ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ 2,000 ರೂ. ಸಹಾಯಧನ ನೀಡುವ ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೇ ಮನೆಯ ಯಜಮಾನಿಯರಿಗೆ ಮೊದಲ ಕಂತಿನ ಹಣ ಖಾತೆಗೆ ವರ್ಗಾವಣೆಯಾಗಿದ್ದು, ಇದೀಗ 7 ನೇ ಕಂತಿನ ಹಣ ಮಾರ್ಚ್ 2 ನೇ ವಾರದಲ್ಲಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಇದುವರೆಗೆ ಕೆಲವು ಕಂತಿನ ಹಣ ಮಾತ್ರ ಸಿಕ್ಕಿದ್ದು 5, 6 ಕಂತಿನ ಹಣ ಬಾರದೆ ಇರುವವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ದಿನ ಜಮಾ ಆಗಲಿದೆ 7ನೇ ಕಂತಿನ ಹಣ
ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸಲು ಕುಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನಗೆ ಕೂಡ ಜಾರಿ ಮಾಡಿ 6 ಕಂತಿನ ಹಣವನ್ನು ನೀಡಲಾಗಿದೆ. ಈವರೆಗೆ ಅರ್ಜಿಸಲ್ಲಿಸಿ ಹಣ ಬರದೇ ಇರುವ ಸಾಕಷ್ಟು ಮಹಿಳೆಯರಿಗೆ ಜನವರಿ ತಿಂಗಳ ಕೊನೆಯಲ್ಲಿ ಒಟ್ಟಿಗೆ 10 ಸಾವಿರ ರೂಪಾಯಿ ಬಂದಿದೆ. ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಮಾರ್ಚ್ 15, 2024 ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ. ಮಾರ್ಚ್ ತಿಂಗಳ ಕೊನೆಯ ದಿನಾಂಕದ ಒಳಗೆ ಎಲ್ಲಾ ಮಹಿಳೆಯರಿಗೂ ಏಳನೇ ಕಂತಿನ ಹಣ ಜಮಾ ಆಗುತ್ತದೆ.
ಒಟ್ಟಿಗೆ ಬರಲಿದೆ 10,000/- ರೂಪಾಯಿ
ಜನವರಿ ತಿಂಗಳ ಅಂತ್ಯದಲ್ಲಿ ಅಂದರೆ 23, 24 ಮತ್ತು 25ನೇ ದಿನಾಂಕದಂದು ಸಾಕಷ್ಟು ಮಹಿಳೆಯರ ಖಾತೆಗೆ ತಲಾ ಎರಡು ಸಾವಿರ ರೂಪಾಯಿಗಳಂತೆ ಸತತವಾಗಿ ಹಣ ಬಂದು ತಲುಪಿದೆ. ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣವನ್ನು ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಸರ್ಕಾರ DBT ಮೂಲಕ ತಿಂಗಳ 2ನೇ ವಾರದಂದು ಜಮಾ ಮಾಡುತ್ತಿದೆ.ಆದ್ದರಿಂದ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸರ್ಕಾರದ ನಿಯಮ ಪಾಲಿಸಿದ ಎಲ್ಲಾ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣವನ್ನ ಒಟ್ಟಿಗೆ ಪಡೆದುಕೊಂಡಿದ್ದಾರೆ. ಇಲ್ಲಿಯವರೆಗೆ ಯಾವ ಮಹಿಳೆಯ ಖಾತೆಗೆ (Bank Account) ಬಂದಿಲ್ಲವೋ ಅವರಿಗೆ ಒಟ್ಟಾರೆಯಾಗಿ 10,000/- ಗಳನ್ನು ಜಮಾ ಮಾಡಲು ಸರ್ಕಾರ ನಿರ್ಧರಿಸಿದೆ. ಮಹಿಳೆಯರು ತಮ್ಮ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಂಡರೆ, ಪೆಂಡಿಂಗ್ ಇರುವ ಹಣವನ್ನು ಕೂಡ ಸರ್ಕಾರ ಫಲಾನುಭವಿಗಳ ಖಾತೆಗೆ ಜಮಾ (Money Deposit) ಮಾಡಲಿದೆ.
ಈ ಕೆಳಗಿನ ಕಾರಣದಿಂದ ನಿಮ್ಮ ಖಾತೆಗೆ ಹಣ ಬಂದಿಲ್ಲ
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೆ ಇದ್ದರೆ ಹಣ ಜಮಾ ಆಗುವುದಿಲ್ಲ, ರೇಷನ್ ಕಾರ್ಡ್ ನಲ್ಲಿ ಮಹಿಳೆಯ ಹೆಸರು ಯಜಮಾನಿ ಸ್ಥಾನದಲ್ಲಿ ಇಲ್ಲದೆ ಇದ್ದರೆ, ಎನ್ ಪಿ ಸಿ ಸಿ ಮ್ಯಾಪಿಂಗ್ ಆಗದೆ ಇದ್ದರೂ ಹಣ ಬರುವುದಿಲ್ಲಾ, ಈಕೆ ವೈ ಸಿ ಅಪ್ಡೇಟ್ ಆಗದಿದ್ದರೆ, ಎಲ್ಲ ದಾಖಲೆಗಳಲ್ಲಿ ಮಹಿಳೆಯ ಹೆಸರು ಒಂದೇ ರೀತಿಯಲ್ಲಿ ಇಲ್ಲದೇ ಇದ್ದರೆ ಅಥವಾ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದಲ್ಲಿ, ಸರ್ಕಾರಿ ನೌಕರಿಯಲ್ಲಿದ್ದು ಅರ್ಜಿಯನ್ನು ಸಲ್ಲಿಸಿದ್ದರೆ ಅಥವಾ ಆದಾಯ ತೆರಿಗೆ ಪಾವತಿದಾರರಾಗಿದ್ದು ಅರ್ಜಿಯನ್ನು ಸಲ್ಲಿಸಿದ್ದರೆ, ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಲಿಂಕ್ ಆಗದೆ ಇದ್ದರೆ, ಡಿಬಿಟಿ ಹಣ ವರ್ಗಾವಣೆ ಸಂಪೂರ್ಣ ಆಟೋಮ್ಯಾಟಿಕ್ ಆಗಿದ್ದು, ಕೆಲವೊಮ್ಮೆ ಸರ್ವರ್ ಸಮಸ್ಯೆ ಹಾಗೂ ತಾಂತ್ರಿಕ ದೋಷ (technical issues) ಗಳಿಂದಾಗಿ ಮಹಿಳೆಯರ ಖಾತೆಗೆ ತಲುಪಲು ಸಾಧ್ಯವಾಗದೆ ಇರಬಹುದು.ಈ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಸರಿ ಮಾಡಿಸಿಕೊಂಡರೆ ಪೆಂಡಿಂಗ್ ಇರುವ ಎಲ್ಲಾ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಸೂರ್ಯೋದಯ ಯೋಜನೆಯಲ್ಲಿ ಸಬ್ಸಿಡಿ ದರದಲ್ಲಿ ಸೋಲಾರ್ ರೂಫ್ ಟಾಪ್ ಪಡೆಯಿರಿ.
- ಮಾರ್ಚ್ ತಿಂಗಳ ಅಕ್ರಮ BPL ಕಾರ್ಡ್ ಪತ್ತೆ, ರದ್ದಾದ ಪಟ್ಟಿ ಬಿಡುಗಡೆ, ನಿಮ್ಮ ರೇಷನ್ ಕಾರ್ಡ್ ಚೆಕ್ ಮಾಡಿಕೊಳ್ಳಿ
- ಗಗನಕ್ಕೇರಿದ ಚಿನ್ನದ ಬೆಲೆ ! ಒಂದೇ ದಿನದಲ್ಲಿ 700 ರೂಪಾಯಿ ಏರಿಕೆ, ಇಂದಿನ ಚಿನ್ನದ ಬೆಲೆ ಇಲ್ಲಿದೆ
- ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ
- LPG ಗ್ಯಾಸ್ ಸಿಲಿಂಡರ್ ಇದ್ದವರಿಗೆ ಭರ್ಜರಿ ಆಫರ್, ತಪ್ಪದೇ ತಿಳಿದುಕೊಳ್ಳಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.