Loan Scheme – ರಾಜ್ಯದ ಎಲ್ಲಾ ಮಹಿಳೆಯರಿಗೆ ಯಾವುದೇ ಬಡ್ಡಿ ಇಲ್ಲದೆ 3 ಲಕ್ಷ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

loan

Udyogini Loan Scheme: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಕಾರ್ಯನಿರ್ವಹಿಸುವ ರಾಜ್ಯದ ಮಹಿಳಾ ಅಭಿವೃದ್ಧಿ ನಿಗಮ 2023-24ನೇ ಸಾಲಿನ ನಿಗಮದ ವಿವಿಧ ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಮಹತ್ವಕಾಂಕ್ಷಿ ಮಹಿಳಾ ಉದ್ಯಮಿಗಳಿಗೆ Subsidy Loan ನೀಡುವ ಯೋಜನೆಯಾಗಿದೆ. ಈ ಯೋಜನೆಯು ಮಹಿಳೆಯರಿಗೆ ವ್ಯಾಪಾರ ಮಾಡಲು ಹಣಕಾಸಿನ ನೆರವು ನೀಡುವ ಮೂಲಕ ಬಡವರಲ್ಲಿ ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರೇರೇಪಿಸುತ್ತದೆ. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ, ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ

ಉದ್ಯೋಗಿನಿ ಯೋಜನೆ(udyogini scheme) 2023:

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ (KSWDC) ಮಹಿಳೆಯರಿಗೆ ತಮ್ಮ ವ್ಯವಹಾರಗಳಲ್ಲಿ ಸಹಾಯ ಮಾಡುವ ಯೋಜನೆಯನ್ನು ಪ್ರಾರಂಭಿಸಿದೆ. ಇದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಗಳಿಂದ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳ ಮೂಲಕ ವ್ಯಾಪಾರ ಚಟುವಟಿಕೆಗಳ/ ಸಣ್ಣ ಉದ್ದಿಮೆಗಳನ್ನ ಕೈಗೊಳ್ಳಲು ಸಾಲದ ಮೇಲೆ ಸಹಾಯಧನವನ್ನು ಒದಗಿಸುತ್ತದೆ. Private ಬ್ಯಾಂಕ್ ಗಳು,  ಜಿಲ್ಲಾ ಸಹಕಾರಿ ಬ್ಯಾಂಕ್ ಗಳು ಮತ್ತು ಪ್ರದೇಶಿಕ ಗ್ರಾಮೀಣ ಬ್ಯಾಂಕ್ ಗಳು (RRBs) ನಂತಹ ಹಣಕಾಸು ಸಂಸ್ಥೆಯ ಮೂಲಕ ಸಾಲವನ್ನು ತೆಗೆದುಕೊಳ್ಳಬಹುದು.

ಉದ್ಯೋಗಿನಿ ಯೋಜನೆ ವೈಶಿಷ್ಟತೆಗಳು :

ಈ ಯೋಜನೆಯಲ್ಲಿ ಪರಿಶಿಷ್ಟ ಜಾತಿ ( SC ) ಮತ್ತು ಪರಿಶಿಷ್ಟ ಪಂಗಡದ ( ST ) ಫಲಾನುಭವಿಗಳಿಗೆ ಮತ್ತು ಸಾಮಾನ್ಯ ವರ್ಗದವರಿಗೆ ಬೇರೆ ಬೇರೆ ರೀತಿಯ ಸಹಾಯಧನ ಇದೆ. ಅವುಗಳೆಂದರೆ :

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ:
ಆದಾಯ ಮಿತಿ : 2.00 ಲಕ್ಷ ರೂಪಾಯಿಗಳು
ಘಟಕ ವೆಚ್ಚ : ಕನಿಷ್ಟ ರೂ 1.00 ಲಕ್ಷದಿಂದ ಗರಿಷ್ಟ ರೂ. 3.00 ರೂಪಾಯಿಗಳು
ಸಹಾಯಧನ ಶೇ. 50 ರಷ್ಟು

whatss

ಸಾಮಾನ್ಯ ವರ್ಗದ ( OBC ) ಫಲಾನುಭವಿಗಳಿಗೆ :
ಆದಾಯ ಮಿತಿ : 1.50 ಲಕ್ಷ ರೂಪಾಯಿಗಳು
ಘಟಕ ವೆಚ್ಚ : ಗರಿಷ್ಟ ರೂ. 3.00 ಲಕ್ಷ ರೂಪಾಯಿಗಳು
ಸಹಾಯಧನ: ಶೇ.30 ರಷ್ಟು

new subsidy schemes

ಉದ್ಯೋಗಿನಿ ಯೋಜನೆಯಡಿ ಸಾಲಗಳಿಗೆ ಅರ್ಹತೆಯ ಮಾನದಂಡ:

ಸಾಮಾನ್ಯ ಮತ್ತು ವಿಶೇಷ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಕುಟುಂಬದ ಆದಾಯ ರೂ.1,50,000/- ಗಿಂತ ಕಡಿಮೆಯಿರಬೇಕು.
ವಯಸ್ಸಿನ ಮಿತಿ 18 ರಿಂದ 55 ವರ್ಷಗಳ ಮೀರಿರಬಾರದು. ಅರ್ಜಿದಾರರು ಉತ್ತಮ ಕ್ರೆಡಿಟ್ ಸ್ಕೋರ್ ಮತ್ತು ಮರುಪಾವತಿ ಸಾಮರ್ಥ್ಯವನ್ನು ಹೊಂದಿರುವರಾಗಿರ್ಬೇಕು.

ಚೇತನ ಯೋಜನೆ :

ಎರಡನೆಯದಾಗಿ ಚೇತನ ಯೋಜನೆ ಅಡಿಯಲ್ಲಿ ದಮನಿತ ಮಹಿಳೆಯರಿಗೆ ಅವರ ಚಟುವಟಿಕೆಗೆ ಬೇಕಾದ ಆರ್ಥಿಕ ಸಹಾಯವನ್ನು 30,000 ರೂಪಾಯಿಗಳ ಪ್ರೋತ್ಸಾಹಧನ ನೀಡಲಾಗುತ್ತಿದೆ. ಈ ಯೋಜನೆಗೆ ವಯೋಮಿತಿ 18 ವರ್ಷ ಮೇಲ್ಪಟ್ಟಿರಬೇಕು.

ಧನಶ್ರೀ ಯೋಜನೆ :

ಈ ಒಂದು ಯೋಜನೆಗೆ ಮಹಿಳೆಯರಿಗೆ ಸ್ವಯಂ ಉದ್ಯೋಗವನ್ನು ಮಾಡಲು 30,000 ರೂಪಾಯಿಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ. ಹಾಗೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯ ವಯೋಮಿತಿ 18 ರಿಂದ 60 ವರ್ಷಗಳಿರಬೇಕು.

ಧನ ಶ್ರೀ ಯೋಜನೆಯ ಅಧಿಕೃತ ಅಧಿಸೂಚನೆ: Download

ಪುನರ್ವಸತಿ ಯೋಜನೆ

ಹಾಗೆಯೇ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ ವತಿಯಿಂದ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಕೂಡ 30,000 ರೂಪಾಯಿಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ತಿಳಿದುಬಂದಿದೆ

ಯಾವ ಉದ್ಯಮಗಳನ್ನು ಆರಂಭಿಸಲು ಸಾಲ ದೊರೆಯುತ್ತದೆ?:

88 ವಿಧದ ಸಣ್ಣ ಉದ್ಯಮಗಳನ್ನು ಮಾಡಲು ಸಾಲ ದೊರೆಯುತ್ತದೆ ಅವುಗಳಲ್ಲಿ ಪ್ರಮುಖವಾದವುಗಳು ಕೆಳಗಿನಂತಿವೆ :

ನರ್ಸರಿ ತೆರೆಯಲು ,
ಮಸಾಲೆ ಮಾಡಲು,
ಬೆಡ್ ಶೀಟ್ ಮತ್ತು ಹೊದಿಕೆಗಳನ್ನು ತಯಾರಿಸಲು,
ಪಡಿತರ ಅಂಗಡಿ ತೆರೆಯಲು,
ಬಳೆಗಳನ್ನು ಮಾಡಲು, ಕಾಫಿ ಅಥವಾ ಚಹಾ ಮಾಡಲು, ಉಡುಗೊರೆ ಅಂಗಡಿಗಾಗಿ,
ಬ್ಯೂಟಿ ಪಾರ್ಲರ್ ತೆರೆಯಲು,
ಫೋಟೋ ಸ್ಟುಡಿಯೋ
ಗಿರವಿ ಅಂಗಡಿ,
ಪುಸ್ತಕ ಬೈಂಡಿಂಗ್,
ಪ್ಲಾಸ್ಟಿಕ್ ವಸ್ತುಗಳ ಅಂಗಡಿ,
ಐಸ್ ಕ್ರೀಮ್ ಅಂಗಡಿ ತೆರೆಯಲು
ಮಡಿಕೆ ಅಂಗಡಿ,
ಡೈರಿ ಅಥವಾ ಕೋಳಿ ಸಾಕಣೆ,
ಗೃಹೋಪಯೋಗಿ ವಸ್ತುಗಳ ಅಂಗಡಿಗೆ,
ಟೇಲರ್ ಅಂಗಡಿ ,
ಕಬ್ಬಿನ ವ್ಯಾಪಾರಿ,
ಹತ್ತಿ ದಾರವನ್ನು ತಯಾರಿಸಲು,
ಹೂಗಳು ಅಂಗಡಿಗೆ,
ಕೇಟರಿಂಗ್ ಬಿಸಿನೆಸ್ ಮಾಡೋದು,
ಸಾಬೂನು ತಯಾರಿಸುವ ವ್ಯಾಪಾರ,
ಆಹಾರ ಮತ್ತು ಎಣ್ಣೆ ಅಂಗಡಿ ವ್ಯಾಪಾರ,
ಚಹಾ ಟ್ಯಾಪ್ ತೆರೆಯಲು,
ಧೂಪದ್ರವ್ಯವನ್ನು ತಯಾರಿಸಲು,
ಕರಕುಶಲ ವ್ಯಾಪಾರ,
ತೆಂಗಿನಕಾಯಿ ವ್ಯಾಪಾರ,
ಪ್ರಯಾಣ ಸಂಸ್ಥೆ,
ಬೇಕರಿ ತೆರೆಯಲು,
ಸಿಹಿ ಅಂಗಡಿ,
ಪ್ರಯಾಣ ಸಂಸ್ಥೆ,
ನೇಯ್ಗೆ ರೇಷ್ಮೆ,
ಚಪ್ಪಲಿ ಮಾಡುವ ವ್ಯಾಪಾರಕ್ಕಾಗಿ,
STD ಬೂತ್ ತೆರೆಯಲು,
ಮೇಣದ ಬಣ್ಣವನ್ನು ಮಾಡಲು,
ಹಳೆಯ ಪೇಪರ್ ಮಾರ್ಟ್ ಸಂಸ್ಥೆಯನ್ನು ತೆರೆಯಲು,
ವೈದ್ಯಕೀಯ ಪ್ರಯೋಗಾಲಯಕ್ಕಾಗಿ,
ಸ್ಟೇಷನರಿ ಅಂಗಡಿ ತೆರೆಯಲು,
ಪಾಪಡ್ ವ್ಯಾಪಾರ,
ತರಕಾರಿ ಮತ್ತು ಹಣ್ಣಿನ ಅಂಗಡಿ ತೆರೆಯಲು,
ಕಂಪ್ಯೂಟರ್ ಕಲಿಕೆ ಕೇಂದ್ರ,
ಕ್ಯಾಂಟೀನ್ ಅಥವಾ ಧಾಬಾ ತೆರೆಯಲು,
ನ್ಯೂಸ್ ಪೇಪರ್,
ಮ್ಯಾಗಜೀನ್ ಅಂಗಡಿ ತೆರೆಯಲು,
ಪಾನ್ ಮತ್ತು ಸಿಗರೇಟ್,
ಕ್ಲಿನಿಕ್ ತೆರೆಯಲು,
ಹಾಲಿನ ಡೈರಿ ತೆರೆಯಲು,
ಟ್ಯೂಟೋರಿಯಲ್ ವ್ಯವಹಾರ,
ಮಟನ್ ಮತ್ತು ಚಿಕನ್ ಅಂಗಡಿ ತೆರೆಯಲು,
ಹಾಸಿಗೆಗಳ ವ್ಯಾಪಾರ,
ಶಕ್ತಿ ಆಹಾರ ವ್ಯಾಪಾರ,
ಡ್ರೈ ಕ್ಲೀನಿಂಗ್,
ಚಾಪೆ ನೇಯುವ ವ್ಯಾಪಾರ,
ಗ್ರಂಥಾಲಯವನ್ನು ತೆರೆಯಲು ಸಾಲವನ್ನು ನೀಡಲಾಗುತ್ತದೆ.

ಅಗತ್ಯವಾದ ದಾಖಲೆಗಳು :

2  passport size ಫೋಟೋ
ಆಧಾರ್ ಕಾರ್ಡ್(Aadhar Card)
ಜನ್ಮ ಪ್ರಮಾಣ ಪತ್ರ (Birth certificate)
BPL ರೇಷನ್ ಕಾರ್ಡ್ ಪ್ರತಿ
ಆದಾಯ ಪ್ರಮಾಣ ಪತ್ರ
ಜಾತಿ ದೃಢೀಕರಣ ಪ್ರಮಾಣಪತ್ರ
ಬ್ಯಾಂಕ್ ಪಾಸ್ ಬುಕ್ (ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್/ಲಿಂಕ್ ಮಾಡಿಸಿರಬೇಕು.)

tel share transformed

ಅರ್ಜಿ ಎಲ್ಲಿ ಸಲ್ಲಿಸಬೇಕು?

ಉದ್ಯೋಗಿನಿ ಯೋಜನೆಯ ಅಧಿಕೃತ ಅಧಿಸೂಚನೆ : Download

ಆಸಕ್ತ ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಕಂಪ್ಯೂಟರ್ ಸೆಂಟರ್ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಸೂಚನೆ: ಸರ್ಕಾರದ ವಿವೇಚನಾ ಕೋಟಾ ಮತ್ತು ನಿಗಮದ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಫಲಾಪೇಕ್ಷಿಗಳು/ ಅರ್ಜಿದಾರರು ಮಾನ್ಯ ಸಚಿವರು/ಮಾನ್ಯ ಶಾಸಕರು, ಕರ್ನಾಟಕ ಸರ್ಕಾರ/ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರ ಶಿಫಾರಸ್ಸು ಪತ್ರ ಪಡೆದು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ : ನವಂಬರ್ 22, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 22, 2023

ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲೆಯ ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಛೇರಿ ಭೇಟಿ ಮಾಡಿ ಮಾಹಿತಿ ಪಡೆಯಬವುದು.

ಮಹಿಳಾ ಅಭಿವೃದ್ಧಿ ನಿಗಮದ ಕಚೇರಿ ವಿಳಾಸ: 6ನೇ ಮಹಡಿ. ಜಯನಗರ ವಾಣಿಜ್ಯ ಸಂಕೀರ್ಣ. 4ನೇ ಬ್ಲಾಕ್, ಜಯನಗರ, ಬೆಂಗಳೂರು-560011
ದೂರವಾಣಿ ಸಂಖ್ಯೆ: 080-26632973/26542307

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

 

WhatsApp Group Join Now
Telegram Group Join Now

Related Posts

2 thoughts on “Loan Scheme – ರಾಜ್ಯದ ಎಲ್ಲಾ ಮಹಿಳೆಯರಿಗೆ ಯಾವುದೇ ಬಡ್ಡಿ ಇಲ್ಲದೆ 3 ಲಕ್ಷ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Leave a Reply

Your email address will not be published. Required fields are marked *

error: Content is protected !!