ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ ತಮಿಳು ಸಿನಿಮಾ ಅನ್ನಪೂರ್ಣಿ ಚಿತ್ರ ತಂಡದ ವಿರುದ್ಧ ಕೆಲವು ದಿನಗಳ ಹಿಂದೆ ಎಫ್ಐಆರ್ ದಾಖಲಾಗಿತ್ತು. ನೀಲೇಶ್ ಕೃಷ್ಣ ನಿರ್ದೇಶನದ ಮತ್ತು ನಯನತಾರಾ ನಟಿಸಿರುವ ಈ ಚಿತ್ರವು ಡಿಸೆಂಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮತ್ತು ಡಿಸೆಂಬರ್ 29 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸಿತು. ಓಟಿಟಿಯಲ್ಲಿ ಬಿಡುಗಡೆ ಆದ ಒಂದೇ ವಾರದಲ್ಲಿ ಸಿನಿಮಾ ವಿರುದ ಟೀಕೆಗಳ ಮಹಾಪೂ ರವೇ ಹರಿದು ಬಂದಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ ಅನ್ನಪೂರ್ಣಿ ನಿರ್ಮಾಪಕರು ಕ್ಷಮೆಯಾಚಿಸಿದ ನಂತರ ಚಿತ್ರವನ್ನು OTT ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಅನ್ನಪೂರ್ಣಿ ಸಿನಿಮಾ ಕಥೆ ಏನು?
ಅನ್ನಪೂರ್ಣಿ ಚಿತ್ರದ ನಿರ್ದೇಶಕ ನಿಖಿಲ್ ಕೃಷ್ಣ ಅವರು ಹಿಂದೂ ಧರ್ಮದ ಸಾಂಪ್ರದಾಯಿಕ ಮನಸ್ಥಿತಿ ಮತ್ತು ಜಾತೀಯತೆ, ಮಡಿವಂತಿಕೆಯನ್ನು ಲೇವಡಿ ಮಾಡಿದಂತಿದೆ. ಬ್ರಾಹ್ಮಣರು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಇನ್ನು ಸ್ವಾತಂತ್ರ್ಯವನ್ನೇ ನೀಡಿಲ್ಲ ಎಂದು ಮುಸ್ಲಿಂ ಹೀರೋ ಮೂಲಕ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಇನ್ನೂ ಸಿನಿಮಾ ಕಥೆಗೆ ಬರುವುದಾದರೆ, ತಮಿಳುನಾಡಿನ ಶ್ರೀರಂಗಂನ ಸಂಪ್ರದಾಯಸ್ಥ ಅಯ್ಯಂಗಾರಿ ಕುಟುಂಬದ ಮಗಳು ಅನ್ನಪೂರ್ಣಿ. ತಲತಲಾಂತರದಿಂದ ಶ್ರೀರಂಗಂ ದೇವಸ್ಥಾನದಲ್ಲಿ ದೇವರ ನೈವೇದ್ಯ, ಪ್ರಸಾದ ತಯಾರಿಸುವ ಕುಟುಂಬ. ಅರ್ಚಕ ರಂಗರಾಜನ್ (ನಮ್ಮ ಕನ್ನಡದ ಅಚ್ಯುತ್ ಕುಮಾರ್) ಮುದ್ದಿನ ಮಗಳು ಅನ್ನಪೂರ್ಣಿಗೆ ಅಡುಗೆ ಮಾಡುವುದೆಂದರೆ ಅಚ್ಚುಮೆಚ್ಚು. ಆಕೆ ಕೈರುಚಿಗೆ ಸೋಲದವರಿಲ್ಲ. ಚಿಕ್ಕ ಹುಡುಗಿಯಾಗಿನಿಂದಲೇ ಅಡುಗೆ ಮನೆಯಲ್ಲೇ ಪ್ರಯೋಗಕ್ಕಿಳಿದು ಸಕ್ಸಸ್ ಆದವಳು. ಟಿವಿಯಲ್ಲೂ ಅಡುಗೆ ಕಾರ್ಯಕ್ರಮಗಳನ್ನೇ ನೋಡುತ್ತಾ ಬೆಳೆದ ಅನ್ನಪೂರ್ಣಿಗೆ ಅಪ್ಪನೇ ಬೆಂಬಲ. ದೇಶದ ಅತ್ಯುತ್ತಮ ಶೆಫ್ (ಬಾಣಸಿಗ) ಆಗಬೇಕೆಂಬ ಕನಸು. ಅದಕ್ಕಾಗಿ ಅಡುಗೆ ಕೋರ್ಸ್ ಸೇರುವ ಆಸೆ. ಅಲ್ಲಿಂದ ಶುರುವಾಗುತ್ತದೆ ಅಡ್ಡಿ. ಸಂಪ್ರದಾಯಸ್ಥ ಕುಟುಂಬ ಅನ್ನಪೂರ್ಣಿಯ ಆಸೆಗೆ ತಣ್ಣೀರೆರಚುತ್ತದೆ. ದೇವರಿಗೆ ಪ್ರಸಾದ ಮಾಡುವ ಕುಟುಂಬದ ಮಗಳು, ಕಾಲೇಜಿನಲ್ಲಿ ಮಾಂಸಾಹಾರ ಕಲಿಯುತ್ತಾಳೆಂದರೆ, ಯಾರು ಒಪ್ಪಿಯಾರು? ಮಾಂಸ ತಿನ್ನಬೇಕಾಗುತ್ತೆ, ರುಚಿ ನೋಡಬೇಕಾಗುತ್ತೆ ಎಂಬ ಅಪ್ಪನ ಮಾತು ಸಂದಿಗ್ಧತೆಗೆ ಸಿಲುಕಿಸುತ್ತದೆ. ಕುಟುಂಬವನ್ನು ವಿರೋಧಿಸಲಾರದೆ ಒದ್ದಾಡುವ ಅನ್ನಪೂರ್ಣಿಗೆ ಬೆಂಬಲವಾಗಿ ನಿಲ್ಲುವವನು ಸ್ನೇಹಿತ ಫರ್ಹಾನ್. ಎಂಬಿಎ ಮಾಡ್ತೀನಿ ಅಂತ ಸುಳ್ಳು ಹೇಳುವ ಅನ್ನಪೂರ್ಣಿ, ಅಡುಗೆ ಕಲಿಯುವ ಕೋರ್ಸ್ ಸೇರುತ್ತಾಳೆ. ಅಲ್ಲಿಂದ ಶುರುವಾಗುತ್ತದೆ ನೋಡಿ, ಬ್ರಾಹ್ಮಣ ಹುಡುಗಿ ಬದಲಾಗುವ ಪರಿ.
ಶೇಫ್ ಆಗುವ ಆಸೆಯಿಂದ ನಾನ್ ವೆಜ್ ಅಡುಗೆ ಮಾಡುವುದನ್ನು ಸಹಿತ ಅನ್ನಪೂರ್ಣಿ ಕಲಿಯುತ್ತಾಳೆ. ಎಷ್ಟೇ ಪ್ರಯತ್ನ ಪಟ್ಟರು ಚಿಕನ್ ಗ್ರೇವಿ ರುಚಿ ಆಗುವುದಿಲ್ಲ, ಆಗ ಹೀರೋ ಫರಾನ್ ಹೇಳುತ್ತಾನೆ ಅಡುಗೆಯನ್ನು ಆಸ್ವಾದಿಸಿದರಷ್ಟೇ ರುಚಿಯಾಗುವುದು ಈ ಮೂಲಕ ಹೀರೋಯಿನ್ ನಾನ್ ವೆಜ್ ತಿನ್ನಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ್ದಾರೆ. ಹೀರೋ ಮಾತಿಗೆ ತಲೆಯಾಡಿಸುವ ನಾಯಕಿ, ಮಾಂಸಾಹಾರಿಯಾಗಿ ಬದಲಾಗಲು ನಿರ್ಧರಿಸುತ್ತಾಳೆ. ಹೀರೋ ಕೊಡಿಸಿದ ಆಮ್ಲೆಟ್ ಅನ್ನು, ಶ್ರೀರಂಗಂ ದೇವಸ್ಥಾನದ ಅರ್ಚಕರ ಮಗಳು, ಸ್ವಲ್ಪವೂ ವಾಕರಿಸಿಕೊಳ್ಳದೇ ತಿಂದು ಚಪ್ಪರಿಸುತ್ತಾಳೆ. ಬ್ರಾಹ್ಮಣಳಾದರೂ, ತನ್ನ ಕನಸು ಈಡೇರಿಸಿಕೊಳ್ಳಲು ಮಾಂಸ ತಿನ್ನಲೇ ಬೇಕು ಎಂಬ ಹಠಕ್ಕೆ ಬಿದ್ದ ನಿರ್ದೇಶಕ, ವಾಕರಿಕೆ, ಹೀಕರಿಗೆಗೆ ಅವಕಾಶವನ್ನೇ ನೀಡಿಲ್ಲ.
ಮಾಂಸಾಹಾರ ತಿನ್ನಲು ಹಿಂಜರಿಯುವ ಪೂರ್ಣಿಗೆ ಗೆಳೆಯ ಫರ್ಹಾನ್ ಮೂಲಕ ರಾಮನ ಉದಾಹರಣೆ ಕೊಡಿಸಿ ಆಕೆಯ ಹಿಂಜರಿಕೆಗಳನ್ನು ಹೊಡೆದು ಓಡಿಸಿಬಿಡುತ್ತದೆ.
‘ವನವಾಸದಲ್ಲಿದ್ದ ರಾಮನೇ ಮಾಂಸಾಹಾರ ತಿನ್ನುತ್ತಿದ್ದ. ಹಸಿವಾದಾಗ ನಾಲ್ಕು ಪ್ರಾಣಿಗಳನ್ನು ಬೇಟೆಯಾಡಿ ರಾಮ, ಲಕ್ಷ್ಮಣರು ಸೀತೆಯೊಂದಿಗೆ ಊಟ ಮಾಡಿದ್ರು,’ ಎನ್ನುವ ಫರ್ಹಾನ್, ಇದಕ್ಕಾಗಿ ರಾಮಾಯಣದ ಶ್ಲೋಕ ಉಲ್ಲೇಖಿಸುತ್ತಾನೆ. ‘ನಮಾಜ್ ಮಾಡಿದ್ದು, ಬಿರಿಯಾನಿ ಮಾಡಲು ಹೇಳಿಕೊಟ್ಟವರ ನಂಬಿಕೆ. ಬಿರಿಯಾನಿಯ ಟೇಸ್ಟ್, ನಮಾಜ್ ಮಾಡೋದ್ರಿಂದ ಬರುತ್ತೆ. ಬಿರಿಯಾನಿ ಅಂದ್ರೆ ಜಸ್ಟ್ ಎಮೋಷನ್ ಅಷ್ಟೇ,’ ಎಂದು ಅನ್ನಪೂರ್ಣಿ ಮೂಲಕ ಹೇಳಿಸುತ್ತಾನೆ. ಬಿರಿಯಾನಿ ಮಾಡೋದನ್ನು ಹೇಳಿಕೊಟ್ಟವರ ಭಾವನೆಗೆ ಅನ್ನಪೂರ್ಣಿ ತಲೆಬಾಗಿ ನಮಾಜ್ ಮಾಡುವಂತೆ ತೋರಿಸುತ್ತಾನೆ.
ನೆಟ್‌ಫ್ಲಿಕ್ಸ್‌ನಿಂದ ಅನ್ನಪೂರ್ಣಿ ಚಿತ್ರ ತೆಗೆದುಹಾಕಲಾಗಿದೆ
ಜನವರಿ 10 ರಂದು ನೆಟ್‌ಫ್ಲಿಕ್ಸ್ ತನ್ನ ಪ್ಲಾಟ್‌ಫಾರ್ಮ್‌ನಿಂದ ಅನ್ನಪೂರ್ಣಿ ಯನ್ನು ತೆಗೆದುಹಾಕಿತು. ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕಲು ಅದನ್ನು ಎಡಿಟ್ ಮಾಡುವವರೆಗೆ ಚಲನಚಿತ್ರವನ್ನು ವೇದಿಕೆಯಿಂದ ತೆಗೆದುಹಾಕಲಾಗುವುದು ಎಂದು ಜೀ ಸ್ಟುಡಿಯೋಸ್ ವಿಶ್ವ ಹಿಂದೂ ಪರಿಷತ್‌ಗೆ ಕ್ಷಮೆಯಾಚಿಸಿತು. “ಹಿಂದೂಗಳು ಮತ್ತು ಬ್ರಾಹ್ಮಣ ಸಮುದಾಯದ ಧಾರ್ಮಿಕ ಭಾವನೆಗಳನ್ನು ನೋಯಿಸುವ ಯಾವುದೇ ಉದ್ದೇಶವನ್ನು ನಾವು ಚಿತ್ರದ ಸಹ-ನಿರ್ಮಾಪಕರಾಗಿ ಹೊಂದಿಲ್ಲ ಮತ್ತು ಆಯಾ ಸಮುದಾಯಗಳ ಭಾವನೆಗಳಿಗೆ ಉಂಟಾದ ಅನಾನುಕೂಲತೆ ಮತ್ತು ನೋವುಗಾಗಿ ಈ ಮೂಲಕ ಕ್ಷಮೆಯಾಚಿಸಲು ಬಯಸುತ್ತೇವೆ ಎಂದು ಕ್ಷಮೆಯಾಚಿಸಿದ್ದಾರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.