ಕನ್ನಡದ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10(BigBoss season 10) 58ನೇ ದಿನದಂದು ಬಿಗ್ ಬಾಸ್ ಮನೆಯ ಜನರಿಗೆ ಟಾಸ್ಕ್ ಒಂದನ್ನು ನೀಡಿದರು. ಅದರಲ್ಲಿ ಬಿಗ್ ಬಾಸ್ ಮನೆಯು, ಬಿಗ್ ಬಾಸ್ ಲೋಕವಾಗಿ ಮಾರ್ಪಾಡಾಗಿತ್ತು. ಅದರಲ್ಲಿ ರಾಕ್ಷಸರು ಹಾಗೂ ಗಂಧರ್ವರು ಎಂದು ಎರಡು ಗುಂಪುಗಳನ್ನಾಗಿ ಮಾಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸಂಗೀತ ಹಾಗೂ ವರ್ತೂರ್ ನಡುವೆ ಜಗಳ :
ಸಂಗೀತ ಟೀಂ ನವರು ರಾಕ್ಷಸರಾಗಿದ್ದರು, ವರ್ತೂರ್(Varthur santhosh) ಅವರು ಗಂಧರ್ವರಾಗಿದ್ದರು. ವೈಯಕ್ತಿಕ ವಸ್ತುಗಳನ್ನು ರಾಕ್ಷಸರು ಹಾಳು ಮಾಡುತಿದ್ದಾರೆ ಎಂದು ವರ್ತೂರ್ ಅವರು ಸಂಗೀತನೋಡನೆ ಮಾತನಾಡಿದರು. ನಾನು ಈ ಆಟದಿಂದ ಹೊರ ಬಂದಿದ್ದೇನೆ, ವೈಯಕ್ತಿಕ ವಸ್ತುಗಳನ್ನು ಹಾಳು ಮಾಡುವಂತಿಲ್ಲ, ಅದಕ್ಕೆ ಸಂಗೀತ ಅವರು ನಾನು ಕ್ಯಾರೆಕ್ಟರ್ ಇಂದ ಹೊರಗೆ ಬರುವುದಿಲ್ಲ ನಾನು ಆಟ ಆಡುತ್ತೇನೆ ಎಂದು ಹೇಳಿದರು. ನೀವು ಹೊರಗಡೆ ಬರುವುದೇನು ಬೇಕಿಲ್ಲ ನಿಮ್ಮ ಕ್ಯಾರೆಕ್ಟರ್ ಇದೆ ಎಂದು ವರ್ತೂರ್ ಅವರು ಹೇಳಿದ್ದಕ್ಕೆ, ಸಂಗೀತ ಕೋಪಗೊಂಡು ನನ್ನ ಕ್ಯಾರೆಕ್ಟರ್ ಬಗ್ಗೆ ಏಕೆ ಮಾತನಾಡುತ್ತಿದ್ದೀರಾ ಎಂದು ಜಗಳ ಆಡಿದರು. ತನಿಷಾ ಅವರು ಕೂಡ ಸಂಗೀತಗೆ ಸಾತ್ ನೀಡಿದರು.
ವರ್ತೂರ್ ಸಂತೋಷ್ ಅವರು, ತುಕಾಲಿ ಸಂತೋಷ ಅವರೊಂದಿಗೆ ಮಾತನಾಡುತ್ತ : ಯಾವುದಾದರೂ ಒಂದು ಸ್ಟೇಟ್ಮೆಂಟ್ ಅನ್ನು ಹಿಡಿದು ಅದನ್ನೇ ಪದೇ ಪದೇ ಸಂಗೀತ ಹೇಳಿ ದೊಡ್ಡದು ಮಾಡುತ್ತಾರೆ ಎಂದು ಹೇಳುತ್ತಿದ್ದರು.
ಸ್ನೇಹಿತ್ ಗೆ ಕ್ಯಾಪ್ಟನ್ ಪಟ್ಟ ಒಂದು ಭಿಕ್ಷೆ :
ಸಂಗೀತ ಅವರು ಗಂಧರ್ವರ ಮೇಲೆ ನೀಡುತ್ತಿದ್ದ ಹಿಂಸೆಯೂ ಅಪರಿತವಾಗುತ್ತಿದೆ ಎಂದು ಸ್ನೇಹಿತ್ ಅವರು ಹೇಳುತ್ತಿದ್ದರು, ಅದಕ್ಕೆ ಸಂಗೀತ ಅವರು ನೀವು ರಾಕ್ಷಸರಿಗೆ ಯಾವುದೇ ರೀತಿಯ ನ್ಯಾಯವನ್ನು ಒದಗಿಸಿಲ್ಲ, ನಿಮಗೆ ಮನೆಯಲ್ಲಿ ಉಳಿದುಕೊಳ್ಳಲು ಹಾಗೂ ಕ್ಯಾಪ್ಟನ್ ಗಿರಿಯನ್ನು ಕೊಟ್ಟಿರುವುದು ಒಂದು ಭಿಕ್ಷೆ. ನಿಮಗೆ ಯಾವುದೇ ರೀತಿಯ ಅಧಿಕಾರ ಇಲ್ಲ, ನಮ್ಮನ್ನು ನಮ್ಮ ಪಾಡಿಗೆ ಆಡಲು ಬಿಡಿ ಎಂದರು. ಪರ್ಸನಲ್ ಮಾತಾಡಬೇಡಿ ಎಂದು ಸ್ನೇಹಿತ್ ಕೂಡ ಕೂಗಾಡಿದರು.
ಅಷ್ಟೇ ಅಲ್ಲದೆ ಬಾವುಟದ ಟಾಸ್ಕ್ ನಲ್ಲಿ ಗಂಧರ್ವರು ಹಾಗೂ ರಾಕ್ಷಸರು ಇಬ್ಬರೂ ಕೂಡ ಮನೆಯ ಮೂಲಭೂತ ಸೌಕರ್ಯಗಳನ್ನು ಹಾಳು ಮಾಡಿದ ಕಾರಣ ಟಾಸ್ಕನ್ನು ರದ್ದು ಮಾಡಲಾಯಿತು. ಬಿಗ್ ಬಾಸ್ ಸ್ನೇಹಿತ ಅವರಿಗೆ ಇಬ್ಬರಲ್ಲಿ ಒಬ್ಬರನ್ನು ವಿನ್ ಮಾಡಲು ಹೇಳಿದಾಗ, ಬಾವುಟಗಳು ರಾಕ್ಷಸರ ಬಡಿಯಲ್ಲಿ ಹೆಚ್ಚಾಗಿದ್ದ ಕಾರಣ ಅವರನ್ನು ವಿನ್ ಎಂದು ಘೋಷಿಸಿದರು. ಅದಕ್ಕೆ ತುಕಾಲಿಯವರು ಸ್ನೇಹಿತ್ ಗೆ : ನೀನು ಅವರಿಗೆ ಹೆದರಿ ವಿನ್ ಎಂದು ಘೋಷಿಸಿದ್ದೆಯಾ ಎಂದು ಹೀಯಳಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ