ಇದೀಗ ರಾಜ್ಯದ ಜನತೆಗೆ ಒಂದು ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯು ( Gruhalakshmi Scheme ) ಬಳಷ್ಟು ಮಹಿಳೆಯರಿಗೆ ದಾರಿ ದೀಪವಾಗಿದೆ. ಪ್ರತಿ ತಿಂಗಳು ರಾಜ್ಯದ ಮಹಿಳೆಯರು ಅಂದರೆ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತಿದೆ. ಹಾಗೆಯೇ ಮೊದಲು ಈ ಯೋಜನೆಯಲ್ಲಿ ಆಗುತ್ತಿದ್ದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಇದೀಗ ಎಲ್ಲ ಕಂತಿನ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಹಾಗೆಯೇ ಇದೀಗ ಗೃಹಲಕ್ಷ್ಮಿ ಯೋಜನೆಯ ಪ್ರತಿ ಕಂತಿನ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ರೇಷನ್ ಕಾರ್ಡ್ ನಂಬರ್ ( Ration Card Number ) ಬಳಸಿ ಚೆಕ್ ( Status Check ) ಮಾಡಬಹುದು. ಅದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಹೇಗೆ ಎಂದು ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸ್ಟೇಟಸ್ ಚೆಕ್ ಮಾಡಲು ಹೊಸ ವೆಬ್ ಲಿಂಕ್ ( Gruhalakshmi Status link ) ಬಿಡುಗಡೆ :
ರಾಜ್ಯ ಸರಕಾರದ ವತಿಯಿಂದ ಚಾಲ್ತಿಯಲ್ಲಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ ಹೊಸ ರೂಲ್ಸ್ ( New Rules ) ಮತ್ತು ಹಲವು ಬದಲಾವಣೆ ಮಾಡಲಾಗಿದೆ. ಹಾಗಾಗಿ ಮಾಹಿತಿ ಕಣಜ ತಂತ್ರಾಂಶ ವಿಭಾಗದಿಂದ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿ ( Application Information ) ಮತ್ತು ಪ್ರತಿ ತಿಂಗಳ ಹಣ ವರ್ಗಾವಣೆ ವಿವರವನ್ನು ತಿಳಿಯಲು ಹೊಸ ವೆಬ್ ಲಿಂಕ್ ಬಿಡುಗಡೆ ಮಾಡಲಾಗಿದೆ. ಅದರ ಮೂಲಕ ನಿಮ್ಮ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಗೃಹಲಕ್ಷ್ಮೀ ಹಣ ಜಮಾ ಸ್ಟೇಟಸ್ ಮೊಬೈಲ್ ನಲ್ಲೆ ಚೆಕ್ ಮಾಡಿ
ಗೃಹಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿಗಳು ಪ್ರತಿ ತಿಂಗಳು 2,000 ರೂ ಅನ್ನು ಪಡೆಯುತ್ತಿದ್ದಾರೆ. ಹಾಗೆಯೇ ಅವರು ಪಡೆದ ಅಥವಾ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ಅವರಿಗೆ ತಿಳಿಯುದಿಲ್ಲ. ಇದೀಗ ರಾಜ್ಯ ಸರ್ಕಾರ ಆ ಒಂದು ಸಮಸ್ಯೆಯನ್ನು ಪರಿಹರಿಸಿದೆ. ನಿಮ್ಮ ಮೊಬೈಲ್ ಮೂಲಕವೇ ರೇಷನ್ ಕಾರ್ಡ್ ನಂಬರ್ ( Ration Card Number ) ಬಳಸಿ ಹಣ ಜಮಾ ಅಥವಾ ಅರ್ಜಿ ಸಲ್ಲಿಸಿದ ವಿವರ ತಿಳಿಯಬಹುದು.
ರೇಷನ್ ಕಾರ್ಡ್ ನಂಬರ್ ಬಳಸಿ ಗೃಹಲಕ್ಷ್ಮಿ ಹಣ ಜಮಾ ಮಾಹಿತಿ ತಿಳಿಯುವ ವಿಧಾನ ( Steps for Checking Application Status ) :
ಹಂತ 1: ಈ ಕೆಳಗೆ ಕೊಟ್ಟಿರುವ ಡೈರೆಕ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ
https://mahitikanaja.karnataka.gov.in/Service/Service/3136
ಹಂತ 2 : ರಾಜ್ಯ ಸರಕಾರದ ಅಧಿಕೃತ ಇ- ಆಡಳಿತ ವಿಭಾಗದ ಮಾಹಿತಿ ಕಣಜ ಜಾಲತಾಣದ ಈ ಪುಟದಲ್ಲಿ ಕಾಣುವ “ಗೃಹಲಕ್ಷ್ಮಿ ಅಪ್ಲಿಕೇಶನ್ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಹಂತ 3 : ಅದಾದ ನಂತರ ಅರ್ಜಿದಾರರ 12 ಅಂಕಿಯ ರೇಷನ್ ಕಾರ್ಡ್ ನಂಬರ್ ಅನ್ನು ಸರಿಯಾಗಿ ನಮೂದಿಸಿ ಪಕ್ಕದಲ್ಲೇ ಕಾಣುವ “Submit” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಹಂತ 4 : ಈ ರೀತಿ ಕ್ಲಿಕ್ ಮಾಡಿದ ನಂತರ ಈ ಪುಟದಲ್ಲಿ ನೀವು ಅರ್ಜಿ ಸಲ್ಲಿಸಿದ ದಿನಾಂಕ (Applied date), ನಿಮ್ಮ ಅರ್ಜಿ ಸ್ಥಿತಿ (Status), ಅರ್ಜಿ ಅನುಮೋದನೆಯಾದ ದಿನಾಂಕ (Approved date) ಮತ್ತು ಕೊನೆಯಲ್ಲಿ ಹಣ ವರ್ಗಾವಣೆ ವಿವರ (Payment date and amount) ಎಂದು ತೋರಿಸುತ್ತದೆ ಬಳಿಕ ಇಲ್ಲಿ “Details” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಹಂತ 6 : ಆ ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮಗೆ ಗೃಹಲಕ್ಷ್ಮಿ ಯೋಜನೆಯಡಿ ತಿಂಗಳುವಾರು ಯಾವ ಯಾವ ದಿನದಂದು 2000 ರೂ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಅಗಿದೆ ಎಂದು ಆ ಪೇಜ್ ನಲ್ಲಿ ತೋರಿಸುತ್ತದೆ.
ಫಲಾನುಭವಿಗಳ ಗಮನಕ್ಕೆ ( Important Notice ) :
ಈ ಮೇಲಿನ ಹಂತಗಳನ್ನು ಬಳಸಿಕೊಂಡು ನಿಮ್ಮ ರೇಷನ್ ಕಾರ್ಡ ನಂಬರ್ ಹಾಕಿ ಅರ್ಜಿ ಮಾಹಿತಿ ಮತ್ತು ಹಣ ಜಮಾ ವಿವರ ಚೆಕ್ ಮಾಡುವಾಗ ಯಾವುದೇ ವಿವರ ತೋರಿಸದಿದ್ದರೆ ಅದರ ಅರ್ಥ ನಿಮಗೆ ಈ ಯೋಜನೆಯಡಿ ಹಣ ಜಮಾ ಅಗಿರುವುದಿಲ್ಲ. ಅರ್ಜಿದಾರರು ಗೊಂದಲಕ್ಕೆ ಒಳಗಾಗದೆ ಒಮ್ಮೆ ನಿಮ್ಮ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ (CDPO) ಕಚೇರಿಯನ್ನು ಭೇಟಿ ಮಾಡಿ ನಿಮ್ಮ ಅರ್ಜಿ ಸ್ಥಿತಿ ಕುರಿತು ವಿಚಾರಿಸಬಹುದು. ಅಲ್ಲಿ ನಿಮಗೆ ಬೇಕಾದ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಇದುವರೆಗೂ ಒಂದು ಕಂತಿನ ಹಣ ಬರದೇ ಇದ್ದವರಿಗೆ ಹೊಸ ಮಾರ್ಗಸೂಚಿ ಪ್ರಕಟ, ಹೀಗೆ ಮಾಡಿ ₹2000/- ಬರುತ್ತೆ
- ಗೃಹಲಕ್ಷ್ಮಿ 2000/- ಹಣ ಪಡೆಯಲು ಹೊಸ ರೂಲ್ಸ್ ಜಾರಿ, 5ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ.!
- ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ
- ಇನ್ನೂ ಮುಂದೆ 2000/- ರೂ. ಇವರಿಗೆ ಬರುವುದಿಲ್ಲ, ಜನವರಿ ತಿಂಗಳ ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆ, ರದ್ದಾದ ಪಟ್ಟಿ ಬಿಡುಗಡೆ.!
- ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ
- ಬೆಳೆಹಾನಿ ಪರಿಹಾರದ ಹಣ ಇನ್ನೂ ಬಂದಿಲ್ವಾ? ಆಧಾರ್ ಲಿಂಕ್ ಆಗದೇ ಇರುವ ಪಟ್ಟಿ ಬಿಡುಗಡೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
My grahlakshmi application done in August month till now I didn’t receive even one installment amount.Everytime we check it is in still processing procedure.