8th Pay Commission: 8ನೇ ವೇತನ ಆಯೋಗ ರಚನೆ, ಕೇಂದ್ರದ ಬಂಪರ್ ಗುಡ್ ನ್ಯೂಸ್..! 

Picsart 24 08 07 08 19 49 212

8ನೇ ವೇತನ ಆಯೋಗ ರಚನೆ, ಜನವರಿ 1, 2026ರಿಂದ 8ನೇ ವೇತನ ಆಯೋಗದ ಅನ್ವಯ!

ಸರ್ಕಾರಿ ನೌಕರರು ಈ ಹಿಂದೆ ತಮ್ಮ ವೇತನಕ್ಕಾಗಿ ಹಲವಾರು ಬಾರಿ ಮುಷ್ಕರ ಹಾಗೂ ವೇತನ ಪಡೆಯುವುದಕ್ಕಾಗಿ ಹೋರಾಟ ನಡೆಸಿದ್ದಾರೆ ಅದರ ಪರಿಣಾಮವಾಗಿ ಸರ್ಕಾರಿ ನೌಕರರ ಏಳನೇ ವೇತನ ವೇತನ(7th pay commission) ದೊರೆಯುತ್ತಿದ್ದು ಅದನ್ನು ಎಲ್ಲರೂ ಪಡೆಯುತ್ತಿದ್ದಾರೆ ಹಾಗೆ ಇದೀಗ ಮುಂಬರುವ 8ನೇ ವೇತನದ ಬಗ್ಗೆ ಪ್ರಶ್ನೆ ಮೂಡಿದೆ ಅದರ ಬಗ್ಗೆ ಕೇಂದ್ರ ಸರ್ಕಾರವು ಚರ್ಚೆಯಲ್ಲಿದ್ದು 8ನೇ ವೇತನ ಆಯೋಗ(8th pay commission) ರಚನೆ ಮಾಡಿದೆ ಎಂಟನೇ ವೇತನ ಆಯೋಗದ ಬಗ್ಗೆ ಹಲವು ಸುಳಿವುಗಳನ್ನು ನೀಡಿದ್ದು ವೇತನ ಆಯೋಗದ ಬಗ್ಗೆ ಹಲವಾರು ಚರ್ಚೆ ನಡೆಯುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರಿ ನೌಕರರಿಂದ 8ನೇ ವೇತನ ಆಯೋಗದ ಬೇಡಿಕೆ :

8ನೇ ವೇತನ ಆಯೋಗ ರಚನೆ ಕೇಂದ್ರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿದೆ. ಈಗಾಗಲೇ ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗದ  ಶಿಫಾರಸು ಅನ್ವಯ ವೇತನವನ್ನು ಪಡೆಯುತ್ತಿದ್ದಾರೆ. ಜನವರಿ 1, 2026ರಿಂದ 8ನೇ ವೇತನ ಆಯೋಗದ ಅನ್ವಯ ವೇತನ ಪಡೆಯಬೇಕಿದೆ.

ಕೇಂದ್ರ ಬಜೆಟ್‌ನಲ್ಲಿ ಎರಡು ಅಂಶಗಳ ಕುರಿತು ಯಾವುದೇ ಉಲ್ಲೇಖವಿಲ್ಲ :

2024-25ರ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೂ ಮುನ್ನ, ಕೇಂದ್ರ 8ನೇ ವೇತನ ಆಯೋಗದ ರಚನೆ ಬಗ್ಗೆ ಘೋಷಣೆ ಮಾಡಬಹುದು ಎಂದು ಹಲವು ವರದಿಗಳು ನಿರೀಕ್ಷಿಸಿದ್ದವು. ಆದರೆ, ಈ ಕುರಿತು ಬಜೆಟ್ ಭಾಷಣದಲ್ಲಿ ಯಾವುದೇ ಘೋಷಣೆ ಮಾಡಿಲ್ಲ. ಕೇಂದ್ರ ಸರ್ಕಾರಿ ನೌಕರರು ಎನ್‌ಪಿಎಸ್ ರದ್ದುಪಡಿಸಬೇಕು ಮತ್ತು ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆ ಮಾಡಬೇಕು. 8ನೇ ವೇತನ ಆಯೋಗ (8th pay commission) ರಚನೆ ಮಾಡಬೇಕು ಎಂದು ಎರಡು ಪ್ರಮುಖ ಬೇಡಿಕೆಗಳನ್ನು ಬಜೆಟ್ ಪೂರ್ವ ಸಭೆಯಲ್ಲಿ ಮಂಡಿಸಿದ್ದರು. ಆದರೆ ಕೇಂದ್ರ ಬಜೆಟ್‌ನಲ್ಲಿ ಈ ಎರಡು ಅಂಶಗಳ ಕುರಿತು ಯಾವುದೇ ಉಲ್ಲೇಖ ಮಾಡಿಲ್ಲ.

ಈಗಾಗಲೇ 8ನೇ ಕೇಂದ್ರ ವೇತನ ಆಯೋಗ  ರಚನೆ ಕುರಿತು ಸರ್ಕಾರಕ್ಕೆ ಎರಡು ಮನವಿಗಳು ಬಂದಿವೆ. ಆದರೆ, ಸದ್ಯಕ್ಕೆ ಯಾವುದೇ ಪ್ರಸ್ತಾವನೆ ಪರಿಶೀಲನೆಯಲ್ಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಸರ್ಕಾರ ಈ ಕುರಿತು ಯಾವಾಗ ತೀರ್ಮಾನ ಕೈಗೊಳ್ಳಲಿದೆ? ಎಂಬ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ.

ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಬಜೆಟ್ ಮಂಡಣೆ :

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಜುಲೈ 23ರ ಮಂಗಳವಾರ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದರು. ಆದರೆ ಬಜೆಟ್ ಭಾಷಣದಲ್ಲಿ ಕೇಂದ್ರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ಬಗ್ಗೆ ಯಾವುದೇ ಉಲ್ಲೇಖ ಮಾಡಲಿಲ್ಲ.

10 ವರ್ಷಕ್ಕೊಂದು ಆಯೋಗ ರಚನೆಯಾಗಬೇಕು :

ಕೇಂದ್ರ ಸರ್ಕಾರವು (central government) ಪ್ರತಿ ಹತ್ತು ವರ್ಷಕ್ಕೊಮ್ಮೆ ಹೊಸ ವೇತನ ಆಯೋಗವನ್ನು ರಚನೆ ಮಾಡುವ ಸಂಪ್ರದಾಯವನ್ನು ಮುಂದುವರೆಸಬೇಕು. 7ನೇ ವೇತನ ಆಯೋಗವನ್ನು ಫೆಬ್ರವರಿ 2014ರಲ್ಲಿ ರಚನೆ ಮಾಡಲಾಗಿತ್ತು. ಅದರ ಶಿಫಾರಸ್ಸುಗಳನ್ನು ಜನವರಿ 1, 2016ರಿಂದ ಜಾರಿಗೆ ತರಲಾಯಿತು. ಹಾಗೆಯೇ ಇದೀಗ 7ನೇ ವೇತನವನ್ನು ಎಲ್ಲರೂ ಪಡೆದಿದ್ದಾರೆ.

ಬಜೆಟ್ ನಂತರ ನೀಡಿದ ಸಂದರ್ಶನದಲ್ಲಿ 8ನೇ ವೇತನ ಆಯೋಗ ರಚನೆ ವಿಷಯದ ಬಗ್ಗೆ ಸರ್ಕಾರ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಬಹುದು ಹಾಗೆಯೇ ಮುಂದಿನ ವೇತನ ಆಯೋಗವನ್ನು 2026ಕ್ಕೆ ನಿಗದಿಪಡಿಸಲಾಗಿದ್ದು, ಅದಕ್ಕೆ ಸಾಕಷ್ಟು ಸಮಯಾವಕಾಶವಿದೆ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಟಿ. ವಿ. ಸೋಮನಾಥನ್ ತಿಳಿಸಿದ್ದಾರೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!