LPG Gas – ಬರೀ 600 ರೂ. ಗೆ ಗ್ಯಾಸ್ ಸಿಲಿಂಡರ್ ಸಿಗುವ ಯೋಜನೆ ಇದು.! ತಪ್ಪದೇ ತಿಳಿದುಕೊಳ್ಳಿ

LPG subsidy

ಅದೆಷ್ಟೋ ಲಕ್ಷಾಂತರ ಕುಟುಂಬಗಳು ಇಂದು ಯಾವುದೇ ತೊಂದರೆ ಇಲ್ಲದೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಿಂದ ( Pradhan Manthri Ujval scheme ) ತಮ್ಮ ಮನೆಯನ್ನು ನಡೆಸುತ್ತಿದ್ದಾರೆ. ಮೂರು ಹೊತ್ತಿನ ಊಟ ಮಾಡುತ್ತಿದ್ದಾರೆ. ಹೌದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಸಮಾಜ ಕಲ್ಯಾಣ ಯೋಜನೆಯಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ, ದೇಶದಲ್ಲಿನ ಬಿಪಿಎಲ್ ಕುಟುಂಬಗಳಿಗೆ ( BPL Family ) ಎಲ್‌ಪಿಜಿ(LPG) ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಒಂದು ಯೋಜನೆಯಿಂದ ಅನೇಕ ಮಹಿಳೆಯರಿಗೆ ಉಜ್ವಲ ಭವಿಷ್ಯ ದೊರೆತಂತಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ :

ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ಕುಟುಂಬಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಕನೆಕ್ಷನ್ (free gas connection) ಹಾಗೂ ಸಬ್ಸಿಡಿ (subsidy) ದರದಲ್ಲಿ ಗ್ಯಾಸ್ ಸಿಲಿಂಡರ್ (Gas Cylinder) ನೀಡಲಾಗುತ್ತಿದೆ. ಇಂದು ಬಡ ಕುಟುಂಬಗಳಿಗೆ ಮತ್ತು ಅದೆಷ್ಟೋ ಮಹಿಳೆಯರಿಗೆ ಒಂದು ಉತ್ತಮ ಯೋಜನೆಯಾಗಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ ( Free Gas Connection ) :

ಅದೆಷ್ಟೋ ಬಡ ಕುಟುಂಬಗಳು ಗ್ಯಾಸ್ ಕೊಂಡು ಕೊಳ್ಳಲು ಬಯಸಿದರೂ ಕೂಡ ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ಗ್ಯಾಸ್ ಸಿಲಿಂಡರ್ ಆದ ಬೆಲೆ ಏರಿಕೆಯ ಪರಿಣಾಮ. ಅದಕ್ಕಾಗಿ ಇದೀಗ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಬಡ ಕುಟುಂಬಗಳಿಗೆ ಉಚಿತವಾಗಿ ಫ್ರಿ ಗ್ಯಾಸ್ ಕನೆಕ್ಷನ್ (free gas connection) ನೀಡುವುದು ಮಾತ್ರವಲ್ಲದೆ ವರ್ಷದ 12 ತಿಂಗಳು 12 ಸಿಲಿಂಡ‌ರ್ ಪಡೆದುಕೊಳ್ಳಲು ಸಬ್ಸಿಡಿಯನ್ನು ಕೂಡ ಘೋಷಿಸಲಾಗಿದೆ.

tel share transformed

ಕೇವಲ 600 ಕ್ಕೆ ಸಿಗುತ್ತದೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ( LPG Cylinder ) :

ಈಗಾಗಲೇ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 2.0 ವರ್ಷನ್ ಶುರುವಾಗಿದೆ. ಮತ್ತು ಅನೇಕ ಕುಟುಂಬಗಳಿಗೆ ಈಗಾಗಲೇ ಉಚಿತ ಗ್ಯಾಸ್ ದೊರೆತಿದೆ. ಪ್ರಧಾನಮಂತ್ರಿಯ ಉಜ್ವಲ ಯೋಜನೆಯ (PM Ujjwala Yojana) ಅಡಿಯಲ್ಲಿ ಬಡವರಿಗೆ ಉಚಿತ ಗ್ಯಾಸ್ ಕನೆಕ್ಷನ್ ನೀಡುತ್ತಿರುವುದು ಮಾತ್ರವಲ್ಲದೆ 300 ರೂಪಾಯಿಗಳ ಸಬ್ಸಿಡಿ ಕೂಡ ನೀಡಲಾಗುತ್ತಿದೆ. ಹಾಗಾಗಿ 14.2 ಕೆಜಿ ಸಿಲಿಂಡರ್ ಇಂದು ದೆಹಲಿಯಲ್ಲಿ 600 ರೂಪಾಯಿಗಳಿಗೆ ಲಭ್ಯವಿದೆ. ಸಿಲಿಂಡರ್ ಖರೀದಿ ಮಾಡುವಾಗ ಗ್ರಾಹಕರು 903 ರೂಪಾಯಿಗಳನ್ನು ಪಾವತಿಸಬೇಕು ನಂತರ 300 ರೂಪಾಯಿಗಳ ಸಬ್ಸಿಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅರ್ಹ ರಹಿತ ಫಲಾನುಭವಿಗಳಿಗೆ ದೊರಕುವ ಗ್ಯಾಸ್ ಸಿಲಿಂಡರ್ :

ಇನ್ನು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಯಾರು ಅರ್ಹರು ಅಲ್ಲವೋ ಅಂತವರು ರೂ. 903 ಕೊಟ್ಟು ಗ್ಯಾಸ್ ಸಿಲಿಂಡ‌ರ್ ಖರೀದಿ ಮಾಡಬೇಕಾಗುತ್ತದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ ( Documents ) ವಿವರ :

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅರ್ಜಿದಾರರು ಹೊಂದಿರಬೇಕು. ಆಗ ಮಾತ್ರ ಅರ್ಜಿದಾರರು ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಕೆಳಗಿನವು ಎಲ್ಲಾ ಅಗತ್ಯ ದಾಖಲೆಗಳ ಪಟ್ಟಿಯಾಗಿದೆ.

ಅರ್ಜಿದಾರರ ಆಧಾರ್ ಕಾರ್ಡ್
ಮತದಾರರ ಗುರುತಿನ ಚೀಟಿ
ವಿಳಾಸ ಪುರಾವೆ
ಬಿಪಿಎಲ್ ಪಡಿತರ ಚೀಟಿ
ಮೊಬೈಲ್ ನಂಬರ್
ಪಾಸ್ಪೋರ್ಟ್ ಗಾತ್ರದ ಫೋಟೋ

whatss

ಉಚಿತ ಗ್ಯಾಸ್ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ( Steps for Applying Application ) :

ಹಂತ 1 : ಮೊದಲು https://www.pmuy.gov.in/ ವೆಬ್ ಸೈಟ್ ಗೆ ಭೇಟಿ ನೀಡಬೇಕು.
ಹಂತ 2 : ನಂತರ ಹೊಸ ಪುಟದಲ್ಲಿ ಅನ್ವಯಿಸು (apply) ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.
ಹಂತ 3 : ನೀವೇನಾದರೂ ಗ್ಯಾಸ್ ಖರೀದಿ ಮಾಡಲು ಬಯಸಿದರೆ, ಗ್ಯಾಸ್‌ ಸಿಲಿಂಡ‌ರ್ ಕಂಪನಿಯನ್ನು ಆಯ್ಕೆ ಮಾಡಬೇಕು.
ಹಂತ 4 : ಅಲ್ಲಿ ಮೂರು ಗ್ಯಾಸ್ ಕಂಪೆನಿಗಳ ( Bharath, HP, Indian ) ಹೆಸರು ನೀಡಲಾಗಿದೆ.
ಹಂತ 5 : ಅಲ್ಲಿ ನಿಮಗೆ ಬೇಕಾದ ಗ್ಯಾಸ್ ಕಂಪೆನಿ ಮೇಲೆ ಕ್ಲಿಕ್ ಮಾಡಬೇಕು.
ಹಂತ 6 : ಯಾವುದಾದರೂ ಒಂದು ಏಜೆನ್ಸಿ (agency) ಮೇಲೆ ಕ್ಲಿಕ್ ಮಾಡಿದ್ರೆ ನೇರವಾಗಿ ಆ ಏಜೆನ್ಸಿ ವೆಲ್ಸ್ಟ್ ತೆಗೆದುಕೊಳ್ಳುತ್ತದೆ.
ಹಂತ 7 : ನಂತರ ಅಲ್ಲಿ ನಿಮ್ಮ ಅಗತ್ಯ ಮಾಹಿತಿಗಳನ್ನು ನೀಡುವುದರ ಮೂಲಕ ಸರಿಯಾದ ದಾಖಲೆಗಳನ್ನು ಅಪ್ಲೋಡ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ.

ನಿಮಗೆ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಇದ್ದಲ್ಲಿ, ಅಗತ್ಯ ಇರುವ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದ ಸೇವಾ ಸಿಂಧೂ ಕೇಂದ್ರಗಳಲ್ಲಿ ಅಥವಾ ಗ್ಯಾಸ್ ಏಜೆನ್ಸಿ ಗೆ ಹೋಗಿ, ಉಚಿತ ಗ್ಯಾಸ್ ಗಾಗಿ ಬುಕಿಂಗ್ ಮಾಡಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!