8ನೇ ವೇತನ ಆಯೋಗದಿಂದ ಹೊಸ ಅಪ್ ಡೇಟ್, ಸರ್ಕಾರಿ ನೌಕರರ ಮೂಲ ವೇತನ ₹34,500ಗೆ ಹೆಚ್ಚಳ ನಿರೀಕ್ಷೆ..!
ಸರ್ಕಾರಿ ನೌಕರರು ಬಹಳ ಕಷ್ಟ ಪಟ್ಟು, ತಮ್ಮ ಪರಿಶ್ರಮ ಮತ್ತು ಹೋರಾಟದ ಫಲವಾಗಿ ತಮ್ಮ 7ನೇ ವೇತನ (7th pay commission) ವನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಇದೀಗ 8ನೇ ವೇತನ ಆಯೋಗದ ಕುರಿತು ಚರ್ಚೆ ನಡೆಯುತ್ತಿದೆ. ಸರ್ಕಾರಿ ನೌಕರರು ತಮ್ಮ 8ನೇ ವೇತನ ಆಯೋಗದ (8th pay commission) ವೇತನದ ಬಗ್ಗೆ ಕಾತುರದಿಂದ ಕಾಯುತ್ತಿದ್ದಾರೆ. 8ನೇ ವೇತನವು 2026 ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಸರ್ಕಾರಿ ನೌಕರರು ತಮ್ಮ ವೇತನದಲ್ಲಿ ನಿರ್ದಿಷ್ಟ ಹೆಚ್ಚಳವನ್ನು ಪಡೆಯಲು ಕಾತುರದಿಂದ ಕಾಯುತ್ತಿದ್ದಾರೆ. ದೇಶಾದ್ಯಂತ ಒಂದು ಕೋಟಿಗೂ ಹೆಚ್ಚು ಇರುವ ಕೇಂದ್ರ ಸರ್ಕಾರಿ ನೌಕರರ ಹಣದುಬ್ಬರವನ್ನು 7ನೇ ವೇತನ ಆಯೋಗದ ಭತ್ಯೆ ಏರಿಕೆಗಳು ನಿಭಾಯಿಸುತ್ತಿವೆ. ನೌಕರರು ಹಣದುಬ್ಬರ ನಿರ್ವಹಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಗಾಗ ಮಹತ್ವದ ನಿರ್ಧಾರ ಕೈಗೊಳ್ಳುತ್ತದೆ. 2026ರಲ್ಲಿ ಜಾರಿಯಾಗಲಿರುವ 8ನೇ ವೇತನ ಆಯೋಗದಡಿ ಮೂಲ ವೇತನ (Basic Salary) ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂದು ನೌಕರರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸರ್ಕಾರಿ ನೌಕರರ ಮೂಲ ವೇತನ ₹34,500ಗೆ ಹೆಚ್ಚಳವಾಗುವ ನಿರೀಕ್ಷೆಯಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ವರದಿಯಲ್ಲಿ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
8ನೇ ವೇತನ ಆಯೋಗ ರಚನೆ ಕುರಿತು ರಾಜ್ಯಸಭೆಯಲ್ಲಿ ಚರ್ಚೆ :
ಲೋಕಸಭೆ ಚುನಾವಣೆ 2024 ಮುಗಿದು ಎನ್‌ಡಿಎ 3.0 (NDA 3.0) ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಸರ್ಕಾರಿ ನೌಕರರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದು,
ಲೋಕಸಭೆ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಕೇಂದ್ರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ 8ನೇ ವೇತನ ಆಯೋಗ (8th pay commission) ರಚನೆ ಕುರಿತು ರಾಜ್ಯಸಭೆಯಲ್ಲಿ ಚರ್ಚೆ ನಡೆದಿದೆ.
ನೌಕರರ 8ನೇ ವೇತನ ಆಯೋಗ ಜಾರಿಯಾದರೆ ಸರ್ಕಾರಿ ನೌಕರರಿಗೆ ಹಲವು ಅನುಕೂಲಗಳು :
ಕೇಂದ್ರ ಸರ್ಕಾರವು ಪ್ರತಿ ಹತ್ತು ವರ್ಷಗಳಿಗೊಮ್ಮೆ (10 years) ವೇತನ ಆಯೋಗ ಜಾರಿಗೊಳಿಸುತ್ತದೆ. 2016ರಲ್ಲಿ ಜಾರಿಯಾಗಿದ್ದ 7ನೇ ವೇತನ ಆಯೋಗವು ಮುಂದಿನ ಒಂದು ವರ್ಷದಲ್ಲಿ ಕೊನೆಗೊಳ್ಳಲಿದೆ. 2026ರ ಜನವರಿಯಲ್ಲಿ 8ನೇ ವೇತನ ಆಯೋಗ ಜಾರಿ ಆಗಬೇಕಿದ್ದು, ನಿರೀಕ್ಷೆಯಂತೆ ಶೀಫಾರಸಿನ (Recommended) ಪ್ರಕ್ರಿಯೆ ಪೂರ್ಣಗೊಂಡು ಅನುಷ್ಠಾನಗೊಂಡರೆ ನೌಕರರ ಮೂಲಕ ವೇತನ, ತುಟ್ಟಿಭತ್ಯೆ, ತುಟ್ಟಿ ಪರಿಹಾರದಲ್ಲಿ ಭಾರೀ ಬದಲಾವಣೆಗಳಾಗಲಿವೆ.
ಸರ್ಕಾರಿ ನೌಕರರ ಮೂಲವೇತನ 34,500 ರೂಪಾಯಿಗೆ ಹೆಚ್ಚಳ :
ಹೌದು, ಸರ್ಕಾರಿ ನೌಕರರು 8ನೇ ವೇತನ ಆಯೋಗದಡಿ ಮೂಲ ವೇತನ 18,000 ರೂಪಾಯಿಯಿಂದ 34,500 ರೂಪಾಯಿಗೆ ಏರಿಕೆ ಮಾಡುವ ಲೆಕ್ಕಾಚಾರವಿದೆ. ಇಷ್ಟು ಪ್ರಮಾಣದಲ್ಲಿ ಏರಿಕೆ ಆಗಲು ಸರ್ಕಾರ ನೌಕರರು ಯೂನಿಯನ್‌ಗಳು ನೀಡಿರುವ ಮನವಿ ಒಪ್ಪಬೇಕು. ಅದರಂತೆ ಫಿಟ್ಮೆಂಟ್ ಅಂಶವನ್ನು 2.86ರಷ್ಟು ಪರಿಗಣಿಸಬೇಕು. ಅಂದಾಗ ಮೂಲ ವೇತನ ಗರಿಷ್ಠ ಹೆಚ್ಚಳ ಕಾಣಲಿದೆ ಎಂದು ತಿಳಿದು ಬಂದಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.