ಸ್ಯಾಮ್ ಸಂಗ್ (Samsung) ದೇಶದಲ್ಲಿ ತನ್ನದೇ ಆದ ಬ್ರಾಂಡ್ ಅನ್ನು ನಿರೂಪಿಸಿಕೊಂಡಿದೆ. ಸ್ಯಾಮ್‌ಸಂಗ್ ಸ್ಮಾರ್ಟ್ ಫೋನ್‌ಗಳೆಂದರೆ (Samsung Smart phones) ಯಾರಿಗೆ ಇಷ್ಟಾ ಇಲ್ಲಾ ಹೇಳಿ. ಸ್ಯಾಮ್‌ಸಂಗ್ ಫೋನ್‌ಗಳು (Samsung phones) ದೀರ್ಘ ಬಾಳಿಕೆ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿ ಪಡೆದು ಕೊಂಡಿದೆ. ಸ್ಯಾಮ್ ಸಂಗ್ ಫೋನ್ ಗಳು ಭಾರತದಲ್ಲಿ ಹೆಚ್ಚಿನ ಮೆಚ್ಚುಗೆಯನ್ನು ಪಡೆದುಕೊಂಡಿದೆ ಮತ್ತು ಈ ಕಾರಣಕ್ಕೆ ಭಾರತವೂ ಸ್ಯಾಮ್‌ಸಂಗ್ ಅನ್ನು ಉತ್ತಮ ಸ್ಥಾನದಲ್ಲಿ ಇರುವಂತೆ ಮಾಡಿದೆ. ಅದರಲ್ಲೂ ಇತ್ತೀಚಿನ ದಿನಮನ ಗಳಲ್ಲಿ ಸ್ಯಾಮ್ ಸಂಗ್ ಫೋನ್ ಪ್ರಿಯರು ಹೆಚ್ಚಾಗಿದ್ದಾರೆ. ಅದರ ಜೊತೆಗೆ ಅಷ್ಟೇ ಹೆಚ್ಚು ಮಾರಾಟ ಕೂಡಾ ಆಗುತ್ತಿವೆ ಎಂದು ನಾವು ತಿಳಿಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE 5G ಸ್ಮಾರ್ಟ್‌ಫೋನ್:
ಇದೀಗ ಹೊಸ ವರ್ಷದ ಪ್ರಯುಕ್ತ ಹೊಸ ಮೊಬೈಲ್ ಖರೀದಿಸಬೇಕೆಂದು ಯೋಚನೆ ಮಾಡುತ್ತಿರುವವರಿಗೆ, ಗುಡ್ ನ್ಯೂಸ್ ಒಂದು ಸಿಕ್ಕಿದೆ. ಏನದು ಗುಡ್ ನ್ಯೂಸ್ ಎಂದು ಯೋಚನೆ ಬರುತ್ತಿದೆಯೇ, ಹೌದು ಅದೇನೆಂದರೆ, ಇದೀಗ ಸ್ಯಾಮ್‌ಸಂಗ್ ಪೋನ್ ಖರೀದಿ ಮಾಡಬೇಕು ಎನ್ನುವರಿಗೆ ಬಿಗ್ ಆಫರ್ (big offer)ಸಿಕ್ಕಿದೆ. ಜನಪ್ರಿಯ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ (Flipkart) ತಾಣದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE 5G ಸ್ಮಾರ್ಟ್‌ಫೋನ್ (Samsung galaxy S21 FE 5G smartphone) ಬರೋಬ್ಬರಿ 53% ಡಿಸ್ಕೌಂಟ್ ಪಡೆದುಕೊಂಡಿದೆ. ಇದರಿಂದ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ಇಳಿಕೆಯನ್ನು ಕಾಣಬಹುದಾಗಿದೆ.
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಾಪ್(triple rear camera setup) ಅನ್ನು ಒಳಗೊಂಡಿದೆ. ಇದು Exynos ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 4,5000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ. ಹಾಗಾದರೆ ಈ ಸ್ಯಾಮ್ ಸಂಗ್ ಗ್ಯಾಲಕ್ಸಿ (Samsung galaxy) ಸ್ಮಾರ್ಟ್‌ಫೋನ್ ಕುರಿತು ಸಂಪೂರ್ಣವಾಗಿ ಯಾವೆಲ್ಲಾ ಫೀಚರ್ಸ್ ಹೊಂದಿದೆ ಮತ್ತು ಆಫರ್ ಬೆಲೆ(Offer price) ಬಗ್ಗೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಈ ಫೋನಿನ ವೈಶಿಷ್ಟಗಳು :
ಮೊದಲನೆಯದಾಗಿ, ಡಿಸ್ಪ್ಲೇ (Display)
ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್ (Samsung galaxy S21 FE smartphone) 6.4 ಇಂಚಿನ AMOLED ಡಿಸ್‌ಪ್ಲೇಯನ್ನು(display) ಹೊಂದಿದೆ. ಇನ್ನು ಈ ಡಿಸ್‌ಪ್ಲೇ 2340 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು (Screen resolution capacity) ಪಡೆದಿದ್ದು, 120Hz ರಿಫ್ರೆಶ್ ರೇಟ್ (refresh rate) ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ (touch slaping rate) ಅನ್ನು ಬೆಂಬಲಿಸುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್ ಎಕ್ಸಿನೋಸ್(Exynos) ಪ್ರೊಸೆಸರ್ ಪವರ್ ಪಡೆದುಕೊಂಡಿದೆ. ಇದು one UI 4.0 ಆಧಾರಿತ ಆಂಡ್ರಾಯ್ಡ್ 12 (Android 12) ಔಟ್ ಆಫ್ ದಿ ಬಾಕ್ಸ್‌ನಲ್ಲಿ (Out of the box) ಕಾರ್ಯ ನಿರ್ವಹಿಸಲಿದೆ.
ಕ್ಯಾಮೆರಾ (Camera):
ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್(Triple rear camera setup) ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ (main camera) 12MP ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಎರಡನೇ ಕ್ಯಾಮೆರಾ 12MP ಅಲ್ಟ್ರಾವೈಡ್ ಸೆನ್ಸಾರ್ (ultrawide sensor) ಅನ್ನು ಹೊಂದಿದೆ. ಇನ್ನು ಮೂರನೇ ಕ್ಯಾಮೆರಾ 8MP 3x ಟೆಲಿಫೋಟೋ ಸೆನ್ಸಾರ್ (teliphoto sensor)ಅನ್ನು ಒಳಗೊಂಡಿದೆ. ಮತ್ತು ಸೆಲ್ಫಿಗಾಗಿ ಮುಂಭಾಗದ ಒಂದೇ 32MP ಫಿಕ್ಸೆಡ್ ಫೋಕಸ್ ಸೆಲ್ಫಿ ಕ್ಯಾಮೆರಾವನ್ನು(Selfie camera) ಹೊಂದಿದೆ.
ಸ್ಟೋರೇಜ್ (Storage):
ಈ ಸ್ಮಾರ್ಟ್ ಫೋನ್ ಮೂರು ವೇರಿಯೆಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ.
6GB ಮತ್ತು 128GB
8GB ಮತ್ತು 128GB
8GB ಮತ್ತು 256GB ಮೂರು ಇಂಟರ್ನಲ್ ಸ್ಟೋರೇಜ್ (Internal storage) ಸಾಮರ್ಥ್ಯ ಹೊಂದಿದೆ. ಇದರಲ್ಲಿ 8GB ಮತ್ತು 128GB ಸ್ಟೋರೇಜ್ ಆಯ್ಕೆಗೆ ಈ ರಿಯಾಯಿತಿಯು ಅನ್ವಯವಾಗುತ್ತಿದೆ.
ಬ್ಯಾಟರಿ (Battery):
ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE 4,500mAh ಸಾಮರ್ಥ್ಯದ ಬ್ಯಾಟರಿಯನ್ನು (Battery)ಒಳಗೊಂಡಿದೆ. ಇದು 25W ವೈರ್ಡ್ ಫಾಸ್ಟ್ ಚಾರ್ಜಿಂಗ್(wired fast charging) ಮತ್ತು 15W ವೈರ್‌ಲೆಸ್ ಚಾರ್ಜಿಂಗ್ (Wireless charging) ಅನ್ನು ಬೆಂಬಲಿಸಲಿದೆ. ಇನ್ನು ಇತರೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್(hotspot), ಬ್ಲೂಟೂತ್ (bluetooth), ವೈಫೈ (wifi), USB C ಪೋರ್ಟ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಹಲವಾರು ಶೂಟಿಂಗ್ ಮೋಡ್‌ಗಳನ್ನು (Shooting mode)ಸಹ ಹೊಂದಿದೆ. ಅಷ್ಟೇ ಅಲ್ಲದೆ ಅಂಡರ್ ಡಿಸ್‌ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ (under display optical fingerprint scanner) ಅನ್ನು ಪಡೆದುಕೊಂಡಿದೆ.
ಬೆಲೆ ಮತ್ತು ಲಭ್ಯತೆ (Price):
ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್(Flipkart) ತಾಣದಲ್ಲಿ 74,999ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಆದರೆ ಇದರ ಮೇಲೆ 53% ಡಿಸ್ಕೌಂಟ್(discount) ನೀಡಲಾಗುತ್ತಿರುವುದರಿಂದ ಕೇವಲ 34,999ರೂ ಬೆಲೆಗೆ ಲಭ್ಯವಾಗುತ್ತಿದೆ. ಇದಲ್ಲದೆ ವಿವಿಧ ಬ್ಯಾಂಕ್ ಕಾರ್ಡ್‌ಗಳ (bank card) ಮೂಲಕ ಈ ಫೋನ್ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ (more disscount) ಅಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.
ನೀವೂ ಕೂಡಾ ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE 5G ಸ್ಮಾರ್ಟ್ ಫೋನ್ ಅನ್ನು ಉತ್ತಮ ರಿಯಾಯಿತಿ ದರದಲ್ಲಿ ಖರೀದಿ ಮಾಡಿ ನಿಮ್ಮದಾಗಿಸಿಕೊಳ್ಳಿ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಸ್ಮಾರ್ಟ್‌ಫೋನ್ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.