ರಾಜ್ಯದ ಕಂದಾಯ ಇಲಾಖೆಯಿಂದ ಬಗರ್ ಹುಕುಂ ಎಂಬ ನೂತನ ವ್ಯವಸ್ಥೆಯು ಈಗ ಜಾರಿಯಲ್ಲಿದ್ದು. ಕೃಷಿ ಭೂಮಿಯ ಸಕ್ರಮಕ್ಕೆ ಫಾರಂ 57(Form 57) ರಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆ ಅರ್ಜಿಯನ್ನು ಪರಿಶೀಲನೆ ಮಾಡಿ ಸಾಗುವಳಿ ಚೀಟಿಯನ್ನು ವಿತರಣೆ ಮಾಡಲು ರಾಜ್ಯ ಸರಕಾರದಿಂದ ಈ ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
15 ವರ್ಷ ಉಳುಮೆ ಭೂಮಿ ಸಕ್ರಮ :
ಹದಿನೈದು ವರ್ಷಗಳಿಂದ ಉಳುಮೆ ಮಾಡುತ್ತಿರುವವರಿಗೆ ಮಾತ್ರ ಸಕ್ರಮಕ್ಕೆ ಅವಕಾಶ ಇದೆ ಎಂದು ರಾಜ್ಯ ಸರ್ಕಾರದಿಂದ ತಿಳಿದು ಬಂದಿದೆ. ಹಾಗೆಯೇ ಅರ್ಜಿಯನ್ನು ಪರಿಶೀಲನೆ ಮಾಡಿ ನಂತರ ವಿಲೇವಾರಿ ಮಾಡುವ ಬದಲು ತಂತ್ರಜ್ಞಾನ ಬಳಕೆಗೆ ರಾಜ್ಯ ಸರಕಾರ ಮುಂದಾಗಿದೆ. 1980 ರಲ್ಲಿ ಕೃಷಿ ಚಟುವಟಿಕೆಗೆ ಸಣ್ಣ ರೈತರ ಬಳಿ ಜಮೀನು ಇರಲಿಲ್ಲ. ಅಂತಹ ರೈತರಿಗೆ ಸರಕಾರದಿಂದ ಎರಡು ಎಕರೆ ಜಮೀನನ್ನು ಮಂಜೂರು ಮಾಡುವ ವ್ಯವಸ್ಥೆಯನ್ನು ಅಂದಿನ ಸರಕಾರ ಜಾರಿ ಮಾಡಿತ್ತು. ಆದರೆ ಈ ಒಂದು ಯೋಜನೆಯನ್ನು ಎಲ್ಲಾ ಭೂ ರಹಿತ ರೈತರಿಗೆ ತಲುಪಿಸಲು ಸರಕಾರದಿಂದ ಸಾಧ್ಯವಾಗಲಿಲ್ಲ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಹಾಗಾಗಿ ಭೂಮಿ ಸಿಗದ ಭೂ ರಹಿತ ಕೃಷಿಕರು ತಮ್ಮ ಜೀವನ ನಡೆಸಲು ತಮಗೆ ಸಿಕ್ಕ ಜಾಗದಲ್ಲಿ ತಮಗೆ ಮನಸ್ಸಿಗೆ ಬಂದಂತೆ ಜಮೀನನ್ನು ಉಳುಮೆ ಮಾಡಲು ಪ್ರಾರಂಭ ಮಾಡಿದರು. ಉಳುಮೆ ಮಾಡಿ ಸಂಪಾದನೆ ಮಾಡಿದರೆ ಏನು ಪ್ರಯೋಜನ ಆ ಭೂಮಿಯ ಹುಕ್ಕು ಅವರಿಗೆ ಇರುವುದಿಲ್ಲ. ಮತ್ತು ಯಾವುದೇ ಹಕ್ಕು ಪತ್ರಗಳು ಕೂಡ ಅವರ ಹತ್ತಿರ ಇರುವುದಿಲ್ಲ.
ಇದಕ್ಕಾಗಿ ಇಂತಹ ರೈತರಿಗೆ ಅವರು ಉಳುಮೆ ಮಾಡುತ್ತಿರುವ ಜಮೀನಿನ ಸಾಗುವಳಿ ಚೀಟಿ ಅಥವಾ ಹಕ್ಕು ಪತ್ರವನ್ನು ನೀಡುವುದಕ್ಕಾಗಿ 1991ರಲ್ಲಿ ರಾಜ್ಯ ಸರಕಾರದಿಂದ ಕರ್ನಾಟಕ ಭೂ ಕಂದಾಯ ಕಾಯಿದೆ 1991ರಲ್ಲಿ ನಮೂನೆ 50 ಹಾಗೆ 1999ರಲ್ಲಿ ನಮೂನೆ 53 ಮತ್ತು 2018 ರಲ್ಲಿ ನಮೂನೆ 57 ರ ಈ ಮೂರು ಕಾಯಿದೆಗಳ ಅಡಿಯಲ್ಲಿ ರೈತರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಹಾಗೆಯೇ ಕಳೆದ 15 ವರ್ಷಗಳಿಂದ ಸಾಗುವಳಿ ಮಾಡುತ್ತಿರುವವರಿಗೆ ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿತ್ತು.
ಹಾಗೆಯೇ ಇನ್ನು ಮುಂದೆ ಸಾಗುವಳಿ ಚೀಟಿ ವಿತರಣೆ ಯಲ್ಲಿ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಈ ಮೊದಲು ನಮೂನೆ 50, 53 ಮತ್ತು 57 ರಲ್ಲಿ ಸಕ್ರಮಕ್ಕೆ ಅರ್ಜಿ ಸಲ್ಲಿಸಿದವರ ಅರ್ಜಿಯನ್ನು ಭೌತಿಕವಾಗಿ ಪರಿಶೀಲಿಸಿ ಅದನ್ನು ವಿಲೇವಾರಿ ಮಾಡುವ ಕೆಲಸ ಮಾಡಲಾಗುತ್ತಿತ್ತು. ಹಾಗೆಯೇ ಅಲ್ಲಿ ಅರ್ಹ ರಲ್ಲದ ಫಲಾನುಭವಿಗಳಿಗೆ ಮತ್ತು ಅಕ್ರಮಗಳಿಗೆ ಅವಕಾಶ ಇದ್ದ ಕಾರಣದಿಂದಾಗಿ ಈಗ ಈ ಪ್ರಕ್ರಿಯೆಯನ್ನು ಸಂಪೂರ್ಣ ತಂತ್ರಜ್ಞಾನ ( Technology ) ಬಳಕೆ ಮಾಡಿ ಸಾಗುವಳಿ ಚೀಟಿ ನೀಡಲು ಸರ್ಕಾರ ಮುಂದಾಗಿದೆ.
ಹಾಗೆಯೇ ಇನ್ನೊಂದು ಮುಖ್ಯ ವಿಚಾರ ಏನಂದ್ರೆ , ಈ ಮೇಲೆ ತಿಳಿಸಿರುವ ನಮೂನೆಯಲ್ಲಿ ಸಾಗುವಳಿ ಚೀಟಿ ಪಡೆಯಲು ಅರ್ಜಿ ಸಲ್ಲಿಸಿದ ಫಲಾನುಭವಿಗಳ ಅರ್ಜಿಗಳನ್ನು ಪರಿಶೀಲನೆ ಮಾಡಿ ಸಾಗುವಳಿ ಚೀಟಿಯನ್ನು ವಿತರಣೆ ಮಾಡಲು ತಾಲ್ಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚನೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಹಾಗೂ 6 ತಿಂಗಳಲ್ಲಿ ಎಲ್ಲಾ ಅರ್ಜಿ ವಿಲೇವಾರಿ ಆಗಲಿದೆ ಎಂದಿದ್ದಾರೆ.
ಸಮಿತಿಗಳನ್ನು ರಚನೆ ಮಾಡಲು ಪ್ರಕ್ರಿಯೆಯನ್ನು ಈಗಾಗಲೇ ಆರಂಭ ಮಾಡಲಾಗಿದೆ. ಹಾಗೆಯೇ 50 ತಾಲೂಕುಗಳಲ್ಲಿ ಸಮಿತಿ ರಚನೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಆದಷ್ಟು ಬೇಗ ಆದೇಶ ಬರುತ್ತದೆ ಎಂದಿದ್ದಾರೆ. ಉಳಿದ ತಾಲೂಕುಗಳಲ್ಲಿಯೂ ಸಮಿತಿಗಳ ರಚಿಸಿ ಅದಷ್ಟು ಬೇಗ ಎಲ್ಲ ಕಾರ್ಯ ಮುಗಿಯಲಿದೆ ಎಂದು ತಿಳಿಸಿದ್ದಾರೆ.
ಬಗರ್ ಹುಕುಂ ಅರ್ಜಿ ಸಲ್ಲಿಕೆ : ಆ್ಯಪ್ ಬಿಡುಗಡೆ
ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಬಗರ್ ಹುಕುಂ ಆ್ಯಪ್ ಬಿಡುಗಡೆ ಮಾಡಿದೆ. ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದಕ್ಕೆ ಸರ್ಕಾರ ಬಗರ್ ಹುಕುಂ ಆ್ಯಪ್ ರೂಪಿಸಿದೆ. ಆಪ್ ಬಿಡುಗಡೆ ಮಾಡಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ನಮೂನೆ 50, 53, 57ರ ಅಕ್ರಮ ಸಕ್ರಮ ಯೋಜನೆಯಡಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವವರಿಗೂ ಸಹ ಸಾಗುವಳಿ ಚೀಟಿ ನೀಡುವುದು ಅಸಾಧ್ಯ. ಅಲ್ಲದೆ, ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿದ್ದು, ಪ್ರತಿಯೊಂದು ಭಾಗಕ್ಕೂ ಅಧಿಕಾರಿಗಳೇ ನೇರ ಹೋಗಿ ಕೃಷಿ ನಡೆಯುತ್ತಿದೆಯೇ? ಎಂದು ಪರಿಶೀಲಿಸುವುದು ಸಾಧ್ಯವಿಲ್ಲ. ಹೀಗಾಗಿ ಬಗರ್ ಹುಕುಂ ತಂತ್ರಾಶ ಬಳಸಿ ಅರ್ಜಿ ವಿಲೇ ಮಾಡಲಾಗುತ್ತದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಆಪ್ ಹೇಗೆ ಕೆಲಸ ಮಾಡುತ್ತೆ?
ಗ್ರಾಮ ಲೆಕ್ಕಿಗ ಸ್ಥಳಕ್ಕೆ ತೆರಳಿ ಈ ಆ್ಯಪ್ ಮೂಲಕ ಜಿಯೋ ಫೆನ್ಸ್ ಮಾಡಿ ಆ ಮಾಹಿತಿಯನ್ನು ಕಂದಾಯ ನಿರೀಕ್ಷಕ ಹಾಗೂ ಸರ್ವೇ ಇಲಾಖೆ ಲಾಗಿನ್‌ಗೆ ಕಳುಹಿಸುತ್ತಾರೆ. ಇದರ ಸಹಾಯದಿಂದ ತಹಶೀಲ್ದಾರ್ ಸ್ಯಾಟಲೈಟ್ ಇಮೇಜ್ ಪಡೆದು ನಿಜಕ್ಕೂ ಅಲ್ಲಿ ಕೃಷಿ ನಡೆಸುತ್ತಿದ್ದಾರ ಎಂಬ ಮಾಹಿತಿ ಕಲೆಹಾಕುತ್ತಾರೆ. ಅಲ್ಲದೆ ಆ ಇಮೇಜ್ ಜೊತೆಗೆ ಎಲ್ಲಾ ಮಾಹಿತಿಯನ್ನು ಬಗರ್ ಹುಕುಂ ಕಮಿಟಿ ಮುಂದೆ ಸಲ್ಲಿಸಿ ಓಟಿಪಿ ಮೂಲಕ ಕೆವೈಸಿ ಮಾಡುವ ಮೂಲಕ ಋಜುವಾತು ಮಾಡುತ್ತಾರೆ. ಈ ಮೂಲಕ ಅಕ್ರಮ ಸಕ್ರಮ ಆಗುವುದಲ್ಲದೇ ಅಧಿಕಾರಿಗಳ ಕೆಲಸವೂ ಸುಲಭವಾಗಲಿದ್ದು ಭೂ ದಾರರಿಗೂ ಸಹಾಯ ಆಗಲಿದೆ.
ಈ ಮಾಹಿತಿಗಳನ್ನು ಓದಿ
- SC-ST ಮಹಿಳೆಯರಿಗೆ 25 ಸಾವಿರ ರೂ. ಸಾಲ & ಸಬ್ಸಿಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ
- ರಾಜ್ಯದ ಎಲ್ಲಾ ಮಹಿಳೆಯರಿಗೆ ಯಾವುದೇ ಬಡ್ಡಿ ಇಲ್ಲದೆ 3 ಲಕ್ಷ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
- ಮಹಿಳೆಯರಿಗೆ ಸಿಗಲಿದೆ 50 ಸಾವಿರ ರೂಪಾಯಿ ಸಹಾಯ ಧನ Apply Now
- ಸಾಲಕ್ಕೆ ಅರ್ಜಿ ಹಾಕುವಾಗ ಇದೊಂದು ದಾಖಲೆ ಸಾಕು, ತಕ್ಷಣ ಸಾಲ ಸಿಗುತ್ತೆ
- ಅತೀ ಕಡಿಮೆ ಬಡ್ಡಿಗೆ ವೈಯಕ್ತಿಕ ಸಾಲ ಕೊಡುವ ಬ್ಯಾಂಕ್ ಗಳ ಪಟ್ಟಿ ಇಲ್ಲಿದೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.