10,470/- ರೂ. ಸ್ಕಾಲರ್ಶಿಪ್ ಈಗ ಬಂತು, ಈ ವರ್ಷದ SSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ ಈಗಲೇ ಅರ್ಜಿ ಹಾಕಿ. Apply Online @ssp.karnataka.gov.in

ssp scholarship

SSP SCHOLARSHIP KARNATAKA 2023-24 FRESH/ RENEWAL  | SSP SCHOLARSHIP 2023-24 APPLY ONLINE, HOW TO APPLY ?

ಎಲ್ಲರಿಗೂ ನಮಸ್ಕಾರ. ಇಂದಿನ ವರದಿಯಲ್ಲಿ , ಕರ್ನಾಟಕ SSP ವಿದ್ಯಾರ್ಥಿವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು, ಅರ್ಹತಾ ಮಾನದಂಡಗಳು, ಅಗತ್ಯವಿರುವ ದಾಖಲೆಗಳು ಮತ್ತು ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಏನೆಲ್ಲಾ ಹಂತಗಳಿವೆ ? ನಂತರ ಅರ್ಜಿ ಸಲ್ಲಿಕೆಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ. ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಫಾಲೋ (Follow) ಮಾಡಿ.

SSP ವಿದ್ಯಾರ್ಥಿ ವೇತನ ಜಮಾ ಆಗಿದೆ

ಕಳೆದ ವರ್ಷದ SSP ವೇತನ ಈಗಾಗಲೇ DBT ಮೂಲಕ ಜಮಾ ಆಗಿದ್ದು, ಇನ್ನು ಹಲವು ವಿದ್ಯಾರ್ಥಿಗಳ ಖಾತೆಗೆ ಜಮಾ ಆಗುತ್ತಿದೆ. ಈಗಾಗಲೇ ಸ್ನಾತಕೋತ್ತರ ಪದವಿ ಓದುತ್ತಿರುವ ಕೆಲವು ವಿದ್ಯಾರ್ಥಿಗಳ ಖಾತೆಗೆ ಹಣ ಬಂದಿರುವ ಫೋಟೋ ಗಳನ್ನು ನೀವು ಕೆಳಗೆ ಗಮನಿಸಬಹುದು.

amt

ssp10k

 

ಕರ್ನಾಟಕ ಎಸ್‌ಎಸ್‌ಪಿ ವಿದ್ಯಾರ್ಥಿವೇತನ 2023-2024

ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯವಾಗುವ ಹಿನ್ನೆಲೆಯಲ್ಲಿ ಎಸ್‌ಎಸ್‌ಪಿ (ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್) ಸ್ಕಾಲರ್ಶಿಪ್ ಅನ್ನು ಆರಂಭಿಸಿದೆ. ಈ ಸ್ಕಾಲರ್ಶಿಪ್ ನಿಂದ ಹಲವಾರು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯಲು ಸಹಾಯವಾಗಲಿದೆ. ಅಧ್ಯಯನದಲ್ಲಿ ಸಾಕಷ್ಟು ಬುದ್ಧಿವಂತರಾಗಿರುವ ಆದರೆ ಆರ್ಥಿಕವಾಗಿ ಶಕ್ತರಲ್ಲದ ಕಾರಣದಿಂದಾಗಿ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಒದಗಿಸಲಿವೆ. ಈ ವಿದ್ಯಾರ್ಥಿವೇತನವನ್ನು ಪಡೆಯಲು ವಿದ್ಯಾರ್ಥಿಗಳು ಎಸ್‌ಎಸ್‌ಪಿ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.

SSP ವಿದ್ಯಾರ್ಥಿವೇತನ ಮಂಜೂರಾತಿ ಮಾಡುವ ಇಲಾಖೆಗಳು :

  1. ಸಮಾಜ ಕಲ್ಯಾಣ ಇಲಾಖೆ
  2. ಬುಡಕಟ್ಟು ಕಲ್ಯಾಣ ಇಲಾಖೆ
  3. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
  4. ಕಾರ್ಮಿಕ ಇಲಾಖೆ

ಈ ಯೋಜನೆ ನಿರ್ದಿಷ್ಟವಾಗಿ ಪ.ಜಾ/ಪ.ಪಂ/ಓಬಿಸಿ ಮತ್ತು ಇಬಿ ನಂತಹ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾಗಿದೆ.

whatss

SSP ವಿದ್ಯಾರ್ಥಿವೇತನ ಅರ್ಹತೆಗಳು2022-23:

ಈ ವಿದ್ಯಾರ್ಥಿವೇತನವನ್ನು ಪಡೆಯಲು ಅಭ್ಯರ್ಥಿಗಳು ಆರ್ಥಿಕವಾಗಿ ಹಿಂದುಳಿದ ವರ್ಗದವರಾಗಿರಬೇಕು ಮತ್ತು ಎಸ್‌ಸಿ, ಎಸ್‌ಟಿ, ಒಬಿಸಿ ಅಲ್ಪಸಂಖ್ಯಾತರಾಗಿರಬೇಕು.

ssp

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ
  1.  ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲುಅರ್ಜಿದಾರರು ಹಿಂದುಳಿದ ಸಮುದಾಯದವರಾಗಿರಬೇಕು.
  2. 11 ನೇ ತರಗತಿ ಅಥವಾ ಇನ್ನಾವುದೇ ಕೋರ್ಸ್ ನಲ್ಲಿ ವ್ಯಾಸಂಗ ಮಾಡುತ್ತಿರಬೇಕು.
  3. ಬಾಲಕಿಯರಿಗೆ 30% ಮೀಸಲಾತಿ ಇದೆ.
  4. ಅರ್ಹತಾ ಪರೀಕ್ಷೆಯಲ್ಲಿ, ಅಭ್ಯರ್ಥಿಯು ಕನಿಷ್ಠ 50% ಅಂಕಗಳನ್ನು ಗಳಿಸಬೇಕು.
  5. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು 2 ಲಕ್ಷಕ್ಕಿಂತ ಹೆಚ್ಚಿರಬಾರದು.
  6. ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ

  1. ಅರ್ಜಿದಾರರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.
  2. ಅಭ್ಯರ್ಥಿಯು 1 ನೇ ತರಗತಿಯಿಂದ 10 ನೇ ತರಗತಿಯವರೆಗೆ ಯಾವುದೇ ತರಗತಿಗೆ ಸೇರಿದವರಾಗಿರಬೇಕು.
  3. SSP ಮತ್ತು NSP ಅಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಈ ವಿದ್ಯಾರ್ಥಿವೇತನ ಲಭ್ಯವಿರುತ್ತದೆ.
  4. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 1 ಲಕ್ಷಕ್ಕಿಂತ ಹೆಚ್ಚಿರಬಾರದು.

ಎಸ್‌ಎಸ್‌ಪಿ ವಿದ್ಯಾರ್ಥಿವೇತನಕ್ಕೆ ಸಲ್ಲಿಸಬೇಕಾದ ದಾಖಲೆಗಳು :

ಅರ್ಜಿದಾರರು ಎಸ್‌ಎಸ್‌ಪಿ ವಿದ್ಯಾರ್ಥಿವೇತನ ನಮೂನೆಯೊಂದಿಗೆ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

ಎಸ್‌ಎಸ್‌ಪಿ ಪ್ರೀ ಮೆಟ್ರಿಕ್ ವಿದ್ಯಾರ್ಥಿವೇತನಕ್ಕೆ ಅಗತ್ಯವಿರುವ ದಾಖಲೆಗಳು : (1 ನೇ ತರಗತಿಯಿಂದ 10ನೇ ತರಗತಿವರೆಗೆ )

  1.  ಅಭ್ಯರ್ಥಿಯ SATS ID ಸಂಖ್ಯೆ
  2. ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಕಾರ್ಡ್ ಸಂಖ್ಯೆ
  3. ಮೊಬೈಲ್ ನಂಬರ್ಅ
  4. ಭ್ಯರ್ಥಿಯ ಜಾತಿ ಪ್ರಮಾಣಪತ್ರ
  5. ಕುಟುಂಬದ ಆದಾಯ ಪ್ರಮಾಣಪತ್ರ
  6. ಬ್ಯಾಂಕ್ ಖಾತೆ ವಿವರಗಳು
  7. ಬ್ಯಾಂಕ್ ಖಾತೆಯ ವಿವರಗಳನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾಗಿರುವ ದಾಖಲೆ
  8. NSP ಯ ವಿದ್ಯಾರ್ಥಿವೇತನ ID

ಎಸ್‌ಎಸ್‌ಪಿ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನಕ್ಕೆ ಅಗತ್ಯವಿರುವ ದಾಖಲೆಗಳು : 11ನೇ ತರಗತಿಯಿಂದ ಮುಂದಿನ ವಿದ್ಯಾಭ್ಯಾಸ

tel share transformed

  1. ವಿದ್ಯಾರ್ಥಿಯ ಮೊಬೈಲ್ ಸಂಖ್ಯೆ
  2. ವಿದ್ಯಾರ್ಥಿಗಳ SATS ಸಂಖ್ಯೆ / ಕಾಲೇಜು ನೋಂದಣಿ ಸಂಖ್ಯೆ
  3. ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಸಂಖ್ಯೆ
  4. ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೋರ್ಟಲ್ಲಿನ ದಾಖಲಾತಿ ಸಂಖ್ಯೆ ( ಅಲ್ಪಸಂಖ್ಯಾತಿಯ  ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ ) ಸೂಚನೆ: ಅಲ್ಪಸಂಖ್ಯಾತ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವ ಮೊದಲು ರಾಷ್ಟ್ರೀಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
  5. ವಿದ್ಯಾರ್ಥಿಯ ಹೆಸರಿನಲ್ಲಿರುವ ಆರ್ ಡಿ ಇಂದ ಶುರುವಾಗುವ ಜಾತಿ ಅಥವಾ ಆದಾಯ ಅಥವಾ ಆರ್ಥಿಕವಾಗಿ ದುರ್ಬಲ ವಿಭಾಗದ ( ಬ್ರಾಹ್ಮಣ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ) ಪ್ರಮಾಣ ಪತ್ರಗಳ ಸಂಖ್ಯೆ.
  6. ಇ ದೃಡಿಕರಿಸಿದ ದಾಖಲೆಗಳ ಸಂಖ್ಯೆಗಳು
  7. ಅಂಕಪಟ್ಟಿ
  8. ಶುಲ್ಕ ರಶೀದಿ
  9. ಅಂಗವಿಕಲ ವಿದ್ಯಾರ್ಥಿಯಾಗಿದ್ದಲ್ಲಿ ಭಾರತ ಸರ್ಕಾರದಿಂದ ನೀಡಿರುವ ಅಂಗೈಯಲ್ಲಿ ಅಂಗವಿಕಲ ಕಾರ್ಡ್ ಸಂಖ್ಯೆ

ಕರ್ನಾಟಕ ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಲ್ಕ ರಶೀದಿಯನ್ನು ಇ-ದೃಢೀಕರಣವನ್ನು ಮಾಡಿಸುವ ಅಗತ್ಯವಿರುವುದಿಲ್ಲ.

ಕರ್ನಾಟಕ SSPವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ?

ಕರ್ನಾಟಕ SSPವಿದ್ಯಾರ್ಥಿವೇತನ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಇರಲಿದ್ದು. ಈ ಕೆಳಗಿನ ಹಂತಗಳನ್ನು ಅನುಸರಿಸಿ

ಹಂತ1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ ssp.karnataka.gov.in ಗೆ ಭೇಟಿ ನೀಡಿ.

ಹಂತ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ಖಾತೆಯನ್ನು ರಚಿಸುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಹಂತ 3:ನಿಮ್ಮ ಆಧಾರ್ ಸಂಖ್ಯೆ ಮತ್ತು ನಿಮ್ಮ ಹೆಸರು ಆಧಾರ್ ನಲ್ಲಿರುವಂತೆ ಇಲ್ಲಿ ನಮೂದಿಸಿ, ಲಿಂಗವನ್ನು ಆಯ್ಕೆ ಮಾಡಿ, ಕ್ಯಾಪ್ಚಾ ಕೊಡನ್ನು ನಮೂದಿಸಿ ಅರ್ಜಿಯನ್ನು ಮುಂದುವರಿಸಿ

ಹಂತ 5: ನಿಮ್ಮ ಪಾಲಕ ಅಥವಾ ಪೋಷಕರ ಆಧಾರ್ ಸಂಖ್ಯೆಯನ್ನು ನಮೂದಿಸಿ ಮೊಬೈಲ್ ನಂಬರನ್ನು ಭರ್ತಿ ಮಾಡಿ ಮತ್ತು ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಪಡೆಯುತ್ತೀರಿ.

ಹಂತ 6: ನಂತರ ಅರ್ಜಿದಾರರು ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಪಡೆಯುತ್ತೀರಿ. ಅದನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.

ಇದನ್ನೂ ಓದಿ – 3,500/- ರೂ. ಎಸ್.ಎಸ್.ಪಿ ವಿದ್ಯಾರ್ಥಿವೇತನ ಈಗ ಜಮಾ ಆಯ್ತು..! ನಿಮಗೂ ಬಂತಾ? ಹೀಗೆ ಚೆಕ್ ಮಾಡಿಕೊಳ್ಳಿ

2023-24ನೇ ಸಾಲಿನ ಎಲ್ಲಾ ವಿದ್ಯಾರ್ಥಿ ವೇತನಗಳ ಪಕ್ಕಾ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಎಸ್ ಎಸ್ ಪಿ ವಿದ್ಯಾಭ್ಯಾಸನಕ್ಕೆ ಅರ್ಜಿ ಸಲ್ಲಿಸುವುದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ. ಇದಲ್ಲದೆ ಪೋಷಕರಿಗೂ ಕೂಡ ವಿದ್ಯಾರ್ಥಿಗಳಿಗೆ ಹಣವನ್ನು ಕೊಡುವ ಸಮಸ್ಯೆ ಇರುವುದಿಲ್ಲ. ಹಾಗಾಗಿ ತುಂಬಾ ಅನುಕೂಲವಿರುವಂತಹ ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಪೋಷಕ ಬಾಂಧವರಿಗೂ ಶೇರ್ ಮಾಡಿ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

 

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!