 17000 ರೂ ಗಳಿಂದ 27 ಸಾವಿರ ರೂಗಳಿಗೆ ಹೆಚ್ಚಿಸುವಂತೆ ಶಿಫಾರಸ್ಸು ಮಾಡಲಾಗಿದೆ. ಹಾಗೆಯೇ ಇದರಲ್ಲಿ ಅನೇಕ ಶಿಫಾರಸ್ಸುಗಳಿದ್ದು ಅದರ ವರದಿಯನ್ನು ರಾಜ್ಯ ಹಣಕಾಸು ಇಲಾಖೆಗೆ (state finance department) ನೀಡಲಾಗಿದ್ದು, ರಾಜ್ಯ ಹಣಕಾಸು ಇಲಾಖೆ (FD) ಅಂತಿಮ ವರದಿಯನ್ನು ಅಧ್ಯಯನ ಮಾಡುತ್ತದೆ ಮತ್ತು ಅದರ ಶಿಫಾರಸುಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತದೆ.

ಆಯೋಗವು ಕರ್ನಾಟಕ ಸರ್ಕಾರಿ ನೌಕರರಿಗೆ 27.5% ವೇತನವನ್ನು ಹೆಚ್ಚಿಸಲು ಶಿಫಾರಸು ಮಾಡಿದೆ. ಇನ್ನು ವರದಿಯಲ್ಲಿ ಕನಿಷ್ಠ ಮೂಲವೇತನ 17000 ರೂ ಗಳಿಂದ 27 ಸಾವಿರ ರೂಗಳಿಗೆ ಹೆಚ್ಚಿಸುವಂತೆ ಶಿಫಾರಸ್ಸು ಮಾಡಲಾಗಿದೆ. ಹಾಗೆಯೇ ಇದರಲ್ಲಿ ಅನೇಕ ಶಿಫಾರಸ್ಸುಗಳಿದ್ದು ಅದರ ವರದಿಯನ್ನು ರಾಜ್ಯ ಹಣಕಾಸು ಇಲಾಖೆಗೆ (state finance department) ನೀಡಲಾಗಿದ್ದು, ರಾಜ್ಯ ಹಣಕಾಸು ಇಲಾಖೆ (FD) ಅಂತಿಮ ವರದಿಯನ್ನು ಅಧ್ಯಯನ ಮಾಡುತ್ತದೆ ಮತ್ತು ಅದರ ಶಿಫಾರಸುಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತದೆ.

ಇನ್ನೂ ಜೂನ್‌ 2 ರಂದು ಚುಣಾವಣಾ ನೀತಿ ಸಂಹಿತೆ ಮುಕ್ತಾಯಗೊಳಲಿದ್ದು, 7 ನೇ ವೇತನ ಆಯೋಗದ ಶಿಫಾರಸ್ಸಿನಂತೆಯೇ 8 % ರಿಂದ 8.5 % ವೇತನ ಹೆಚ್ಚಳವನ್ನ ನಿರೀಕ್ಷಿಸಲಾಗಿದೆ.

7ನೇ ವೇತನ ಆಯೋಗದ ಪ್ರಮುಖ ಶಿಫಾರಸ್ಸುಗಳು (Recommendations) :

7ನೇ ರಾಜ್ಯ ವೇತನ ಆಯೋಗವು ಶೇ.31 ತುಟ್ಟಿಭತ್ಯೆಯನ್ನು ವಿಲೀನಗೊಳಿಸಿ  ಶೇ.27.50 ರಷ್ಟು ಫಿಟ್‌ಮೆಂಟ್‌ ಪ್ರಯೋಜನವನ್ನು ಒದಗಿಸಬೇಕು ಹಾಗೂ ರಾಜ್ಯ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು  ರೂ.17,000 ರಿ೦ದ ರೂ.27,000 ಕ್ಕೆ ಪರಿಷ್ಕರಿಸಲು ಶಿಫಾರಸ್ಸು ಮಾಡುತ್ತದೆ.

ವೇತನ ರಚನೆಯಲ್ಲಿ ಕನಿಷ್ಠ ಮತ್ತು ಗರಿಷ್ಠ ವೇತನದ  1:8.86 ರ ಅನುಪಾತವನ್ನು ಹೆಚ್ಚು-ಕಡಿಮೆ ಹಾಗೇ ಉಳಿಸಿಕೊಂಡು, ಗರಿಷ್ಠ ವೇತನವನ್ನು ರೂ.2,41,200ಕ್ಕೆ ನಿಗದಿಪಡಿಸಲು ಆಯೋಗವು ಶಿಫಾರಸ್ಸು (Recommendation) ಮಾಡುತ್ತದೆ. (ಅಧ್ಯಾಯ 5.37).

7ನೇ ಸರ್ಕಾರ ವೇತನದ ಶಿಫಾರಸಿನ ಪ್ರಕಾರ ದಿನಾ೦ಕ: 01.07.2022 ರಿ೦ದ ವೇತನದ ಹೊಸ ವೇತನ  (new payment) ಶ್ರೇಣಿಗಳನ್ನು ಕಾಲ್ಪನಿಕವಾಗಿ ಅನ್ವಯಿಸಲಾಗುತ್ತದೆ ಎಂದು ತಿಳಿಸಿದೆ. ಹಾಗೆಯೇ ರಾಜ್ಯ ಸರ್ಕಾರವು ಅನುಷ್ಠಾನಗೊಳಿಸುವ ನೈಜ್ಯ ದಿನಾಂಕವನ್ನು ನಿರ್ಧರಿಸುತ್ತದೆ ಎಂದು ಆಯೋಗ ಶಿಫಾರಸು ಮಾಡುತ್ತದೆ (ಅಧ್ಯಾಯ 5.57).

ನೌಕರರ ಕುಟುಂಬದ ಕನಿಷ್ಠ ಬಳಕೆ ವೆಚ್ಚದ ಲೆಕ್ಕಾಚಾರಕ್ಕಾಗಿ ಬಳಸಲಾಗುವ ಅಕ್ರೋಯ್ದ್ನಾ ಸೂತ್ರವನ್ನು ಚಾಲ್ತಿಯಲ್ಲಿರುವ ‘1’ ಮತ್ತು ‘0.8, ರ ಪ್ರಮಾಣದ ಬದಲಿಗೆ ಪ್ರಾತಿನಿಧಿಕ ಕುಟು೦ಬದ ವಯಸ್ಕ ಪುರುಷ ಮತ್ತು ಮಹಿಳಾ ಸದಸ್ಯರಿಗೆ (family members) ‘1’ ಸಮಾನ ಪ್ರಮಾಣವನ್ನು ನೀಡುವ ಮೂಲಕ ಇಬ್ಬರನ್ನೂ  ಸಮಾನವಾಗಿ ಪರಿಗಣಿಸಬೇಕು.ಸ್ವಲ್ಪ ಮಟ್ಟಿಗೆ ಮಾರ್ಪಡಿಸಲಾಗಿದೆ (ಅಧ್ಯಾಯ 5.33).

ಆಯೋಗದ ಶಿಫಾರಸ್ಸಿನ ಪ್ರಕಾರ ಪರಿಷ್ಕೃತ ಪ್ರತ್ಯೇಕ 1761/1602) ವೇತನ ಶ್ರೇಣಿಗಳೊ೦ದಿಗೆ, ಪರಿಷ್ಕತ ಮುಖ್ಯ ಶ್ರೇಣಿಯನ್ನು ರೂಪಿಸಲಾಗಿದ್ದು, ಹಾಗೂ ಚಾಲ್ತಿಯಲ್ಲಿರುವ ರೂ.400 ರಿ೦ದ ರೂ.3,100 ರ ಬದಲಿಗೆ ವಾರ್ಷಿಕ ಬಡ್ತಿ ದರಗಳು (annual promotion rates) ಮುಖ್ಯ ಶ್ರೇಣಿಯಾದ್ಯ೦ತ ರೂ.650 ರಿ೦ದ ರೂ.5,000 ರದವರೆಗೆ ಆಗಿರುತ್ತದೆ (ಅಧ್ಯಾಯ 5.43).

ವರ್ಷದಲ್ಲಿ ವಂದನೆ ಜನವರಿ ಅಥವಾ ಒಂದನೇ ಜುಲೈನಲ್ಲಿ ನೀಡಿರುವ ವಾರ್ಷಿಕ ಬಡ್ಡಿ ದರಗಳನ್ನು (interest rate) ಮಂಜೂರು ಮಾಡುವುದನ್ನು ಮುಂದುವರಿಸಲು ಆಯೋಗದ ಪ್ರಕಾರ ಶಿಫಾರಸ್ಸು ಮಾಡಲಾಗಿದೆ (ಅಧ್ಯಾಯ 5.44).

ಕೇಂದ್ರದ ತುಟ್ಟಿಭತ್ಯೆ ಸೂತ್ರ ಮತ್ತು ಮಾದರಿಯನ್ನು ಅಳವಡಿಸಿಕೊಳ್ಳುವುದನ್ನು ಮುಂದುವರಿಸಲಾಗುತ್ತದೆ. ದಿನಾ೦ಕ: 01.07.2022 ರ೦ತೆ. 361704 ಸೂಚ್ಯಂಕ ಮಟ್ಟದಲ್ಲಿ ಸಂಪೂರ್ಣವಾಗಿ ತಟಸ್ಮಗೊ೦ಡಿರುವ ತುಟ್ಟಿಭತ್ಯೆಯೊಂದಿಗೆ, ದಿನಾ೦ಕ: 01.07.2022 ರಿ೦ದ, ಭಾರತ ಸರ್ಕಾರವು (central government) ಮ೦ಜೂರು ಮಾಡಿದ ಪ್ರತಿ ಶೇ.1 ರಷ್ಟು ತುಟ್ಟಿಭತ್ಯೆಗೆ, ರಾಜ್ಯ ಸರ್ಕಾರಿ ನೌಕರರಿಗೆ ಮ೦ಜೂರು ಮಾಡಬೇಕಾದ ತುಟ್ಟಿಭತ್ಯೆಯು ಪರಿಷ್ಕೃತ ಮೂಲ ವೇತನದ ಶೇ.0.722 ರಷ್ಟು ಆಗಿರುತ್ತದೆ.(ಅಧ್ಯಾಯ 5.65).

ಅನುದಾನಿತ ಶಿಕ್ಷಣ ಸ೦ಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ (salary of non-teaching staff) ಶ್ರೇಣಿಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕರಿಸಿದ ರೀತಿಯಲ್ಲಿಯೇ ಪರಿಷ್ಕರಿಸಬೇಕು (ಅಧ್ಯಾಯ 5.54).

ರಾಜ್ಯ ಸರ್ಕಾರವು, ಕೇಂದ್ರದ ವೇತನ ರಚನೆಯನ್ನು ಅಳವಡಿಸಿಕೊಳ್ಳಲು ಒಂದು ವಿಧಾನವನ್ನು ಆಯೋಗವು ರೂಪಿಸಿದೆ. ಆದಾಗ್ಯೂ ಪ್ರಸ್ತುತ, ರಾಜ್ಯ ಸರ್ಕಾರವು ಮುಖ್ಯ ಶ್ರೇಣಿ ಮತ್ತು ವಿಭಜಿತ ಪ್ರತ್ಯೇಕ ವೇತನ ಶ್ರೇಣಿಗಳನ್ನು ಒಳಗೊ೦ಡಿರುವ ಅಸ್ತಿತ್ವದಲ್ಲಿರುವ ವೇತನದ ಮಾದರಿಯನ್ನು ರಾಜ್ಯ ಸರ್ಕಾರವು ಉಳಿಸಿಕೂಳ್ಳುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದೆ. ಭಾರತ ಸರ್ಕಾರವು ತನ್ನ ನೌಕರರಿಗೆ ಮುಂದಿನ ವೇತನವನ್ನು ಪರಿಷ್ಕರಿಸಿದಾಗ ರಾಜ್ಯ ಸರ್ಕಾರವು ಕೇಂದ್ರೀಯ ವೇತನ ರಚನೆಯ ಆಧಾರದ ಮೇಲೆ ಪರ್ಯಾಯ ರಚನೆಯನ್ನು ಅಳವಡಿಸಿಕೊಳ್ಳಲು ಸೂಕ್ತ ಸಮಯವಾಗಿರುತ್ತದೆ (ಅಧ್ಯಾಯ 6.14).

ಮಾಸಿಕ ಪಿಂಚಣಿ (pension) ಪ್ರಮಾಣವು ಅಂತಿಮವಾಗಿ ಪಡೆದ ಮೂಲ ವೇತನದ ಶೇ.50 ರಷ್ಟರಲ್ಲಿಯೇ ಮುಂದುವರೆಯುತ್ತದೆ ಮತ್ತು ಕುಟುಂಬ ಪಿಂಚಣಿಯು  ಅಂತಿಮವಾಗಿ ಪಡೆದ ಮೂಲ ವೇತನದ ಶೇ.30 ರಷ್ಟರಲ್ಲಿ ಮುಂದುವರಿಯುತ್ತದೆ. ಅದರಂತೆ, ಕನಿಷ್ಠ ಪಿಂಚಣಿಯನ್ನು ರೂ.13,500 (ಕವಿಷ್ಠ ವೇತನ ರೂ. 27,000 ರ ಶೇ.50 ರಷ್ಟು) ಮತ್ತು ಗರಿಷ್ಠ ಪಿಂಚಣಿಯನ್ನು ರೂ.1,20,600 (ಗರಿಷ್ಠ ರೂ.2,41,200 ವೇತನದ ಶೇ.50 ರಷ್ಟು) ಪರಿಷ್ಕರಿಸುವುದು (ಅಧ್ಯಾಯ 8.18).

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!