Electric Scooty – ಎಥರ್ ನ ಮತ್ತೊಂದು ಹೊಸ 450X ಅಪೆಕ್ಸ್ ಎಲೆಕ್ಟ್ರಿಕ್ ಸ್ಕೂಟಿ ಬಿಡುಗಡೆ, ಈಗಲೇ ಬುಕ್ ಮಾಡಿ

Ather 450X Apex e sccoty

ಮಾರುಕಟ್ಟೆಗೆ ಬರಲು ಸಜ್ಜಾದ ಎಥರ್ 450X ಅಪೆಕ್ಸ್ ( Ather 450X Apex ). ಹೌದು, ಇಂದು ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್(electric scooter) ಗಳದ್ದೇ ಹವಾ. ಯಾಕೆಂದರೆ ಇಂದು ಪೆಟ್ರೋಲ್ ಬೆಲೆ ಜಾಸ್ತಿ ಆಗಿದೆ. ಹಾಗಾಗಿ ಜನರು ಪೆಟ್ರೋಲ್ ನ ವಾಹನಗಳನ್ನು ( Petrol Vehicles ) ಖರೀದಿಸುವ ಬದಲು ಎಲೆಕ್ಟ್ರಿಕ್ ಚಾಲಿತ ವಾಹನಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಈ ಸ್ಕೂಟರ್ ಗಳು ಒಲಾ(OLA), ಟಿವಿಎಸ್(TVS), ಹೀರೋ ಹಾಗೂ ಸಿಂಪಲ್ ಎನರ್ಜಿ ಕಂಪನಿ ಸ್ಕೂಟರ್ ಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಎಥರ್ 450X ಅಪೆಕ್ಸ್ (Ather 450X Apex):

ಈಗ ನಿಮಗೊಂದು ಸಿಹಿ ಸುದ್ದಿ ತಿಳಿದು ಬಂದಿದೆ. ಅದೇನೆಂದರೆ, ಬೆಂಗಳೂರು ಮೂಲದ ಎಥರ್ ಎನರ್ಜಿ (Ather Energy) ತನ್ನ 450 ಸರಣಿಯ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವಲ್ಲಿ ಒಂದು ವಿಶಿಷ್ಟತೆಯನ್ನು ಹೊಂದಿದೆ. ಈ ಎಥರ್ ಕಂಪೆನಿಯು ತನ್ನ ಹೊಸ ಎಥರ್ 450X ಅಪೆಕ್ಸ್ (Ather 450X Apex) ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಆ ಸ್ಕೂಟರ್ ವಿಶಿಷ್ಟ ವಿಶೇತೆಗಳನ್ನು ಹೊಂದಿದ್ದು ಜನರನ್ನು ಆಕರ್ಷಿಸಲು ಮುಂದಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

whatss

ಈ ಸ್ಕೂಟರ್ ಬಿಡುಗಡೆ ಆಗುವ ದಿನಾಂಕ ಮತ್ತು ಪ್ರೀ ಬುಕಿಂಗ್ ವಿವರ :

Ather 450X Apex booking

ಎಥೆರ್ ಎನರ್ಜಿ ಕಂಪೆನಿಯು ಬಿಡುಗಡೆ ಮಾಡುವ ಈ ಸ್ಕೂಟರ್‌ಗಳ ವಿತರಣೆಗಳು 2024ರ ಮಾರ್ಚ್ ತಿಂಗಳಿನಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಈ ಕಂಪೆನಿಯು ಪ್ರೀ ಬುಕಿಂಗ್ ವ್ಯವಸ್ಥೆಯನ್ನು ಕೂಡ ತನ್ನ ಗ್ರಾಹಕರಿಗೆ ಕಲ್ಪಿಸಿ ಕೊಟ್ಟಿದೆ. 450X ಅಪೆಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುವ ಗ್ರಾಹಕರು Ather Energy ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ರೂ.2,500 ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಇಂದು ಒಂದು ಸಂತೋಷದ ವಿಷಯ ಆಗಿದೆ.

ಟ್ವಿಟರ್ ಫೀಡ್ ನಲ್ಲಿ ಮಾಹಿತಿ ಹಂಚಿಕೊಂಡ ಎಥೆರ್ ಎನರ್ಜಿ ಕಂಪೆನಿ :

ಈ ಸ್ಕೂಟರ್ ಗಳನ್ನು ತಯಾರು ಮಾಡಲು ಬಹಳ ವಿಶಿಷ್ಟ ಫೀಚರ್ಸ್ ಗಳನ್ನು ಬಳಸಲಾಗಿದೆ. ಹಾಗೆಯೇ ಈ ಕಂಪೆನಿಯ ಸ್ಕೂಟರ್ ಗಳು ಜನರ ಕುತೂಹಲವನ್ನು ಕೆರಳಿಸಿವೆ. ಹಾಗೆಯೇ ಎಥೆರ್ ಎನರ್ಜಿಯ ಟ್ವಿಟರ್ ( Twitter ) ಫೀಡ್‌ನಲ್ಲಿ ಎರಡೂ ಎಥೆರ್ ಸ್ಕೂಟರ್ ಗಳ ಹೋಲಿಕೆ ವಿಡಿಯೋ ಈಗಾಗಲೇ ಬಿಡುಗಡೆಗೊಂಡಿದ್ದು. ಈ ವಿಡಿಯೋ ದಲ್ಲಿ ಕಂಪೆನಿಯು ಬಿಡುಗಡೆ ಮಾಡಿದ ಸ್ಟ್ಯಾಂಡರ್ಡ್ 450X ( Standard 450X ) ಮತ್ತು ಹೊಸ 450X ಅಪೆಕ್ಸ್‌ ( 450X Apex ) ದಕ್ಷತೆ ಮತ್ತು ಕಾರ್ಯಕ್ಷಮತೆಯ ಬಗ್ಗೆ ವಿವರರಿಸಿದೆ. ಜನರು ಈ ಸ್ಕೂಟರ್ ಬಗ್ಗೆ ಉತ್ತಮ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಎಥೆರ್ 450X ಅಪೆಕ್ಸ್ ಸ್ಕೂಟರ್ ನ ಫೀಚರ್ಸ್ ಹೀಗಿದೆ :

ಈ ಸ್ಕೂಟರ್ ನಲ್ಲಿ ವ್ರ್ಯಾಪ್+ ಎಂದು ಕರೆಯಲ್ಪಡುವ ಒಂದು ಅದ್ಭುತ ವೈಶಿಷ್ಟ್ಯವಾದ ಫೀಚರ್ಸ್ ಅನ್ನು ನೀಡಲಾಗಿದೆ.
ಹಾಗೆಯೇ ಈ ಸ್ಕೂಟರ್ ನಲ್ಲಿ ಪ್ರಸ್ತುತ ಸುತ್ತುವ ಮೋಡ್ ಅನ್ನು ನೀಡಲಾಗಿದ್ದು, ಅದರ ಜೊತೆಗೆ ರೈಡಿಂಗ್ ಮೋಡ್ ಅನ್ನು ಕೂಡ ನೀಡಿದೆ. ಸದ್ಯಕ್ಕೆ ಇಷ್ಟು ಫೀಚರ್ಸ್ ಗಳ ಬಗ್ಗೆ ಕಂಪೆನಿಯು ತಿಳಿಸಿದೆ.

ಈ ಎರಡು ಎಲೆಕ್ಟ್ರಿಕ್ ಸ್ಕೂಟರ್ ನ ಬ್ಯಾಟರಿ ಪ್ಯಾಕ್ ಅಪ್ ( Battery Pack Up ) ಹೀಗಿದೆ :

ಸ್ಟ್ಯಾಂಡರ್ಡ್ 450X ಎಲೆಕ್ಟ್ರಿಕ್ ಸ್ಕೂಟರ್ 2.9 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 115 km ರೇಂಜ್ ನೀಡುತ್ತದೆ. 90 kmph ಟಾಪ್ ಸ್ವೀಡ್ ಅನ್ನು ಹೊಂದಿರುತ್ತದೆ. ಹಾಗೆಯೇ ಎಥೆರ್ 450X ಅಪೆಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು 2.9 kWh ಮತ್ತು 3.7 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಫುಲ್ ಚಾರ್ಜ್ ನಲ್ಲಿ 115 km – 145 km ರೇಂಜ್ ನೀಡಲಿದ್ದು, ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

tel share transformed

ಈ ಎರಡು ಸ್ಕೂಟರ್ ನ ಬೆಲೆಯ ( Price ) ವಿವರ :

ಕಂಪೆನಿಯು ಹೇಳಿದ ಪ್ರಕಾರ ಈ ಸ್ಕೂಟರ್ ಅನ್ನು ದೇಶೀಯ ಮಾರುಕಟ್ಟೆಗೆ ಮೊದಲು ಬಿಡಲಾಗುತ್ತದೆ. ಪ್ರಥಮ ಬಾರಿಗೆ ಕಂಪನಿಯ ಎಂಟ್ರಿ ಲೆವೆಲ್ ಸ್ಟ್ಯಾಂಡರ್ಡ್ 450X ಸ್ಕೂಟರ್ ಅನ್ನು ರೂ.1,29,999 ಎಕ್ಸ್ ಶೋರೂಂ ಬೆಲೆಗೆ ಬಿಡುಗಡೆ ಮಾಡಿತ್ತು.
ಹಾಗೆಯೇ ಎಥೆರ್ 450X ಅಪೆಕ್ಸ್ ಸ್ಕೂಟರ್ ರೂ.1,38,000 ಮತ್ತು ರೂ.1,44,921 ಬೆಲೆಯನ್ನು ಹೊಂದಿದೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!