Gruhalakshmi: ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಪೆಂಡಿಂಗ್ ಹಣ ಬಿಡುಗಡೆ, 2000/- ಹಣ ಬರದೇ ಇದ್ದವರು ಹೀಗೆ ಮಾಡಿ!

gruhalakshmi 2000

ಇದುವರೆಗೂ ಗೃಹಲಕ್ಷ್ಮಿ ಯೋಜನೆಯ ಹಣ ಬಂದೇ ಇಲ್ಲ ಎನ್ನುವ ಮಹಿಳೆಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ, ಹೌದು ಈ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಯೋಜನೆಯ ಎಲ್ಲಾ ಪೆಂಡಿಂಗ್ ಹಣ ಬಿಡುಗಡೆ ಆಗುತ್ತಿವೆ, ಹೌದು ಗೃಹಲಕ್ಷ್ಮಿ ಯೋಜನೆಯ 2000/- ಹಣ ಜಮಾ ಆಗೋದು ಸಂಪೂರ್ಣ ಆಟೋಮೆಟಿಕ್ ಆಗಿದ್ದು. ಸಾಕಷ್ಟು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇನ್ನೂ ಕೂಡ ಮೊದಲನೇ ಕಂತಿನ ಹಣವೇ ಬಂದಿಲ್ಲ. ಹಾಗೂ ಬಹಳಷ್ಟು ಜನರಿಗೆ ಎರಡನೇ ಮತ್ತು ಮೂರನೇ ಕಂತಿನ ಹಣ ಪೆಂಡಿಂಗ್ ಇದೆ. ಈ ರೀತಿಯ ಸಮಸ್ಯೆ ( Problems ) ಇರುವ ಎಲ್ಲಾ ಫಲಾನುಭವಿಗಳಿಗೆ ಸರ್ಕಾರ ಪೆಂಡಿಂಗ್ ಇರುವ ಕಂತಿನ ಹಣವನ್ನು ಬಿಡುಗಡೆ ಮಾಡಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮೀ ಯೋಜನೆ:

ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಗೃಹಲಕ್ಷ್ಮೀ ಯೋಜನೆ (Gruha Lakshmi Scheme Karnataka) ಯನ್ನು ರೂಪಿಸಿದೆ. ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಕುಟುಂಬದ ನಿರ್ವಹಣೆಯಲ್ಲಿ ಮನೆ ಯಜಮಾನಿಯ ಪಾತ್ರ ಬಹುದೊಡ್ಡದು. ಆದ್ದರಿಂದ ಮನೆಯ ನಿರ್ವಹಣೆಗೆ ಅನುಕೂಲವಾಗಲೆಂದು ಸರ್ಕಾರವು ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು ರೂ.2,000 ಜಮಾ ಮಾಡಲು ಈ ಯೋಜನೆಯನ್ನು ಅನುಷ್ಠಾನ ಮಾಡಿದೆ.

ಸರ್ಕಾರ ಜಾರಿಗೆ ತಂದಿರುವ ಈ ಗೃಹಲಕ್ಷ್ಮೀ ಯೋಜನೆಯು ಅದೆಷ್ಟೋ ಮಹಿಳೆಯರಿಗೆ ( For Women’s ) ದಾರಿ ದೀಪವಾಗಿದೆ. ಅವರು ಆರ್ಥಿಕ ಪರಿಸ್ಥಿಯನ್ನು ದೂರ ಮಾಡಿ ಸ್ವಲ್ಪ ಮಟ್ಟಿಗೆ ಆರ್ಥಿಕ ನಿಲುವನ್ನು ಸಾರ್ಕರ ನೀಡಿದೆ. ಇದರಿಂದ ಅವರ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೆ ಈ ಒಂದು ಯೋಜನೆಯಿಂದ ಬರುವ ದುಡ್ಡು ಬಹಳ ಉಪಯೋಗವಾಗಿದೆ.

ಗೃಹಲಕ್ಷ್ಮೀ ಯೋಜನೆಯ ಹಣ ಜಮಾ ಆಗದಿರಲು ಕಾರಣ ( Cause ) :

ಇಲ್ಲಿಯವರೆಗೂ ಬಹಳಷ್ಟು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಎಲ್ಲ ಕಂತಿನ ಹಣ ಅವರ ಬ್ಯಾಂಕ್ ಖಾತೆ(Bank account)ಗೆ ಜಮಾ ಆಗಿದೆ. ಹಾಗೆಯೇ ಇನ್ನು ಅಲ್ಪ ಸಂಖ್ಯೆಯ ಮಹಿಳೆಯರ ಖಾತೆಗೆ ಕೆಲವು ಕಂತುಗಳ ಹಣ ಜಮಾ ಆಗಿದ್ದು ಇನ್ನು ಹಲವು ಕಂತುಗಳು ( Installments ) ಬರಲು ಬಾಕಿ ಇವೆ. ಆದರೆ ಇನ್ನೂ ಹಲವಾರು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ.

ಕಾರಣ ನೋಡುವುದಾದರೆ ಎಷ್ಟೋ ಮಹಿಳೆಯರ ಖಾತೆಗೆ ಕೆ ವೈ ಸಿ ( KYC ) ಆಗದೆ ಇರುವುದು, ಆಧಾರ್ ಲಿಂಕ್ ( Adhar Link ) ಆಗದೇ ಇರುವುದು, ಅರ್ಜಿ ಸಲ್ಲಿಸುವಾಗ ಸರಿಯಾದ ದಾಖಲೆಗನ್ನು ನೀಡದೆ ಇರುವುದು ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಕೆಲವು ತಾಂತ್ರಿಕ ದೋಷಗಳು (technical issues) ಕೂಡ ಮಹಿಳೆಯರ ಬ್ಯಾಂಕ್ ಖಾತೆಗೆ (Bank Account) ಹಣ ಬಾರದಂತೆ ಮಾಡಿವೆ.

whatss

ಒಟ್ಟಿಗೆ ಬಂತು ರೂ.10,000/-

ಇದುವರೆಗೂ ಒಂದು ಕಂತಿನ ಹಣ ಬಂದಿಲ್ಲ ಎನ್ನುವ ಮಹಿಳೆಯರಿಗೆ ಸರ್ಕಾರದಿಂದ ಈಗಾಗಲೇ ತಿಳಿಸಿರುವಂತೆ, ನೀವು ನಿಮ್ಮ ಬ್ಯಾಂಕ್ ಗೆ ಹೋಗಿ ಈ ಕೆವೈಸಿ (EKYC)ಪರಿಶೀಲನೆ ಮಾಡಿಕೊಳ್ಳಬೇಕು ಜೊತೆಗೆ, ಎನ್‌ಪಿಸಿಐ ಮ್ಯಾಪಿಂಗ್ (NPCI mapping) ಕೂಡ ಮಾಡಿಸಬೇಕು.

ಡಿಸೆಂಬರ್ ತಿಂಗಳಲ್ಲಿ ಆಧಾರ್ ಮತ್ತು ಬ್ಯಾಂಕ್ ಅಕೌಂಟ್ NPCI ಮ್ಯಾಪಿಂಗ್ ಮಾಡಿಸಿಕೊಂಡ ನಂತರ ಹಲವಾರು ಮಹಿಳೆಯರಿಗೆ ಇದೇ ತಿಂಗಳು 23 24 ಮತ್ತು 25ನೇ ತಾರೀಕಿನಂದು ಸತತವಾಗಿ 2 ಸಾವಿರ ರೂಪಾಯಿಗಳಂತೆ ಒಟ್ಟು ಹತ್ತು ಸಾವಿರ ರೂಪಾಯಿಗಳನ್ನ ರಾಜ್ಯ ಸರ್ಕಾರದಿಂದ ಜಮಾ ಮಾಡಲಾಗಿದೆ. ಹಾವೇರಿ ಜಿಲ್ಲೆಯ ಮಹಿಳೆಯೊಬ್ಬರಿಗೆ ಹಣ ಜಮಾ ಆಗಿರುವ ಡಿಬಿಟಿ ಸ್ಟೇಟಸ್ ಕೆಳಗೆ ನೀವು ನೋಡಬಹುದು.

sct

 

ಪೆಂಡಿಂಗ್ (pending amount) ಇರುವ ಗೃಹಲಕ್ಷ್ಮಿ ಹಣವನ್ನು ಪಡೆದುಕೊಳ್ಳಲು ಈ ಕ್ರಮ ಕೈಗೊಳ್ಳಬೇಕು :

ಸಿಡಿಪಿಓ ಕಚೇರಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಿದ ದಾಖಲೆಗಳನ್ನು ನೀಡಬೇಕು (Visit CDPO office)

ಅದೆಷ್ಟೋ ಮಹಿಳೆಯರ ಖಾತೆಗೆ ಇನ್ನು ಒಂದು ಕಂತಿನ ಹಣವೂ ಬಂದಿಲ್ಲ. ಈ ರೀತಿಯ ಸಮಸ್ಯೆ ಇದ್ದರೆ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ್ದಕ್ಕೆ ಸಿಕ್ಕಿರುವ ಸ್ವೀಕೃತಿ ಎಲ್ಲವನ್ನು ಕೊಟ್ಟು ನಿಮ್ಮ ಖಾತೆಗೆ ಯಾಕೆ ಹಣ (Money Deposit) ಬಂದಿಲ್ಲ ಎನ್ನುವ ಮಾಹಿತಿಯನ್ನು ಪಡೆಯಿರಿ. ಯಾವ ತಾಂತ್ರಿಕ ಸಮಸ್ಯೆಯಿಂದ ನಿಮ್ಮ ಖಾತೆಗೆ (Bank Account) ಹಣ ಬಂದಿಲ್ಲ ಎನ್ನುವುದನ್ನು ತಿಳಿಸುತ್ತಾರೆ. ಅದರ ಮೂಲಕ ಆ ಸಮಸ್ಯೆಯನ್ನು ಬಗೆಹರಿಸಿ ನಿಮ್ಮ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಬರುವ ಹಾಗೆ ಮಾಡಬಹುದು.

ಸಿ ಡಿ ಪಿ ಓ ಕಚೇರಿಯಲ್ಲಿ ( CDPO Office ) ನಿಮ್ಮ ಅರ್ಜಿ ಅನುಮೋದನೆ ಬಾಕಿ ಇದ್ದರೆ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಿ. ಇದಾದ ಬಳಿಕ ನಿಮ್ಮ ಖಾತೆಗೆ ಕೆವೈಸಿ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದರೆ ಪೆಂಡಿಂಗ್ ಇರುವ ಹಣ ಕೂಡ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಯಾಕಂದ್ರೆ ಸರ್ಕಾರದಿಂದ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿರುತ್ತದೆ.

ಇ ಕೆ ವೈ ಸಿ ಕಡ್ಡಾಯ ( EKYC Compulsory ) :

ಮೊದಲು ನೀವು ಸಲ್ಲಿಸಿದ ಗೃಹಲಕ್ಷ್ಮೀ ಯೋಜನೆಯ ಬ್ಯಾಂಕ್ ಖಾತೆಗೆ ಇ ಕೆ ವೈ ಸಿ ಪ್ರಕ್ರಿಯೆ ಪೂರ್ಣಗೊಂಡಿದ್ಯಾ ಚೆಕ್ ಮಾಡಿಕೊಳ್ಳಬೇಕು. ಯಾಕೆಂದರೆ, ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಇ ಕೆ ವೈ ಸಿ ಕೂಡ ಕಡ್ಡಾಯ. ನಿಮ್ಮ ಬ್ಯಾಂಕ್ ಖಾತೆಗೆ ಈ ಕೆವೈಸಿ (E-KYC ) ಆಗದೆ ಇದ್ರೆ ಹಣ ಜಮಾ ಆಗಲು ಸಾಧ್ಯವೇ ಇಲ್ಲ. ಹಾಗಾಗಿ ನೀವು ಬ್ಯಾಂಕ್ ನಲ್ಲಿ ನಿಮ್ಮ ಖಾತೆಗೆ ಇ ಕೆ ವೈ ಸಿ ಆಗಿದೆಯಾ ಎನ್ನುವುದನ್ನು ಚೆಕ್ ಮಾಡಬೇಕಾಗುತ್ತದೆ.

ಆಧಾರ್ ಲಿಂಕಿಂಗ್ ಕಡ್ಡಾಯ ( Adhar Linking is Compulsory ) :

ಇನ್ನೊಂದು ಮುಖ್ಯ ವಿಷಯ ಎಂದರೆ, ಆಧಾರ್ ಲಿಂಕ್, ಹೌದು, ನಿಮ್ಮ ಬ್ಯಾಂಕ್ ಖಾತೆಗೆ ಮುಖ್ಯವಾಗಿ ಆಧಾರ್ ಲಿಂಕ್ ಆಗಿರಲೇಬೇಕು. ಆಧಾರ್ ಲಿಂಕ್ ಆಗಿರಲಿಲ್ಲ ಎಂದರೆ, ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮಾ ಆಗುವುದಿಲ್ಲ. NPCI mapping ಕೂಡ ಕಡ್ಡಾಯವಾಗಿರುವುದರಿಂದ ಆದಷ್ಟು ಬೇಗ ಬ್ಯಾಂಕ್ ಗೆ ಹೋಗಿ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಕೊಳ್ಳಬೇಕು.

ಈ ಮೇಲಿನ ಎಲ್ಲ ಸಮಸ್ಯೆಗಳನ್ನು ( All problems ) ಪರಿಹರಿಸಿ ನಿಮ್ಮ ಗೃಹಲಕ್ಷ್ಮಿ ಯೋಜನೆಗೆ ಬೇಕಾದ ಎಲ್ಲ ಮುಖ್ಯ ದಾಖಲೆಗಳನ್ನು ನೀಡಿದರೆ, ಗೃಹಲಕ್ಷ್ಮೀ ಯೋಜನೆಯ ಪ್ರತಿ ಒಂದು ಕಂತಿನ ಹಣ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

tel share transformed

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!