ಇಂದಿನ ದಿನಮಾನಗಳಲ್ಲಿ ಯಾರಿಗೆ ಸ್ಮಾರ್ಟ್ ಫೋನ್/Smart phones) ಅವಶ್ಯಕ ಇಲ್ಲಾ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ ಫೋನ್ ಬಳಕೆ ಸಾಮಾನ್ಯವಾಗಿ ಬಿಟ್ಟಿರುವುದು ನಮಗೆಲ್ಲ ತಿಳಿದೇ ಇದೆ. ಮತ್ತು ಅಷ್ಟೇ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಹೊಸ ಹೊಸ ಫೀಚರ್ ಗಳನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಬಿಡುಗಡೆ ಕೂಡಾ ಆಗುತ್ತಿವೆ. ಜನರನ್ನು ಕೂಡಾ ತಮ್ಮತ್ತಾ ಸೇಳುದುಕೊಲೊಳ್ಳುತ್ತಿದೆ ಈ ಸ್ಮಾರ್ಟ್ ಫೋನ್ ಜಗತ್ತು ಎಂದೇ ಹೇಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ನಡುವೆ ಟೆಕ್ನೋ (Tecno) ಹೊಸ ಸ್ಮಾರ್ಟ್‌ಫೋನ್‌ಗಳನ್ನು ತನ್ನ ಸುಧಾರಿತ ಫೀಚರ್ಸ್‌ನೊಂದಿಗೆ ಬಿಡುಗಡೆ ಮಾಡುತ್ತಿದೆ. ಮತ್ತು ಮಾರುಕಟ್ಟೆಯಲ್ಲಿ ಟೆಕ್ನೋ ಮೊಬೈಲ್ ಕಂಪನಿಯು ಅಗ್ಗದ ಸರಣಿಯಲ್ಲಿ ಸ್ಮಾರ್ಟ್‌ಫೋನ್ ಪರಿಚಯಿಸಿ ಜನಪ್ರಿಯತೆ ಪಡೆದುಕೊಂಡಿದೆ. ಹೌದು, ಇದೀಗ ಟೆಕ್ನೋ (Tecno) ತನ್ನ ಒಂದು ಬಹು ಬೇಡಿಕೆಯ ಸ್ಮಾರ್ಟ್‌ಫೋನ್ ಮೇಲೆ ರಿಯಾಯಿತಿಯನ್ನು ನೀಡಿದೆ. ಯಾವುದು ಆಭಾರೀ ಡಿಸ್ಕೌಂಟ್ ಫೋನ್ ? ಅದರ ಆಫರ್ ಬೆಲೆ ಎಷ್ಟು? ಅದರ ಲಭ್ಯತೆ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ನೀವೇನಾದರೂ ಇ – ಕಾಮರ್ಸ್ ತಾಣವಾದ ಅಮೆಜಾನ್ (Amazon) ಶೋಪಿಂಗ್ ಆ್ಯಪ್ ಗಳಲ್ಲಿ ಏನಾದರೂ ಖರೀದಿಸಲು ಆಸಕ್ತಿ ಹೊಂದಿರುವವರಾಗಿದ್ದರೆ, ನಿಮಗೆ ಇದು ಉತ್ತಮ ರಿಯಾಯಿತಿ ಸೌಲಭ್ಯ ಎಂದೇ ಹೇಳಬಹುದಾಗಿದೆ. ಹೌದು,ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಒಂದಿಲ್ಲೊಂದು ಸೇಲ್ ಆಯೋಜಿಸುತ್ತ ಇರುತ್ತದೆ. ಇದೀಗ ಹೋಳಿ ಅಂಗವಾಗಿ ಸ್ಮಾರ್ಟ್‌ಫೋನ್ಸ್ ಹೋಳಿ ಸ್ಟೋರ್ ಹೆಸರಿನಲ್ಲಿ ಟೆಕ್ನೋ ಫೋನ್‌ಗಳನ್ನು ಶೇ. 40% ವರೆಗಿನ ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಆ ಪೈಕಿ ಟೆಕ್ನೋ ಪೋವಾ 5 ಪ್ರೊ ಫೋನ್ ಕೂಡಾ ಬೊಂಬಾಟ್ ಡಿಸ್ಕೌಂಟ್ ಪಡೆದಿದೆ.
ಈ ಫೋನ್ ಇದೀಗ ಅಮೆಜಾನ್ ತಾಣದಲ್ಲಿ ಬಿಗ್ ರಿಯಾಯಿತಿ ಸೌಲಭ್ಯ ಪಡೆದಿದ್ದು, ಗ್ರಾಹಕರ ಖುಷಿ ಆಗುವಂತೆ ಮಾಡಿದೆ.ಮತ್ತು ಈ ಆಫರ್ (Offer) ಅಲ್ಲಿ ಸ್ಮಾರ್ಟ್ ಫೋನ್ ಖರೀದಿ ಮಾಡುವುದರ ಮೂಲಕ ನೀವು ನಿಮ್ಮ ಹಣ ಉಳಿತಾಯ ಮಾಡಿಕೊಳ್ಳಬಹುದು.
ಟೆಕ್ನೋ ಪೋವಾ 5 ಪ್ರೊ ಫೋನ್(Tecno Pova 5 phone):
ಅಮೆಜಾನ್ ತಾಣದ ಸ್ಮಾರ್ಟ್‌ಫೋನ್ಸ್ ಹೋಳಿ ಸ್ಟೋರ್ ಸೇಲ್‌ನಲ್ಲಿ ಟೆಕ್ನೋ ಪೋವಾ 5 ಪ್ರೊ ಮೊಬೈಲ್ ಶೇ 14% ರಷ್ಟು ರಿಯಾಯಿತಿ ಪಡೆದಿದೆ. ಈ ಫೋನಿನ 16GB+ 128GB ಸ್ಟೋರೇಜ್ ವೇರಿಯಂಟ್ ಅನ್ನು 14,999ರೂ. ಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದರ ಜೊತೆಗೆ ಅಮೆಜಾನ್ ತಾಣದಲ್ಲಿ ಲಭ್ಯ ಇರುವ ಇತರೆ ಕೊಡುಗೆಗಳನ್ನು ಪಡೆದುಕೊಂಡರೆ, ಈ ಫೋನ್ ಅನ್ನು 9,999ರೂ. ಗಳಿಗೆ ಖರೀದಿಸಲು ಅವಕಾಶ ಇದೆ.ಹಾಗಾದರೇ ಬನ್ನಿ ಹಾಗಾದರೆ ಟೆಕ್ನೋ ಪೋವಾ 5 ಪ್ರೊ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂದು ತಿಳಿಯೋಣ.
ಟೆಕ್ನೋ ಫೋನಿನ ವಿಶಿಷ್ಟಗಳು :
ಇನ್ನೂ ಟೆಕ್ನೋ ಪೋವಾ 5 ಪ್ರೊ ಫೀಚರ್ಸ್‌ಗಳನ್ನೂ ನೋಡುವುದಾದರೆ ಟೆಕ್ನೋ ಸಂಸ್ಥೆಯ ಈ ಮೊಬೈಲ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 1080 x 2460 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 84.7% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಇದಲ್ಲದೆ ಡಿಸ್‌ಪ್ಲೇ 396 ಪಿಪಿಐ ಸಾಂದ್ರತೆಯನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ ಅನ್ನು ಸಪೋರ್ಟ್ ಮಾಡುತ್ತದೆ.
ಇನ್ನು ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್ ಪವರ್ ಅನ್ನು ಒಳಗೊಂಡಿದ್ದು, 50 ಮೆಗಾ ಪಿಕ್ಸೆಲ್ ಸೆನ್ಸಾರ್ ಪ್ರಾಥಮಿಕ ಕ್ಯಾಮೆರಾ ಅನ್ನು ಪಡೆದುಕೊಂಡಿದೆ. ಇದರ ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 13 ಆಧಾರಿತ HiOS 13 ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಅತಿ ಕಮ್ಮಿ ಬೆಲೆಗೆ ಕರ್ವ ಡಿಸ್‌ಪ್ಲೇ ಇರುವ ಲಾವಾ ಮೊಬೈಲ್ ಬಿಡುಗಡೆ, ಖರೀದಿಗೆ ಮುಗಿಬಿದ್ದ ಜನ
- ಮೊಬೈಲ್ ಪ್ರಿಯರೇ ಗಮನಿಸಿ, ಹೊಸ ನುಬಿಯಾ ಫ್ಲಿಪ್ 5G ಮೊಬೈಲ್ ಬಗ್ಗೆ ಗೊತ್ತಾ..? ಇಲ್ಲಿದೆ ಡೀಟೇಲ್ಸ್
- ಲಾವಾ ಅಗ್ನಿ 2 5G ಮೊಬೈಲ್ ಭರ್ಜರಿ ಡಿಸ್ಕೌಂಟ್ ಆಫರ್, ಇಲ್ಲಿದೆ ಕಂಪ್ಲೀಟ್ ಮಾಹಿತಿ
- POCO X6 5G ಮೊಬೈಲ್ ಫಸ್ಟ್ ಸೇಲ್ ಪ್ರಾರಂಭ! ಭರ್ಜರಿ ಆಫರ್ ಘೋಷಣೆ!
- ಸಖತ್ ಫೀಚರ್ & ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬರುತ್ತಿದೆ ರಿಯಲ್ಮಿ ನಾರ್ಜೊ 70 ಪ್ರೊ
- ಇದೇ ತಿಂಗಳು ಬಿಡುಗಡೆ ಆಗಲಿವೆ ಬೆಂಕಿ ಸ್ಮಾರ್ಟ್ಫೋನ್ಗಳು: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.