ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿ(technology)ಯನ್ನು ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರ್ ಗಳ ಎಲೆಕ್ಟ್ರಿಕ್ ಸ್ಕೂಟರ್(electric scooter) ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ. ಆದರಿಂದ ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ, ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಆದರೆ ಇದೀಗ iVOOMi ಕೂಡ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ (electric scooty) ಮಾರಾಟವನ್ನು ಹೆಚ್ಚಿಸಿಕೊಳ್ಳಲು ಇದೀಗ ಗಣರಾಜ್ಯೋತ್ಸವ (republic day) ಅಂಗವಾಗಿ ಭರ್ಜರಿ ಡಿಸ್ಕೌಂಟ್ (Discount) ಅನ್ನು ಘೋಷಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬಾರಿ ಡಿಸ್ಕೌಂಟ್
ಕಂಪನಿಯು ಗಣರಾಜ್ಯೋತ್ಸವದ (Republic day) ಭಾಗವಾಗಿ ತನ್ನ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳ (electric scooter) ಮೇಲೆ ವಿಶೇಷ ನಗದು ರಿಯಾಯಿತಿಗಳನ್ನು ಘೋಷಿಸಿದೆ. ಹೌದು, ಸೋಮವಾರದಿಂದ ಜಾರಿಯಾಗಿರುವ ಈ ಕೊಡುಗೆಯು ಜನವರಿ 31, 2024 ರವರೆಗೆ ಮಾನ್ಯವಾಗಿರುತ್ತದೆ ಎಂದು ಕಂಪನಿ ತನ್ನ ಮೆಚ್ಚಿನ ಗ್ರಾಹಕರಿಗೆ ತಿಳಿಸಿದೆ. ತನ್ನ ಪ್ರಮುಖ ಮಾದರಿ JeetX ಮೇಲೆ ರೂ. 20,000 ಮತ್ತು efficient S1 2.0 ಮೇಲೆ ರೂ. 5,000 ವರೆಗೆ ಗ್ರಾಹಕರು ಈಗ ಗಮನಾರ್ಹ ಉಳಿತಾಯವನ್ನು(Savings) ಪಡೆಯಬಹುದು ಎಂದು ಹೇಳಿದೆ.
ಪ್ರಮುಖ ಮಾದರಿ JeetX ಈಗ ರೂ. 20,000 ನಗದು ರಿಯಾಯಿತಿ ಬಳಿಕ ರೂ. 84,999 ರ ಎಕ್ಸ್ ಶೋ ರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಹಾಗೆಯೇ S1 2.0, ಈಗ ರೂ. 5,000 ನಗದು ರಿಯಾಯಿತಿಯ (Discount) ನಂತರ ರೂ. 82,999 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. JeetX 5 ಮ್ಯಾಟ್ ಫಿನಿಶ್ ಬಣ್ಣಗಳಲ್ಲಿ ಲಭ್ಯವಿದ್ದು, ರೈಡ್ ಅನುಭವವನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
JeetX ಮತ್ತು S1 ಸ್ಕೂಟಿ ಗಳು:
JeetX ಮಾದರಿಯು 65 ಕಿ.ಮೀ ವೇಗದೊಂದಿಗೆ, ಸವಾರರಿಗೆ ಪವರ್‌ಫುಲ್(power full) ಆಯ್ಕೆಯಾಗಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ(Single charge) 200 ಕಿ.ಮೀ ಮೈಲೇಜ್m(Milage) ನೀಡುವುದಾಗಿ ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು S1 2.0 ಮಾದರಿಯು ಪ್ರತಿ ಚಾರ್ಜ್‌ಗೆ(per charge) 110ಕಿಮೀ ಕಿಂತ ಜಾಸ್ತಿ ರೈಡಿಂಗ್ ರೇಂಜ್(Riding range) ಮತ್ತು 57 kmph ಗರಿಷ್ಠ ವೇಗವನ್ನು ನೀಡುತ್ತದೆ.
S1 2.0 ತನ್ನನ್ನು ತಾನು ದೇಶದಲ್ಲೇ ಅತ್ಯಂತ ವೆಚ್ಚ-ಪರಿಣಾಮಕಾರಿ ಇ-ಸ್ಕೂಟರ್‌ಗಳಲ್ಲಿ ಒಂದಾಗಿ ಸ್ಥಾಪಿಸಿಕೊಂಡಿದೆ. ಇದು 6 ಸ್ಪೋರ್ಟಿ ಬಣ್ಣಗಳಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಉತ್ತಮ ಆಯ್ಕೆಗೆ ಅನುಕೂಲ ಮಾಡಿಕೊಡುತ್ತದೆ. ಅಷ್ಟೇ ಅಲ್ಲದೇ ಇದರ ಸಮರ್ಥ ರೇಂಜ್ ರೈಡರ್‌ಗಳಿಗೆ (Range riders) ಆತಂಕವಿಲ್ಲದ ಪ್ರಯಾಣವನ್ನು ಒದಗಿಸುತ್ತದೆ.
iVOOMi ನ ಸಹ-ಸಂಸ್ಥಾಪಕ ಮತ್ತು CEO ಅಶ್ವಿನ್ ಭಂಡಾರಿ ಮಾತನಾಡಿ, “iVOOMi ನಲ್ಲಿ, ಕೈಗೆಟುಕುವ, ಪರಿಸರ ಸ್ನೇಹಿ (nature friendly) ಇ-ಸ್ಕೂಟರ್‌ಗಳನ್ನು ಒದಗಿಸುವ ಮೂಲಕ ಸಾರಿಗೆಯನ್ನು ಮರು ವ್ಯಾಖ್ಯಾನಿಸುವುದು ನಮ್ಮ ಉದ್ದೇಶವಾಗಿದೆ. ಈ ವಿಶೇಷ ರಿಯಾಯಿತಿಗಳೊಂದಿಗೆ,(special disscount offer) ನಾವು ನಮ್ಮ ಉನ್ನತ ಮಾದರಿಗಳಾದ JeetX ಮತ್ತು S1 2.0 ಮಾರಾಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ. ಇವು ದೇಶದ ಅತ್ಯಂತ ವೆಚ್ಚ-ಪರಿಣಾಮಕಾರಿ ಇ-ಸ್ಕೂಟರ್‌ಗಳು ಎಂದರು.” ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
- ಬರೋಬ್ಬರಿ 500 ಕಿ.ಮೀ ಮೈಲೇಜ್ ಇರುವ ಟಾಟಾ ಕಂಪನಿಯ ಹೊಸ ಎಲೆಕ್ಟ್ರಿಕ್ ಕಾರ್
- ಬರೋಬ್ಬರಿ 300 ಕಿ. ಮೀ ವರೆಗೆ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!
- Mahindra Electric : ಮಹೇಂದ್ರ SUV 700 ಎಲೆಕ್ಟ್ರಿಕ್ ನಲ್ಲಿ ಲಭ್ಯ, ಖರೀದಿಗೆ ಮುಗಿಬಿದ್ದ ಗ್ರಾಹಕರು
- ಜನಪ್ರಿಯ ಕೈನೆಟಿಕ್ ಲೂನಾ ಇ ಸ್ಕೂಟರ್ ಬಿಡುಗಡೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
- NX 100 e -Scooti : ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 500 ಕಿ.ಮೀ ರೇಂಜ್ ಇರುವ ಹೊಸ ಸ್ಕೂಟಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.