ಜನರು ಪ್ರಯಾಣ ಮಾಡಲು ಇಂದು ಹೆಚ್ಚಾಗಿ ಸ್ಕೂಟರ್ ( Scooter ) ಗಳನ್ನು ಪರ್ಚೆಸ್ ಮಾಡುತ್ತಾರೆ. ಇದೀಗ ಹೊಸ ಹೊಸ ಫೀಚರ್ಸ್ ನ ಅತ್ಯಾಧುನಿಕ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್(Electric scooter) ಗಳದ್ದೇ ಹವಾ. ಇಂದು ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್(mileage) ನೀಡುವ ಸ್ಕೂಟರ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಆದ್ದರಿಂದ, ನೀವು ಕೂಡ ಇಂಧನ-ಸಮರ್ಥ ಸ್ಕೂಟರ್‌ಗಾಗಿ ಹುಡುಕುತ್ತಿದ್ದಾರೆ.1 ಲಕ್ಷಕ್ಕಿಂತ ಕಡಿಮೆ ಬೆಲೆಯ ಸ್ಕೂಟರ್‌ಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೋಂಡಾ ಆಕ್ಟಿವಾ 6G :
ಹೋಂಡಾ ಆಕ್ಟಿವಾ (Honda Activa) 6G ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡು ಮಾರುಕಟ್ಟೆಗೆ ಬರಲಿದೆ. ಇದರಲ್ಲಿ ಎಲ್ಇಡಿ ಲೈಟ್‌ಗಳಿಂದ ಹಿಡಿದು ಇಂಧನ ಇಂಜೆಕ್ಷನ್ (Fuel injection), ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್‌ಗಳವರೆಗೆ ವೈಶಿಷ್ಟ್ಯಗಳನ್ನು ಪ್ಯಾಕ್ ಗಳನ್ನು ನೀಡಲಾಗಿದೆ. ಹಾಗೆಯೇ 60 ಕಿಮೀ/ಲೀ ಮೈಲೇಜ್ ನೀಡುತ್ತದೆ.
ಇದರ ಬೆಲೆಯು ರೂ. 73,086 (ಎಕ್ಸ್ ಶೋರೂಂ, ದೆಹಲಿ ) ನಿಂದ ಪ್ರಾರಂಭವಾಗಲಿದೆ.
ಸುಜುಕಿ ಅಕ್ಸಿಸ್ 125 :
ಇನ್ನೊಂದು ವಿಶಿಷ್ಟ ಸ್ಕೂಟರ್ ಎಂದರೆ ಸುಜುಕಿ ಆಕ್ಸೆಸ್ 125 (Suzuki Access 125). ಇದು ಒಂದು ಉತ್ತಮ ಮೈಲೇಜ್ ನೀಡುವ ಸ್ಕೂಟರ್ ಆಗಿದೆ. ಇದು ಕಡಿಮೆ ಬೆಲೆಗೆ ದೊರೆಯುವ ಸ್ಕೂಟರ್ ಆಗಿದೆ. ಇದರಲ್ಲಿ ಇರುವ ಮುಖ್ಯ ಫೀಚರ್ಸ್ ಗಳೆಂದರೆ :
ಎಲ್‌ಇಡಿ ಹೆಡ್‌ಲೈಟ್
ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
ಮೊಬೈಲ್ ಚಾರ್ಜಿಂಗ್‌ಗಾಗಿ ಯುಎಸ್‌ಬಿ ಪೋರ್ಟ್
ಉದ್ದವಾದ ಫುಟ್‌ಬೋರ್ಡ್ ಹೊಂದಿದೆ.
64 ಕಿಮೀ/ಲೀ ಮೈಲೇಜ್ ನೀಡುತ್ತದೆ.
ಇನ್ನು ಇದರ ಬೆಲೆಯ ಬಗ್ಗೆ ನೋಡುವುದಾದರೆ, ರೂ. 77,600 (ಎಕ್ಸ್ ಶೋ ರೂಂ) ನಿಂದ ಪ್ರಾರಂಭವಾಗಲಿದೆ.
ಹೀರೋ ಮೆಸ್ಟ್ರೋ ಎಡ್ಜ್ 125 :
ಮತ್ತೊಂದು ವಿಶಿಷ್ಟ ಸ್ಕೂಟರ್ ಎಂದರೆ, Hero Maestro Edge 125 ಇದು ನಾಲ್ಕು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಮುಖ್ಯ ಸ್ಕೂಟರ್ ಗಳೆಂದರೆ :
ಫುಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್
LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್
LED ಟೈಲ್ ಲ್ಯಾಂಪ್
ಮೊಬೈಲ್ ಚಾರ್ಜರ್ ಮತ್ತು ಬೂಟ್ ಲೈಟ್ ಮತ್ತು ಡೈಮಂಡ್-ಕಟ್ ಅಲಾಯ್ ವೀಲ್‌ಗಳನ್ನು ಹೊಂದಿದೆ.
Hero Maestri Edge 125 ಈ ಬೈಕ್ ನ ಎಕ್ಸ್ ಶೋ ರೂಂ ಬೆಲೆಯು ರೂ. 86,256 ರಿಂದ ಪ್ರಾರಂಭವಾಗುತ್ತದೆ. Maestro Edge 125 ಕನೆಕ್ಟೆಡ್ ರೂಪಾಂತರ ಬೇಕೆಂದರೆ ರೂ. 96, 586 ಬೆಲೆಗೆ ದೊರೆಯುತ್ತದೆ. ಇವೆರಡು ಎಕ್ಸ್ ಶೋರೂಂ ಬೆಲೆಗಳಾಗಿವೆ. ಇನ್ನು ಈ ಸ್ಕೂಟರ್ ನ ಮೈಲೇಜ್ ಬಗ್ಗೆ ನೋಡುವುದಾದರೆ ಲೀ.ಗೆ 60 ಕಿ.ಮೀ ಸಿಗುತ್ತದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಟಿವಿಎಸ್ ಜುಪಿಟರ್ 125 :
ಮತ್ತೊಂದು ಹೊಸ ಸ್ಕೂಟರ್ ಎಂದರೆ, ಟಿವಿಎಸ್’ ಜುಪಿಟರ್ (TVS Jupiter 125) ಆಗಿದೆ.
ಈ ಸ್ಕೂಟರ್ ಡಿಜಿಟಲ್ ಅನಲಾಗ್ ಕ್ಲಸ್ಟರ್
LED ಹೆಡ್‌ಲೈಟ್ ಮತ್ತು ಡೈಮಂಡ್-ಕಟ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.
ಈ ಸ್ಕೂಟರ್ ಅನ್ನು ಆಕ್ಟಿವಾಗೆ ಹೋಲಿಸಿದರೆ ಜುಪಿಟರ್ ಸಾಕಷ್ಟು ಪ್ರೀಮಿಯಂ ಆಗಿದೆ. ಹಾಗೆಯೇ ಈ ಸ್ಕೂಟರ್ ಲೀಟರ್ ಗೆ 50km ಮೈಲೇಜ್ ನೀಡುತ್ತದೆ.
TVS ಜುಪಿಟರ್ ಬೆಲೆಯು ರೂ. 82,825 (ಎಕ್ಸ್ ಶೋ ರೂಂ) ನಿಂದ ಪ್ರಾರಂಭವಾಗುತ್ತದೆ.
ಯಮಹಾ ರೇ ZR :
ಈ ಸ್ಕೂಟರ್ Yamaha RayZR ಮೇಲೆ ತಿಳಿಸಿದ ಇತರ ನಾಲ್ಕು ಸ್ಕೂಟರ್‌ಗಳಿಗಿಂತ 98 ಕೆ.ಜಿ ಹಗುರವಾಗಿರುತ್ತದೆ. ಇದರ ಹೈಬ್ರಿಡ್ ಎಂಜಿನ್ ಅನ್ನು ಸ್ಮಾರ್ಟ್ ಮೋಟಾರ್ ಜನರೇಟರ್‌ಗೆ ಕನೆಕ್ಟ್ ಮಾಡಲಾಗಿದೆ. ಈ ಸ್ಕೂಟರ್ ಲೀಟರ್ ಗೆ 68km/l ಮೈಲೇಜ್ ನೀಡುತ್ತದೆ.
ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
LED ಹೆಡ್‌ಲೈಟ್
ಬ್ಲೂಟೂತ್ ಸಂಪರ್ಕವನ್ನು ಒಳಗೊಂಡಿವೆ. ಹಾಗೆಯೇ ಈ ಸ್ಕೂಟರ್ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಮೊದಲನೆಯದು ರೂ. 84,730 ಮತ್ತು ಎರಡನೆಯದು ರೂ. 90,830 (ಎಕ್ಸ್ ಶೋ ರೂಂ, ದೆಹಲಿ) ಆಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.