ಇದೀಗ ಒಂದು ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು ಬೆಂಗಳೂರಿನ ಗ್ರಾಮಾಂತರದ ಜನರಿಗೆ ಆಶ್ರಯ ಯೋಜನೆಯಡಿ ನಿವೇಶನ ಭಾಗ್ಯ ಒದಗಿಸುವ ಒಂದು ಮಹತ್ತರ ಕಾರ್ಯ ನಡೆಯುತ್ತಿದೆ. ಯಾರಿಗೆಲ್ಲ ಉಳಿದು ಕೊಳ್ಳಲು ಮನೆ ಇಲ್ಲವೋ ಅಥವಾ ನಿವೇಶನಗಳನ್ನು ( Niveshan ) ಹುಡುಕುತ್ತಿದ್ದಾರೋ ಅಂತವರಿಗೆ ಈ ಒಂದು ಯೋಜನೆ ಬಹಳ ಉಪಯುಕ್ತವಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚುತ್ತಿರುವ ಜನಸಂಖ್ಯೆ ಪರಿಣಾಮದಿಂದ ಉಳಿದುಕೊಳ್ಳಲು ವಸತಿಗಳ ಕೊರತೆ ( Lack of accommodation ) :
ಇಂದು ಎಲ್ಲರೂ ಕೆಲಸವನ್ನು ಹುಡುಕಿಕೊಂಡು ಬೆಂಗಳೂರಿನಂತಹ ದೊಡ್ಡ ನಗರಗಳಿಗೆ ಹೋಗಿ ಅಲ್ಲಿಯೇ ಉಳಿದು ಕೊಳ್ಳಲು ನೋಡುತ್ತಾರೆ. ಹಾಗೂ ಪ್ರತಿ ವರ್ಷವೂ ಕೂಡ ಜನಸಂಖ್ಯೆ ಜಾಸ್ತಿ ಆಗುತ್ತಿದೆ ( Increasing Population ) ಇದರಿಂದ ಪ್ರತಿ ಕುಟುಂಬಕ್ಕೂ ಪ್ರತ್ಯೇಕ ಮನೆಗಳ ಅವಶ್ಯಕತೆ ಇರುತ್ತದೆ.
ಇನ್ನು ಸ್ವಂತ ಊರಿನಲ್ಲಿ ಇರುವವರು ತಮ್ಮ ವ್ಯವಸಾಯ ಭೂಮಿಯಲ್ಲಿ ಅಥವಾ ಜಮೀನುಗಳಲ್ಲಿ ಸ್ವಂತ ಮನೆಗಳನ್ನು ( Own House ) ನಿರ್ಮಿಸಿಕೊಳ್ಳುತ್ತಾರೆ. ಆದರೆ ಬಡವರು, ದಲಿತರು, ಹಿಂದುಳಿದ ವರ್ಗದವರು ಸಣ್ಣ ಕೋಣೆಗಳಲ್ಲಿ, ಬಾಡಿಗೆ ಮನೆಗಳಲ್ಲಿವಾಸ ಮಾಡುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಇಂತಹವರು ದುಬಾರಿ ನಿವೇಶನಗಳನ್ನು ಖರೀದಿಸಲಾಗದೇ ಸರಕಾರದಿಂದ ಉಚಿತವಾಗಿ ನೀಡುವ ಆಶ್ರಯ ನಿವೇಶನಕ್ಕಾಗಿ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಿ ನಿವೇಶನಕ್ಕಾಗಿ ಕಾಯುತ್ತಿದ್ದಾರೆ.
ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಸೈಟ್ ಹಂಚಿಕೆಗೆ ( Site Sharing ) ಬೆಂಗಳೂರು ಗ್ರಾಮಾಂತರದಲ್ಲಿ 527 ಎಕರೆ ಜಮೀನು ನಿಗದಿ :
ನಿವೇಶನ ಇರದ ಕಾರಣ ಉಳಿದು ಕೊಳ್ಳಲು ಸ್ವಂತ ಮನೆ ಇಲ್ಲದೆ ಹಲವು ಕುಟುಂಬ ಬೀದಿ ಬದಿಯಲ್ಲಿಯೇ ವಾಸ ನಡೆಸಿವೆ. ಇಂಥವರಿಗೆ ನಿವೇಶನ ಹಂಚಿಕೆ ಮಾಡಲು ಜಮೀನು ನಿಗದಿಯಾಗಿದೆ. ಆದರೆ ನಾನಾ ಕಾರಣಗಳಿಂದ ಹಲವು ವರ್ಷ ಈ ಒಂದು ಯೋಜನೆ ಜಾರಿಗೊಳ್ಳದೆ ಬಡವರ, ವಾಸಿಸಲು ಮನೆ ಇಲ್ಲದವರ ಮೇಲೆ ಬಹಳ ಪರಿಣಾಮ ಬೀರಿತ್ತು. ಆದರೆ ಇದೀಗ ಆ ಒಂದು ಸಮಸ್ಯೆ ಬಗೆ ಹರಿದಿದೆ.
ಇದೀಗ ಬೆಂಗಳೂರು ನಗರದಲ್ಲಿ ವಸತಿ ಹುಡುಕುತ್ತಿರುವವರಿಗೆ ಆಶ್ರಯ ಯೋಜನೆಯಡಿ ನಿವೇಶನರಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಒಟ್ಟು 527.30 ಎಕರೆ ಜಮೀನು ಗುರುತಿಸಲಾಗಿದೆ. ಆದಷ್ಟು ಬೇಗ ಅರ್ಜಿ ಸಲ್ಲಿಸದವರಿಗೆ ಮನೆ ಕಟ್ಟಿಕೊಳ್ಳಲು ಜಮೀನು ಗುರುತಿಸಿ ಹಂಚಿಕೆ ಮಾಡಲಾಗುತ್ತಿದೆ.
ನಿವೇಶನಗಳಿಗೆ ಜಮೀನು ( Land ) ಮಂಜೂರು ಮಾಡಿರುವ ಎಕರೆಯ ವಿವರ :
ದೇವನಹಳ್ಳಿ ತಾಲೂಕು 62.14 ಎಕರೆ.
ದೊಡ್ಡಬಳ್ಳಾಪುರ ತಾಲೂಕು 93.39 ಎಕರೆ.
ಹೊಸಕೋಟೆ ತಾಲೂಕು 324.20 ಎಕರೆ.
ನೆಲಮಂಗಲ ತಾಲೂಕು 46.37 ಎಕರೆ.
ಈ ನಾಲ್ಕು ಸ್ಥಳಗಳಲ್ಲಿ ಮುಖ್ಯವಾಗಿ ನಿವೇಶನಕ್ಕಾಗಿ ಜಮೀನು ಮಂಜೂರು ಮಾಡಲಾಗಿದೆ.
ನಿವೇಶನ ಇಲ್ಲದವರ ಸರ್ವೆ ಕೆಲಸ, ಕಾರ‍್ಯ ಪೂರ್ಣ ಗೊಂಡಿದೆ ( Completed Serve work ) :
5 ವರ್ಷಗಳ ಹಿಂದೆಯೇ ರಾಜೀವ್ ಗಾಂಧಿ ನಿವೇಶನ ನಿಗಮದಿಂದ ( Rajiv Gandhi Niveshan Scheme ) ಜಿಲ್ಲೆಯಲ್ಲಿ ಇರುವ ನಿವೇಶನರಹಿತರ ಮತ್ತು ವಸತಿರಹಿತರ ಸರ್ವೆ ಕಾರ‍್ಯ ಮಾಡಿಡಲಾಗಿತ್ತು.
ಇದೀಗ ನಿವೇಶನ ಬೇಕು ಎಂದು ಅರ್ಜಿ ಸಲ್ಲಿಸಿದವರ ಪೂರ್ವಾಪರ ಮಾಹಿತಿಯನ್ನು ರಾಜೀವ್‌ಗಾಂಧಿ ವಸತಿ ನಿಗಮದವರು ಸಂಗ್ರಹಿಸಿದ್ದಾರೆ. ಕಡು ಬಡತನದಲ್ಲಿ ಇರುವವರು, ಮತ್ತು ಉಳಿದುಕೊಳ್ಳಲು ಮನೆ ಬೇಕು ಎಂದು ಅರ್ಜಿಯಲ್ಲಿ ತಿಳಿಸಿದವರ ವಿಳಾಸಕ್ಕೆ ಭೇಟಿ ನೀಡಿ ಅವರು ವಾಸವಾಗಿರುವ ಮನೆಗಳ ಫೋಟೊಸಹಿತ ಮಾಹಿತಿಯನ್ನು ಸಂಗ್ರಹಿಸಿ ಅರ್ಜಿ ಸಲ್ಲಿಸಿದವರ ಫಲಾನುಭವಿಗಳ ಮಾಹಿತಿಯನ್ನು ಗ್ರಾಮ ಪಂಚಾಯಿತಿಗಳಿಗೆ ರವಾನಿಸಲಾಗಿದೆ.
ಇದೀಗ ಉಳಿದಿರುವ ಕೆಲಸ ಎಂದರೆ, ಗ್ರಾಮ ಪಂಚಾಯತ್ ಗಳಿಗೆ ಕಳುಹಿಸಿದ ಅರ್ಜಿ ದಾರರ ಅರ್ಜಿಯಲ್ಲಿ ಅರ್ಹರನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕಾಗಿದೆ. ಜಿಲ್ಲಾಡಳಿತ ಈಗಾಗಲೇ ಎಲ್ಲ ನಾಲ್ಕು ತಾಲೂಕುಗಳ ವ್ಯಾಪ್ತಿಯಲ್ಲಿಇರುವ ಸರಕಾರಿ ಗೋಮಾಳ ಜಮೀನು ಆಶ್ರಯ ನಿವೇಶನಗಳಿಗಾಗಿಯೇ ಗುರುತಿಸಿ ಪಹಣಿಯಲ್ಲೂಆಶ್ರಯ ನಿವೇಶನಕ್ಕೆ ಮೀಸಲು ಎಂದು ಗುರುತಿಸಿ ತಾಲೂಕು ಪಂಚಾಯತ್ ಗಳಿಗೆ ನೀಡಲಾಗಿದೆ.
ನಿವೇಶನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು ಮತ್ತು ದಾಖಲೆಗಳು:
ಅರ್ಜಿದಾರರು ಪುರಸಭೆ ಹಾಗೂ ಇತರೇ ಯಾವುದೇ ಪ್ರದೇಶದಲ್ಲಿ ಕುಟುಂಬದವರ ಬಳಿ ಆಗಲೀ, ಅರ್ಜಿದಾರರ ಹೆಸರಿನಲ್ಲಾಗಲೀ ಯಾವುದೇ ಆಸ್ತಿ ಇರುವಂತಿಲ್ಲ.
ಇದರ ಬಗ್ಗೆ ಅರ್ಜಿಗೆ ನೋಟರಿ ಅಫಿಡೇವಿಟ್ ಲಗತ್ತಿಸಬೇಕು.
ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ, ನಿಮ್ಮ ವಿವರಗಳನ್ನು ತುಂಬಿ, ಅರ್ಜಿದಾರರ ಇತ್ತೀಚಿನ ಪಾಸ್ಪೋರ್ಟ್ ಅಳತೆಯ 2 ಭಾವಚಿತ್ರವನ್ನು ನೀಡಬೇಕು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ವಿಶೇಷವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.
ಕುಟುಂಬದ ಪಡಿತರ ಚೀಟಿ ಹಾಗೂ ಎಲ್ಲಾ ಸದಸ್ಯರ ನಕಲು ಪ್ರತಿ, ಅರ್ಜಿದಾರರ ಅಧಾರ್ ಕಾರ್ಡ್, ಮತದಾರ ಗುರುತಿನ ಚೀಟಿ ಅನ್ನು ಸೇರಿಸಬೇಕು.
ಇದರೊಂದಿಗೆ ವಿಕಲಚೇತನರಾಗಿದ್ದವರು ಜಿಲ್ಲಾ ವೈದ್ಯಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರವನ್ನು ಹಾಗೂ ಮಾಜಿ ಸೈನಿಕರು, ಹಿರಿಯ ನಾಗರಿಕರಾಗಿದ್ದಲ್ಲಿ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಮಹಿಳೆ, ವಿಧವೆ, ವಿಚ್ಛೇದಿತರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಗೃಹಲಕ್ಷ್ಮಿ 2000/- ಹಣ ಪಡೆಯಲು ಹೊಸ ರೂಲ್ಸ್ ಜಾರಿ, 5ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ.!
- ವಿವಿಧ ಇಲಾಖೆಗಳ 5,000 ಹುದ್ದೆಗಳ ಭರ್ಜರಿ ನೇಮಕಾತಿಗೆ ಅಧಿಸೂಚನೆ ಪ್ರಕಟ
- ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ
- ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ
- ಬೆಳೆಹಾನಿ ಪರಿಹಾರದ ಹಣ ಇನ್ನೂ ಬಂದಿಲ್ವಾ? ಆಧಾರ್ ಲಿಂಕ್ ಆಗದೇ ಇರುವ ಪಟ್ಟಿ ಬಿಡುಗಡೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.