ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ಮಟ್ಟದಲ್ಲಿ ಗೃಹಲಕ್ಷ್ಮಿ ಅದಾಲತ್(Gruhalakshmi adalat) ನಡೆಯಲಿದೆ. ಏನಿದು ಗೃಹಲಕ್ಷ್ಮಿ ಅದಾಲತ್ ಎಂದು ಯೋಚಿಸುತ್ತಿದ್ದೀರಿಯೇ?, ಈ ಯೋಜನೆಯು 5 ಲಕ್ಷ ಜನರಿಗೆ ಗೃಹಲಕ್ಷ್ಮಿಯ ಹಣ ಬರದೇ ಇರುವ ಕಾರಣ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅದಾಲತ್ ನಡೆಸಿ, ತೊಂದರೆಗಳನ್ನು ಬಗೆಹರಿಸಿ ಎಲ್ಲಾ ಗೃಹಲಕ್ಷ್ಮಿಯರಿಗೆ ಹಣ ತಲುಪುವಂತೆ ಮಾಡಲಾಗುವುದು. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗೃಹ ಲಕ್ಶ್ಮಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆ:
ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ, ಮುಖ್ಯಮಂತ್ರಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಉಪಸ್ಥಿತರಿದ್ದರು. ಸಭೆಯಲ್ಲಿ ಮಾತನಾಡಿ, ಬ್ಯಾಂಕ್ ಖಾತೆ ಹಾಗೂ ಆಧಾರ್ ಲಿಂಕ್ ಹೀಗೆ ಮತ್ತಿತರ ಸಮಸ್ಯೆಗಳಿಂದ ಗೃಹಲಕ್ಷ್ಮಿ ಹಣ ಬರದಿದ್ದರೆ ಅಂತಹ ಸಮಸ್ಯೆಗಳನ್ನು ಗ್ರಾಮ ಮಟ್ಟದಲ್ಲಿ ಅದಾಲತ್ ನಡಸಿ ಡಿಸೆಂಬರ್ ಒಳಗೆ ಅವುಗಳೆಲ್ಲವುಗಳನ್ನು ಬಗೆಹರಿಸಬೇಕು ಎಂದು ಸೂಚನೆ ನೀಡಿದರು. ಹಾಗಾಗಿ ಇನ್ನು ಗೃಹಲಕ್ಷ್ಮಿಯ ಹಣ ಬಂದಿಲ್ಲ ಎಂದು ಚಿಂತಿಸುತ್ತಿರುವವರಿಗೆ ಇದು ಒಂದು ಸಂತಸದ ಸುದ್ದಿಯಾಗಿದೆ. ಎಲ್ಲಾ ಫಲಾನುಭವಿಗಳಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಡಿಸೆಂಬರ್ ಒಳಗಾಗಿ ಖಾತೆಗೆ ಬಂದು ಜಮಾ ಆಗಲಿದೆ.
ಇದುವರೆಗೂ ಹಣ ಬರದೇ ಇದ್ದವರಿಗೆ ಒಟ್ಟಿಗೆ 6 ಸಾವಿರ ರೂ. ಖಾತೆಗೆ ಬರುತ್ತೆ
ಬೆಂಗಳೂರಿನ ಮಲ್ಲೇಶ್ವರಂ ನ ಬೆಂಗಳೂರು ಒನ್ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಗಸ್ಟ್ 15 ರೊಳಗೆ ನೋಂದಣಿ ಮಾಡಿಕೊಂಡು ಇದುವರೆಗೂ ಹಣ ಬರದೇ ಇರುವ ಫಲಾನುಭವಿಗಳು ಚಿಂತೆ ಮಾಡಬೇಕಿಲ್ಲ, ಮೂರು ತಿಂಗಳ ಒಟ್ಟು ಬಾಕಿಯಾದ 6000 ರೂಪಾಯಿಯನ್ನು ಪೂರ್ಣವಾಗಿ ಖಾತೆಗೆ ಜಮಾ ಮಾಡಲಾಗುತ್ತದೆ ಮತ್ತು ಆಗಸ್ಟ್ ನಂತರ ನೋಂದಣಿ ಮಾಡಿಕೊಂಡು ಅವರಿಗೆ ಒಟ್ಟು 4 ಸಾವಿರ ರೂಪಾಯಿ ಖಾತೆಗೆ ಜಮಾ ಮಾಡಲಾಗುತ್ತದೆ. ಎಂದು ಭರವಸೆ ನೀಡಿದರು. ದೀಪಾವಳಿ ಹಬ್ಬದ ವೇಳೆಗೆ ಅಥವಾ ಮುಂದಿನ 15 ದಿನಗಳೊಳಗೆ ಎಲ್ಲಾ ಫಲಾನುಭವಿಗಳಿಗೆ ಹಣ ಹೋಗುವಂತೆ ನೋಡಿಕೊಳ್ಳಲಾಗುವುದು ಎಂದರು.ಹೀಗಾಗಿ ಅಧಿಕಾರಿಗಳಿಗೆ ಟ್ರೈನಿಂಗ್ ನೀಡಲಾಗುತ್ತಿದ್ದು, ಇನ್ನು ಹತ್ತು ದಿನದಲ್ಲಿ ಗೃಹಲಕ್ಷ್ಮಿ ಗೊಂದಲ ಕ್ಲಿಯರ್ ಆಗಲಿದೆ ಎಂದು ತಿಳಿಸಿದರು. ಇದರ ಜೊತೆಗೆ ‘1902’ ಹೆಲ್ಪ್ ಲೈನ್ ನಂಬರ್ ಇದ್ದು, ಇದಕ್ಕೆ ಕೆರೆಮಾಡಿ ಮಹಿಳೆಯರು ಮಾಹಿತಿಯನ್ನ ಪಡೆದುಕೊಳ್ಳಬಹುದು ಎಂದರು.
ಅಂಚೆ ಕಚೇರಿ ಸಹಾಯ ಪಡೆದುಕೊಳ್ಳಿ..! ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB)
ದೇಶಾದ್ಯಂತದ ಸುಮಾರು ಶೇ.77 ಗ್ರಾಮೀಣ ಖಾತೆದಾರರಿಗೆ ಮನೆಯಲ್ಲಿ ಕುಳಿತು ಬ್ಯಾಂಕಿನಿ೦ದ ಹಣವನ್ನು ಹಿಂಪಡೆಯುವ ಅಥವಾ ಜಮಾ ಮಾಡುವ ಅನುಕೂಲವಿದೆ. ಅಂಚೆ ಉಳಿತಾಯ ಖಾತೆಯನ್ನು ಕೇವಲ 5 ನಿಮಿಷದಲ್ಲಿ ತೆರೆಯಬಹುದಾಗಿದೆ. ಕರ್ನಾಟಕದಲ್ಲಿ ಐಪಿಪಿಬಿ 33 ಶಾಖೆಗಳಿವೆ. ಐಪಿಪಿಬಿ ಖಾತೆ ತೆರೆದರೆ ಶೀಘ್ರವೇ ಗೃಹಲಕ್ಷ್ಮಿ ಯೋಜನೆಯ ನೇರ ನಗದು ವರ್ಗಾವಣೆ ಆಗಲಿದೆ ಎನ್ನುತ್ತಾರೆ ಅಧಿಕಾರಿಗಳು. ಇದುವರೆಗೂ ಹಣ ಬಾರದೇ ಇರುವ ಎಷ್ಟೋ ಜನರು ಪೋಸ್ಟ್ ಆಫೀಸ್ ಬ್ಯಾಂಕ್ ನಲ್ಲಿ ಖಾತೆ ತೆರೆದ ಎರಡೇ ದಿನಗಳಲ್ಲಿ ಹಣ ಬಂದಿರುವ ಉದಾಹರಣೆಗಳಿವೆ, ಹಣ ಬರದಿರುವ ಎಷ್ಟೋ ಫಲಾನುಭವಿಗಳ ಬ್ಯಾಂಕಿಂಗ್ ಕೆವೈಸಿನಲ್ಲಿ ಸಮಸ್ಯೆ ಇರುವ ಕಾರಣ DBT ವರ್ಗಾವಣೆ ಕಷ್ಟಕರವಾಗಿದೆ, ಹಾಗಾಗಿ ಇದುವರೆಗೂ ಒಂದು ಕಂತಿನ ಹಣ ಬಂದಿಲ್ಲ ಎನ್ನುವರು ಇದೊಂದು ಪ್ರಯತ್ನ ಮಾಡಿ ನೋಡಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ