8ನೇ ವೇತನ ಆಯೋಗದ ಬಗ್ಗೆ ಸರ್ಕಾರಿ ನೌಕರರಿಗೆ ಕುತೂಹಲ, 8ನೇ ವೇತನ ಆಯೋಗ ಕುರಿತು ಚರ್ಚೆ ಹಾಗೂ ಹೊಸ ಅಪ್‌ಡೇಟ್…!
ಸರ್ಕಾರಿ ನೌಕರರು ಈ ಹಿಂದೆ ತಮ್ಮ ಪರಿಶ್ರಮ ಮತ್ತು ಹೋರಾಟದ ಫಲವಾಗಿ ತಮ್ಮ 7ನೇ ವೇತನ ಹಾಗೂ ತುಟ್ಟಿಭತ್ಯೆಯನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಇದೀಗ 8ನೇ ವೇತನ ಆಯೋಗ(8th pay commission)ದ ಕುರಿತು ಚರ್ಚೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನೌಕರರು ತಮ್ಮ 8ನೇ ವೇತನ ಆಯೋಗದ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ವೇತನದಲ್ಲಿ ನಿರ್ದಿಷ್ಟ ಹೆಚ್ಚಳವನ್ನು ಪಡೆಯಲು ಕಾತುರದಿಂದ ಕಾಯುತ್ತಿದ್ದಾರೆ.
7 ನೇ ವೇತನ ಆಯೋಗದ (7th pay commission) ಅಡಿಯಲ್ಲಿ ಉದ್ಯೋಗಿ 18000 ರೂಪಾಯಿಗಳನ್ನು ಪಡೆಯುತ್ತಿದ್ದು, ಮತ್ತು ಹೊಸ ಆಯೋಗದೊಂದಿಗೆ ಈ ವೇತನ ಹೆಚ್ಚಾಗಬಹುದು. ಕೇಂದ್ರ ಸರ್ಕಾರದ (Central government) ಅಡಿಯಲ್ಲಿ ಉದ್ಯೋಗಿಯಾಗಿರುವ ವ್ಯಕ್ತಿಯು ತಮ್ಮ ಪಾವತಿಗಳಲ್ಲಿ ಒಟ್ಟಾರೆ 186% ಹೆಚ್ಚಳವನ್ನು ಪಡೆಯಲಿದ್ದಾರೆ, ಇದರ ಪರಿಣಾಮವಾಗಿ ರೂ 51,480, ಇದು ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ಹಾಗೆಯೇ ಇದೀಗ 8ನೇ ವೇತನ ಆಯೋಗ ರಚನೆ ಹಾಗೂ ಹೊಸ ಅಪ್‌ಡೇಟ್ (New Update) ಬಗ್ಗೆ ತಿಳಿದು ಬಂದಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
8ನೇ ವೇತನ ಆಯೋಗ ರಚನೆ ಕುರಿತು ರಾಜ್ಯಸಭೆಯಲ್ಲಿ ಚರ್ಚೆ :
ಲೋಕಸಭೆ ಚುನಾವಣೆ 2024 ಮುಗಿದು ಎನ್‌ಡಿಎ 3.0 (NDA 3.0) ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಸರ್ಕಾರಿ ನೌಕರರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದು, ಹೊಸ ಸರ್ಕಾರ ತನ್ನ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ 8ನೇ ವೇತನ ಆಯೋಗ ರಚನೆ ಕುರಿತು ಘೋಷಣೆ ಮಾಡಬಹುದು ಎಂಬ ಯಾವುದೇ ಭರವಸೆ ಇಲ್ಲ. ಯಾವಾಗ ಸರ್ಕಾರ ವೇತನ ಆಯೋಗ ರಚನೆ ಮಾಡಲಿದೆ ಎಂಬುದು ಇನ್ನೂ ಕೂಡ ತಿಳಿದು ಬಂದಿಲ್ಲ.
ಲೋಕಸಭೆ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಕೇಂದ್ರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ 8ನೇ ವೇತನ ಆಯೋಗ ರಚನೆ ಕುರಿತು ರಾಜ್ಯಸಭೆಯಲ್ಲಿ ಚರ್ಚೆ ನಡೆದಿದೆ.
ಆಯೋಗ ವರದಿ ನೀಡಲು 8 ತಿಂಗಳು ಎಂಬ ನಿರೀಕ್ಷೆ ಮಾಡಲಾಗಿದೆ :
2026ರಲ್ಲಿ 8ನೇ ವೇತನ ಆಯೋಗದ ವರದಿ ಜಾರಿಗೆ ಬರಬೇಕು ಅಂದರೆ ಕೇಂದ್ರ ಸರ್ಕಾರ ಈಗ ಅಥವ 2025ರ ಮೊದಲ ಅವಧಿಯಲ್ಲಿಯೇ 8ನೇ ವೇತನ ಆಯೋಗ ರಚನೆಯನ್ನು ಮಾಡಬೇಕು. ಆಯೋಗ ವರದಿ ನೀಡಲು ಸುಮಾರು 8 ತಿಂಗಳು ಬೇಕು ಎಂದು ನಿರೀಕ್ಷೆ ಮಾಡಲಾಗಿದೆ. ಆದ್ದರಿಂದ ಸರ್ಕಾರಿ ನೌಕರರು ತಮ್ಮ 8ನೇ ವೇತನ ಯಾವಾಗ ಬರಲಿದೆ ಎಂದು ಕಾಯುತ್ತಿದ್ದಾರೆ.
ವೇತನ ಆಯೋಗ ರಚನೆ ಕುರಿತು ಸಚಿವರ ಹೇಳಿಕೆ :
ರಾಜ್ಯಸಭೆ ಕಲಾಪದಲ್ಲಿ ಕೆಲವು ಸದಸ್ಯರು 8ನೇ ವೇತನ ಆಯೋಗ ರಚನೆ ಕುರಿತು ಚರ್ಚೆ ನಡೆದಿದ್ದು, 2025-26ನೇ ಸಾಲಿನ ಬಜೆಟ್‌ನಲ್ಲಿ ವೇತನ ಆಯೋಗ ರಚನೆಯ ಪ್ರಸ್ತಾಪ ಇರಲಿದೆಯೇ ಎಂಬ ಪ್ರಶ್ನೆ ಮೂಡಿ ಬಂದಿದೆ. ಈ ಚರ್ಚೆಗೆ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ (Minister of State for Finance Pankaj Chaudhary), “8ನೇ ವೇತನ ಆಯೋಗದ ರಚನೆಯ ಕುರಿತು ಪ್ರಸ್ತುತ ಯಾವುದೇ ಪ್ರಸ್ತಾವನೆ ಪರಿಗಣನೆಯಲ್ಲಿ ಇಲ್ಲ” ಎಂದು ಸ್ಪಷ್ಟಪಡಿಸಿದರು. ಇದರಿಂದಾಗಿ ಆಯೋಗ ರಚನೆ ಮತ್ತಷ್ಟು ಸಮಯ ತೆಗದುಕೊಳ್ಳೋವ ಸಾಧ್ಯತೆ ಇದೆ.
8ನೇ ವೇತನ ಆಯೋಗದ ವರದಿ ಪ್ರಕಾರ ಮೂಲ ವೇತನಕ್ಕೆ ಕಾದು ಕುಳಿತ ಸರ್ಕಾರಿ ನೌಕರರು :
ಕೇಂದ್ರ ಸರ್ಕಾರ ಸಂಪ್ರದಾಯದಂತೆ ಸರ್ಕಾರಿ ನೌಕರರ ವೇತನ ರಚನೆ, ಭತ್ಯೆ, ಪಿಂಚಣಿಯನ್ನು ಪರಿಶೀಲಿಸಲು ಮತ್ತು ನವೀಕರಣಗೊಳಿಸಲು ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚನೆ ಮಾಡುತ್ತದೆ. ಮೂಲ ವೇತನದ ಆಧಾರದ ಮೇಲೆ ಡಿಎ, ಪಿಂಚಣಿಯನ್ನು ಲೆಕ್ಕಾಚಾರ ಹಾಕಲಾಗುತ್ತದೆ. 2025ರ ಏಪ್ರಿಲ್‌ನಿಂದ ಕೇಂದ್ರ ಸರ್ಕಾರ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಪರಿಚಯಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ. ಆದ್ದರಿಂದ 8ನೇ ವೇತನ ಆಯೋಗದ ವರದಿ ಪ್ರಕಾರ ಮೂಲ ವೇತನ ಎಷ್ಟಾಗಲಿದೆ? ಎಂದು ನೌಕರರು ಕಾದು ಕುಳಿತಿದ್ದಾರೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.