ಇಂದಿನ ಜಗತ್ತು ನಮ್ಮ ಅಂಗೈಯಲ್ಲೇ ಇದೆ. ಹೌದು ನಾವು ಮನೆಯಲ್ಲಿಯೇ ಕುಳಿತು ಎಲ್ಲಾ ಕೆಲಸ ಕಾರ್ಯಗಳನ್ನು ಮೊಬೈಲ್ ನಲ್ಲಿಯೇ ( Mobile phone ) ಮಾಡಿ ಮುಗಿಸುತ್ತೇವೆ. ಮೊಬೈಲ್ ನಮ್ಮ ಜೀವನದ ಒಂದು ಅಂಗವಾಗಿದೆ. ಸ್ಮಾರ್ಟ್ ಫೋನ್ ಗಳನ್ನು ಎಲ್ಲ ರೀತಿಯಲ್ಲೂ ಬಳಸುತ್ತೇವೆ. ಮತ್ತು ಒಂದು ಮನೆಯಲ್ಲಿ 2 ಕ್ಕಿಂತ ಜಾಸ್ತಿ ಮೊಬೈಲ್ ಫೋನ್ ಗಳು ಇರುತ್ತವೆ. ಎಲ್ಲಿ ನೋಡಿದರಲ್ಲಿ ಪ್ರತಿಯೊಬ್ಬನ ಕೈಯಲ್ಲೂ ಮೊಬೈಲ್ ಫೋನ್ ಗಳು ಕಾಣಿಸುತ್ತವೆ. ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸ್ಮಾರ್ಟ್ ಫೋನಗಳು ಬಂದಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಅಂಗೈಯಲ್ಲಿರುವ ಈ ಒಂದು ಸಣ್ಣ ಮೊಬೈಲ್ ಫೋನ್ ಇಡೀ ಜಗತ್ತನ್ನೇ ಆಳುತ್ತದೆ. ಹೌದು, ನಾವು ಬಳಸುವ ಮೊಬೈಲ್ ಫೋನ್ ಗಳು ಹೆಚ್ಚಾಗಿ ಆಂಡ್ರಾಯ್ಡ್ ಅಪರೇಟಿವ್ ಸಿಸ್ಟಂ ( Android Operative System ) ಅನ್ನು ಒಳಗೊಂಡಿವೆ. ಹಾಗೆ ನಮ್ಮ ಮೊಬೈಲ್ ಫೋನ್ ನಲ್ಲಿ ನಮಗೆ ತಿಳಿಯದೆ ಇರುವ ಹಲವಾರು ವಿಷಯಗಳು ಅಡಗಿವೆ. ಹಾಗೆಯೇ ಮೊಬೈಲ್ ನಲ್ಲಿ ಕೆಲವು ಕೋಡ್ ಗಳನ್ನು (Codes ) ಕೂಡ ಬಳಸಿ ನಮಗೆ ಗೊತ್ತಿರದ ವಿಷಯಗಳನ್ನು ತಿಳಿದು ಕೊಳ್ಳಬಹುದು.
ಸ್ಮಾರ್ಟ್ ಫೋನ್ ನಲ್ಲಿ ಗೊತ್ತಿರದ ಕೆಲವು ಕೋಡ್ ಗಳು:
ಈ ಕೆಳಗೆ ಹಲವು ಕೋಡ್ ಗಳು ಇವೆ. ನಾವು ಯಾವಾಗಲೂ ಮೊಬೈಲ್ ಫೋನ್ ಅನ್ನು ಬಳಸುತ್ತೇವೆ ಆದರೆ ನಮಗೆ ಎಷ್ಟೋ ಗೊತ್ತಿರದ ಕೋಡ್ ಗಳು ಇವೆ. ಇಂದು ನಾವು ಅವು ಯಾವುವು ಮತ್ತು ಅವುಗಳ ನೀಡುವ ಮಾಹಿತಿ ಏನು ಎಂದು ತಿಳಿದು ಕೊಳ್ಳೋಣ ಬನ್ನಿ.
*##4636#**
ಈ ಒಂದು ಕೋಡ್ ಅನ್ನು ಬಳಸಿ ನಮ್ಮ ಮೊಬೈಲ್ ಫೋನ್ ನ ಬ್ಯಾಟರಿ, ವೈ-ಫೈ ಮಾಹಿತಿ ಮತ್ತು ಅಪ್ಲಿಕೇಶನ್ ಗಳ ಬಳಕೆಯ ವಿವರಗಳ ಬಗ್ಗೆ ತಿಳಿದುಕೊಳ್ಳಬಹುದು.
*#21#
ಈ ಒಂದು ಕೋಡ್ ಅನ್ನು ಬಳಸಿಕೊಂಡು ನಮ್ಮ ಸ್ಮಾರ್ಟ್ ಫೋನ್ ನಲ್ಲಿ ಕರೆಗಳು ಅಥವಾ ಸಂದೇಶಗಳನ್ನು ಮತ್ತೊಂದು ಸಂಖ್ಯೆಗೆ ಕನ್ವರ್ಟ್ ಮಾಡಲಾಗಿದೆಯೇ ಎಂದು ತಿಳಿದುಕೊಳ್ಳಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
##002#
ಈ ಕೋಡ್ ##002# ಅನ್ನು ಬಳಸಿಕೊಂಡು ನಿಮ್ಮ ಕರೆಗಳು ಅಥವಾ ಸಂದೇಶಗಳನ್ನು ಇತರ ಸಂಖ್ಯೆಗಳಿಗೆ ಫಾರ್ವರ್ಡ್ ಮಾಡಿದ್ದರೆ ಎಂದು ತಿಳಿಯಬಹುದು. ಹಾಗೆಯೇ ಕರೆಗಳನ್ನು ಫಾರ್ವರ್ಡ್ ಮಾಡಿದರೆ ಈ ಕೋಡ್ ಅನ್ನು ಬಳಸುವ ಮೂಲಕ ಆ ಕರೆಗಳನ್ನು ಕಟ್ ಮಾಡಬಹುದು.
*43#
ಈ ಒಂದು ಕೋಡ್ ಅನ್ನು ಬಳಸುವ ಮೂಲಕ ನಿಮ್ಮ ಫೋನ್ ನಲ್ಲಿ ಕರೆ ಕಾಯುವ ಸೇವೆಯನ್ನು ಸಕ್ರಿಯಗೊಳಿಸಬಹುದು.ಮತ್ತು ಯಾರಾದರೂ ನಿಮ್ಮನ್ನು ಕರೆದರೆ ಇದು ನಿಮಗೆ ಕಾಯುವಿಕೆಯನ್ನು ನೀಡುತ್ತದೆ. ಅದಕ್ಕಾಗಿ ಅದನ್ನು ನಿಷ್ಕ್ರಿಯಗೊಳಿಸಲು, ನೀವು ಕೋಡ್ #43# ಅನ್ನು ಬಳಸಬಹುದು.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
*#06#
ನಿಮ್ಮ ಫೋನ್ ನ ಐಎಂಇಐ ಸಂಖ್ಯೆಯನ್ನು ತಿಳಿಯಲು, ನೀವು ಈ ಕೋಡ್ *#06# ಅನ್ನು ಬಳಸಬಹುದು ಅದರ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ