ಬಾಡಿಗೆ ಮನೆಯವರಿಗೂ ಸಿಹಿ ಸುದ್ದಿ! ಗೃಹ ಜ್ಯೋತಿ ಯೋಜನೆಯ ನಿಟ್ಟಿನಲ್ಲಿ ರಾಜ್ಯ ಸರ್ಕಾರ(State government) ಹೊಸ ಆದೇಶವನ್ನು ನೀಡಿದೆ. ಹಲವು ಬದಲಾವಣೆ ಮತ್ತು ವೈಶಿಷ್ಟ್ಯಗಳನ್ನು ಜಾರಿಗೆ ತರಲಾಗಿದ್ದು, ಫೆಬ್ರವರಿ 5 ರಂದು ಸುತ್ತೋಲೆ(Circular) ಹೊರಡಿಸಿದೆ. ಹೊಸ ಆದೇಶ ಏನಿರಬಹುದು ಎಂದು ಕುತೂಹಲವೇ?, ಬನ್ನಿ ಈ ವರದಿಯಲ್ಲಿ ಹೊರಡಿಸಲಾದ ಸುತ್ತೋಲೆಯಲ್ಲಿರುವ ವಿಷಯದ ಕುರಿತು ಚರ್ಚಿಸೋಣ. ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗೃಹಜ್ಯೋತಿ ಉಚಿತ ವಿದ್ಯುತ್(Gruhajyoti Free Electricity) :
2023 ರ ಜುಲೈ ತಿಂಗಳಿನಲ್ಲಿ ಗೃಹ ಜ್ಯೋತಿ ಯೋಜನೆ ಜಾರಿಗೆ ಬಂದಾಗಿನಿಂದ, 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಅನೇಕ ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಲಭ್ಯವಾಗಿದೆ. ಈ ಯೋಜನೆಯು ರಾಜ್ಯದ ಎರಡು ಕೋಟಿಗೂ ಹೆಚ್ಚು ಕುಟುಂಬಗಳಿಗೆ ವಿದ್ಯುತ್ ಬಿಲ್‌ಗಳ ಭಾರವನ್ನು ಕಡಿಮೆ ಮಾಡುವ ಮೂಲಕ ಅವರ ಜೀವನಮಟ್ಟವನ್ನು ಸುಧಾರಿಸಲು ಸಹಾಯ ಮಾಡಿದೆ.
ಗೃಹ ಜ್ಯೋತಿ ಯೋಜನೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು :
ಈಗ, ಕರ್ನಾಟಕ ರಾಜ್ಯ ಸರ್ಕಾರವು ಗೃಹ ಜ್ಯೋತಿ ಯೋಜನೆಯಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೆ ತಂದು, 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಉಚಿತ ವಿದ್ಯುತ್ ಪೂರೈಕೆಗೆ ಹೆಚ್ಚಿನ ಅನುಕೂಲತೆಗಳನ್ನು ಒದಗಿಸಿದೆ.
ಡಿ-ಲಿಂಕ್ ಸೌಲಭ್ಯ(D-link facility):
ಹೊಸ ಅರ್ಜಿದಾರರಿಗೆ ಯೋಜನೆಯ ಸೇವಾ ಸಿಂಧೂ (Seva sindhu)ಸಾಫ್ಟ್‌ವೇರ್‌ನಲ್ಲಿ ಡಿ-ಲಿಂಕ್ ಸೌಲಭ್ಯವನ್ನು ಒದಗಿಸಲಾಗಿದೆ. ಬಾಡಿಗೆ ಮನೆಯಲ್ಲಿ ವಾಸಿಸುವ ಗ್ರಾಹಕರು ಹಳೆಯ ಯೋಜನೆಯ ನೋಂದಣಿಯನ್ನು ರದ್ದುಗೊಳಿಸಿ, ಹೊಸ ಮನೆ ಸಂಖ್ಯೆಯೊಂದಿಗೆ ಮರು-ಅರ್ಜಿ ಸಲ್ಲಿಸಲು ಈ ಸೌಲಭ್ಯ ಅನುವು ಮಾಡಿಕೊಡುತ್ತದೆ.
10 ಯೂನಿಟ್ ಉಚಿತ ವಿದ್ಯುತ್:
ಹೆಚ್ಚಿನ 200 ಯೂನಿಟ್ ವಿದ್ಯುತ್ ಬಳಸುವ ಗ್ರಾಹಕರಿಗೆ 10% ರಿಯಾಯಿತಿ ಜೊತೆಗೆ ಈಗ ಹೆಚ್ಚುವರಿ 10 ಯೂನಿಟ್ ಉಚಿತ ವಿದ್ಯುತ್ ಸಿಗಲಿದೆ. FY 2022-23 ರಲ್ಲಿ ಗ್ರಾಹಕರ ಸರಾಸರಿ ಮಾಸಿಕ ವಿದ್ಯುತ್ ಬಳಕೆಯನ್ನು ಆಧರಿಸಿ ಈ ಯೋಜನೆ ಜಾರಿಯಾಗಲಿದೆ. 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವ ಮನೆಗಳಿಗೆ ಯಾವುದೇ ರಿಯಾಯಿತಿ ಇರುವುದಿಲ್ಲ ಮತ್ತು ಅವರು ಪೂರ್ಣ ಬಿಲ್ ಪಾವತಿಸಬೇಕಾಗುತ್ತದೆ.
ಗೃಹ ಜ್ಯೋತಿ ಯೋಜನೆ: ಉಚಿತ ವಿದ್ಯುತ್ ಪಡೆಯಲು ಈಗ ನೋಂದಣಿ ಸುಲಭ.
ಸೇವಾ ಸಿಂಧು ಸಾಫ್ಟ್‌ವೇರ್ ಮೂಲಕ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಅವಕಾಶ ಈಗ ಲಭ್ಯವಿದೆ! ಈ ಯೋಜನೆಯಡಿ 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಉಚಿತ ವಿದ್ಯುತ್ ಒದಗಿಸಲಾಗುತ್ತದೆ.
ಈಗಾಗಲೇ ಯೋಜನೆಯಲ್ಲಿರುವ ಗ್ರಾಹಕರಿಗೆ:
ನಿಮ್ಮ ಆಧಾರ್ ಸಂಖ್ಯೆ(Aadhar number)ಯನ್ನು ನೀಡಿ ನೋಂದಾಯಿಸಿ. ಮನೆ ಬದಲಾಯಿಸಿದರೆ, ಹೊಸ ಮನೆ ಸಂಖ್ಯೆಯನ್ನು ನೀಡಿ ನೋಂದಣಿ ನವೀಕರಿಸಿ(Update registration).ಆನ್‌ಲೈನ್(Online)ನಲ್ಲಿ ಡಿ-ಲಿಂಕ್ (D-link) ಮಾಡುವ ಅವಕಾಶ ಲಭ್ಯವಿದೆ.
ನೋಂದಣಿ ಹೇಗೆ?
ನಿಮ್ಮ ಹತ್ತಿರದ ಗ್ರಾಮ ಒಂದರಲ್ಲಿ ಅಥವಾ ಯಾವುದೇ ಸೇವಾ ಕೇಂದ್ರದಲ್ಲಿ ನೋಂದಾಯಿಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಇದುವರೆಗೂ ಒಂದು ಕಂತಿನ ಹಣ ಬರದೇ ಇದ್ದವರಿಗೆ ಹೊಸ ಮಾರ್ಗಸೂಚಿ ಪ್ರಕಟ, ಹೀಗೆ ಮಾಡಿ ₹2000/- ಬರುತ್ತೆ
- ಗೃಹಲಕ್ಷ್ಮಿ 2000/- ಹಣ ಪಡೆಯಲು ಹೊಸ ರೂಲ್ಸ್ ಜಾರಿ, 5ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ.!
- ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ
- ಇನ್ನೂ ಮುಂದೆ 2000/- ರೂ. ಇವರಿಗೆ ಬರುವುದಿಲ್ಲ, ಜನವರಿ ತಿಂಗಳ ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆ, ರದ್ದಾದ ಪಟ್ಟಿ ಬಿಡುಗಡೆ.!
- ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ
- ಬೆಳೆಹಾನಿ ಪರಿಹಾರದ ಹಣ ಇನ್ನೂ ಬಂದಿಲ್ವಾ? ಆಧಾರ್ ಲಿಂಕ್ ಆಗದೇ ಇರುವ ಪಟ್ಟಿ ಬಿಡುಗಡೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.