ಫೋನ್ ಪೇ CIBIL : ಫೋನ್ ಪೇ ಬಳಕೆದಾರರಿಗೆ ಹೊಸ ಅಪ್ಡೇಟ್! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

phone pay update on CIBIL score

ಎಲ್ಲರ ಮೊಬೈಲ್ ನಲ್ಲಿ ಇಂದು ಗೂಗಲ್ ಪೇ ( Google Pay ), ಫೊನ್ ಪೇ ( Phone Pay ), ಅಥವಾ ಪೆಟಿಎಂ ( Paytm ) ನಂತಹ ಹಲವು ಡಿಜಿಟಲ್ ಹಣ ಪಾವತಿ ಮಾಡುವ ಆಪ್ ಗಳು(Apps) ಇದ್ದಾವೆ. ಹೌದು, ನಾವು ಕುಳಿತಲ್ಲಿಯೇ ನಮಗೆ ಬೇಕಾದಗ ನಮ್ಮ ಮೊಬೈಲ್ ಮೂಲಕ ಹಣವನ್ನು ಡಿಜಿಟಲ್ ಪಾವತಿ ಮೂಲಕ ಕಳುಹಿಸಬಹುದು. ಈಗ ಫೊನ್ ಪೇi ಆಪ್ಲಿಕೇಶನ್ ನಲ್ಲಿ ಹೊಸ ಬದಲಾವಣೆ ಮಾಡಲಾಗಿದೆ. ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಫೊನ್ ಪೇ ನಲ್ಲಿ ತರಲಾದ ಹೊಸ ಬದಲಾವಣೆ ( New Update ) :

ಡಿಜಿಟಲ್ ಪಾವತಿ ಅಪ್ಲಿಕೇಶನ್ ( Online Transaction Application ) ಆದ ಫೋನ್‌ಪೇ (Phone Pay) ಇದೀಗ ತನ್ನ ಬಳಕೆದಾರರಿಗೆ ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ನಿರ್ವಹಿಸಲು ಮತ್ತು ಬಿಲ್‌ಗಳು ಮತ್ತು ಸಾಲಗಳನ್ನು ಪಾವತಿಸಲು ಅನುವು ಮಾಡಿಕೊಡುವ ಹೊಸ ವೈಶಿಷ್ಟ್ಯವನ್ನು ಈ ಆಪ್ಲಿಕೇಶನ್ ಅಲ್ಲಿ ಸೇರಿಸಲಾಗಿದೆ.

ಕ್ರೆಡಿಟ್ ಸ್ಕೊರ್ ( Credit Score ) ವಿಭಾಗದ ಸೇರ್ಪಡೆಯ ಉಪಯೋಗ :

ಈ ಒಂದು ಹೊಸ ವಿಭಾಗವನ್ನು ಸೇರ್ಪಡೆ ಗೊಳಿಸುವ ಮುಖ್ಯ ಉದ್ದೇಶ ಎಂದರೆ, ಫೋನ್ ಪೇ ಬಳಕೆದಾರರು CIBIL ಸ್ಕೋರ್ ಅನ್ನು ಉಚಿತವಾಗಿ ಈ ವಿಭಾಗದಲ್ಲಿ ಚೆಕ್ ಮಾಡಬಹುದು. ಹಾಗೆಯೇ ಕ್ರೆಡಿಟ್ ಕಾರ್ಡ್ ಬಿಲ್‌ಗಳು, ಸಾಲ ಪಾವತಿ ಮತ್ತು ಇತರೆ ಪೇಮೆಂಟ್‌ಗಳನ್ನೂ ಸುಲಭವಾಗಿ ಇದರಲ್ಲಿ ನಿರ್ವಹಿಸಬಹುದು. ಹೀಗೆ ಹಲವು ಕಾರ್ಯಗಳನ್ನು ನಿರ್ವಹಿಸಬಹುದು. ಈ ಒಂದು ಹೊಸ ಅಪ್ ಡೇಟ್ ಬಳಕೆದಾರರಿಗೆ ಒಂದು ಉತ್ತಮ ಪ್ರಯೋಜನವಾಗಿದೆ.

whatss

ಫೋನ್ ಪೇ ನಲ್ಲಿ ತರಲಾದ ಈ ಹೊಸ ಫೀಚರ್ ಬಗ್ಗೆ ಬಳಕೆದಾರರಿಗೆ ಸಲಹೆ ನೀಡಲಾಗುತ್ತದೆ :

ಹೌದು, ಫೋನ್ ಪೇ ನಲ್ಲಿ ಸೇರಿಸಲಾದ ಕ್ರೆಡಿಟ್ ವಿಭಾಗದಲ್ಲಿ ಬಳಕೆದಾರರು ಹಣಕಾಸಿನ ವಿಷಯಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಹಾಗೆಯೇ ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಏನು ಮಾಡಬೇಕು ಎಂಬುದರ ಕುರಿತು ಬಳಕೆದಾರರಿಗೆ ಸಲಹೆ ಮತ್ತು ಸೂಚನೆಗಳನ್ನು ಕೂಡ ನೀಡಲಾಗುತ್ತದೆ. ಮತ್ತು ಮುಂದಿನ ದಿನಗಳಲ್ಲಿ ಕ್ರೆಡಿಟ್ ಟ್ಯಾಬ್‌ನಲ್ಲಿ ( Credit Tab ) ಹೆಚ್ಚಿನ ಸೇವೆಗಳು ಲಭ್ಯವಾಗಲಿವೆ ಎಂದು ಫೋನ್‌ಪೇ ತಿಳಿಸಿದೆ. ಹಾಗೆಯೇ ಈ ಆ್ಯಪ್‌ನಲ್ಲಿ ಸಾಲ ನೀಡುವ ಹೊಸ ಫೀಚರ್‌ ಅನ್ನು ತರಲಾಗುವುದು ಎಂದು ತಿಳಿಸಿದ್ದಾರೆ.

ಕ್ರೆಡಿಟ್ ಸ್ಕೊರ್ ಅಥವಾ CIBIL ನ ಪ್ರಾಮುಖ್ಯತೆ ( Importance ) :

ಕ್ರೆಡಿಟ್ ಸ್ಕೋರ್ ಅಥವಾ CIBIL ಸ್ಕೋರ್ ಇಂದು ಹೆಚ್ಚು ಉಪಯುಕ್ತವಾಗಿದೆ. ಯಾಕೆಂದರೆ, ಬ್ಯಾಂಕ್ ಅಥವಾ ಯಾವುದೇ ಹಣಕಾಸು ಸಂಸ್ಥೆಯಿಂದ ನಿಮಗೆ ಯಾವುದೇ ಸಾಲ ಬೇಕಿದ್ದರೆ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಚೆಕ್ ಮಾಡಿ ನಂತರ ಸಾಲ ನೀಡುತ್ತಾರೆ. ಈ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ ನಿಮಗೆ ಸಾಲ ಸುಲಭವಾಗಿ ಸಿಗುತ್ತದೆ ಮತ್ತು ಬಡ್ಡಿ ದರವೂ ಕಡಿಮೆ ಇರುತ್ತದೆ. ಆದರೆ, ಕ್ರೆಡಿಟ್ ಸ್ಕೋರ್ ತುಂಬಾ ಕಡಿಮೆಯಿದ್ದರೆ ಬ್ಯಾಂಕ್‌ಗಳು ಸಾಲ ನೀಡಲು ಹಿಂಜರಿಕೆ ಮಾಡುತ್ತಾರೆ.

tel share transformed

ಕ್ರೆಡಿಟ್ ಕಾರ್ಡ್‌ಗಳಿಗಾಗಿ CIBIL ಸ್ಕೋರ್ ಅನ್ನು ಪರಿಶೀಲಿಸಲು ಕ್ರಮಗಳು :

ಕ್ರೆಡಿಟ್ ಸ್ಕೋರ್ ಚೆಕ್ ಒಂದು ಸರಳ ಪ್ರಕ್ರಿಯೆ. CIBIL ವೆಬ್‌ಸೈಟ್‌ನಲ್ಲಿ ( CIBIL Website ) ನೀವೇ ಅದನ್ನು ಮಾಡಬಹುದು. ಅನುಸರಿಸಬೇಕಾದ ಹಂತಗಳು ಇಲ್ಲಿವೆ:

CIBIL ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಒಮ್ಮೆ ನೀವು CIBIL ವೆಬ್‌ಸೈಟ್‌ಗೆ ಬಂದರೆ, ‘ನಿಮ್ಮ CIBIL ಸ್ಕೋರ್ ಪಡೆಯಿರಿ’ ಬಟನ್ ಅನ್ನು ಕ್ಲಿಕ್ ಮಾಡಿ.
ಇದರ ನಂತರ, ನಿಮಗೆ ಚಂದಾದಾರಿಕೆ ಆಯ್ಕೆಗಳನ್ನು ನೀಡಲಾಗುತ್ತದೆ. ನಿಮ್ಮ ಆಯ್ಕೆಯ ಪ್ರಕಾರ ಒಂದು ಆಯ್ಕೆಯನ್ನು ಆರಿಸಿ.
ಆಯ್ಕೆಯನ್ನು ಆರಿಸಿದ ನಂತರ, ನಿಮ್ಮನ್ನು ಆನ್‌ಲೈನ್ ಫಾರ್ಮ್‌ಗೆ ಕರೆದೊಯ್ಯಲಾಗುತ್ತದೆ. ಮೂಲ ವಿವರಗಳನ್ನು ಇಲ್ಲಿ ಒದಗಿಸಿ: ನಿಮ್ಮ ಹೆಸರು, ವಿಳಾಸ, ID ಪುರಾವೆ, ಜನ್ಮದಿನಾಂಕ, ಇತ್ಯಾದಿ.
ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ನಿಮ್ಮನ್ನು ಪಾವತಿ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ. ಕ್ರೆಡಿಟ್ ಕಾರ್ಡ್‌ಗಳು, ನೆಟ್ ಬ್ಯಾಂಕಿಂಗ್ ಮುಂತಾದ ವಿವಿಧ ವಿಧಾನಗಳ ಮೂಲಕ ಅಗತ್ಯವಿರುವ ಪಾವತಿಯನ್ನು ಮಾಡಿ.
ಪಾವತಿಯ ನಂತರ, ನಿಮ್ಮನ್ನು ದೃಢೀಕರಣ ಪುಟಕ್ಕೆ ಕರೆದೊಯ್ಯಲಾಗುತ್ತದೆ. ಇಲ್ಲಿ, ನಿಮ್ಮ ಕ್ರೆಡಿಟ್ ಇತಿಹಾಸಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ನಿಮಗೆ ಕೇಳಲಾಗುತ್ತದೆ, ಇದು CIBIL ನೊಂದಿಗೆ ನಿಮ್ಮ ಗುರುತನ್ನು ದೃಢೀಕರಿಸಲು ಸಹಾಯ ಮಾಡುತ್ತದೆ.
ನಿಮ್ಮ ದೃಢೀಕರಣ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಮುಂದಿನ 24 ಗಂಟೆಗಳ ಒಳಗೆ ನಿಮ್ಮ ನೋಂದಾಯಿತ ಇಮೇಲ್ ವಿಳಾಸದಲ್ಲಿ ನೀವು ವಿವರವಾದ CIBIL ವರದಿಯನ್ನು ಸ್ವೀಕರಿಸುತ್ತೀರಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!