ಗೃಹಲಕ್ಷ್ಮಿ 6ನೇ ಕಂತಿನ 2000/- ಹಣ ಇನ್ನೂ ಬರದೇ ಇದ್ರೆ ಮೊದಲು ಈ ಕೆಲಸ ಮಾಡಿ , ಕಾರಣ ಇಲ್ಲಿದೆ!

gruhalakshmi th

ಈಗಾಗಲೇ ನಮಗೆಲ್ಲ ತಿಳಿದಿರುವಂತೆ ಸಾರ್ವಜನಿಕರಿಗಾಗಿಯೇ ಐದು ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಘೋಷಿಸಿದೆ. ಆದರೆ ಈ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆ (Karnataka government guarantee schemes) ಯ ಪ್ರಯೋಜನಗಳನ್ನು ಪಡೆದುಕೊಳ್ಳುವಲ್ಲಿ ರಾಜ್ಯದ ಲಕ್ಷಾಂತರ ಜನರು ಕೂಡಾ ವಂಚಿತರಾಗಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 

ಗ್ಯಾರಂಟಿ ಯೋಜನೆ ಹಣ

ಹೌದು, ಎಲ್ಲಾ ಸರಿಯಾದ ದಾಖಲೆಗಳನ್ನು ನೀಡಿದರು ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ಯಾಕೆ ತಲುಪುತ್ತಿಲ್ಲ ಎಂದು ತಿಳಿಯುವುದಾದರೆ, ಮೊದಲಿಗೆ ಮುಖ್ಯವಾಗಿ ಇಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi scheme) ಅಥವಾ ಅನ್ನಭಾಗ್ಯ (Annabhagya scheme) ಯೋಜನೆ ಮೊದಲಾದ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ರಾಜ್ಯದ ಜನತೆಗೆ ನೀಡುತ್ತಿದೆ, ಆದರೆ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಬಡತನ ರೇಖೆಗಿಂತ ಕೆಳಗಿರುವವರು (below poverty line), ಮಹಿಳೆಯರು ಫಲಾನುಭವಿಗಳಾಗಿರುತ್ತಾರೆ, ಮತ್ತು ಅವರ ಬಳಿ ರೇಷನ್ ಕಾರ್ಡ್ (Ration Card)  ಕಡ್ಡಾಯವಾಗಿ ಇರಬೇಕು. ಆದರೆ ನಿಜಾಂಶ ತಿಳಿಯುವುದಾದರೆ, ರಾಜ್ಯದಲ್ಲಿ ನಿಜಕ್ಕೂ ಯಾರಿಗೆ ಮುಖ್ಯವಾಗಿ ಬಿಪಿಎಲ್ ಕಾರ್ಡ್ (BPL card) ಅಗತ್ಯ ಇದೆಯೋ ಅಂತವರ ಬಳಿಯೇ ಈ ಬಿಪಿಎಲ್ ಕಾರ್ಡ್ (BPL card) ಇಲ್ಲ.

ಕೆಲವರಿಗೆ ಗ್ಯಾರಂಟಿ ಯೋಜನೆಯ ಹಣ ಯಾಕೆ ಬಂದಿಲ್ಲ ಗೊತ್ತಾ?:

ಈಗಾಗಲೇ ಸಾಕಷ್ಟು ಪಡಿತರ ಚೀಟಿಗಾಗಿ (Ration card) ಅರ್ಜಿ ಸಲ್ಲಿಕೆ ಮಾಡಲಾಗಿದೆ. ಆದರೆ ಇದುವರೆಗೆ ಯಾವುದೇ ಅರ್ಜಿ ಪರಿಶೀಲನೆ (application verification) ಆಗಲಿ ಅಥವಾ ವಿತರಣೆ ಆಗಲಿ ನಡೆದಿಲ್ಲ. ದಿನದಿಂದ ದಿನಕ್ಕೆ ಪಡಿತರ ಚೀಟಿ ವಿತರಣೆಯಲ್ಲಿ ಸರ್ಕಾರ ವಿಳಂಬ (Government delaying) ಮಾಡುತ್ತಿರುವುದರಿಂದ ಗ್ಯಾರಂಟಿ ಯೋಜನೆಗಳು ಹಲವರ ಫಲಾನುಭವಿಗಳ ಕೈತಪ್ಪಿ ಹೋಗುತ್ತದೆ. ಹೌದು, ಫಲಾನುಭವಿಗಳು ಈವರೆಗೆ ಐದು ಕಂತಿನ ಗೃಹಲಕ್ಷ್ಮಿ ಹಣ, ಅಂದ್ರೆ 10,000ಗಳನ್ನು ಪಡೆದುಕೊಂಡಿದ್ದಾರೆ. ಇತ್ತ ಅದೇಷ್ಟೋ ಗೃಹಿಣಿಯರು ಸರ್ಕಾರದ ಸರ್ಕಾರಿ ಸಮಸ್ಯೆ ಹಾಗೂ ಮತ್ತಿತರ ಲೋಪದೋಷಗಳಿಂದಾಗಿ ಈ ಯೋಜನೆಯಿಂದ ವಂಚಿತರಾಗಿದ್ದಾರೆ.

ಎಲ್ಲರಿಗೂ ತಿಳಿದಿರುವ ಹಾಗೆ ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುವ ವಿಚಾರ. ಆದರೆ ಸರ್ಕಾರದ ವಿಳಂಬದಿಂದಾಗಿ ಇದುವರೆಗೆ ಬಿಪಿಎಲ್ ಕಾರ್ಡ್(BPL card) ಅರ್ಜಿಗಳು ಪರಿಶೀಲನೆಗೊಂಡು ವಿಲೇವಾರಿ ಆಗಿಲ್ಲ. ತಾಂತ್ರಿಕ ದೋಷ (technical issues) ಗಳಿಂದಾಗಿ ಹೊಸ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿರುವವರು ಕೂಡಾ ಅರ್ಜಿ ಸಲ್ಲಿಕೆ ಮಾಡಲು ಸಾಧ್ಯವಾಗುತ್ತಿಲ್ಲ.

whatss

ಮೊನ್ನೆ ನಡೆದ ಸಮಾವೇಶದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ, ಆದರೆ ಹಳೆಯ ರೇಷನ್ ಕಾರ್ಡ್ ವಿತರಣೆ ಆಗುವವರೆಗೂ ಹೊಸ ಅರ್ಜಿಗಳನ್ನು ಸ್ವೀಕರಿಸದಿರಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಫಲಾನುಭವಿಗಳಿಗೆ ಇದೀಗ ನಿರಾಸೆ ಉಂಟಾಗಿದೆ.

ಒಟ್ಟಿನಲ್ಲಿ ಹೇಳವುದಾದರೆ ಸರ್ಕಾರ ಈ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅದಕ್ಕೆ ಪಡಿತರ ಚೀಟಿ ಕಡ್ಡಾಯ (Coumpulsory ration card) ಎನ್ನುವ ನಿಯಮ (Rules) ತಂದ ಮೇಲೆ ಫಲಾನುಭವಿಗಳಿಗೆ ಪಡಿತರ ಚೀಟಿಯನ್ನು ಕೂಡ ಅಷ್ಟೇ ಸುಲಭವಾಗಿ ಸಿಗುವಂತೆ ಮಾಡಬೇಕಿತ್ತು ನಮ್ಮ ಸರ್ಕಾರ, ಆದರೆ ಸರ್ಕಾರ ಈ ವಿಚಾರದಲ್ಲಿ ಗಮನ ಹರಿಸದೆ ಇರುವುದು ಗ್ಯಾರಂಟಿ ಯೋಜನೆಯ ಲಾಭ ಪಡೆಯಬೇಕು ಎನ್ನುವ ಸಾಕಷ್ಟು ಫಲಾನುಭವಿಗಳಿಗೆ ಬೇಸರ ಮೂಡಿಸಿದೆ ಎಂದೇ ಹೇಳಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!