ಕರ್ನಾಟಕ ಸರ್ಕಾರದ (State Governament) ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು (Gruhalakshmi Yojane) ಪ್ರತಿ ಮನೆಯ ಯಜಮಾನಿಗೆ ತಲುಪಿಸಲು ಸರ್ಕಾರ ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪೆಂಡಿಂಗ್ (Pending Amount) ಉಳಿದಿರುವ ಮೂರು ತಿಂಗಳ ಹಣವನ್ನು ತಲುಪಿಸಲು ಗ್ರಾಮ ಅದಾಲತ್ ಜೊತೆಗೆ ಅನೇಕ ಯೋಜನೆಗಳನ್ನು ಸಹಿತ ಹಾಕಿಕೊಳ್ಳುತ್ತಿದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 3 ಕಂತಿನ ಒಟ್ಟು ಆರು ಸಾವಿರ ರೂಪಾಯಿ ಕೋಟ್ಯಾಂತರ ಮಹಿಳೆಯರಿಗೆ ಜಮಾ ಆಗಿದೆ.ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಈ 26 ಜಿಲ್ಲೆಗಳಿಗೆ ಮೂರನೇ ಕಂತಿನ ಹಣ ಬಿಡುಗಡೆ!
ಈಗಾಗಲೇ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ (Bank Account) ಮೂರನೇ ಕಂತಿನ ಹಣ ಜಮಾ ಆಗುತ್ತದೆ, ಈಗಾಗಲೇ ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಮಂಡ್ಯ ಮತ್ತು ಮೈಸೂರು , ಎರಡನೇ ಹಂತವಾಗಿ,ಬಿಜಾಪುರ,ಬಾಗಲಕೋಟೆ,ಹಾವೇರಿ, ಗದಗ,ಧಾರವಾಡ,,ಬೆಳಗಾವಿ,ಬಳ್ಳಾರಿ,ಬೀದರ,ಕಲಬುರಗಿ ಕೊಪ್ಪಳ,ರಾಯಚೂರು, ವಿಜಯನಗರ,ಯಾದಗಿರಿ,ಮೈಸೂರು,ಮಂಡ್ಯ, ಕೊಡಗು,ಚಿಕ್ಕಮಗಳೂರು,ಶಿವಮೊಗ್ಗ ತುಮಕೂರು,ಹಾಸನ,ಚಾಮರಾಜನಗರ, ಚಿತ್ರದುರ್ಗ, ರಾಮನಗರ, ದಾವಣಗೆರೆ, ಮೂರನೇ ಕಂತಿನ ಹಣ ಜಮಾ (Money Transferred) ಆಗುತ್ತಿದೆ. ಇನ್ನು ಮುಂದಿನ ತಿಂಗಳಿಂದ ಪ್ರತಿ ತಿಂಗಳು 15ರಿಂದ 20ನೇ ತಾರೀಕಿನೊಳಗೆ ಎಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ರೂ.2000 ಜಮಾ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
3 ತಿಂಗಳಿಂದ ಬಾಕಿ ಇದ್ದರೆ 6 ಸಾವಿರ ರೂ. ಖಾತೆಗೆ ಬರುತ್ತೆ.
ಇನ್ನೂ ಕೆಲ ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ ಎಂಬ ಗೊಂದಲದಲ್ಲಿದ್ದಾರೆ. ಯಾವ ಕಾರಣಕ್ಕಾಗಿ ಹಣ ಬಂದಿಲ್ಲ ಎನ್ನುವ ಗೊಂದಲದಲ್ಲಿರುವ ಇವರಿಗೆ ಸುದ್ದಿಗೋಷ್ಠಿಯ ಮುಖಾಂತರ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ.ಆಗಸ್ಟ್ 15 ರೊಳಗೆ ನೋಂದಣಿ ಮಾಡಿಕೊಂಡವರಿಗೆ ಇದುವರೆಗೆ ದುಡ್ಡು ಬಾರದೇ ಇದ್ರೆ, ಒಟ್ಟಿಗೆ ಮೂರು ತಿಂಗಳ ಹಣ ಹಾಕಲಾಗುತ್ತದೆ. ಇದುವರೆಗೆ ಹಣ ಬಾರದೇ ಇದ್ರೂ ಪೂರ್ಣ ಬಾಕಿ ಹಣ ಹಾಕಲಾಗುವುದು ಎಂದರು. ಮುಂದಿನ 15 ದಿನಗಳೊಳಗೆ ಎಲ್ಲಾ ಫಲಾನುಭವಿಗಳಿಗೆ ಹಣ ಹೋಗುವಂತೆ ನೋಡಿಕೊಳ್ಳಲಾಗುವುದು ಎಂದರು. ಪೆಂಡಿಂಗ್ (pending amount) ಇರುವ ಹಣವನ್ನು ಕೂಡ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದ್ದು ಮಹಿಳೆಯರು ಒಂದೇ ಒಂದು ತಿಂಗಳು ಕೂಡ ಮಿಸ್ ಆಗದೆ ಪ್ರತಿ ತಿಂಗಳಿನ ಹಣವನ್ನು ಪಡೆದುಕೊಳ್ಳಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ತಿಳಿಸಿದ್ದಾರೆ.
ಹಣ ಬರದೆ ಇದ್ದವರು ಏನು ಮಾಡಬೇಕು..?
ಗೃಹಲಕ್ಷ್ಮಿ ಯೋಜನೆಯಡಿ 7.9 ಲಕ್ಷ ಮಹಿಳೆಯರಿಗೆ ಹಣ ಪಾವತಿ ಬಾಕಿ ಇದೆ. ತಾಂತ್ರಿಕ ಸಮಸ್ಯೆ ಸರಿಪಡಿಸಿ ಆಯಾ ಫಲಾನುಭವಿಗಳ ಖಾತೆಗೆ ಬಾಕಿ ತಿಂಗಳ ಮೊತ್ತವು ಸೇರಿಸಿ ಇನ್ನು 15 ದಿನಗಳೊಳಗೆ ಸಹಾಯಧನ ಪಾವತಿ ಮಾಡಲಾಗುತ್ತದೆ. ಬಹುತೇಕರ ಆಧಾರ್ ಜೋಡಣೆ ಇಲ್ಲವೇ ಬ್ಯಾಂಕ್ ಖಾತೆಯ ಗೊಂದಲ ಆಗಿದೆ. ಅಂತವರು ಈ ಹಿಂದೆ ನೊಂದಣಿ ಮಾಡಿಸಿಕೊಂಡಿದ್ದ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ ಗಳಿಗೆ ತೆರಳಿ ಸಮಸ್ಯೆಯನ್ನು ವಿವರಿಸಬೇಕು. ಅದಕ್ಕಾಗಿ ಆಧಾರ್ ಕಾರ್ಡ್ ನೀಡಿ ಜೋಡಣೆ ಆಗಿದೆಯೋ ಇಲ್ಲವೇ ಖಚಿತಪಡಿಸಿಕೊಂಡು ಸರಿಪಡಿಸಿಕೊಳ್ಳಬೇಕು.
ಮಹಿಳೆಯರ ಖಾತೆಗೆ ಹಣ ಸಂದಾಯವಾಗಲು ಗ್ರಾಮ ಅದಾಲತ್ (gram Adalat) ನಡೆಸಲು ಕೂಡ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಯಾವುದೇ ಕುಟುಂಬದ ಮಹಿಳೆ ಗೃಹಲಕ್ಷ್ಮಿ ಯೋಜನೆಯ (Gruhalakshmi Yojane) ಹಣ ಪಡೆಯಲು ಸಾಧ್ಯವಾಗದೆ ಇದ್ದಲ್ಲಿ, ಅಂತವರನ್ನು ಗುರುತಿಸಿ ಅವರ ಹೆಸರುಗಳ ಲಿಸ್ಟ್ ಸರ್ಕಾರಕ್ಕೆ ನೀಡಬೇಕು ಹಾಗೂ ಅವರ ಖಾತೆಗೆ ಹಣ ವರ್ಗಾವಣೆ ಆಗಲೂ ಬೇಕಾಗಿರುವ ಎಲ್ಲಾ ಕೆಲಸಗಳನ್ನು ಮಾಡಬೇಕು ಎಂದು ಸರ್ಕಾರ ಗ್ರಾಮ ಪಂಚಾಯತ್ (gram Panchayat) ಸಿಬ್ಬಂದಿಗಳಿಗೆ ಆದೇಶ ನೀಡಿದೆ.
ಅಂಚೆ ಕಚೇರಿ ಸಹಾಯ ಪಡೆದುಕೊಳ್ಳಿ..! India Post Payment Bank
ದೇಶಾದ್ಯಂತದ ಸುಮಾರು ಶೇ.77 ಗ್ರಾಮೀಣ ಖಾತೆದಾರರಿಗೆ ಮನೆಯಲ್ಲಿ ಕುಳಿತು ಬ್ಯಾಂಕಿನಿ೦ದ ಹಣವನ್ನು ಹಿಂಪಡೆಯುವ ಅಥವಾ ಜಮಾ ಮಾಡುವ ಅನುಕೂಲವಿದೆ. ಅಂಚೆ ಉಳಿತಾಯ ಖಾತೆಯನ್ನು ಕೇವಲ 5 ನಿಮಿಷದಲ್ಲಿ ತೆರೆಯಬಹುದಾಗಿದೆ. ಕರ್ನಾಟಕದಲ್ಲಿ ಐಪಿಪಿಬಿ 33 ಶಾಖೆಗಳಿವೆ. ಐಪಿಪಿಬಿ ಖಾತೆ ತೆರೆದರೆ ಶೀಘ್ರವೇ ಗೃಹಲಕ್ಷ್ಮಿ ಯೋಜನೆಯ ನೇರ ನಗದು ವರ್ಗಾವಣೆ ಆಗಲಿದೆ ಎನ್ನುತ್ತಾರೆ ಅಧಿಕಾರಿಗಳು. ಇದುವರೆಗೂ ಹಣ ಬಾರದೇ ಇರುವ ಎಷ್ಟೋ ಜನರು ಪೋಸ್ಟ್ ಆಫೀಸ್ ಬ್ಯಾಂಕ್ ನಲ್ಲಿ ಖಾತೆ ತೆರೆದ ಎರಡೇ ದಿನಗಳಲ್ಲಿ ಹಣ ಬಂದಿರುವ ಉದಾಹರಣೆಗಳಿವೆ, ಹಣ ಬರದಿರುವ ಎಷ್ಟೋ ಫಲಾನುಭವಿಗಳ ಬ್ಯಾಂಕಿಂಗ್ ಕೆವೈಸಿನಲ್ಲಿ ಸಮಸ್ಯೆ ಇರುವ ಕಾರಣ DBT ವರ್ಗಾವಣೆ ಕಷ್ಟಕರವಾಗಿದೆ, ಹಾಗಾಗಿ ಇದುವರೆಗೂ ಒಂದು ಕಂತಿನ ಹಣ ಬಂದಿಲ್ಲ ಎನ್ನುವರು ಇದೊಂದು ಪ್ರಯತ್ನ ಮಾಡಿ ನೋಡಿ.
ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಅಂತ ಈ ರೀತಿ ಪರಿಶೀಲಿಸಿಕೊಳ್ಳಿ
ಸರ್ಕಾರ ಈಗಾಗಲೇ ತಿಳಿಸಿರುವಂತೆ ಪ್ರತಿ ತಿಂಗಳು 15ರಿಂದ 20ನೇ ತಾರೀಕಿನ ಒಳಗೆ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ, ಆ ಸಂದರ್ಭದಲ್ಲಿ ನೀವು ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯನ್ನು (Check The Bank Account) ಪರಿಶೀಲಿಸಿಕೊಳ್ಳಬಹುದು.
ಹಲವು ಬ್ಯಾಂಕ್ ಖಾತೆಗಳು ನಿಮ್ಮ ಹೆಸರಲ್ಲಿ ಇದ್ದಾಗ ಯಾವ ಖಾತೆಗೆ ಜಮೆ ಆಗಿದೆ ಅಂತ ನಿಮಗೆ ಗೊತ್ತಾಗುವುದಿಲ್ಲ ಸಂದರ್ಭದಲ್ಲಿ ನೀವು ಡಿ ಬಿ ಟಿ ಆಪ್ ಮೂಲಕ ಈ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಹೌದು, ಡಿಬಿಟಿ ಆಪ್ ನಲ್ಲಿ ಈಗ ಗೃಹಲಕ್ಷ್ಮಿ ಹಣ ಅಪ್ಡೇಟ್ ಆಗುತ್ತಿದೆ. ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ನಂಗೂ ಇನ್ನೂ ಗೃಹ ಲಕ್ಷ್ಮಿ ಹಣ ಬಂದಿಲ್ಲ
Sir namdu post office ge onde sari bandidu aste amele 3 months du bandilla
ನಾವು ಗೃಹಲಕ್ಷ್ಮಿ ಹಣ ಬಂದಿಲ್ಲ
Hi my name is channamma
I have a gruhalakshmi account.
I got one time 2000 amount
Then I cont get 2 month bkn