ಈ ಬಾರಿಯ ಬಜೆಟ್‌ನಲ್ಲಿ ಎಂಟನೇ ವೇತನ ಆಯೋಗದ (8th Pay Commission) ರಚನೆಯ ಬಗ್ಗೆ ಚರ್ಚೆ ಆಗುವ ಸಾಧ್ಯತೆ ಇದೆ . ಸರ್ಕಾರಿ ನೌಕರರಿಗೆ ಶುಭ ಸುದ್ದಿ!
8ನೇ ವೇತನ ಆಯೋಗ ಯಾವಾಗ ಜಾರಿಗೆ ಬರಲಿದೆ?
ಭಾರತದಲ್ಲಿ ಮೊದಲ ವೇತನ ಆಯೋಗವನ್ನು ಜನವರಿ 1946 ರಲ್ಲಿ ಸ್ಥಾಪಿಸಲಾಯಿತು. 7 ನೇ ವೇತನ ಆಯೋಗವು (7 th Pay Commission) ಜನವರಿ 2016 ರಲ್ಲಿ ಜಾರಿಗೆ ಬಂದಿತು. 8 ನೇ ವೇತನ ಆಯೋಗವು ಜನವರಿ 2026 ರಿಂದ ಜಾರಿಗೆ ಬರುವ ಸಾಧ್ಯತೆಯಿದೆ. ಹಿಂದಿನ ನಿದರ್ಶನಗಳಲ್ಲಿ, ಕೇಂದ್ರ ಸರ್ಕಾರವು (central governament) ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದಿದೆ.
2024-25 ರ ಬಜೆಟ್‌ಗೂ ಮುನ್ನ ಕೇಂದ್ರ ನೌಕರರು ತಮ್ಮ ಬೇಡಿಕೆಗಳನ್ನು ಬಜೆಟ್‌ನಲ್ಲಿ ಇರಿಸಿದ್ದಾರೆ. ಕೇಂದ್ರ ಬಜೆಟ್ 2024-25 ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಜುಲೈ 23 ರಂದು ಅಂದರೆ ಇಂದು ಮಂಡಿಸಲಿದ್ದಾರೆ. ಎಂಟನೇ ವೇತನ ಆಯೋಗದ ರಚನೆಯನ್ನು ಮೂರನೇ ಬಾರಿಗೆ ಆಡಳಿದ ಚುಕ್ಕಾಣಿ ಇಡಿದಿರುವ ಮೋದಿ ಸರ್ಕಾರವು ಸರ್ಕಾರವು ಬಜೆಟ್‌ನಲ್ಲಿ (Budget) ಇದರ ಬಗ್ಗೆ ಮಹತ್ತರ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆ ಇದೆ. 8ನೇ ವೇತನ ಆಯೋಗದ ರಚನೆಯು ಎಲ್ಲಾ ಬೇಡಿಕೆಗಳ ಪೈಕಿ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
8ನೇ ವೇತನ ಆಯೋಗದ ಪ್ರಸ್ತಾವನೆ :
8 ನೇ ವೇತನ ಆಯೋಗದ ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರ ಸ್ವೀಕರಿಸಿದ್ದು. 8ನೇ ವೇತನ ಆಯೋಗ ರಚನೆಗೆ ಆಗ್ರಹಿಸಿ, ನ್ಯಾಷನಲ್ ಕೌನ್ಸಿಲ್ ಆಫ್ ಎಂಪ್ಲಾಯೀಸ್ (ಕೇಂದ್ರ ಸರ್ಕಾರಿ ನೌಕರರ ಜಂಟಿ ಸಲಹಾ ಯಂತ್ರೋಪಕರಣ) ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ (Shiv Gopal Mishra) ಅವರು ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. 8ನೇ ವೇತನ ಆಯೋಗದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಸ್ವೀಕರಿಸಿದ್ದು, ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಈಗಿರುವ ವೇತನ, ಭತ್ಯೆ ಮತ್ತು ಸವಲತ್ತುಗಳನ್ನು ಪರಿಶೀಲಿಸಲಿದೆ.
8 ನೇ ವೇತನ ಆಯೋಗವು ಜನವರಿ 2026 ರಿಂದ ಜಾರಿಗೆ ಬರುವ ಸಾಧ್ಯತೆಯಿದೆ. ಹಿಂದಿನ ನಿದರ್ಶನಗಳಲ್ಲಿ, ಕೇಂದ್ರ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದಿದೆ. 7ನೇ ವೇತನ ಆಯೋಗವು 2016ರ ಜನವರಿಯಲ್ಲಿ ಜಾರಿಗೆ ಬಂದಿದೆ. 8 ನೇ ವೇತನ ಆಯೋಗದ ರಚನೆಯೊಂದಿಗೆ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತಮ್ಮ ವೇತನ, ಭತ್ಯೆಗಳು ಮತ್ತು ಪಿಂಚಣಿಗಳಲ್ಲಿ ಸಂಭವನೀಯ ಹೆಚ್ಚಳದ ಲಾಭವನ್ನು ಪಡೆಯಬಹುದು. ಒಂದು ಕೋಟಿಗೂ ಹೆಚ್ಚು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8ನೇ ವೇತನ ಆಯೋಗ ರಚನೆಗೆ ಕಾತರದಿಂದ ಕಾಯುತ್ತಿದ್ದಾರೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.