ಹೊಸ ವರ್ಷದ(New year)ಹೊಸ ಸೂರ್ಯೋದಯದೊಂದಿಗೆ, ಬೆಂಗಳೂರು ತನ್ನ ಜನರಿಗೆ ಹೊಸ ಉಡುಗೊರೆಯನ್ನು ನೀಡಿತು. ಪಶ್ಚಿಮ ಬಂಗಾಳದ ಮಾಲ್ಡಾ(West bengal, Malda) ದಿಂದ ಬಂದ ಅಮೃತ್ ಭಾರತ್ ರೈಲು (Amrutha bharat Train), ಹೊಸ ವರ್ಷದ ಮೊದಲ ದಿನವೇ ನಗರಕ್ಕೆ ಆಗಮಿಸಿತು. ಈ ರೈಲಿನ ವಿಶೇಷತೆ ಹಾಗೂ ಇದು ಎಲ್ಲೆಲ್ಲಿ ಸಂಚಾರ ವಹಿಸುತ್ತದೆ ಎಂದು ತಿಳಿಯಲು ಈ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದಲ್ಲಿ ಅಮೃತ್ ಭಾರತ್ ರೈಲು ಸಂಚಾರ :
ಪಶ್ಚಿಮ ಬಂಗಾಳ ಮತ್ತು ಕರ್ನಾಟಕದ ನಡುವಿನ ಸಂಪರ್ಕವನ್ನು ಸುಧಾರಿಸುವ ಪ್ರಯತ್ನದಲ್ಲಿ ಮಾಲ್ಡಾ ಟೌನ್(Malda Town) ನಿಂದ ಬೆಂಗಳೂರ(Bengaluru)ಗೆ ಅಮೃತ್ ಭಾರತ್ ಎಕ್ಸ್ಪ್ರೆಸ್(Amruth bharat express) ರೈಲಿಗೆ ನರೇಂದ್ರ ಮೋದಿ(Narendra Modi) ಅವರು ಚಾಲನೆ ನೀಡಿದ್ದಾರೆ. ಭಾರತದ ಪ್ರಧಾನ ಮಂತ್ರಿ ಅವರು ಡಿಸೆಂಬರ್ 30 ರಂದು ವೀಡಿಯೊ ಲಿಂಕ್ ಮೂಲಕ ಈ ರೈಲಿಗೆ ಫ್ಲ್ಯಾಗ್‌ಆಫ್ ಮಾಡಿದ್ದರು.
ಅಮೃತ್ ಭಾರತ್ ರೈಲು ಬೆಂಗಳೂರು ಮತ್ತು ಮಾಲ್ಡಾ ನಡುವೆ ವಾರಕ್ಕೊಮ್ಮೆ ಸಂಚರಿಸುತ್ತದೆ. ಇದು ಬೆಂಗಳೂರಿನಲ್ಲಿರುವ ಜನರಿಗೆ ಪಶ್ಚಿಮ ಬಂಗಾಳದ ಪ್ರವಾಸಿ ತಾಣಗಳಿಗೆ ಪ್ರಯಾಣಿಸಲು ಅನುಕೂಲವನ್ನು ಒದಗಿಸುತ್ತದೆ. ಈ ರೈಲಿನ ಆಗಮನವು ಬೆಂಗಳೂರಿನ ಜನರಲ್ಲಿ ಹೊಸ ಉತ್ಸಾಹವನ್ನುಂಟುಮಾಡಿದೆ. ಇದು ಭಾರತೀಯ ರೈಲ್ವೆಯ ಸುಧಾರಣೆಗಳತ್ತ ಮತ್ತೊಂದು ಹೆಜ್ಜೆಯಾಗಿದೆ.
ಅಮೃತ್ ಭಾರತ್ ರೈಲಿನ ವಿಶೇಷತೆಗಳು:
ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸಲು, ಭಾರತೀಯ ರೈಲ್ವೆ ಇತ್ತೀಚೆಗೆ ಹೊಸದಾಗಿ ವಿನ್ಯಾಸಗೊಳಿಸಿದ ಕೇಸರಿ ಬಣ್ಣದ ರೈಲುಗಳನ್ನು ಪರಿಚಯಿಸಿದೆ. ಪ್ರತಿ ರೈಲು 22 ಕೋಚ್‌ಗಳನ್ನು ಹೊಂದಿದ್ದು, 1834 ಪ್ರಯಾಣಿಕರನ್ನು ಸಾಗಿಸಬಹುದು. ಈ ರೈಲುಗಳು ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲವು.
ಈ ರೈಲುಗಳಲ್ಲಿನ ಪ್ರಮುಖ ವೈಶಿಷ್ಟ್ಯಗಳು ಈ ಕೆಳಗಿನಂತಿವೆ:
ಆಕರ್ಷಕ ಒಳ ವಿನ್ಯಾಸ: ಕವಚ್ ತಂತ್ರಜ್ಞಾನವನ್ನು ಬಳಸಿಕೊಂಡು ವಿನ್ಯಾಸಗೊಳಿಸಲಾದ ಒಳ ವಿನ್ಯಾಸವು ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಆಹ್ಲಾದಕರ ಪ್ರಯಾಣವನ್ನು ಒದಗಿಸುತ್ತದೆ.
ಉತ್ತಮ ಬೆಳಕು: ಎಲ್‌ಇಡಿ ಬೆಳಕುಗಳು ಪ್ರಯಾಣಿಕರಿಗೆ ಉತ್ತಮ ದೃಷ್ಟಿ ಮತ್ತು ಭದ್ರತೆಯನ್ನು ಒದಗಿಸುತ್ತದೆ.
ಸಿಸಿಟಿವಿ(CCTV): ರೈಲಿನ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮೆರಾಗಳು ಸುರಕ್ಷತೆಯನ್ನು ಖಚಿತಪಡಿಸುತ್ತವೆ.
ಮೊಬೈಲ್ ಫೋನ್ ಚಾರ್ಜಿಂಗ್: ವಿವಿಧ ಬಗೆಯ ಮೊಬೈಲ್ ಫೋನ್ ಚಾರ್ಜಿಂಗ್ ಪಾಯಿಂಟ್‌ಗಳು ಪ್ರಯಾಣಿಕರಿಗೆ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ.
ಉನ್ನತೀಕರಿಸಿದ ಶೌಚಾಲಯ: ಉನ್ನತ ಮಟ್ಟದ ಶುಚಿತ್ವ ಮತ್ತು ಸೌಕರ್ಯಗಳನ್ನು ಒದಗಿಸುವ ಉನ್ನತೀಕರಿಸಿದ ಶೌಚಾಲಯಗಳು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ.
ಬೋಗಿ ಒಳಗೆ ವಿಶೇಷತೆಗಳು :
ಮಡಿಸಬಹುದಾದ ತಿಂಡಿ ಟೇಬಲ್ – ಪ್ರಯಾಣದ ಸಮಯದಲ್ಲಿ ತಿಂಡಿ ತಿನ್ನಲು ಅಥವಾ ಕೆಲಸ ಮಾಡಲು ಒಂದು ಸುಲಭವಾದ ಮಾರ್ಗ. ತಿಂಡಿಗಾಗಿ ಸ್ಥಳವನ್ನು ಹುಡುಕಲು ನೀವು ಹೆಚ್ಚು ಶ್ರಮಿಸಬೇಕಾಗಿಲ್ಲ
ಸೂಕ್ತವಾದ ಹೋಲ್ಡರ್ ಹೊಂದಿರುವ ಮೊಬೈಲ್ ಚಾರ್ಜರ್ – ನಿಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡಲು ಒಂದು ಆರಾಮದಾಯಕ ಮತ್ತು ಸುರಕ್ಷಿತ ಮಾರ್ಗ. ನಿಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡಲು ಅನುವು ಮಾಡಿ ಕೊಡುತ್ತದೆ.
ಮಡಿಸಬಹುದಾದ ಬಾಟಲ್ ಹೋಲ್ಡರ್ – ನಿಮ್ಮ ಪಾನೀಯವನ್ನು ಹಿಡಿದಿಟ್ಟುಕೊಳ್ಳಲು ಒಂದು ಸ್ಥಳ.
ಆಹ್ಲಾದಕರ, ಕಲಾತ್ಮಕವಿನ್ಯಾಸದ ಆಸನ – ಪ್ರಯಾಣವನ್ನು ಹೆಚ್ಚು ಆನಂದದಾಯಕ ಮತ್ತು ಸುಂದರವಾಗಿಸುತ್ತದೆ.
ಸುಧಾರಿತ ಲಗೇಜ್ ರ್ಯಾಕ್ – ನಿಮ್ಮ ಲಗೇಜ್ ಅನ್ನು ಸುರಕ್ಷಿತವಾಗಿ ಮತ್ತು ಆರಾಮವಾಗಿ ಸಂಗ್ರಹಿಸಲು.
ಸುರಕ್ಷಿತ ಪ್ರಯಾಣಕ್ಕಾಗಿ CCTV ಕಣ್ಗಾವಲು – ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಗಾಗಿ. ನಿಮ್ಮ ಪ್ರಯಾಣವನ್ನು ಹೆಚ್ಚು ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿಸಲು CCTV ಅಳವಡಿಸಿಲಾಗಿದೆ.
ಅಮೃತ್ ಭಾರತ್ ರೈಲು ವೇಳಾಪಟ್ಟಿ :
ಬೆಂಗಳೂರಿಗೆ ಮಾಲ್ಡಾ ಟೌನ್‌ನಿಂದ ಪ್ರಯಾಣ
ರೈಲು ಸಂಖ್ಯೆ: 13434
ನಿರ್ಗಮನ ನಿಲ್ದಾಣ(Departure): ಮಾಲ್ಡಾ ಟೌನ್
ಆಗಮನ ನಿಲ್ದಾಣ(Arrival): ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು
ನಿರ್ಗಮನ ಸಮಯ(Departure time): ಭಾನುವಾರದಂದು ಬೆಳಿಗ್ಗೆ 8.50 ಗಂಟೆ
ಆಗಮನ ಸಮಯ(Arrival time): ಮಂಗಳವಾರದಂದು ಬೆಳಿಗ್ಗೆ 3.00 ಗಂಟೆ
ಮಾಲ್ಡಾ ಟೌನ್‌ಗೆ ಬೆಂಗಳೂರಿನಿಂದ ಪ್ರಯಾಣ
ರೈಲು ಸಂಖ್ಯೆ: 13433
ನಿರ್ಗಮನ ನಿಲ್ದಾಣ(Departure): ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು
ಆಗಮನ ನಿಲ್ದಾಣ(Arrival): ಮಾಲ್ಡಾ ಟೌನ್
ನಿರ್ಗಮನ ಸಮಯ(Departure time): ಮಂಗಳವಾರದಂದು ರಾತ್ರಿ 1.50 ಗಂಟೆ
ಆಗಮನ ಸಮಯ(Arrival time): ಗುರುವಾರದಂದು ಬೆಳಿಗ್ಗೆ 11 ಗಂಟೆ
ನಿಲುಗಡೆಯ ಸ್ಥಳಗಳು :
ನ್ಯೂ ಫರಕ್ಕಾ, ಗುಮಾನಿ, ರಾಮ್‌ಪುರಹತ್, ಬೋಲ್ಪುರ್ ಶಾಂತಿನಿಕೇತನ, ಬರ್ದ್ಧಮಾನ್, ದಂಕುಣಿ, ಭಟ್ಟನಗರ, ಅಂದೂಲ್, ಖರಗ್‌ಪುರ, ಬೆಲ್ಡಾ, ಜಲೇಶ್ವರ, ಬಾಲಸೋರ್, ಸೊರೊ, ಭದ್ರಕ್, ಕಟಕ್, ಭುವನೇಶ್ವರ, ಖುರ್ದಾ ರಸ್ತೆ ಬ್ರಹ್ಮಪುರ, ಪಲಾಸ, ಶ್ರೀಕಾಕುಳಂ, ವಿಜಯನಗರ, ವಿಶಾಖಪಟ್ಟಣಂ, ದುವ್ವಾಡ, ತುನಿ, ಸಮಲ್ಕೋಟ್, ರಾಜಮಂಡ್ರಿ, ಏಲೂರು, ವಿಜಯವಾಡ, ತೆನಾಲಿ, ಚಿರಾಲ, ಓಂಗೋಲ್, ನೆಲ್ಲೂರು, ಗುಡೂರು, ರೇಣಿಗುಂಟಾ, ಕಟಪಾಡಿ ಮತ್ತು ಜೋಲಾರ್‌ಪೇಟೆ ವಿಜಿಯಾನಗರದಲ್ಲಿ ನಿಲುಗಡೆ ಇರುತ್ತದೆ.
ಈ ರೈಲುಗಳು ವಂದೇ ಭಾರತ್ ಮಾದರಿಯಲ್ಲಿ ಹಲವು ಆಧುನಿಕ ಸೌಲಭ್ಯಗಳನ್ನು ಹೊಂದಿವೆ. ಈ ಸೌಲಭ್ಯಗಳು ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣವನ್ನು ಒದಗಿಸುತ್ತದೆ. ಈ ರೈಲುಗಳು ದೀರ್ಘ ದೂರ ಪ್ರಯಾಣಿಸಲು ಉತ್ತಮ ಆಯ್ಕೆಯಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.