Train Update: ರಾಜ್ಯದಿಂದ ಅಯೋಧ್ಯೆಗೆ ವಿಶೇಷ ರೈಲು ಸೇವೆ ಆರಂಭ: ದಿನ, ಸಮಯ, ಮಾರ್ಗ ಸಂಪೂರ್ಣ ವಿವರ ಇಲ್ಲಿದೆ

mysore to ayodhye

ಇದೆ ಜನವರಿ 22 ರಂದು ಪ್ರಭು ಶ್ರೀ ರಾಮ ಜನ್ಮ ಭೂಮಿಯಾದ ಅಯೋಧ್ಯಯಲ್ಲಿ (Ayodhya) ರಾಮ ಮಂದಿರ ಉದ್ಘಾಟನೆಯಾಗುತ್ತಿರುವುದು(Shri ram mandir Inogration) ನಮಗೆಲ್ಲಾ ತಿಳಿದೇ ಇದೆ.  ನೀವು ಏನಾದರೂ ಅಯೋಧ್ಯ ರಾಮ ಮಂದಿರಕ್ಕೆ ಹೋಗುವ ಪ್ಲಾನ್ ಮಾಡುತ್ತಿದಿರಿಯೆ? ರಾಮ ಮಂದಿರ ಉದ್ಘಾಟನೆಯಲ್ಲಿ(Ram Mandir Inogration) ನೀವೂ ಕೂಡಾ ಭಾಗಿಯಾಗ ಬೇಕು ಎಂದು ಬಯಸುತ್ತಿರುವಿರಿಯೆ? ಹೇಗೆ ಹೋಗಬೇಕು ಏನೆಲ್ಲಾ ವ್ಯವಸ್ಥೆ ಇದೆ ಗೊಂದಲ ಮಾಡಿಕೊಂಡಿದ್ದೀರಿಯೇ, ಯೋಚನೆ ಬೇಡಾ ಪ್ರಭು ಶ್ರೀ ರಾಮ ಮಂದಿರ ಅಯೋಧ್ಯ(Prabhu shri Ram Mandir Ayodhya) ಗೆ ಹೋಗಲು ಇದೀಗ ವಿಶೇಷ ರೈಲು ಸೇವೆ ಕೂಡ ಪ್ರಾರಂಭವಾಗುತ್ತಿವೆ.(special train Service strared). ಭಾರತೀಯ ರೈಲ್ವೆಯು (Indian Railway) ಫೆಬ್ರವರಿಯಿಂದ ಅಯೋಧ್ಯೆಗೆ ರಾಜ್ಯದ ವಿವಿಧ ಭಾಗಗಳಿಂದ 11 ವಿಶೇಷ ರೈಲುಗಳನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯ ನಂತರ ನಿರೀಕ್ಷಿತ ಯಾತ್ರಿಕರ ಒಳಹರಿವು ಹೆಚ್ಚಾಗುವ ನಿರೀಕ್ಷೆಯಲ್ಲಿ ಈ ಕ್ರಮವು ತಗೆದುಕೊಳ್ಳಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೆ ಇಲಾಖೆ (Indian Railway department) ಶ್ರೀರಾಮ ಮಂದಿರ ಲೋಕಾರ್ಪಣೆ ಮೊದಲು ಹಾಗೂ ನಂತರ ಅಯೋಧ್ಯೆಗೆ (before Inogration and After Inogration of ram mandir) ವಿಶೇಷ ರೈಲುಗಳು ಸಂಚಾರಕ್ಕೆ ಅವಕಾಶ ನೀಡಿದೆ ಎಂದು ತಿಳಿದು ಬಂದಿದೆ.

ಅಯೋಧ್ಯೆಯ ರಾಮ ಮಂದಿರಕ್ಕೆ ತೆರಳಲು ವಿಶೇಷ ರೈಲು :

ಇದೀಗ ಶೀಘ್ರದಲ್ಲಿಯೇ ಮೈಸೂರಿನಿಂದ (Mysore to Ayodhya) ವಿಶೇಷ ರೈಲು ಅಯೋಧ್ಯೆಗೆ ಸಂಚಾರ ನಡೆಸಲಿದೆ. ಅಯೋಧ್ಯೆ ಶ್ರೀರಾಮ ಮಂದಿರದ ಕಣ್ತುಂಬಿಕೊಳ್ಳಲು ದೇಶದ ವಿವಿಧ ಮೂಲೆಗಳಿಂದ ಲಕ್ಷಾಂತರ ರಾಮ ಭಕ್ತರು ಅಯೋಧ್ಯೆ(Ayodhya) ಕಡೆಗೆ ಸಾಗುತ್ತಿದ್ದಾರೆ. ಕರ್ನಾಟದಿಂದಲೂ(Karnataka) ಸಾವಿರಾರು ಭಕ್ತರು ಶ್ರೀರಾಮ ಮಂದಿರ ನೋಡಲು ಅಯೋಧ್ಯೆಗೆ ತೆರಳಲು ಸಜ್ಜಾಗುತ್ತಿದ್ದಾರೆ. ಆದರಿಂದ ಮೈಸೂರು ಹಾಗೂ ಅದರ ಸುತ್ತಮುತ್ತಲಿನ ಸ್ಥಳದಿಂದ ಅಯೋಧ್ಯೆಗೆ ತೆರಳಬೇಕು ಎಂದುಕೊಂಡವರಿಗೆ ಒಂದು ಉಪಯುಕ್ತವಾದ ಮಾಹಿತಿ ಅನ್ನು ನಾವು ನಿಮಗೆ ತಿಳಿಸಿ ಕೊಡುತ್ತೇವೆ. ಫೆಬ್ರವರಿ 4ರಂದು ಮೈಸೂರಿನಿಂದ ಅಯೋಧ್ಯೆಗೆ (Mysore to Ayodhya) ರೈಲು ಸೇವೆ(train Service) ಆರಂಭಗೊಳ್ಳಲಿದೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದ್ದಾರೆ.

ಮೈಸೂರು-ಅಯೋಧ್ಯೆ ರೈಲಿನ ವಿವರ(Mysore to Ayodhya Train details) :

ಫೆಬ್ರವರಿ 4ರಂದು ರೈಲ್ವೆ ಸಮಯ 00:15ಗೆ ಮೈಸೂರಿನಿಂದ (Mysore)ಹೊರಡಲಿರುವ ಈ ರೈಲು ಬೆಳಗ್ಗೆ 3:15ಕ್ಕೆ ಎಸ್‌ಎಮ್‌ವಿಟಿ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ(SMVT banglore railway station) ತಲುಪಲಿದೆ. 4:00ಕ್ಕೆ ಬೆಂಗಳೂರಿನಿಂದ(Bangalore) ಹೊರಡಲಿರುವ ರೈಲು 5:18ಕ್ಕೆ ತುಮಕೂರು(Thumkur) ತಲುಪಲಿದ್ದು, ಅಲ್ಲಿಂದ 5:20ಕ್ಕೆ ಹೊರಡಲಿದೆ. ಬೆಳಗ್ಗೆ 7:00ಕ್ಕೆ ಅರಸಿಕೆರೆ ಜಂಕ್ಷನ್‌ಗೆ (Aarisikere junction) ತೆರಳಲಿರುವ ರೈಲು, ಅಲ್ಲಿಂದ 7:10ಕ್ಕೆ ಹೊರಡಲಿದೆ. 7:35ಕ್ಕೆ ಕಡೂರಿಗೆ (Kadaura) ತಲುಪಲಿರುವ ರೈಲು 7:37ಕ್ಕೆ ಅಲ್ಲಿಂದ ಹೊರಡಲಿದೆ. ಬಳಿಕ ಬಿರೂರು ಜಂಕ್ಷನ್‌ಗೆ(Birur junction) ತಲುಪಲಿರುವ ರೈಲು ಅಲ್ಲಿಂದ 7:45ಕ್ಕೆ ಹೊರಡಲಿದೆ. ಬಳಿಕ ಸುದೀರ್ಘ ಎರಡೂವರೆ ದಿನಗಳ ಪ್ರಯಾಣದ (2 and half days travel) ಬಳಿಕ ಫೆಬ್ರವರಿ 7ರಂದು ಈ ವಿಶೇಷ ರೈಲು ಅಯೋಧ್ಯೆ ತಲುಪಲಿದೆ.

whatss

ಮೈಸೂರಿನಿಂದ ಅಯೋಧ್ಯೆಗೆ (Mysore to Ayodhya) 2,894km ದೂರವಿದ್ದು, ಸುಮಾರು 60:40 ಗಂಟೆಗಳ ರೈಲು ಸಂಚಾರ ಬೇಕಾಗುತ್ತದೆ. ಮತ್ತೆ ಈ ವಿಶೇಷ ರೈಲು ಫೆಬ್ರವರಿ 7ರ ಸಂಜೆ ರೈಲು ಸಮಯ 21:20ಕ್ಕೆ ಅಯೋಧ್ಯೆಯಿಂದ ಹೊರಡಲಿರುವ ಈ ರೈಲು ಎರಡು ದಿನಗಳ ಪ್ರಯಾಣದ ಬಳಿಕ ಫೆಬ್ರವರಿ 9ರಂದು ಮೈಸೂರು ತಲುಪಲಿದೆ. ಮೈಸೂರಿನಿಂದ ಅಯೋಧ್ಯೆಗೆ ಫೆಬ್ರವರಿ 18ರಂದು ಕೂಡ ಈ ವಿಶೇಷ ರೈಲು ಸೇವೆ ಇರಲಿದ್ದು, ಅಯೋಧ್ಯೆಯಿಂದ ಫೆಬ್ರವರಿ 21ರಮದು ವಾಪಸ್‌ ಆಗಲಿದೆ. 20 ಸ್ಲೀಪರ್‌ (Sleeper) ಹಾಗೂ 2 ಗಾರ್ಡ್‌ ಕೋಚ್‌ (Guard coach) ಸೇರಿದಂತೆ ಒಟ್ಟು 22 ಆಸನಗಳ ರೈಲು ಇದಾಗಿದೆ ಎಂದು ತಿಳಿದು ಬಂದಿದೆ.

560 ವರ್ಷದ ಹೋರಾಟದ ಪಲಶೃತಿ ಪ್ರಭು ಶ್ರೀರಾಮ ಸ್ಥಾಪನೆ ಆಗುತ್ತಿದೆ. ಇನ್ನಾದರು ದೇಶದ ಪ್ರತಿಪ್ರಜೆಯ ಹೃದಯದಲ್ಲಿ ಶ್ರೀರಾಮ ಸ್ಥಾಪಿತವಾಗಲಿ ಎಂದು ಆಶಿಸುತ್ತಾ, ಇಂತಹ ಉತ್ತಮವಾದ ಮಾಹಿತಿಯನ್ನೂ ನೀವು ತಿಳಿದ ಮೇಲೆ ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೂ  ಶೇರ ಮಾಡಿ. ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!