5G Mobiles – ಅತೀ ಕಮ್ಮಿ ಬೆಲೆಯಲ್ಲಿ ಸಿಗುವ ಟಾಪ್ 5G ಸ್ಮಾರ್ಟ್ ಫೋನ್ಸ್

best 5G smartphones with lowest price

ಸ್ಮಾರ್ಟ್‌ಫೋನ್‌ಗಳು ಸುಧಾರಿತ ಮೊಬೈಲ್ ಸಾಧನಗಳಾಗಿವೆ, ಅದು 4G, 5G ಇಂಟರ್ನೆಟ್ ಸಂಪರ್ಕ, ಮಲ್ಟಿಮೀಡಿಯಾ ಸಾಮರ್ಥ್ಯಗಳು(multimedia capacity) ಮತ್ತು ಹಲವಾರು ಅಪ್ಲಿಕೇಶನ್‌ಗಳಂತಹ ವಿವಿಧ ವೈಶಿಷ್ಟ್ಯಗಳೊಂದಿಗೆ ಫೋನ್ ಗಳು ತನ್ನ ಕಾರ್ಯವನ್ನು ನಡೆಸುತ್ತದೆ. ಸಾಮಾನ್ಯವಾಗಿ ಬಳಕೆದಾರರ ಬಳಕೆಗಾಗಿ ಟಚ್‌ಸ್ಕ್ರೀನ್‌ಗಳನ್ನು(Touchscreen) ಹೊಂದಿರುತ್ತವೆ, ಬ್ರೌಸಿಂಗ್, ಗೇಮಿಂಗ್ ಮತ್ತು ಸಾಮಾಜಿಕ ಮಾಧ್ಯಮದಂತಹ ಕಾರ್ಯಗಳನ್ನು ಸಕ್ರಿಯಗೊಳಿಸಿಕೊಂಡಿರುತ್ತದೆ. ಸ್ಮಾರ್ಟ್‌ಫೋನ್‌ಗಳು ಕ್ಯಾಮೆರಾಗಳು, ಜಿಪಿಎಸ್ (GPS) ಮತ್ತು ಇತರೆ ಸಂವೇದಕಗಳನ್ನು ಸಹ ಹೊಂದಿರುತ್ತವೆ. ಸ್ಮಾರ್ಟ್ ಫೋನ್ ಗಳು Android ಮತ್ತು iOS ನಂತಹ ಆಪರೇಟಿಂಗ್ ಸಿಸ್ಟಮ್‌ಗಳು/Operating system) ಅಪ್ಲಿಕೇಶನ್ ಅಭಿವೃದ್ಧಿಗೆ ವೇದಿಕೆಯನ್ನು ಕೂಡಾ ಬಳಕೆದಾರರಿಗೆ ಒದಗಿಸುತ್ತವೆ.
ಸ್ಮಾರ್ಟ್‌ಫೋನ್‌ಗಳು ಕರೆಗಳು, ಪಠ್ಯಗಳು ಮತ್ತು ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳ ಮೂಲಕ ಬಳಕೆದಾರರಿಗೆ ಸಂವಹನವನ್ನು ಸುಲಭಗೊಳಿಸುತ್ತದೆ, ಜಾಗತಿಕವಾಗಿ ಜನರನ್ನು ಸಂಪರ್ಕಿಸುತ್ತದೆ. ಮತ್ತು ಸುಧಾರಿತ ಕ್ಯಾಮೆರಾಗಳು ಮತ್ತು ಎಡಿಟಿಂಗ್ ಪರಿಕರಗಳು ಕ್ಷಣಗಳನ್ನು ಸೆರೆಹಿಡಿಯಲು ಸ್ಮಾರ್ಟ್‌ಫೋನ್‌ಗಳನ್ನು ಶಕ್ತಿಯುತ ಸಾಧನಗಳಾಗಿ ಪರಿವರ್ತಿಸುತ್ತವೆ. GPS ಮತ್ತು ಮ್ಯಾಪಿಂಗ್ ಅಪ್ಲಿಕೇಶನ್‌ಗಳು ನ್ಯಾವಿಗೇಷನ್‌ನಲ್ಲಿ ಸಹಾಯ ಮಾಡುತ್ತವೆ, ಪ್ರಯಾಣಿಸಲು, ಸ್ಥಳಗಳನ್ನು ಹುಡುಕಲು ಮತ್ತು ಮಾರ್ಗಗಳನ್ನು ಯೋಜಿಸಲು ಸುಲಭಗೊಳಿಸುತ್ತದೆ. ಹೀಗೆ ಸ್ಮಾರ್ಟ್ ಫೋನ್ ಪ್ರತಿಯೊಬ್ಬರ ದೈನಂದಿನ ಜೀವನದಲ್ಲಿ ತನ್ನ ಪ್ರಾಮುಖ್ಯತೆಯನ್ನು ಹೆಚ್ಚಿಗೆ ಮಾಡಿಕೊಂಡಿದೆ ಎನ್ನ ಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆದರೆ ಇದೀಗ ಬಜೆಟ್ ಸ್ನೇಹಿ 5G ಸ್ಮಾರ್ಟ್‌ ಫೋನ್‌ಗಳು ವಿವಿಧ ಫೀಚರ್ ಗಳೊಂದಿಗೆ ಕೈಗೆಟುಕುವ ಆಯ್ಕೆಗಳಲ್ಲಿ ಲಭ್ಯವಾಗುತ್ತಿವೆ. Redmi, samsung, Realme, Lava blaze, Nokia ನಂತಹ ಜನಪ್ರಿಯ ಬ್ರ್ಯಾಂಡ್‌ಗಳು ಉತ್ತಮ ಕಾರ್ಯಕ್ಷಮತೆ, ಕ್ಯಾಮರಾ ಸಾಮರ್ಥ್ಯಗಳು ಮತ್ತು ಬ್ಯಾಟರಿ ಬಾಳಿಕೆಗಳನ್ನು ನೀಡುತ್ತವೆ. ಅಗತ್ಯ ವೈಶಿಷ್ಟ್ಯಗಳಲ್ಲಿ ರಾಜಿ ಮಾಡಿಕೊಳ್ಳದೆ ಸ್ಮಾರ್ಟ್ ಹೂಡಿಕೆಗಾಗಿ ಈ ಆಯ್ಕೆಗಳನ್ನು ಯೋಚನೆ ಮಾಡದೆ ಆಯ್ಕೆ ಮಾಡಿಕೊಳ್ಳಬಹುದು. ಬನ್ನಿ ಹಾಗಾದರೆ ಯಾವ 5G ಫೋನ್ ಎಷ್ಟು ಬಜೆಟ್ ಅಲ್ಲಿ ಕೊಳ್ಳಬಹುದು ಎಂದು ತಿಳಿಯೋಣ.

ಲಾವಾ ಬ್ಲೇಜ್ 5g (Lava Blaze 5G)

Lava Blaze 5G

ಲಾವಾ ಬ್ಲೇಜ್ 5g ಮೀಡಿಯಾಟೆಕ್ ಡೈಮೆನ್ಸಿಟಿ (mediateck dimensity) 700 ಪ್ರೊಸೆಸರ್‌ನಿಂದ ಚಾಲಿತವಾಗಿರುತ್ತದೆ. 5000mAh ಬ್ಯಾಟರಿ (battery) ಹಾಗೂ 3.5 mm ಆಡಿಯೋ (Audio) ಜಾಕ್‌ನೊಂದಿಗೆ ಬರುತ್ತದೆ ಮತ್ತು ಲಾವಾ ಬ್ಲೇಜ್ 5g ಫೋನ್‌ನ ಬೆಲೆ 11,999 ರೂ ಆಗಿರುತ್ತದೆ.

ನೋಕಿಯಾ G42 5g (Nokia G42 5g) ಸ್ಮಾರ್ಟ್‌ ಫೋನ್‌:

nokia G42 5G smartphone

ಸ್ನಾಪ್‌ಡ್ರಾಗನ್(snapdragon) 480+ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಈ ಫೋನ್‌ ಕೂಡಾ 5000mAh ಬ್ಯಾಟರಿ (battery)ಹೊಂದಿದ್ದು, ಇದು 3.5 mm ಆಡಿಯೋ (Audio)ಜಾಕ್‌ನೊಂದಿಗೆ ಲಭ್ಯವಿದೆ. ಮತ್ತು ನೋಕಿಯಾ G42 5g (Nokia G42 5g)ಸ್ಮಾರ್ಟ್‌ ಫೋನ್‌ಬೆಲೆ 12,999 ರೂ ಆಗಿರುತ್ತದೆ.

ಟೆಕ್ನೋ ಪೋವಾ 5 ಪ್ರೋ(Tecno pova 5pro) ಸ್ಮಾರ್ಟ್ ಫೋನ್ :techno pova 5pro

 

ಮೀಡಿಯಾಟೆಕ್ ಡೈಮೆನ್ಸಿಟಿ (Mediateck dinensity)6080 ಚಿಪ್‌ಸೆಟ್‌ನಿಂದ ಚಾಲಿತವಾಗುತ್ತದೆ. ಮತ್ತು ಈ ಸ್ಮಾರ್ಟ್ ಫೋನ್ ಫೋನ್ 5000mAh ಬ್ಯಾಟರಿಯೊಂದಿಗೆ(battery) 3.5mm ಹೆಡ್‌ಫೋನ್ ಜಾಕ್‌ನೊಂದಿಗೆ ಲಭ್ಯವಾಗುತ್ತದೆ. ಮತ್ತು ಟೆಕ್ನೋ ಪೋವಾ 5 ಪ್ರೋ (Tecno pova 5pro) ಸ್ಮಾರ್ಟ್‌ಫೋನ್ 14,999 ರೂಪಾಯಿಗೆ ಸಿಗುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ರೇಡ್ಮಿ ನೋಟ್ 11T 5G (Redmi note 11T 5g):

redme 11t

ಸ್ಮಾರ್ಟ್ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ (mediateck dimensity) 810 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಈ ಫೋನ್ ಕೂಡಾ 5000mAh ಬ್ಯಾಟರಿ (battery)ಹಾಗೂ 3.5 mm ಹೆಡ್‌ಫೋನ್(headphone) ಜಾಕ್‌ನೊಂದಿಗೆ ಗ್ರಾಹಕರಿಗೆ ಲಭ್ಯವಾಗುತ್ತದೆ. ರೇಡ್ಮಿ ನೋಟ್ 11T 5G (Redmi note 11T 5g) ಫೋನ್‌ನ ಬೆಲೆ 17,999 ರೂಪಾಯಿ ಆಗಿರುತ್ತದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

5ರಿಯಲ್ ಮಿ ನರ್ಝೋ 60 5g (Realme narzo 60 5G )

REAL ME NARZO 60

ಈ ಸ್ಮಾರ್ಟ್ ಫೋನ್ 6.4 ಇಂಚಿನ AMOLED ಡಿಸ್‌ಪ್ಲೇ (display) ಹೊಂದಿದೆ. ಅದರ ಜೊತೆಗೆ 5000mAh ಬ್ಯಾಟರಿ (battery)ಹಾಗೂ 3.5mm ಹೆಡ್‌ಫೋನ್ (Headphone) ಜಾಕ್‌ನೊಂದಿಗೆ ಕೂಡಾ ಲಭ್ಯವಾಗುತ್ತದೆ. ರಿಯಲ್ ಮಿ ನರ್ಝೋ 60 5g (Realme narzo 60 5G ) ಸ್ಮಾರ್ಟ್ ಫೋನ್ ನ ಬೆಲೆ ಸುಮಾರು 17,999 ರೂಪಾಯಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A14 5g (Samsung galaxy A14 5G) :
samsung galaxy A14 5g

ಸ್ಮಾರ್ಟ್ ಫೋನ್ 6.6 ಇಂಚಿನ FHD+ ಸೂಪರ್ LCD ಡಿಸ್‌ಪ್ಲೇ (display) ಹೊಂದಿದೆ. ಅದರ ಜೊತೆ ಈ ಫೋನ್ 5000mAh ಬ್ಯಾಟರಿ (battery)ಹೊಂದಿದ್ದು, ಇದು 3.5 mm ಆಡಿಯೋ ಜಾಕ್‌ನೊಂದಿಗೆ ಬರುತ್ತದೆ. ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ A14 5g (Samsung galaxy A14 5G) ಸ್ಮಾರ್ಟ್ ಫೋನ್ ಬೆಲೆ 18,999 ರೂಪಾಯಿ. ಆಗಿರುತ್ತದೆ.

ನೀವೂ ಕೂಡಾ ಈ ಮೇಲಿನ ಮಾಹಿತಿಯನ್ನು ತಿಳಿದುಕೊಂಡು ಉತ್ತಮ ಬೆಲೆಯಲ್ಲಿ ಲಭ್ಯವಿರುವ ನಿಮ್ಮ ನೆಚ್ಚಿನ ಜನಪ್ರಿಯ 5g ಬ್ರಾಂಡ್ ನ ಸ್ಮಾರ್ಟ್ ಫೋನ್ ಅನ್ನು ಖರೀದಿಸಿ ನಿಮ್ಮದಾಗಿಸಿಕೊಳ್ಳಿ. ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು

ಈ ಸ್ಮಾರ್ಟ್‌ಫೋನ್‌ನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!