ರಾಜ್ಯದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಯೊಂದನ್ನು ( Fake News ) ನಂಬಿ ಸಾರ್ವಜನಿಕರು ಗ್ಯಾಸ್ ಏಜೆನ್ಸಿಗಳ ಮುಂದೆ ಇ ಕೆವೈಸಿ (EKYC) ಮಾಡಿಸಲು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಹೌದು, ರಾಜ್ಯಾದ್ಯಂತ ಸದ್ಯ ಪ್ರಧಾನಿ ಮೋದಿ ಎಲ್ಪಿಸಿ ಸಿಲಿಂಡರ್(LPC silender) ಸಬ್ಸಿಡಿ (subsidy) ಕೊಡುತ್ತಾರೆ ಎಂಬ ಸುಳ್ಳು ವದಂತಿ ಎಲ್ಲ ಕಡೆಯಲ್ಲೂ ಹರಡಿದೆ. ಈ ಒಂದು ಸುಳ್ಳು ಸುದ್ದಿ ಕರಾವಳಿ ಜಿಲ್ಲೆಗಳು, ಉತ್ತರ ಕರ್ನಾಟಕ ಹಾಗೂ ಗಡಿ ಜಿಲ್ಲೆಗಳಲ್ಲಿಯೂ ಹರಿದಾಡುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶ ಹೀಗಿದೆ :
ಗ್ಯಾಸ್ ಸಂಪರ್ಕ ಇರುವವರು ಡಿಸೆಂಬರ್ 31ರೊಳಗೆ ಆಧಾರ್ ಕಾರ್ಡ್(Adar card ) ಮತ್ತು ಬ್ಯಾಂಕ್ ಪಾಸ್ ಪುಸ್ತಕ(bank pass book), ಗ್ಯಾಸ್ ಏಜನ್ಸಿ ನೀಡಿರುವ ಪುಸ್ತಕ ಅಥವಾ ಕಾರ್ಡ್ ಜೊತೆ ಏಜನ್ಸಿ ಕಚೇರಿಗೆ ಭೇಟಿ ನೀಡಿ, ಕೆವೈಸಿ ( EKYC ) ಮಾಡಿಸಬೇಕು. ಕೆವೈಸಿ ಮಾಡಿಸಿದರೆ, ಜನವರಿ 1ರಿಂದ ಸಬ್ಸಿಡಿ ಬರುತ್ತದೆ. ಈಗ ಇರುವ ಸಿಲಿಂಡರ್ ಗೆ 903 ರೂ ಇದ್ದು, ಸಬ್ಸಿಡಿಯ ಬಳಿಕ 500 ರೂಗಳಿಗೆ ದೊರಕುತ್ತದೆ. ಕೆವೈಸಿ ಮಾಡದೇ ಇದ್ದರೆ, ಸಬ್ಸಿಡಿರಹಿತವಾಗಿ ಗ್ಯಾಸ್ ಸಂಪರ್ಕವು ಕಮರ್ಷಿಯಲ್ (commercial) ಆಗಿ ಮಾರ್ಪಾಡಾಗುತ್ತದೆ. ಆಗ ಗ್ಯಾಸ್ ಗೆ 1,400 ರೂ ಕೊಡಬೇಕು ಎಂಬ ಸಂದೇಶ ಹರಿದಾಡುತ್ತಿದೆ.
ಇದೊಂದು ಸುಳ್ಳು ಸಂದೇಶ ಎಂದರೂ ನಂಬದ ಸಾರ್ವಜನಿಕರು :
ಕಳೆದ ವಾರದಿಂದ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಮಾಹಿತಿ ಸುಳ್ಳು. ಇದರಿಂದ ಗ್ರಾಹಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಅವರು ಯಾರು ಹೇಳಿದ್ದನ್ನೂ ನಂಬುವ ಸ್ಥಿತಿಯಲ್ಲಿಲ್ಲ. ನೇರವಾಗಿ ಗ್ಯಾಸ್ ಏಜನ್ಸಿಗಳ ( Gas Agency ) ಮುಂದೆ ಬಂದು ಕೂಡಲೇ ಮಾಡಿಕೊಡಿ ಎಂದು ಹೇಳುತ್ತಿದ್ದಾರೆ.
ಈಗ ಸದ್ಯಕ್ಕೆ ಆಧಾರ್ ಲಿಂಕ್ ( Adhar Link ) ಮಾಡಿಸಲು ಸೂಚನೆ ಬಂದಿದೆ. ಹೀಗಾಗಿ ಇ-ಕೆವೈಸಿ ( EKYC )
ಮಾಡುತ್ತಿದ್ದೇವೆ. ಡಿಸೆಂಬರ್ 31ರೊಳಗೆ ಮುಗಿಸುವ ಯಾವುದೇ ಗಡುವು ನೀಡಿಲ್ಲ. ಇದಕ್ಕೂ ಸಬ್ಸಿಡಿ ವಿಚಾರಕ್ಕೂ ಸಂಬಂಧ ಇರುವ ಕುರಿತು ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಗ್ರಾಹಕರು ಗಲಿಬಿಲಿಗೊಳಗಾಗುವ ಅಗತ್ಯವಿಲ್ಲ ಎಂದು ಅಡುಗೆ ಅನಿಲ ವಿತರಕರು ಸಾರಿ ಹೇಳುತ್ತಿದ್ದರೂ ಗ್ರಾಹಕರು ಅವರ ಮಾತನ್ನು ಕೇಳುತ್ತಿಲ್ಲ.
ಆಧಾರ್ ದೃಢೀಕರಣವು ಉಜ್ವಲ ಗ್ಯಾಸ್ ( Ujwala Gas ) ಸಂಪರ್ಕ ಪಡೆದಿರುವವರಿಗೆ ಮಾತ್ರವಷ್ಟೇ ಕಡ್ಡಾಯ. ಉಳಿದ ಬಳಕೆದಾರರಿಗೆ ಗ್ಯಾಸ್ ಸಬ್ಸಿಡಿಯ ಕುರಿತು ಪ್ರಸ್ತುತ ಯಾವುದೇ ಘೋಷಣೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಮೋದಿ 500 ರೂಪಾಯಿಗೆ ಸಿಲಿಂಡರ್ ಕೊಡ್ತಾರೆ ಎಂಬ ಸುದ್ದಿಯೂ ಕೂಡ ಹರಡಿದೆ. ಹೌದು, ಈಗಾಗಲೇ ನರೇಂದ್ರ ಮೋದಿ ಮೂರು ರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ರಾಜಸ್ತಾನದಲ್ಲಿ 500 ರೂ. ಸಿಲಿಂಡರ್ ನೀಡುತ್ತೇನೆ ಎಂದು ವಾಗ್ದಾನ ಮಾಡಿದ್ದಾರೆ. ಅದರಂತೆ ರಾಜ್ಯದಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಸಿಲಿಂಡರ್ ದರ 500 ರೂ. ಮಾಡುತ್ತಾರೆ.
ಸದ್ಯ ಯಾರಿಗೆಲ್ಲ ಸಹಾಯಧನ ಸಿಗುತ್ತದೆ ?
ಪಿಎಂಯುವೈ ( PMUY ) (ಉಜ್ವಲ) ಫಲಾನುಭವಿಗಳಿಗೆ ಪ್ರತಿ ಸಿಲಿಂಡರಿಗೆ 300 ರೂ. ಸಹಾಯಧನ ನೀಡಲಾಗುತ್ತಿದೆ. ಹಾಗಾಗಿ ಬಾಕಿ ಉಳಿದವರಿಗೆ ಯಾರಿಗೂ ಸಹಾಯಧನ ಕೊಡುತ್ತಿಲ್ಲ. ಆದರೆ, ಎಚ್ಪಿ ಗ್ಯಾಸ್ ಗೆ ಇ ಕೆವೈಸಿ ಮಾಡಿಸುವುದು ಕಡ್ಡಾಯ ಇದೆ ತಿಳಿಸಿದ್ದಾರೆ.
ಜನವರಿ ನಂತರವೂ ಇ ಕೆವೈಸಿ ಮಾಡಿಸಿಕೊಳ್ಳುಬಹುದು :
ಸಾರ್ವಜನಿಕರು ಈಗ ಯವುದೇ ಗೊಂದಲಕ್ಕೆ ಒಳಗಾಗುವುದು ಬೇಡ. ಅವರು ಗ್ಯಾಸ್ ಪಾಸ್ ಬುಕ್ಕಿನೊಂದಿಗೆ ಆಧಾರ್ ನಕಲುಪ್ರತಿಯನ್ನು ಜನವರಿ ನಂತರವೂ ತಂದುಕೊಡಬಹುದು. ಈಗಾಗಲೇ 22,000 ಸಂಪರ್ಕಗಳ ಪೈಕಿ ವಾರದಲ್ಲಿ 1,300 ಮಂದಿ ಇ ಕೆವೈಸಿ(e-kyc) ಮಾಡಿಸಿದ್ದಾರೆ ಎಂದು ವರದಿಗಳ ಮೂಲಕ ತಿಳಿದು ಬಂದಿದೆ.
ಈ ಮಾಹಿತಿಗಳನ್ನು ಓದಿ
- ಅಕ್ರಮ ಸಕ್ರಮ ಭೂಮಿಗೆ ಹಕ್ಕು ಪತ್ರ ಪಡೆಯಲು ಬಗರ್ ಹುಕುಂ ಅರ್ಜಿ ಸಲ್ಲಿಸಲು ಆ್ಯಪ್ ಬಿಡುಗಡೆ
- ರಾಜ್ಯದ ಎಲ್ಲಾ ಮಹಿಳೆಯರಿಗೆ ಯಾವುದೇ ಬಡ್ಡಿ ಇಲ್ಲದೆ 3 ಲಕ್ಷ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
- ಮಹಿಳೆಯರಿಗೆ ಸಿಗಲಿದೆ 50 ಸಾವಿರ ರೂಪಾಯಿ ಸಹಾಯ ಧನ Apply Now
- ಸಾಲಕ್ಕೆ ಅರ್ಜಿ ಹಾಕುವಾಗ ಇದೊಂದು ದಾಖಲೆ ಸಾಕು, ತಕ್ಷಣ ಸಾಲ ಸಿಗುತ್ತೆ
- ನವಂಬರ್ ತಿಂಗಳ ಅನ್ನ ಭಾಗ್ಯದ 680/- ಹಣ ಜಮಾ ಆಗಿದೆ, ನಿಮ್ಮ ಡಿಬಿಟಿ ಚೆಕ್ ಮಾಡಿಕೊಳ್ಳಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.