ಕೇಂದ್ರ ಸರ್ಕಾರದ ಉಚಿತ ಹೊಲಿಗೆ ಯಂತ್ರ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ.! ಇಲ್ಲಿದೆ ಸಂಪೂರ್ಣ ಮಾಹಿತಿ

free sewing machine scheme

ಮಹಿಳೆಯರಿಗೆ ಸ್ವಂತ ಉದ್ಯಮವನ್ನು (Own bussiness) ಪ್ರಾರಂಭಿಸಲು, ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಕೇಂದ್ರ ಸರ್ಕಾರವು (Central government) ಹಲವಾರು ಉಪಕ್ರಮಗಳನ್ನು ಪ್ರಾರಂಭಿಸುತ್ತಿದೆ. ಅಂತಹ ಒಂದು ಉಪಕ್ರಮವೆಂದರೆ ಮಹಿಳೆಯರಿಗಾಗಿ ಪ್ರಧಾನ ಮಂತ್ರಿವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಉಚಿತ ಹೊಲಿಗೆ ಮಷೀನ್ ವಿತರಣೆ ಮಾಡಲಾಗುತ್ತಿದೆ. ನಿಮಗೆ ಬಟ್ಟೆ ಹೊಲಿಯುವ ಕಲೆ ಚೆನ್ನಾಗಿ ಗೊತ್ತಿದೆಯೇ, ಸ್ವಂತ ಅಂಗಡಿ ಆರಂಭಿಸಬೇಕು ಎಂದು ಕೊಂಡಿದ್ದೀರಾ? ಹಾಗಾದರೆ ಚಿಂತಿಸಬೇಡಿ ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆಯಲ್ಲಿ ಉಚಿತ ಹೊಲಿಗೆ ಮಷೀನ್ ವಿತರಣೆ ಮಾಡುತ್ತಿದೆ. ಈ ಕುರಿತು ಸಂಪೂರ್ಣ ಮಾಹಿತಿ ಕಳೆದುಕೊಳ್ಳಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 

ಪ್ರಧಾನ ಮಂತ್ರಿವಿಶ್ವಕರ್ಮ ಯೋಜನೆ

ಹೌದು,ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳಿಗೆ ಬೆಂಬಲವನ್ನು ಒದಗಿಸುವ ಮೂಲಕ ಸಣ್ಣ-ಪ್ರಮಾಣದ ಉದ್ಯಮಗಳನ್ನು ಸಮರ್ಥಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17, 2023 ರಂದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅನಾವರಣಗೊಳಿಸಿದರು. ಈ ಯೋಜನೆಯು ಹಣಕಾಸಿನ ನೆರವು, ತರಬೇತಿ, ಸಮಕಾಲೀನ ತಂತ್ರಜ್ಞಾನಗಳಿಗೆ ಒಡ್ಡಿಕೊಳ್ಳುವುದು ಮತ್ತು ಕೌಶಲ್ಯ-ಸಂಬಂಧಿತ ಕಾಳಜಿಗಳ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ, ಅಂತಿಮವಾಗಿ ಸಾಂಪ್ರದಾಯಿಕ ವ್ಯಾಪಾರಗಳಲ್ಲಿ ತೊಡಗಿರುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ.

ಕೇಂದ್ರ ಸರ್ಕಾರದಿಂದ ಹೊಲಿಗೆ ಯಂತ್ರ

ಇದೀಗ ಈ ಯೋಜನೆಯ ಅಡಿಯಲ್ಲಿ ಸ್ವಂತ ಹೊಲಿಗೆ ಯಂತ್ರ ಇಟ್ಟುಕೊಂಡು ತಮ್ಮದೇ ಆಗಿರುವ ಉದ್ಯಮ ಆರಂಭಿಸಲು ಬಯಸುವವರಿಗೆ 15,000 ಗಳನ್ನು ಕೇಂದ್ರ ಸರ್ಕಾರ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ (Bank Account) ಜಮಾ ಮಾಡುತ್ತದೆ.
ಇದರ ಜೊತೆಗೆ 20,000 ಸಾಲವನ್ನು (Loan) ಕೂಡ ನಾವು ಪಡೆದುಕೊಳ್ಳಬಹುದಾಗಿದೆ.

ಹೌದು, ಎಷ್ಟೆಲ್ಲಾ ಮಾಹಿತಿ ತಿಳಿದ ಮೇಲೆ ಕೇಂದ್ರ ಸರ್ಕಾರದಿಂದ ಹೊಲಿಗೆ ಯಂತ್ರ (Sewing machine) ಖರೀದಿಗೆ ಸಹಾಯಧನ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಕೂಡಾ ತಿಳಿಯಬೇಕಲ್ಲವೇ, ಬನ್ನಿ ಹಾಗಾದ್ರೆ ಕೇಂದ್ರ ಸರ್ಕಾರದಿಂದ ಹೊಲಿಗೆ ಯಂತ್ರ (Sewing machine) ಖರೀದಿಗೆ ಸಹಾಯಧನ ಪಡೆದುಕೊಳ್ಳುವುದು ಹೇಗೆ ಎನ್ನವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಹೊಲಿಗೆ ಯಂತ್ರ ಖರೀದಿಗೆ ಸಹಾಯಧನ ಪಡೆದುಕೊಳ್ಳಲು ಅರ್ಹತೆ ಏನು?

– ಭಾರತೀಯ ಪ್ರಜೆಯಾಗಿರಬೇಕು.(should be Indian citizen)
– ಮಹಿಳೆ ಅಥವಾ ಪುರುಷ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು.
– ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಟೈಲರಿಂಗ್ ವೃತ್ತಿ ಮಾಡಲು ನೋಂದಾಯಿಸಿಕೊಂಡಿರುವವರಾಗಿರಬೇಕು.
– ಟೈಲರಿಂಗ್ (tailoring) ವೃತ್ತಿಯನ್ನು ಈಗಾಗಲೇ ಮಾಡುತ್ತಿದ್ದು, ಹೊಸ ಹೊಲಿಗೆ ಯಂತ್ರ ಪಡೆಯಲು ಬಯಸಿದರೆ ಅರ್ಜಿ ಸಲ್ಲಿಸಬಹುದು.
– 18 ವರ್ಷಕ್ಕಿಂತ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಈ ಕೆಳಗಿನಂತೆ ಇರುತ್ತದೆ:

– ಆಧಾರ್ ಕಾರ್ಡ್(Adhar card)
– ವಿಳಾಸದ ಪುರಾವೆ(Residential Address)
– ವಿಶ್ವಕರ್ಮ ಐಡಿ(vishwakarma ID)
– ಜಾತಿ ಪ್ರಮಾಣ(Caste certificate)
– ಆದಾಯ ಪ್ರಮಾಣ ಪತ್ರ(Income certificate)
– ವೃತ್ತಿ ಬಗ್ಗೆ ದೃಢೀಕರಣ ಪ್ರಮಾಣ ಪತ್ರ
– ಪಾಸ್ಪೋರ್ಟ್ ಗಾತ್ರದ ಫೋಟೋ

whatss

ಅರ್ಜಿ ಸಲ್ಲಿಸುವುದು ಹೇಗೆ ?

ಕೆಳಗೆ ನೀಡಿರುವ ಮಾಹಿತಿಯನ್ನು ಅನುಸರಿಸಿ:
– ಮೊದಲಿಗೆ, ಅಧಿಕೃತ ವೆಬ್ ಸೈಟ್ (Official website) https://pmvishwakarma.gov.in/ ಈ ವೆಬ್ ಸೈಟ್ ಗೆ, ಬೇಟಿ ನೀಡಿ, ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.

– ಹತ್ತಿರದ CSC ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ.

– ಅರ್ಜಿ ಸಲ್ಲಿಸಿದ ನಂತರ ಕೇಂದ್ರ ಸರ್ಕಾರದಿಂದ ಏಪ್ರಿಲ್ ತಿಂಗಳಿನಲ್ಲಿ(april month) ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು 15,000ಗಳನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.

ಸ್ವಾವಲಂಬನೆ ಜೀವನ ಕಟ್ಟಿಕೊಳ್ಳಬೇಕು ಎನ್ನುವ ಮಹಿಳೆಯರು  ಅಷ್ಟೇ ಅಲ್ಲದೆ  ಪುರುಷರು ಕೂಡ ಉಚಿತ ಹೊಲಿಗೆ ಯಂತ್ರ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸರ್ಕಾರದಿಂದ ಸಹಾಯಧನ ಪಡೆದುಕೊಳ್ಳಬಹುದು. ನೀವೂ ಕೂಡಾ ಈ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ (PMVY) ಅಡಿಯಲ್ಲಿ ಸಾಲದ ಸೌಲಭ್ಯವನ್ನು (Loan Facilities ) ಪಡೆದುಕೊಂಡು ಅದರ ಉಪಯೋಗವನ್ನು ನಿಮ್ಮದಾಗಿಸಿಕೊಳ್ಳಿ.
ಮತ್ತು ಇಂತಹ ಉತ್ತಮವಾದ  ಮಾಹಿತಿ   ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!