ಗೃಹಲಕ್ಷ್ಮಿ ಯೋಜನೆಯು ಬಹುತೇಕ ಎಲ್ಲ ಜಿಲ್ಲೆಗಳ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಸರ್ಕಾರ ಈಗಾಗಲೇ ಗೃಹಲಕ್ಷ್ಮೀ ಯೋಜನೆಯ 5 ಕಂತುಗಳನ್ನು ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೆ 6ನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆಯನ್ನು ಆರಂಭಿಸಿದೆ. ಸಾಕಷ್ಟು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇನ್ನೂ ಕೂಡ ಮೊದಲನೇ ಕಂತಿನ ಹಣವೇ ಬಂದಿಲ್ಲ. ಹಾಗೂ ಬಹಳಷ್ಟು ಜನರಿಗೆ ಎರಡನೇ ಮತ್ತು ಮೂರನೇ ಕಂತಿನ ಹಣ ಪೆಂಡಿಂಗ್ ಇದೆ. ಈ ರೀತಿಯ ಸಮಸ್ಯೆ ( Problems ) ಇರುವ ಎಲ್ಲಾ ಫಲಾನುಭವಿಗಳಿಗೆ ಸರ್ಕಾರ ಪೆಂಡಿಂಗ್ ಇರುವ ಕಂತಿನ ಹಣವನ್ನು ಬಿಡುಗಡೆ ಮಾಡಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗೃಹಲಕ್ಷ್ಮೀ ಯೋಜನೆಯ ಹಣ ಜಮಾ ಆಗದಿರಲು ಕಾರಣ:
ಇಲ್ಲಿಯವರೆಗೂ ಬಹಳಷ್ಟು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಎಲ್ಲ ಕಂತಿನ ಹಣ ಅವರ ಬ್ಯಾಂಕ್ ಖಾತೆ(Bank account)ಗೆ ಜಮಾ ಆಗಿದೆ. ಹಾಗೆಯೇ ಇನ್ನು ಅಲ್ಪ ಸಂಖ್ಯೆಯ ಮಹಿಳೆಯರ ಖಾತೆಗೆ ಕೆಲವು ಕಂತುಗಳ ಹಣ ಜಮಾ ಆಗಿದ್ದು ಇನ್ನು ಹಲವು ಕಂತುಗಳು ( Installments ) ಬರಲು ಬಾಕಿ ಇವೆ. ಆದರೆ ಇನ್ನೂ ಹಲವಾರು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ.
ಕಾರಣ ನೋಡುವುದಾದರೆ ಎಷ್ಟೋ ಮಹಿಳೆಯರ ಖಾತೆಗೆ ಕೆ ವೈ ಸಿ ( KYC ) ಆಗದೆ ಇರುವುದು, ಆಧಾರ್ ಲಿಂಕ್ ( Adhar Link ) ಆಗದೇ ಇರುವುದು, ಅರ್ಜಿ ಸಲ್ಲಿಸುವಾಗ ಸರಿಯಾದ ದಾಖಲೆಗನ್ನು ನೀಡದೆ ಇರುವುದು ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಕೆಲವು ತಾಂತ್ರಿಕ ದೋಷಗಳು (technical issues) ಕೂಡ ಮಹಿಳೆಯರ ಬ್ಯಾಂಕ್ ಖಾತೆಗೆ (Bank Account) ಹಣ ಬಾರದಂತೆ ಮಾಡಿವೆ.
5ನೇ ಕಂತಿನ ಹಣ ( 5th installment money ) ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ ಅಂದ್ರೆ ಈ ಕೆಲಸ ಮಾಡಿ
1. ಈಗಾಗಲೇ ಸರ್ಕಾರ ತಿಳಿಸಿರುವಂತೆ 5ನೇ ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಾರದೇ ಇದ್ದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ (Aadhaar seeding) ಆಗಿದ್ಯೋ ಇಲ್ಲವೋ ಎಂಬುದನ್ನು ಚೆಕ್ ( Check ) ಮಾಡಿ ಕೊಳ್ಳಬೇಕು.
2. ಹತ್ತಿರದ ಪೋಸ್ಟ್ ಆಫೀಸ್ನಲ್ಲಿ ( post office ) ಹೊಸ ಖಾತೆಯನ್ನು ಆರಂಭಿಸಿ. ಅದಕ್ಕೆ ಬೇಕಾದ ದಾಖಲೆಗಳನ್ನು ನೀಡಿದರೆ. ನಿಮ್ಮ ಬ್ಯಾಂಕ್ ಖಾತೆಗೆ ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿಯ ಯೋಜನೆಯ ಎಲ್ಲಾ ಕಂತಿನ ಹಣವು ಜಮಾ ಆಗುತ್ತದೆ.
ಗೃಹಲಕ್ಷ್ಮಿ ಹಣವನ್ನು (Gruhalskhmi pending amount) ಪಡೆದುಕೊಳ್ಳಲು ಈ ಕ್ರಮ ಕೈಗೊಳ್ಳಬೇಕು :
ಸಿಡಿಪಿಓ ಕಚೇರಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಿದ ದಾಖಲೆಗಳನ್ನು ನೀಡಬೇಕು (Visit CDPO office)
ಅದೆಷ್ಟೋ ಮಹಿಳೆಯರ ಖಾತೆಗೆ ಇನ್ನು ಒಂದು ಕಂತಿನ ಹಣವೂ ಬಂದಿಲ್ಲ. ಈ ರೀತಿಯ ಸಮಸ್ಯೆ ಇದ್ದರೆ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ್ದಕ್ಕೆ ಸಿಕ್ಕಿರುವ ಸ್ವೀಕೃತಿ ಎಲ್ಲವನ್ನು ಕೊಟ್ಟು ನಿಮ್ಮ ಖಾತೆಗೆ ಯಾಕೆ ಹಣ (Money Deposit) ಬಂದಿಲ್ಲ ಎನ್ನುವ ಮಾಹಿತಿಯನ್ನು ಪಡೆಯಿರಿ. ಯಾವ ತಾಂತ್ರಿಕ ಸಮಸ್ಯೆಯಿಂದ ನಿಮ್ಮ ಖಾತೆಗೆ (Bank Account) ಹಣ ಬಂದಿಲ್ಲ ಎನ್ನುವುದನ್ನು ತಿಳಿಸುತ್ತಾರೆ. ಅದರ ಮೂಲಕ ಆ ಸಮಸ್ಯೆಯನ್ನು ಬಗೆಹರಿಸಿ ನಿಮ್ಮ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಬರುವ ಹಾಗೆ ಮಾಡಬಹುದು.
ಸಿ ಡಿ ಪಿ ಓ ಕಚೇರಿಯಲ್ಲಿ ( CDPO Office ) ನಿಮ್ಮ ಅರ್ಜಿ ಅನುಮೋದನೆ ಬಾಕಿ ಇದ್ದರೆ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಿ. ಇದಾದ ಬಳಿಕ ನಿಮ್ಮ ಖಾತೆಗೆ ಕೆವೈಸಿ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದರೆ ಪೆಂಡಿಂಗ್ ಇರುವ ಹಣ ಕೂಡ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಯಾಕಂದ್ರೆ ಸರ್ಕಾರದಿಂದ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿರುತ್ತದೆ.
ಡಿಬಿಟಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬೇಕು (Check your DBT status) :
ಹಾಗೆಯೇ ಇನ್ನೊಂದು ಮುಖ್ಯ ವಿಚಾರ ಎಂದರೆ, ನಿಮ್ಮ ಖಾತೆಗೆ ಹಣ ಬಂದಿದ್ಯೋ ಇಲ್ಲವೋ ಎಂಬುದನ್ನು ಮಾಹಿತಿ ಕಣಜ ವೆಬ್ಸೈಟ್ ಮೂಲಕ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ ತಿಳಿದುಕೊಳ್ಳಬಹುದು. ಅಥವಾ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ DBT Karnataka mobile ಅಪ್ಲಿಕೇಶನ್ ( Application ) ಮೂಲಕ ಆಧಾರ್ ಸಂಖ್ಯೆಯನ್ನು ನಮೂದಿಸಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯೋ ಇಲ್ವೋ ಅಂತ ಚೆಕ್ ಮಾಡಿಕೊಳ್ಳಬಹುದು. ಇದೊಂದು ಉತ್ತಮ ವಿಚಾರವಾಗಿದೆ.
6ನೇ ಕಂತಿನ ಹಣ ( 6th installment money ) ಜಮಾ ಆಗುವ ದಿನಾಂಕ
ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣವನ್ನು ಬಹಳಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಹಾಗೆಯೇ ಇನ್ನು ಹಲವಾರು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಬೇಕು. ಹಾಗೆಯೇ 6ನೇ ಕಂತಿನ ಹಣ ಬಿಡುಗಡೆ ಫೆಬ್ರವರಿ ( February ) ತಿಂಗಳಿನ 2ನೇ ವಾರದಲ್ಲಿ ಆಗಬಹುದು ಎಂಬ ಮಾಹಿತಿ ತಿಳಿದು ಬಂದಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಇದುವರೆಗೂ ಒಂದು ಕಂತಿನ ಹಣ ಬರದೇ ಇದ್ದವರಿಗೆ ಹೊಸ ಮಾರ್ಗಸೂಚಿ ಪ್ರಕಟ, ಹೀಗೆ ಮಾಡಿ ₹2000/- ಬರುತ್ತೆ
- ಗೃಹಲಕ್ಷ್ಮಿ 2000/- ಹಣ ಪಡೆಯಲು ಹೊಸ ರೂಲ್ಸ್ ಜಾರಿ, 5ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ.!
- ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ
- ಇನ್ನೂ ಮುಂದೆ 2000/- ರೂ. ಇವರಿಗೆ ಬರುವುದಿಲ್ಲ, ಜನವರಿ ತಿಂಗಳ ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆ, ರದ್ದಾದ ಪಟ್ಟಿ ಬಿಡುಗಡೆ.!
- ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ
- ಬೆಳೆಹಾನಿ ಪರಿಹಾರದ ಹಣ ಇನ್ನೂ ಬಂದಿಲ್ವಾ? ಆಧಾರ್ ಲಿಂಕ್ ಆಗದೇ ಇರುವ ಪಟ್ಟಿ ಬಿಡುಗಡೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.