ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ಫಿನಾಲೆ(Finale) ನೋಡು ನೋಡುತ್ತಲೇ ಬಂದೇಬಿಡ್ತು. ಎಲ್ಲಾ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದ ಶನಿವಾರ ಹಾಗೂ ಭಾನುವಾರದ ಸಂಚಿಕೆ ಕುತೂಹಲವನ್ನು ಮೂಡಿಸಿದೆ. ಶನಿವಾರದ ಸಂಚಿಕೆಯಲ್ಲಿ ಒಬ್ಬರು ಹೊರಬಂದಿದ್ದಾರೆ. ಇಂದು ಮನೆಯಿಂದ ಯಾರು ಹೊರಬಂದರು?, ಶನಿವಾರದ ಪಿನಾಲೆಯ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್(Drone Prathap) ಅವರ ತಂದೆ ತಾಯಿಯು ಕೂಡ ಬಂದಿದ್ದರು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬಿಗ್ ಬಾಸ್ ಫಿನಾಲೆಯಲ್ಲಿ ಡ್ರೋನ್ ಪ್ರತಾಪ್ ಅಪ್ಪ ಅಮ್ಮ ಏನಂದ್ರು ಗೊತ್ತ?:
ಫಿನಾಲೆಗೆ ಬಂದಿದ್ದ 6 ಜನರ ಮನೆಯವರು ಕೂಡ ಬಿಗ್ ಬಾಸ್ ಫಿನಾಲೆಗೆ ಬಂದಿದ್ದರು. ಅದರಲ್ಲಿ ಪ್ರತಾಪ್ ಅವರ ಅಪ್ಪ ಅಮ್ಮನ ಕೂಡ ಆಗಮಿಸಿದರು. ಬಿಗ್ ಬಾಸ್ ನನ್ನ ಮಗ ಪ್ರತಾಪ್ ಅವರಿಗೆ ತುಂಬಾ ಉಪಕಾರವನ್ನು ಮಾಡಿದೆ ಎಂದು ಅಮ್ಮ ಹೇಳುತ್ತಿದ್ದರು. ಅಷ್ಟೇ ಅಲ್ಲದೆ ಅವರು ಸುದೀಪ್ ಅವರಿಗೆ ನೀವು ಅಂದರೆ ನನಗೆ ತುಂಬಾ ಇಷ್ಟ. ನಿಮ್ಮ ಫೋಟೋ ಕೂಡ ನಮ್ಮ ಮನೆಯಲ್ಲಿ ಇದೆ ಎಂದು ಅವರ ಅಮ್ಮ ಹೇಳಿದರು. ಸುದೀಪ್ ಅವರು ನಮ್ಮ ಮನೆಯ ದೇವರಂತೆ ಎಂದು ಕಣ್ಣೀರನ್ನು ಇಟ್ಟರು. ಸುದೀಪ್ ಅವರೇ ನೀವು ನನ್ನ ಮಗನನ್ನು ನನಗೆ ಮರಳಿ ಕೊಟ್ಟಿದ್ದೀರಿ ಎಂದು ಅಳುತ್ತಾ ಪ್ರತಾಪ್ ಅವರ ಅಮ್ಮ ಖುಷಿಯನ್ನು ವ್ಯಕ್ತಪಡಿಸಿಕೊಂಡರು. ಅದಕ್ಕೆ ಸುದೀಪ್(kiccha sudeep) ಅವರು ಧನ್ಯವಾದಗಳನ್ನು ಅಳಬೇಡಿ ಎಂದು ಹೇಳಿದರು.
ಮನೆಯಿಂದ ಹೊರಬಂದ ತುಕಾಲಿ ಸಂತೋಷ್ :
ಶನಿವಾರದ ಸಂಚಿಕೆಯಲ್ಲಿ ಬಿಗ್ ಬಾಸ್ ಫಿನಾಲೆ ಶುರುವಾಗಿಯೇ ಬಿಟ್ಟಿತು. ಬಿಗ್ ಬಾಸ್ ಮನೆಯ 10ನೇ ಸಂಚಿಕೆಯ ವಿನ್ನರ್ ಯಾರು ಆಗುತ್ತಾರೆ ಎಂಬುದು ಎಲ್ಲರ ಕುತೂಹಲವನ್ನು ಕೆರಳಿಸಿದೆ. ಇನ್ನೊಂದು ಕುತೂಹಲದ ವಿಷಯವೆಂದರೆ ಇವತ್ತು ಶನಿವಾರದ ಸಂಚಿಕೆಯಲ್ಲಿ ಯಾರು ಹೊರಬಂದಿದ್ದಾರೆ ಎನ್ನುವುದು. ಇಂದಿನ ಶನಿವಾರದ ಎಲಿಮಿನೇಷನ್(elimination) ಎಲ್ಲಾ ಪ್ರೇಕ್ಷಕರಿಗೂ ಶಾಕ್ ಅನ್ನು ನೀಡಿದೆ.
ಸಂಗೀತಾ, ವಿನಯ್, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ತುಕಾಲಿ ಸಂತೋಷ್, ಮತ್ತು ವರ್ತೂರು ಸಂತೋಷ್ ಬಿಗ್ ಫಿನಾಲೆಗೆ ಬಂದಿದ್ದಾರೆ. ಈ ಬಾರಿ 6 ಮಂದಿ ಫೈನಲಿಸ್ಟ್ ಆಗಿದ್ದಾರೆ. ಇವರಲ್ಲಿ ಇಂದು ಮನೆಯಿಂದ ಹೊರಗೆ ಬಂದವರು ತುಕಾಲಿ ಸಂತೋಷ್. ಮೊಟ್ಟಮೊದಲ ಬಾರಿಗೆ ಬಿಗ್ ಬಾಸ್ ನಲ್ಲಿ ಎಲ್ಲರ ಮುಂದೆ ವೋಟಿಂಗ್ ಅನ್ನು ನಡೆಸಲಾಯಿತು. ಅದರಲ್ಲಿ ತುಕಾಲಿ ಸಂತೋಷ್ ಅವರಿಗೆ ಕಡಿಮೆ ಓಟುಗಳು ಬಂದವು. ಆದ್ದರಿಂದ ಆರು ಜನರಲ್ಲಿ ತುಕಾಲಿ ಸಂತೋಷ್ ಇಂದಿನ ಅಂದರೆ ಶನಿವಾರದ ಸಂಚಿಕೆಯಲ್ಲಿ ಮನೆಯಿಂದ ಹೊರಗೆ ಬಂದಿದ್ದಾರೆ. ಮನೆಯ ಎಲ್ಲಾ ಇತರ ಸದಸ್ಯರಿಗೂ ಅವರು ಹೋಗಿದ್ದು ನೋವನ್ನುಂಟುಮಾಡಿದೆ.
ವರ್ತೂರ್ ಸಂತೋಷ್ ಅವರು ತುಕಾಲಿ ಸಂತೋಷ್ ಮನೆಯಿಂದ ಹೋದ ಮೇಲೂ ಕೂಡ ಕೆಲವು ನಿಮಿಷಗಳು ಬಾಗಿಲ ಹತ್ತಿರವೇ ಮಾತನಾಡುತ್ತ ನಿಂತಿದ್ದರು. ನಂತರ ತುಂಬಾ ಬೇಜಾರಿಂದ ಸೋಫಾ ಮೇಲೆ ಒಬ್ಬರೆ ಕುಳಿತುಬಿಟ್ಟರು. ನಾಳೆಯ ಭಾನುವಾರದ ಸಂಚಿಕೆಯಲ್ಲಿ ಯಾರು ಹೊರ ಬರುತ್ತಾರೆ?, ವಿನ್ನರ್ ಹಾಗೂ ರನ್ನರ್ ಅಪ್ ಯಾರು ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- BBK 10- ಡ್ರೋನ್ ಪ್ರತಾಪ್ ಮನೆಯಿಂದ ಔಟ್.? ಬಾರಿ ಶಾಕ್ ಕೊಟ್ಟ ಬಿಗ್ ಬಾಸ್!!
- ಡ್ರೋನ್ ಪ್ರತಾಪ್ ಫೈನಲ್ ಟಿಕೆಟ್ ಕೊಡುವಲ್ಲಿ ಬಿಗ್ ಬಾಸ್ ಮೋಸ ಮಾಡಿದ್ರಾ? ಇಲ್ಲಿದೆ ಕಿಚ್ಚನ ಕ್ಲಾರಿಟಿ!
- BBK 10: ಬಿಗ್ ಬಾಸ್ ಗೆಲ್ಲೋದು ಯಾರು ಗೊತ್ತಾ..? ಕಪ್ ತಗೊಂಡು ಹೋಗೋ ಸ್ಪರ್ಧಿ ಇವರೇ ನೋಡಿ!
- BBK 10: ಬಿಗ್ ಬಾಸ್ ಮನೆಗೆ ಬಂದೇ ಬಿಡ್ತು ಪ್ರತಾಪ್ ಡ್ರೋನ್..!
- BBK 10 – ಬಿಗ್ ಬಾಸ್ ಮನೆಯಿಂದ ಡ್ರೋನ್ ಪ್ರತಾಪ್ ಔಟ್ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.