ಗೃಹಲಕ್ಷ್ಮಿ ಯೋಜನೆ(Gruh lakshmi scheme):
ಖಾತೆಗೆ ಹಣ ಜಮಾ ಆಗದವರಿಗೂ ಖುಷಿಯ ಸುದ್ದಿ. ಯಜಮಾನಿಯರೇ, ಗೃಹಲಕ್ಷ್ಮಿ ಯೋಜನೆಯಡಿ ನೀವು ಯಾವದೇ ಪ್ರಯೋಜನ ಪಡೆದಿಲ್ಲವೇ?. ಹಾಗಿದ್ರೆ, ಈ ವಿಷಯಗಳು ತಾವು ತಿಳಿಯಲೇಬೇಕು. ವರದಿಯನ್ನು ತಪ್ಪದೆ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆಗಸ್ಟ್ 31 ರ ದಿನದಿಂದ, ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ₹2,000 ರ ಧನಸಹಾಯವು ಮಹಿಳೆಯರ ಖಾತೆಗಳಿಗೆ ನೇರವಾಗಿ ಜಮೆಯಾಗಲು ಪ್ರಾರಂಭವಾಗಿದೆ. ಈ ಯೋಜನೆಯು ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಸಬಲೀಕರಣ ಮತ್ತು ಸ್ವಾವಲಂಬನೆಯತ್ತ ಒಂದು ಮಹತ್ವದ ಹೆಜ್ಜೆಯಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ, ಲಕ್ಷಾಂತರ ಮಹಿಳೆಯರು ಸರ್ಕಾರದಿಂದ ಉಚಿತವಾಗಿ 12,000 ರೂಪಾಯಿಗಳನ್ನು ಆರು ಕಂತುಗಳಲ್ಲಿ ಸ್ವೀಕರಿಸಿದ್ದಾರೆ.
ಮಹಿಳೆಯರ ಜೀವನದಲ್ಲಿ ಸ್ವಾವಲಂಬನೆ ಮತ್ತು ಆರ್ಥಿಕ ಸಬಲೀಕರಣ ತುಂಬಾ ಮುಖ್ಯ. ಗೃಹಲಕ್ಷ್ಮಿ ಯೋಜನೆ ಈ ನಿಟ್ಟಿನಲ್ಲಿ ಒಂದು ಚಿಕ್ಕ ಹೆಜ್ಜೆಯಾದರೂ, ಅದು ಒಂದು ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಪ್ರತಿ ತಿಂಗಳು ₹2000/- ನೀಡುವ ಮೂಲಕ, ಯೋಜನೆಯು ಮಹಿಳೆಯರಿಗೆ ಅವರ ಸಣ್ಣ ಖರ್ಚುಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಇದು ಅವರಿಗೆ ಸ್ವಾತಂತ್ರ್ಯ ಮತ್ತು ಧೈರ್ಯವನ್ನು ನೀಡುತ್ತದೆ. ಗೃಹಲಕ್ಷ್ಮಿ ಯೋಜನೆ ಕೆಲವು ಸವಾಲುಗಳನ್ನು ಎದುರಿಸಿದೆ. ಆದರೂ, ಒಟ್ಟಾರೆಯಾಗಿ ಯೋಜನೆ ಯಶಸ್ವಿಯಾಗಿದೆ. ಲಕ್ಷಾಂತರ ಮಹಿಳೆಯರಿಗೆ ಈ ಯೋಜನೆಯಿಂದ ಲಾಭವಾಗಿದೆ.
ಗೃಹಲಕ್ಷ್ಮಿ ಯೋಜನೆ, ರಾಜ್ಯ ಸರ್ಕಾರದ ಖಾತರಿ ಯೋಜನೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಲಕ್ಷಾಂತರ ಕರ್ನಾಟಕದ ಮಹಿಳೆಯರು ಈ ಯೋಜನೆಯಡಿ ಅರ್ಜಿ ಸಲ್ಲಿಸಿ, ಸರ್ಕಾರದಿಂದ ಉಚಿತ ಹಣ ಪಡೆಯುವ ಅವಕಾಶ ಪಡೆದಿದ್ದಾರೆ. ಆದರೆ, ಈ ಯೋಜನೆಯ ಒಂದು ದುಃಖದ ಸಂಗತಿ ಎಂದರೆ, ಇನ್ನೂ ಕೆಲವು ಅರ್ಹ ಫಲಾನುಭವಿಗಳಿಗೆ ಹಣ ತಲುಪದಿರುವುದು. ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಜನರ ಗಮನಕ್ಕೆ ತಂದಿದೆ.
ಗೃಹಲಕ್ಷ್ಮಿ ಯೋಜನೆ: 6 ಕಂತು ಖಾತೆಯಲ್ಲಿ, ಎಲ್ಲರಿಗೂ ತಲುಪಿದೆಯೇ?
ತಮಗೆಲ್ಲರಿಗೂ ತಿಳಿದಿರುವ ಹಾಗೆ, ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 6 ಕಂತು ಬಿಡುಗಡೆಯಾಗಿ, ₹12,000 ಸಹಾಯಧನ ಸಿಕ್ಕಿದೆ. ಆದರೆ, ಈ ಸೌಲಭ್ಯ ಎಲ್ಲಾ ಮಹಿಳೆಯರನ್ನೂ ತಲುಪಿದೆಯೇ?
ವರದಿಯ ಪ್ರಕಾರ, 8.2 ಲಕ್ಷಕ್ಕೂ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಕಾಯುತ್ತಿದ್ದಾರೆ. ಕೆಲವರಿಗೆ ಕೇವಲ ಒಂದೆರಡು ತಿಂಗಳ ಕಂತು ಮಾತ್ರ ಬಂದಿದೆ. ಈ ಸಮಸ್ಯೆಗೆ ತಾಂತ್ರಿಕ ಸಮಸ್ಯೆಗಳು(Technical issues), ಕೆವೈಸಿ ನವೀಕರಣದ ಕೊರತೆ(KYC Update), ರೇಷನ್ ಕಾರ್ಡ್‌ನಲ್ಲಿನ ತಿದ್ದುಪಡೆ(Ration card correction) ಮತ್ತು ರೇಷನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್‌ನ(Aadhar-Ration link) ಕೊರತೆ ಸೇರಿದಂತೆ ಹಲವಾರು ಕಾರಣಗಳಿವೆ.
ವಿಧಾನಸಭೆಯಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಹಣ ಜಮಾ ಆಗದಿರುವ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಈ ಬಗ್ಗೆ ಪ್ರಶ್ನೆ ಮಾಡಲಾಗಿತ್ತು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi hebbalkar) ಅವರು ಈ ಬಗ್ಗೆ ಉತ್ತರಿಸುತ್ತಾ, ಕೆಲವು ಮಹಿಳೆಯರ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದಿರುವುದರಿಂದ ಅವರಿಗೆ ಹಣ ಜಮಾ ಆಗಿಲ್ಲ ಎಂದು ತಿಳಿಸಿದ್ದಾರೆ. ಈ ತಾಂತ್ರಿಕ ದೋಷಗಳನ್ನು ಸದ್ಯದಲ್ಲಿಯೇ ಪರಿಹರಿಸಿ ಫಲಾನುಭವಿಗಳಿಗೆ ಹಣ ಜಮಾ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಪ್ರತಿ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ಪ್ರತಿ ತಿಂಗಳು 15ನೇ ತಾರೀಖಿನಿಂದ ಆರಂಭವಾಗುತ್ತದೆ. ಯಾವುದೇ ಮಹಿಳೆಯರಿಗೆ ಖಾತೆಗೆ ಹಣ ಬಾರದಿದ್ದರೆ, ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು:
ಇನ್ನೂ ಹಣ ಬರದಿದ್ದವರು ಹೀಗೆ ಮಾಡಿ :
ಖಾತೆಗೆ ಹಣ ಬಾರದೆ ಇದ್ದರೆ ಸಂಬಂಧಪಟ್ಟ ಇಲಾಖೆಗೆ ಅಥವಾ ಸಿಡಿಪಿಓ ಕಚೇರಿಗೆ ಭೇಟಿ ನೀಡಿ. ಖಾತೆಯಲ್ಲಿ ಯಾವುದಾದರೂ ಸಮಸ್ಯೆಗಳಿದ್ದರೆ ಪರಿಹರಿಸಲು ದೂರನ್ನು ನೀಡಿಬಹುದು.
ಖಾತೆ ಸಮಸ್ಯೆಗಳನ್ನು ಪರಿಹರಿಸಿ! ಖಾತೆಯ ಸಂಖ್ಯೆ(Account Number), ಆಧಾರ್ ಸಂಖ್ಯೆ(Aadhar Number), BPL ಕಾರ್ಡ್ ಸಂಖ್ಯೆ, ಇತ್ಯಾದಿಗಳಲ್ಲಿ ಯಾವುದಾದರೂ ತಪ್ಪುಗಳಿದ್ದರೆ ಸರಿಪಡಿಸಿ. ಖಾತೆಯ ಸಮಸ್ಯೆಗಳನ್ನು ಪರಿಹರಿಸಿದ ನಂತರ, ಮುಂದಿನ ಕಂತಿನ ಹಣ ಖಾತೆಗೆ ಜಮೆಯಾಗುತ್ತದೆ.
ಗೃಹಲಕ್ಷ್ಮಿ ಯೋಜನೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಎಲ್ಲಾ ಮಹಿಳೆಯರ ಖಾತೆಗಳಿಗೆ ಹಣ ಜಮೆಯಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಖಾತೆಗೆ ಹಣ ಬಾರದಿದ್ದರೆ ಆತಂಕ ಪಡಬೇಕಾಗಿಲ್ಲ. ಮುಂದಿನ ಕಂತಿನ ಹಣ ಬಿಡುಗಡೆಯ ನಿರೀಕ್ಷೆಯಲ್ಲಿರುವ ಮಹಿಳೆಯರು ಖಾತೆಯಲ್ಲಿ ಯಾವುದಾದರೂ ಸಮಸ್ಯೆಗಳಿದ್ದರೆ ಮೇಲೆ ತಿಳಿಸಿದಂತೆ ಪರಿಹರಿಸಿಕೊಂಡು ಹಣ ಪಡೆಯಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಈ ದಿನ ರೈತರ ಖಾತೆಗೆ ಬರಲಿದೆ ಪಿಎಂ ಕಿಸಾನ್ 16ನೇ ಕಂತಿನ ಹಣ, ಇಲ್ಲಿದೆ ಮಾಹಿತಿ
- ಈ ವಿದ್ಯಾರ್ಥಿಗಳಿಗೆ ಸಿಗಲಿದೆ ಬರೋಬ್ಬರಿ 35,000 ರೂಪಾಯಿ ಪ್ರೋತ್ಸಾಹ ಧನ | Prize Money Scholarship Application 2024 @sw.kar.nic.in
- ಇನ್ಮುಂದೆ ನಂಬರ್ ಬದಲಿಗೆ ಕರೆ ಮಾಡುವವರ ಹೆಸರು ಡಿಸ್ಪ್ಲೇ! ಇಲ್ಲಿದೆ ಬಿಗ್ ಅಪ್ಡೇಟ್
- HSRP ನಂಬರ್ ಪ್ಲೇಟ್ ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ!
- 3,500/- ರೂ. ಎಸ್.ಎಸ್.ಪಿ ವಿದ್ಯಾರ್ಥಿವೇತನ ಈಗ ಜಮಾ ಆಯ್ತು.!ಹೀಗೆ ಚೆಕ್ ಮಾಡಿಕೊಳ್ಳಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.