30 ಸಾವಿರ ಉಚಿತ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ.

sashakta scholarship

ಇದೀಗ ಎಲ್ಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು, ಬಿವೈಪಿಎಲ್ ಸ್ಕಾಲರ್‌ಶಿಪ್ ಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ಕೂಡ ನೀಡಿದ್ದಾರೆ. ಈ ಸ್ಕಾಲರ್ಶಿಪ್ ಗೆ ( Scholarship ) ಮಾನವಿಕ ವಿಭಾಗಗಳ ಪದವಿ, ಬಿಇ, ಬಿ.ಟೆಕ್, ಬಿಸಿಎ, ಬಿಎಸ್ಸಿ ಹೀಗೆ ಯಾವುದೇ ಪದವಿಗಳ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಬಿವೈಪಿಎಲ್ ಸ್ಕಾಲರ್‌ಶಿಪ್ ( BYPL Scholarship ) ನೀಡುತ್ತಿರುವ ಮುಖ್ಯ ಉದ್ದೇಶ :

ಹಿಂದುಳಿದ ವಿದ್ಯಾರ್ಥಿಗಳು ಯಾವುದೇ ಆರ್ಥಿಕ ಪರಿಸ್ಥಿಯನ್ನು ಎದುರಿಸದೇ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸವನ್ನು ಪಡೆದುಕೊಳ್ಳಬೇಕು. ಈ ಒಂದು ಉದ್ದೇಶದಿಂದ ಬಿಎಸ್‌ಇಎಸ್‌ ಯಮುನಾ ಪವರ್ ಲಿಮಿಟೆಡ್‌ ( BSES Yamuna power Limited ) ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳಿಗಾಗಿಯೇ ನೀಡುತ್ತಿದೆ.

ಈ ವಿದ್ಯಾರ್ಥಿ ವೇತನದ ಹೆಸರು ಬಿವೈಪಿಎಲ್ ಸಶಕ್ತ್‌ ಸ್ಕಾಲರ್‌ಶಿಪ್‌ ( BYPL Sashakt Scholarship ). ಯಾವುದೇ ಪದವಿ ಕೋರ್ಸ್‌ಗಳಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ಸ್ಕಾಲರ್‌ಶಿಪ್‌ ನೀಡಲಾಗುತ್ತದೆ. ಹಾಗೆಯೇ ಈ ಸ್ಕಾಲರ್ಶಿಪ್ ಗೆ ನೀಡಬೇಕಾದ ದಾಖಲೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ. ಅರ್ಹ ವಿದ್ಯಾಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.

ಬಿವೈಪಿಎಲ್ ಸ್ಕಾಲರ್‌ಶಿಪ್ ನಲ್ಲಿ ನೀಡುವ ವಿದ್ಯಾರ್ಥಿ ವೇತನದ ಮೊತ್ತ :

ಈ ಸ್ಕಾಲರ್ಶಿಪ್ ನಲ್ಲಿ ನೀಡುವ ವಿದ್ಯಾರ್ಥಿವೇತನದ ಹಣಕಾಸು ಸೌಲಭ್ಯ ಒಂದು ವರ್ಷಕ್ಕೆ ರೂ.30,000 ವರೆಗೆ ನೀಡಲಾಗುತ್ತದೆ.
ಹಾಗೆಯೇ ಬಿಇ, ಬಿ.ಟೆಕ್‌ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಅಮೆಜಾನ್‌ ವತಿಯಿಂದ ರೂ.50,000 ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಅರ್ಹ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಪ್ರಾಯೋಜನವನ್ನು ಪಡೆದುಕೊಳ್ಳಬೇಕು.

ಈ ವಿದ್ಯಾರ್ಥಿ ವೇತನ ಪಡೆಯಲು ಇರಬೇಕಾದ ಅರ್ಹತೆಗಳು ( Qualifications ) :

ಭಾರತೀಯ ಪ್ರಜೆಗಳಾಗಿರಬೇಕು.
ದೆಹಲಿ ವ್ಯಾಪ್ತಿಯ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳು ಯಾವುದೇ ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿರಬೇಕು.
ಕೊನೆ ಸೆಮಿಸ್ಟರ್ / ವರ್ಷದ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ.55 ಅಂಕಗಳನ್ನು ಪಡೆದಿರಬೇಕು.
ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.6,00,000 ಮೀರಿರಬಾರದು.

ಅರ್ಜಿ ಸಲ್ಲಿಸಲು ನೀಡಬೇಕಾದ ಮುಖ್ಯ ದಾಖಲೆಗಳ ( Documents ) ವಿವರ :

ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ
ಆಧಾರ್ ಕಾರ್ಡ್
ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ
ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅಂಕಪಟ್ಟಿ
ಕಾಲೇಜು ಪ್ರವೇಶ ಶುಲ್ಕದ ರಶೀದಿ.
ಬ್ಯಾಂಕ್‌ ಪಾಸ್‌ ಬುಕ್‌ ಜೆರಾಕ್ಸ್‌ ಪ್ರತಿ

whatss

ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ವಿಧಾನ ( How to Apply ) :

ಹಂತ 1: ಕೆಳಗಿನ ‘Apply Now’ ಬಟನ್ ಮೇಲೆ ಕ್ಲಿಕ್ ಮಾಡಿ.

https://www.buddy4study.com/page/bypl-sashakt-scholarship

ಹಂತ 2: ‘ಆನ್‌ಲೈನ್ ಅರ್ಜಿ ನಮೂನೆ ಪುಟ’ಕ್ಕೆ ತೆರಳಲು ನೋಂದಾಯಿತ ಐಡಿಯನ್ನು ಬಳಸಿಕೊಂಡು Buddy4Study ಗೆ ಲಾಗಿನ್ ಮಾಡಿ.
ನೋಂದಾಯಿಸದಿದ್ದರೆ – ನಿಮ್ಮ ಇಮೇಲ್/ಮೊಬೈಲ್/ಜಿಮೇಲ್ ಖಾತೆಯೊಂದಿಗೆ Buddy4Study ನಲ್ಲಿ ನೋಂದಾಯಿಸಿ.

ಹಂತ 3: ಈಗ ನಿಮ್ಮನ್ನು ‘ಕೋಟಕ್ ಕನ್ಯಾ ಸ್ಕಾಲರ್‌ಶಿಪ್ 2023’ ಅರ್ಜಿ ನಮೂನೆಯ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.

ಹಂತ 4: ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ‘ಅಪ್ಲಿಕೇಶನ್ ಪ್ರಾರಂಭಿಸಿ’ ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 5: ಆನ್‌ಲೈನ್ ವಿದ್ಯಾರ್ಥಿವೇತನ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.

ಹಂತ 6: ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ‘ನಿಯಮಗಳು ಮತ್ತು ಷರತ್ತುಗಳನ್ನು’ ಸ್ವೀಕರಿಸಿ ಮತ್ತು ‘ಪೂರ್ವವೀಕ್ಷಣೆ’ ಕ್ಲಿಕ್ ಮಾಡಿ.

ಹಂತ 7: ಅರ್ಜಿದಾರರು ಭರ್ತಿ ಮಾಡಿದ ಎಲ್ಲಾ ವಿವರಗಳು ಪೂರ್ವವೀಕ್ಷಣೆ ಪರದೆಯಲ್ಲಿ ಸರಿಯಾಗಿ ತೋರಿಸುತ್ತಿದ್ದರೆ, ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘ಸಲ್ಲಿಸು’ ಬಟನ್ ಕ್ಲಿಕ್ ಮಾಡಿ.

ಬಿವೈಪಿಎಲ್ ಸ್ಕಾಲರ್‌ಶಿಪ್ ಗೆ ಅರ್ಜಿ ಸಲ್ಲಿಸಲು ಸಲ್ಲಿಸಲು ಕೊನೆ ದಿನಾಂಕ ( Last Date ) : 07-01-2024 ಆಗಿದೆ. ಆದ್ದರಿಂದ ಅರ್ಹ ವಿದ್ಯಾರ್ಥಿಗಳು ಆದಷ್ಟು ಬೇಗ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಿ.

tel share transformed

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಫಾಲೋ (Follow) ಮಾಡಿ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!