ರಾಜ್ಯದಲ್ಲಿ ಎಮ್ಮೆ ಹಾಲಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ಕೆಎಂಎಫ್ (KMF) ಮತ್ತೊಮ್ಮೆ ಹೆಮ್ಮೆ ಹಾಲನ್ನು (Buffalo Milk) ಇಂದಿನಿಂದ ರಾಜ್ಯದ ಮಾರುಕಟ್ಟೆಗಳಲ್ಲಿ ಕೆಎಂಎಫ್ ಎಮ್ಮೆ ಹಾಲು ಮಾರಾಟ ಶುರುವಾಗಿದೆ. ಗ್ರಾಹಕರಿಂದಲೂ ಭಾರೀ ಬೇಡಿಕೆ ಬರುತ್ತಿದೆ. ಕೆಎಂಎಫ್ ವತಿಯಿಂದ ಎಮ್ಮೆ ಹಾಲು ಪೂರೈಕೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಕೆಲ ವರ್ಷಗಳ ಹಿಂದೆ ನಂದಿನಿ ಎಮ್ಮೆ ಹಾಲನ್ನು (Nandini Buffalo Milk) ಮಾರುಕಟ್ಟೆಗೆ ಬಿಡಲಾಗಿತ್ತು. ಆದ್ರೆ ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು.
ಎಲ್ಲೆಲ್ಲಿ ಸಿಗುತ್ತೆ ಎಮ್ಮೆ ಹಾಲು?
ಗ್ರಾಹಕರಿಂದ ಹೆಚ್ಚುತ್ತಿರುವ ಎಮ್ಮೆಹಾಲಿನ ಬೇಡಿಕೆಯನ್ನು ಪೂರೈಸಲು, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಎಮ್ಮೆ ಹಾಲು ಮಾರಾಟ ಮಾಡಲು ಸಿದ್ಧವಾಗಿದೆ. ಸದ್ಯ ಬೆಂಗಳೂರು ಸೇರಿದಂತೆ ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರ ಮಾರುಕಟ್ಟೆಗಳಲ್ಲಿಯೂ ಎಮ್ಮೆ ಹಾಲು ಮಾರಾಟಕ್ಕೆ ಕೆಎಂಎಫ್ ನಿರ್ಧಾರ ಮಾಡಿದೆ.
ಕೆಎಂಎಫ್ ಹೆಮ್ಮೆ ಹಾಲಿನ ಬೆಲೆ ಎಷ್ಟು?
1 ಲೀಟರ್ ಹಾಲಿಗೆ 60 ರೂ. ನಿಗದಿಪಡಿಸಲಾಗಿದೆ. ಹಾಲು ಒಕ್ಕೂಟಗಳಿಗೆ ಪ್ರತಿ ನಿತ್ಯ 60 ಸಾವಿರ ಲೀಟರ್ ಎಮ್ಮೆ ಹಾಲು ಪೂರೈಕೆ ಮಾಡಲಾಗುತ್ತದೆ. ರೈತರಿಂದ ಪ್ರತಿ ಲೀಟರ್‌ಗೆ 39.50 ರೂಪಾಯಿಗೆ (5 ರೂ. ಪ್ರೋತ್ಸಾಹಧನವನ್ನೊಳಗೊಂಡು) ಖರೀದಿ ಮಾಡಲಾಗುತ್ತಿದೆ.
ಎಮ್ಮೆ ಹಾಲಿನ ವಿಶೇಷತೆಗಳೇನು ?
– ಪೌಷ್ಟಿಕಾಂಶಗಳ ಕಣಜ
– ಮಕ್ಕಳು ಶಕ್ತಿವಂತರಾಗಲು ಪೂರಕ
– ನಷ್ಟ ಪುಷ್ಟರಾಗಲು ಸಹಾಯಕ
– ಹೆಚ್ಚು ಪ್ರೋಟೀನ್, ಲವಣಾಂಶ, ಕ್ಯಾಲ್ಸಿಯಂ ಭರಿತ
– ಗಟ್ಟಿ ಮೊಸರು, ಸಿಹಿ ಉತ್ಪನ್ನಗಳ ತಯಾರಿಕೆಗೆ ಸೂಕ್ತ
– ಹೋಟೆಲ್ ಗಳಲ್ಲಿ ಹೆಚ್ಚು ಕಾಫಿ ಟೀ ತಯಾರಿಕೆಗೆ ಸೂಕ್ತ
ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ಕೆಎಂಎಫ್ನ ನಂದಿನಿಗೆ ಎಮ್ಮೆ ಹಾಲು ಹೊಸ ಸೇರ್ಪಡೆಯಾಗಿದೆ. ಪೌಷ್ಠಿಕಾಂಶಗಳ ಕಣಜವಾಗಿರುವ ಎಮ್ಮೆ ಹಾಲು ಸೇವನೆಯಿಂದ ಮಕ್ಕಳಿಗೆ ಶಕ್ತಿವಂತರಾಗಲು, ಯುವಕರಿಗೆ ದಷ್ಟಪುಷ್ಟರಾಗಲು ಸಹಕಾರಿಯಾಗಿದೆ.#KMF #Nandini #buffalomilk pic.twitter.com/ans2e3ZWfN
— DIPR Karnataka (@KarnatakaVarthe) December 21, 2023
ಹಾಲಿನ ಪೊರೆಕೆಯಲ್ಲಿ ಖಾಸಗಿ ಬ್ರಾಂಡ್ ಗಳಿಂದ ಹೆಚ್ಚು ಸ್ಪರ್ಧೆ ಎದುರಾಗಿದ್ದು. ಕೆಎಂಎಫ್ ಈ ಪೈಪೋಟಿಯಲ್ಲಿ ಹಿಂದುಳಿಯಲು ಬಯಸುತ್ತಿಲ್ಲ ಹಾಗಾಗಿ ತುಪ್ಪ ಹಾಲು ಪರೀಕೆಯಲ್ಲಿ ಹೆಚ್ಚು ಮುತುವರ್ಜಿ ವಹಿಸಿ ಕೆಎಂಎಫ್ ಗ್ರಾಹಕರ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತಿದೆ ಎಂದು ಹೇಳಲಾಗಿದೆ.