ಟೆಕ್ನೋ ದ ಈ ಮೊಬೈಲ್‌ ಮೇಲೆ ಭರ್ಜರಿ ಡಿಸ್ಕೌಂಟ್‌..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

tecno spark 9

ಇಂದಿನ ದಿನಮಾನಗಳಲ್ಲಿ ಯಾರಿಗೆ ಸ್ಮಾರ್ಟ್ ಫೋನ್ ಅವಶ್ಯಕ ಇಲ್ಲಾ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ ಫೋನ್ ಬಳಕೆ ಸಾಮಾನ್ಯವಾಗಿ ಬಿಟ್ಟಿರುವುದು ನಮಗೆಲ್ಲ ತಿಳಿದೇ ಇದೆ. ಮತ್ತು ಅಷ್ಟೇ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಹೊಸ ಹೊಸ ಫೀಚರ್ ಗಳನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಬಿಡುಗಡೆ ಕೂಡಾ ಆಗುತ್ತಿವೆ. ಜನರನ್ನು ಕೂಡಾ ತಮ್ಮತ್ತಾ ಸೇಳುದುಕೊಲೊಳ್ಳುತ್ತಿದೆ ಈ ಸ್ಮಾರ್ಟ್ ಫೋನ್ ಜಗತ್ತು ಎಂದೇ ಹೇಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ನಡುವೆ ಟೆಕ್ನೋ (Tecno) ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ತನ್ನ ಸುಧಾರಿತ ಫೀಚರ್ಸ್‌ನೊಂದಿಗೆ ಬಿಡುಗಡೆ ಮಾಡುತ್ತಿದೆ. ಮತ್ತು ಮಾರುಕಟ್ಟೆಯಲ್ಲಿ ಟೆಕ್ನೋ ಮೊಬೈಲ್‌ ಕಂಪನಿಯು ಅಗ್ಗದ ಸರಣಿಯಲ್ಲಿ ಸ್ಮಾರ್ಟ್‌ಫೋನ್‌ ಪರಿಚಯಿಸಿ ಜನಪ್ರಿಯತೆ ಪಡೆದುಕೊಂಡಿದೆ. ಹೌದು, ಇದೀಗ ಟೆಕ್ನೋ (Tecno) ತನ್ನ ಒಂದು ಬಹು ಬೇಡಿಕೆಯ ಸ್ಮಾರ್ಟ್‌ಫೋನ್‌ ಮೇಲೆ ರಿಯಾಯಿತಿಯನ್ನು ನೀಡಿದೆ. ಯಾವುದು ಆಭಾರೀ ಡಿಸ್ಕೌಂಟ್‌ ಫೋನ್ ? ಅದರ ಆಫರ್ ಬೆಲೆ ಎಷ್ಟು? ಅದರ ಲಭ್ಯತೆ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಟೆಕ್ನೋ ಸ್ಪಾರ್ಕ್‌ 9(Tecno spark 9):

new techno spark phone

ನೀವೇನಾದರೂ ಇ – ಕಾಮರ್ಸ್ ತಾಣವಾದ ಅಮೆಜಾನ್ (Amazon)ಶೋಪಿಂಗ್ ಆ್ಯಪ್ ಗಳಲ್ಲಿ ಏನಾದರೂ ಖರೀದಿಸಲು ಆಸಕ್ತಿ ಹೊಂದಿರುವವರಾಗಿದ್ದರೆ, ನಿಮಗೆ ಇದು ಉತ್ತಮ
ರಿಯಾಯಿತಿ ಸೌಲಭ್ಯ ಎಂದೇ ಹೇಳಬಹುದಾಗಿದೆ. ಹೌದು ಇದೀಗ ಈ ಆಫರ್ ಲಿಸ್ಟ್ ಅಲ್ಲಿ ಭಾರತೀಯ ಮೊಬೈಲ್‌ ಪೈಕಿ ಟೆಕ್ನೋ ಸಂಸ್ಥೆಯ ಟೆಕ್ನೋ ಸ್ಪಾರ್ಕ್‌ 9(Tecno spark 9) ಮೊಬೈಲ್‌ ಅನ್ನು ಸೇರಿಸಿದೆ. ಈ ಫೋನ್‌ ಇದೀಗ ಅಮೆಜಾನ್‌ ತಾಣದಲ್ಲಿ ಬಿಗ್‌ ರಿಯಾಯಿತಿ ಸೌಲಭ್ಯ ಪಡೆದಿದ್ದು, ಗ್ರಾಹಕರು ಖುಷಿ ಆಗುವಂತೆ ಮಾಡಿದೆ.

ಹೌದು, ಇದೀಗ ಪ್ರಮುಖ ಇ-ಕಾಮರ್ಸ್‌ ತಾಣವಾದ ಅಮೆಜಾನ್‌ (Amazon) ಭರ್ಜರಿ ಆಫರ್ (Offer) ನೀಡಿದೆ.ಅದರಲ್ಲಿ ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್ ಫೋನ್(Tecno spark 9) ಮೇಲೆ ಬೃಹತ್ ಡಿಸ್ಕೌಂಟ್ (Disscount)ಅನ್ನು ನೀಡಿದೆ. ಮತ್ತು ಈ ಆಫರ್ (Offer)ಅಲ್ಲಿ ಸ್ಮಾರ್ಟ್ ಫೋನ್ ಖರೀದಿ ಮಾಡುವುದರ ಮೂಲಕ ನೀವು ನಿಮ್ಮ ಹಣ ಉಳಿತಾಯ ಮಾಡಿಕೊಳ್ಳಬಹುದು.

whatss

ಅಮೆಜಾನ್ ನಲ್ಲಿ ಈ ಮೊಬೈಲ್ ಮೇಲೆ ಬಾರಿ ರಿಯಾಯಿತಿ

ಅಮೆಜಾನ್‌ ಪ್ಲಾಟ್‌ಫಾರ್ಮ್ ನಲ್ಲಿ ಟೆಕ್ನೋ ಸ್ಪಾರ್ಕ್‌ 9 ಫೋನ್‌ ಶೇ. 45% ರಷ್ಟು ನೇರ ರಿಯಾಯಿತಿ ಹೊಂದಿದೆ. ಈ ಮೊಬೈಲ್‌ (4GB + 6BGB) ಬೆಲೆ 11,499ರೂ. ಆಗಿದ್ದು, ಸದ್ಯ 6,299ರೂ. ಗಳ ಆಫರ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದರ ಜೊತೆಗೆ ನೋ ಕಾಸ್ಟ್‌ ಇಎಮ್‌ಐ (No Cost EMI) ಅವಕಾಶವು ಗ್ರಾಹಕರಿಗೆ ಸಿಗಲಿದೆ. ಇದರೊಂದಿಗೆ ಆಯ್ದ ಕೆಲವು ಬ್ಯಾಂಕ್‌ಗಳಿಂದ ಹೆಚ್ಚುವರಿ ರಿಯಾಯಿತಿ ಸಹ ದೊರೆಯುತ್ತದೆ. ಹಾಗಾದರೇ ಟೆಕ್ನೋ ಸ್ಪಾರ್ಕ್‌ 9 ಮೊಬೈಲ್‌ನ ಫೀಚರ್ಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿರಿ.

ಡಿಸ್ಪ್ಲೇ (Display)

ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ 6.6 ಇಂಚಿನ ಡಿಸ್‌ಪ್ಲೇಯನ್ನು (Display)ಹೊಂದಿದೆ. ಇದು 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌(Screen resolution) ಅನ್ನು ಪಡೆದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ (refresh rate)ಅನ್ನು ಪಡೆದಕೊಂಡಿದೆ. 266 ppi ಪಿಕ್ಸೆಲ್‌ ಸಾಂದ್ರತೆಯನ್ನು ಹೊಂದಿದೆ. ಈ ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನಾಚ್‌ ಶೈಲಿಯನ್ನು ಪಡೆದಿದ್ದು, ವೀಡಿಯೋ ವೀಕ್ಷಣೆಗೆ ಹಾಗೂ ವೀಡಿಯೋ ಕರೆಗಳಿಗೆ ಸೂಕ್ತ ಮಾದರಿಯನ್ನು ಪಡೆದುಕೊಂಡಿದೆ.
ಟೆಕ್ನೋ ಸ್ಪಾರ್ಕ್‌ 9 ಮೊಬೈಲ್‌ ಮೀಡಿಯಾ ಟೆಕ್‌ ಹಿಲಿಯೋ (media tek helio)G37 SoC ಪ್ರೊಸೆಸರ್‌ ಪವರ್ ಪಡೆದಿದ್ದು, ಪೂರಕವಾಗಿ ಆಂಡ್ರಾಯ್ಡ್ 12 (Android 12) ಸಪೋರ್ಟ್‌ ನೊಂದಿಗೆ ಕಾರ್ಯ ನಿರ್ವಹಿಸಲಿದೆ.

tel share transformed

ಕ್ಯಾಮೆರಾ (Camera)

ಟೆಕ್ನೋ ಸ್ಪಾರ್ಕ್‌ 9 ಮೊಬೈಲ್‌ ಡ್ಯುಯಲ್‌ ರಿಯರ್‌ (Dual rear camera) ಕ್ಯಾಮೆರಾ ಅನ್ನು ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 13MP ಸೆನ್ಸಾರ್‌ ಮತ್ತು AI ಕ್ಯಾಮೆರಾವನ್ನು ಒಳಗೊಂಡಿದೆ. ಈ ಕ್ಯಾಮೆರಾ LED ಫ್ಲ್ಯಾಷ್ ಸಹ ಪಡೆದಿದೆ. ಇದರ ಜೊತೆಗೆ ಪೂರಕವಾಗದ ಸೆಲ್ಫಿ ಕ್ಯಾಮೆರಾ(Selfie camera) ಸಹ ಈ ಫೋನ್‌ ಪಡೆದಿದೆ.

ಬ್ಯಾಟರಿ (Battery)

ಟೆಕ್ನೋ ಸ್ಪಾರ್ಕ್‌ 9 ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ (battery packup)ಸೌಲಭ್ಯ ಅನ್ನು ಒಳಗೊಂಡಿದೆ.

ಸ್ಟೋರೇಜ್ (Storage)
ದೇಶೀಯ ಮಾರುಕಟ್ಟೆಯಲ್ಲಿ ಟೆಕ್ನೋ ಸ್ಪಾರ್ಕ್‌ 9 ಮೊಬೈಲ್‌ 4GB RAM + 64GB, 6GB RAM + 128 GB ಹಾಗೂ 3GB RAM + 64GB ಸ್ಟೋರೇಜ್‌ ಸಾಮರ್ಥ್ಯದ ಮೂರು ವೇರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.ಹಾಗೆಯೇ ಇದರಲ್ಲಿ ನೀವು ವರ್ಚುವಲ್‌ RAM ಫೀಚರ್ಸ್‌ ಮೂಲಕ 5GB RAM ವರೆಗೆ RAM ವಿಸ್ತರಿಸಬಹುದು.
ಈ ಫೋನ್‌ ಅನ್ನು ನೀವು ಇನ್ಫಿನಿಟಿ ಬ್ಲಾಕ್ ಮತ್ತು ಸ್ಕೈ ಮಿರರ್ ಬಣ್ಣಗಳಲ್ಲಿ ಗ್ರಾಹಕರು ಖರೀದಿ ಮಾಡಬಹುದಾಗಿದೆ.

ಇತರೆ ಕನೆಕ್ಟಿವಿಟಿ ಆಯ್ಕೆಗಳು (other connectivity)

ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ (wifi)ಮತ್ತು ಬ್ಲೂಟೂತ್ (bluetooth)GPS, GNSS, ಗೆಲಿಲಿಯೋ, ಬೀಡೌ ಮತ್ತು 4G LTE ಅನ್ನು ಪಡೆದಿದೆ. ಇದಲ್ಲದೆ ಈ ಮೊಬೈಲ್‌ DTS ಬೆಂಬಲಿಸುವ ಸ್ಪೀಕರ್‌ಗಳನ್ನು ಒಳಗೊಂಡಿದೆ. ಇದರ ಜೊತೆಗೆ ಲೈಟ್‌ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್‌, ಆಕ್ಸಿಲೆರೊಮೀಟರ್‌ ಅನ್ನು ಸಹ ಇದು ಪಡೆದುಕೊಂಡಿದೆ.

ನೀವೂ ಕೂಡಾ ಈ ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ ಅನ್ನು ಉತ್ತಮ ರಿಯಾಯಿತಿ ದರದಲ್ಲಿ ಖರೀದಿ ಮಾಡಿ ನಿಮ್ಮದಾಗಿಸಿಕೊಳ್ಳಿ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಸ್ಮಾರ್ಟ್‌ಫೋನ್‌ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!